• Home
  • »
  • News
  • »
  • national-international
  • »
  • Abir First Take 2022 ನಲ್ಲಿ ಯುವ ಕಲಾವಿದರ ಪ್ರತಿಭೆ ಪ್ರದರ್ಶನಕ್ಕೆ ಸುವರ್ಣಾವಕಾಶ

Abir First Take 2022 ನಲ್ಲಿ ಯುವ ಕಲಾವಿದರ ಪ್ರತಿಭೆ ಪ್ರದರ್ಶನಕ್ಕೆ ಸುವರ್ಣಾವಕಾಶ

ಅಬಿರ್ ಫಸ್ಟ್ ಟೇಕ್ 2022 ಕಲಾ ಹಬ್ಬದ ಕಲಾಕೃತಿ

ಅಬಿರ್ ಫಸ್ಟ್ ಟೇಕ್ 2022 ಕಲಾ ಹಬ್ಬದ ಕಲಾಕೃತಿ

ನವದೆಹಲಿಯ ಬಿಕಾನೆರ್ ಹೌಸ್‌ ನಲ್ಲಿ ಅಬಿರ್ ಇಂಡಿಯಾ ಭವ್ಯ ಕಲಾ ಉತ್ಸವವನ್ನು ಆಯೋಜನೆ ಮಾಡಿದೆ. ಇದು ಅಬಿರ್ ಇಂಡಿಯಾ ಆಯೋಜನೆ ಮಾಡುತ್ತಿರುವ 6ನೇ ಭವ್ಯ ಕಲಾ ಉತ್ಸವವಾಗಿದೆ.

  • News18 Kannada
  • Last Updated :
  • New Delhi, India
  • Share this:

    ಕಲೆ (Art) ಯಾವುದೇ ಇರಲಿ, ಅದು ಜನರನ್ನು (People) ತನ್ನತ್ತ ಸೆಳೆಯದೇ ಇರಲಾರದು. ಕಲೆಯ ಯಶಸ್ಸಿನಲ್ಲಿ ಕಲಾವಿದನ (Artist) ಪಾತ್ರ ತುಂಬಾ ಮುಖ್ಯವಾಗಿರುತ್ತದೆ. ಕಳೆದು ಹೋದ ಅದೆಷ್ಟೋ ಘಟನೆಗಳು (Incidents), ವಿಷಯಗಳನ್ನು ನಾವು ನೆನಪಿಸಿಕೊಳ್ಳುವಾಗ ಚಿತ್ರವೊಂದು ಹಾದು ಹೋಗುತ್ತದೆ. ಅದನ್ನ ಚಿತ್ರ, ವರ್ಣ, ಬಣ್ಣಗಳಿಂದ ಜನರಿಗೆ ಮನಮುಟ್ಟುವಂತೆ ತಿಳಿಸುವುದೇ ಕಲಾಕೃತಿ. ಕಲಾವಿದನ ಕುಂಚದಲ್ಲಿ ಅರಳುವ ಪ್ರತೀ ಕಲಾಕೃತಿಯು ಆತನ ಮನಸ್ಸಿನಲ್ಲಿ ಮೂಡಿರದೇ ಇರಲಾರದು. ಕಲೆ ಸರ್ವರನ್ನೂ ಕೈ ಬೀಸಿ ಕರೆಯುತ್ತದೆ ಎನ್ನುವ ಮಾತಿದೆ. ಅದರಂತೆ ಎಲ್ಲಿಯೇ ಮೇಳ, ಪ್ರದರ್ಶನಗಳು ಇದ್ದಾಗ ಜನರು ನೋಡಿದ ತಕ್ಷಣ ತೆರಳುತ್ತಾರೆ. ಚಿತ್ರ ಕಲಾಕೃತಿಗಳು ವಿಭಿನ್ನ ಮತ್ತು ವಿಶೇಷ ಅನುಭವ ಮೂಡಿಸುತ್ತವೆ.


    ನವದೆಹಲಿಯ ಬಿಕಾನೆರ್ ಹೌಸ್‌ನಲ್ಲಿ ಅಬಿರ್ ಫಸ್ಟ್ ಟೇಕ್ 2022 ಕಲಾ ಹಬ್ಬ
    ಇಂತಹ ಕಲಾ ಮೇಳವೊಂದು ನಡೆಯುತ್ತಿದೆ. ಇದೇ ನವೆಂಬರ್ 12 ರಿಂದ 18 ರವರೆಗೆ ಕಲಾಕೃತಿಗಳ ಪ್ರದರ್ಶನ ನಡೆಯುತ್ತಿದೆ. ಹೌದು,ಅಬಿರ್ ಫಸ್ಟ್ ಟೇಕ್ 2022 ಆಯ್ದ ಕಲಾಕೃತಿಗಳನ್ನು ಉತ್ಸವದಲ್ಲಿ ಪ್ರದರ್ಶಿಸುತ್ತಿದೆ.


    ನವದೆಹಲಿಯ ಬಿಕಾನೆರ್ ಹೌಸಸ್​ನಲ್ಲಿ ಅಬಿರ್ ಇಂಡಿಯಾ ಭವ್ಯ ಕಲಾ ಉತ್ಸವವನ್ನು ಆಯೋಜನೆ ಮಾಡಿದೆ. ಇದು ಅಬಿರ್ ಇಂಡಿಯಾ ಆಯೋಜನೆ ಮಾಡುತ್ತಿರುವ 6ನೇ ಭವ್ಯ ಕಲಾ ಉತ್ಸವವಾಗಿದೆ. ಈ ಬಾರಿಯ ಕಲಾ ಉತ್ಸವವನ್ನು ಅಬಿರ್ ಫಸ್ಟ್ ಟೇಕ್ 2022 ರ ಅಡಿ ಆಯೋಜನೆ ಮಾಡಲಾಗಿದೆ. ಈ ಮೂಲಕ ಕಲಾಕೃಅತಿಗಳ ಪ್ರದರ್ಶನ ಹಬ್ಬಕ್ಕೆ ಹಾಗೂ ಜನರಿಗೆ ತಲುಪಿಸಲು ಅಬಿರ್ ಇಂಡಿಯಾ ಉತ್ಸುಕವಾಗಿದೆ.


    ಇದನ್ನೂ ಓದಿ: ಏನ್​ ಗುರೂ ಹಿಂಗೈತೆ! ಈ ಎಲೆಕ್ಟ್ರಿಕ್​ ಕಾರಿನ ಬೆಲೆ ನೋಡಿದ್ರೆ ತಲೆ ತಿರುಗೋದು ಪಕ್ಕಾ!


    ಅಬಿರ್ ಇಂಡಿಯಾ ಆಯೋಜನೆ ಮಾಡಿರುವ ಕಲಾ ಉತ್ಸವಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಈ ವರ್ಷದಲ್ಲಿ ಪೂರ್ವಭಾವಿಯಾಗಿ, ಭಾರತದಾದ್ಯಂತ 309 ನಗರಗಳಿಂದ ಸುಮಾರು 2,200 ಕಲಾ ಅರ್ಜಿ ಸಲ್ಲಿಕೆಗಳು ಬಂದಿದ್ದು, ಸ್ವೀಕರಿಸಲಾಗಿತ್ತು. ಇವುಗಳಲ್ಲಿ ಆಯ್ದ ಕೆಲವು ಕಲಾಕೃತಿಗಳನ್ನು ಅಬಿರ್ ಫಸ್ಟ್ ಟೇಕ್ 2022ರ ಉತ್ಸವದಲ್ಲಿ ಪ್ರದರ್ಶನ ಮಾಡಲಾಗ್ತಿದೆ.


    148 ಯುವ ಭಾರತೀಯ ಕಲಾವಿದರ ಆಯ್ದ ಕೃತಿಗಳ ಪ್ರದರ್ಶ
    ಅಬಿರ್ ಇಂಡಿಯಾ ಫಸ್ಟ್ ಟೇಕ್ 2022ರ 6ನೇ ಕಲಾ ಉತ್ಸವದಲ್ಲಿ ಒಟ್ಟು 148 ಭರವಸೆಯ ಯುವ ಭಾರತೀಯ ಕಲಾವಿದರ ಆಯ್ದ ಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ. ಭಾರತದಾದ್ಯಂತ ಕಲಾವಿದರು ಕಳುಹಿಸಿದ್ದ 2,200 ಕಲಾ ಅರ್ಜಿಗಳನ್ನು ಸೂಕ್ತವಾಗಿ ಪರಾಮರ್ಶಿಸಿ, ಅದರಲ್ಲಿ 148 ಕಲಾವಿದರ ಕಲಾಕೃತಿಗಳನ್ನು ಆಯ್ಕೆ ಮಾಡಲಾಗಿದೆ.


    ಪ್ರತಿಷ್ಠಿತ ಕಲಾವಿದರ ಸಮಿತಿಯು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದೆ. ಸಮಿತಿಯು ಮುಕ್ತ, ಪಾರದರ್ಶಕವಾಗಿ ಕಲಾಕೃತಿಗಳನ್ನು ಆಯ್ಕೆ ಮಾಡಿದೆ. ಈ ಕೃತಿಗಳನ್ನು ಗೌರವಾನ್ವಿತ ಕಲಾವಿದರ ಸಮಿತಿಯು ಕಠಿಣವಾಗಿ ಮತ್ತು ಪಾರದರ್ಶಕವಾಗಿ ನೋಡಿ, ಕಲಾಕೃತಿಗಳನ್ನು ಆಯ್ಕೆ ಮಾಡಿದೆ.


    ಈ ವರ್ಷದ ಪ್ರತಿಷ್ಠಿತ ಕಲಾವಿದರ ಸಮಿತಿಯು ತೀರ್ಪುಗಾರರಾಗಿ ಜಿ.ಆರ್. ಈರಣ್ಣ, ಜಯರಾಮ್ ಪೊದುವಾಳ್, ಮನೀಶಾ ಪಾರೇಖ್, ಮಂಜುನಾಥ ಕಾಮತ್, ಮತ್ತು ರಮೇಶ್ ವೇದನಬಟ್ಲ ಇದ್ದರು.


    ಆಯ್ಕೆಯಾದ ಹತ್ತು ಕಲಾವಿದರಿಗೆ ಪ್ರಶಸ್ತಿ ಗೌರವ
    ಇನ್ನು ಆಯ್ಕೆಯಾದ ಕಲಾವಿದರಲ್ಲಿ ಅತ್ಯುತ್ತಮವಾದ 10 ಮಂದಿ ಕಲಾವಿದರಿಗೆ ಅವರ ಶ್ರೇಷ್ಠತೆ, ಕಲ್ಪನೆ ಮತ್ತು ಅಭಿವ್ಯಕ್ತಿಗಾಗಿ ಪ್ರಶಸ್ತಿ ನೀಡಲಾಗುವುದು. ಫಸ್ಟ್ ಟೇಕ್ 2022 ಕಲಾ ಉತ್ಸವ, ಅಬಿರ್ ಇಂಡಿಯಾದ ವಾರ್ಷಿಕ ಕಲಾ ಪ್ರದರ್ಶನದ 6 ನೇ ಆವೃತ್ತಿ ಆಗಿದೆ. ಇದುವರೆಗೆ ಕಲಾ ಉತ್ಸವವನ್ನು ಅಬಿರ್ ಇಂಡಿಯಾ ಅಹಮದಾಬಾದ್‌ನಲ್ಲಿ ಆಯೋಜಿತ್ತಾ ಬಂದಿತ್ತು. ಆದರೆ ಈ ಬಾರಿ ದೆಹಲಿಯಲ್ಲಿ ಆಯೋಜನೆ ಮಾಡಿದೆ.


    ಫಸ್ಟ್ ಟೇಕ್ 2022 ಜೊತೆಗೆ ಅಬಿರ್ ಇಂಡಿಯಾ ರಿಕಿಂಡಲ್ಡ್ ಸ್ಪಿರಿಟ್ಸ್ ಶೋನಲ್ಲಿ ಆಯ್ಕೆಯಾದ ಅಬಿರ್ ಗೆ ಸಂಬಂಧಿಸಿದ ಅನೇಕ ಕಲಾವಿದರ ಕಲಾಕೃತಿಗಳನ್ನೂ ಸಹ ಆರಿಸಲಾಗಿದೆ. ಈ ಹಿಂದಿನ ಫಸ್ಟ್ ಟೇಕ್ ಉತ್ಸವಗಳಲ್ಲಿ ಭಾಗಿಯಾಗಿದ್ದ ಕಲಾವಿದರ ಕಲಾಕೃತಿಗಳೂ ಇರಲಿವೆ.


    ಇದನ್ನೂ ಓದಿ: ಯಶಸ್ವಿ ಉದ್ಯಮಿಯಾಗಿ ಪ್ರಿಯಾಂಕಾ ಚೋಪ್ರಾ ನಡೆಸುತ್ತಿರುವ 7 ಬ್ಯುಸಿನೆಸ್‌ ಯಾವುದು ನೋಡಿ


    ಇನ್ನು ಅಬಿರ್ ಇಂಡಿಯಾ ಒಂದು ಲಾಭ ರಹಿತ ಸಂಸ್ಥೆ ಆಗಿದೆ. ಸಮಕಾಲೀನ ಭಾರತೀಯ ಕಲೆ ಮತ್ತು ಭಾರತದಾದ್ಯಂತ ಉದಯೋನ್ಮುಖ ಕಲಾವಿದರನ್ನು ಉತ್ತೇಜಿಸಲು ಹುಟ್ಟಿಕೊಂಡ ಸಂಸ್ಥೆ ಇದಾಗಿದೆ. ಅಬಿರ್ ಇಂಡಿಯಾ ಸಂಸ್ಥೆಯನ್ನು 2016 ರಲ್ಲಿ ಅಹಮದಾಬಾದ್ ಮೂಲದ ಕಲಾವಿದ ರೂಬಿ ಜಾಗೃತ್ ಸ್ಥಾಪನೆ ಮಾಡಿದ್ದಾರೆ.

    Published by:renukadariyannavar
    First published: