liveLIVE NOW

Abhinandan Return LIVE: ತಾಯ್ನಾಡಿಗೆ ಮರಳಿದ ವಿಂಗ್​​ ಕಮಾಂಡರ್​ ಅಭಿನಂದನ್; ದೇಶದೆಲ್ಲೆಡೆ ಸಂಭ್ರಮ

ಪಾಕಿಸ್ತಾನ ವಶದಲ್ಲಿರುವ ವಿಂಗ್​ ಕಮಾಂಡರ್​ ಅಭಿನಂದನ್​ ವರ್ತಮಾನ್ ಇಂದು ಭಾರತಕ್ಕೆ ಹಸ್ತಾಂತರವಾಗಿದ್ದಾರೆ. ಈ ಮೂಲಕ ಭಾರತದ ಹೆಮ್ಮೆಯ ಪೈಲಟ್​ ಸುರಕ್ಷಿತವಾಗಿ ವಾಪಸಾಗಿದ್ದಾರೆ.

 • News18
 • | March 01, 2019, 22:35 IST
  facebookTwitterLinkedin
  LAST UPDATED 3 YEARS AGO

  AUTO-REFRESH

  हाइलाइट्स

  22:23 (IST)

  ನೀವು ನಮ್ಮನ್ನು ಹೆಮ್ಮೆ ಪಡುವಂತೆ ಮಾಡಿದ್ದೀರಿ

  ನಿಮ್ಮನ್ನು ನಾವು ಪ್ರೀತಿಯಿಂದ ಸ್ವಾಗತಿಸುತ್ತಿದ್ದೇವೆ

  ರಾಹುಲ್​ ಗಾಂಧಿ ಟ್ವೀಟ್​

  22:21 (IST)

  ಗೃಹ ಸಚಿವ ರಾಜನಾಥ ಸಿಂಗ್​ ಟ್ವೀಟ್​

  22:20 (IST)

  ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್​

  ತಾಯ್ನಾಡಿಗೆ ನಿಮಗೆ ಸ್ವಾಗತ ಅಭಿನಂದನ್​

  ನಿಮ್ಮ ಕೆಚ್ಚೆದಯ ಧೈರ್ಯಕ್ಕೆ ಇಡೀ ದೇಶವೇ ಹೆಮ್ಮೆ ಪಡುತ್ತದೆ

  ನೀವು ವಾಪಾಸಾಗಿರುವುದು ನಮಗೆಲ್ಲ ಸಂತಸ ತಂದಿದೆ

  ನಮ್ಮ ಸೇನಾಪಡೆ 130 ಕೋಟಿ ಭಾರತೀಯರಿಗೆ ಸ್ಫೂರ್ತಿ ನೀಡುವ ಕೆಲಸ ಮಾಡಿದೆ

  ವಂದೇ ಮಾತರಂ!

   ಟ್ವಿಟ್ಟರ್​ನಲ್ಲಿ ಅಭಿನಂದನ್​ಗೆ ಸ್ವಾಗತ ಕೋರಿದ ಮೋದಿ

  21:51 (IST)

  ವಾಘಾ- ಅಟ್ಟಾರಿ ಗಡಿಯಿಂದ ಅಮೃತಸರದತ್ತ ಅಭಿನಂದನ್​ ಅವರನ್ನು ಕರೆದೊಯ್ಯುತ್ತಿರುವ ಸೇನಾಧಿಕಾರಿಗಳು


  21:42 (IST)

  ಭಾರತದ ಗಡಿಯೊಳಗೆ ಪ್ರವೇಶಿಸಿರುವ ಅಭಿನಂದನ್​ ಅವರನ್ನು ಸಂಪೂರ್ಣ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು

  ಅವರನ್ನು ಪಾಕಿಸ್ತಾನ ನಮಗೆ ಹಸ್ತಾಂತರ ಮಾಡಿರುವುದು ಖುಷಿಯ ಸಂಗತಿ

  ಅವರನ್ನು ವಿಮಾನದಲ್ಲಿ ಕರೆದುಕೊಂಡು ಹೋಗಬೇಕಾಗಿರುವುದರಿಂದ ಎಲ್ಲ ರೀತಿಯ ವೈದ್ಯಕೀಯ ತಪಾಸಣೆ ನಡೆಸಲಾಗುವುದು

  ಏರ್​ ವೈಸ್​ ಮಾರ್ಷಲ್ ಆರ್​ಜಿಕೆ ಕಪೂರ್​ ಸುದ್ದಿಗೋಷ್ಠಿ

  21:39 (IST)

  ಏರ್​ ವೈಸ್​ ಮಾರ್ಷಲ್ ಆರ್​ಜಿಕೆ ಕಪೂರ್​ ಸುದ್ದಿಗೋಷ್ಠಿ

  ವಿಂಗ್​ ಕಮಾಂಡರ್​ ಅಭಿನಂದನ್​ ಭಾರತಕ್ಕೆ ಹಿಂತಿರುಗಿದ ಹಿನ್ನೆಲೆ ಸುದ್ದಿಗೋಷ್ಠಿ

  ಅಭಿನಂದನ್​ ಭಾರತಕ್ಕೆ ಹಿಂತಿರುಗಿದ್ದಕ್ಕೆ ನಮಗೆ ಅತೀವ ಸಂತಸವಾಗುತ್ತಿದೆ

  ಪಾಕಿಸ್ತಾನ ಮತ್ತು ನಮ್ಮ ನಡುವೆ ಎಲ್ಲ ರೀತಿಯ ದಾಖಲೆಗಳ ಪ್ರಕ್ರಿಯೆಗಳು ಮುಗಿದಿವೆ

  ಸುದ್ದಿಗೋಷ್ಠಿಯಲ್ಲಿ ಹೇಳಿಕೆ

  21:37 (IST)

  ಪೈಲಟ್ ಅಭಿನಂದನ್​ ವರ್ತಮಾನ್​ ಭಾರತದೊಳಗೆ ಪ್ರವೇಶಿಸುತ್ತಿದ್ದಂತೆ ರಕ್ಷಣಾ ಸಚಿವೆ ಟ್ವೀಟ್​

  ಜೈ ಹಿಂದ್​ ಎಂದು ಟ್ವೀಟ್​ ಮಾಡಿ ಸಂತಸ ವ್ಯಕ್ತಪಡಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

  21:30 (IST)

  ಭಾರತ ಮತ್ತು ಪಾಕಿಸ್ತಾನದ ನಡುವೆ ದಾಖಲೆಗಳ ಹಸ್ತಾಂತರ

  ಭಾರತಕ್ಕೆ ವಿಂಗ್​ ಕಮಾಂಡರ್​ ಅಭಿನಂದನ್​ ವರ್ತಮಾನ್​ ಅವರನ್ನು ಒಪ್ಪಿಸಿದ ಪಾಕಿಸ್ತಾನ


  21:15 (IST)

  ಎರಡೆರಡು ಬಾರಿ ಹಸ್ತಾಂತರದ ಸಮಯವನ್ನು ಬದಲಿಸಿದ್ದ ಪಾಕಿಸ್ತಾನ

  ಅಂತೂಇಂತೂ ಈಗ ಭಾರತಕ್ಕೆ ಅಭಿನಂದನ್​ ಅವರನ್ನು ಹಸ್ತಾಂತರ ಮಾಡಿದ ಪಾಕ್​

  21:00 (IST)

  ಪಾಕಿಸ್ತಾನದ ವಶದಲ್ಲಿದ್ದ ಭಾರತದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ತಮಾನ್​

  ಇಂದು ಭಾರತಕ್ಕೆ ಹಸ್ತಾಂತರಿಸಲು ಮುಂದಾಗಿದ್ದ ಪಾಕ್​

  ಕೊನೆಯ ಹಂತದ ದಾಖಲೆ ಹಸ್ತಾಂತರ​ ಸೇರಿದಂತೆ ಅಧಿಕೃತ ಪ್ರಕ್ರಿಯೆಗಳನ್ನು ಮುಗಿಸುತ್ತಿರುವ ಪಾಕಿಸ್ತಾನ

  ವಾಘಾ- ಅಟ್ಟಾರಿ ಗಡಿಯಿಂದ 9 ಗಂಟೆ ಸುಮಾರಿಗೆ ಭಾರತ ಪ್ರವೇಶಿಸಲಿರುವ ಅಭಿನಂದನ್​

  ಅಧಿಕೃತ ಪ್ರಕ್ರಿಯೆಗಳನ್ನು ಮುಗಿಸುವುದು ತಡವಾಗಿದ್ದರಿಂದ ಅಭಿನಂದನ್​ ಹಸ್ತಾಂತರ ಮಾಡಲು ವಿಳಂಬ

  ದೇಶಭಕ್ತಿ ಗೀತೆಗಳನ್ನು ಹಾಡುತ್ತಾ, ರಾಷ್ಟ್ರಧ್ವಜವನ್ನು ಹಿಡಿದು ಅಭಿನಂದನ್​ ಸ್ವಾಗತಕ್ಕೆ ಅಟ್ಟಾರಿ ಗಡಿಯ ಬಳಿಯಲ್ಲಿ ಕಾದಿರುವ ಜನಸಾಗರ

  ಅಟ್ಟಾರಿ ಗಡಿಯಲ್ಲಿ ಮಧ್ಯಾಹ್ನದಿಂದ ಕಾಯುತ್ತಿರುವ ಸೇನಾಧಿಕಾರಿಗಳು

  ಇನ್ನೇನು ಕೆಲವೇ ಕ್ಷಣಗಳಲ್ಲಿ ಭಾರತವನ್ನು ಪ್ರವೇಶಿಸಲಿರುವ ಅಭಿನಂದನ್

  India-Pak Tension LIVE: ಇತ್ತೀಚೆಗಿನ ಪುಲ್ವಾಮಾ ದಾಳಿಗೆ ಭಾರತೀಯ ಸೇನೆ ಈಗಾಗಲೇ ಪ್ರತೀಕಾರ ತೀರಿಸಿಕೊಂಡಿದೆ. ಪಾಕ್​ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿದ ಭಾರತೀಯ ಯುದ್ಧ ವಿಮಾನಗಳು ನಿನ್ನೆ ಅಲ್ಲಿರುವ ಉಗ್ರರ ಅಡಗು ತಾಣಗಳನ್ನು ನಾಶ ಮಾಡಿವೆ. ಈ ಮೂಲಕ ಸರ್ಜಿಕಲ್​ ಸ್ಟ್ರೈಕ್​-2 ನಡೆಸುವಲ್ಲಿ ಭಾರತ ಯಶಸ್ವಿಯಾಗಿದೆ. ಇದೇ ಮೊದಲ ಬಾರಿಗೆ ಭಾರತೀಯ ವಾಯುಸೇನೆ ವಿಮಾನಗಳು ಪಾಕ್​ ಗಡಿ ದಾಟಿ ದಾಳಿ ನಡೆಸಿವೆ ಎನ್ನಲಾಗಿದೆ. ಪಾಕಿಸ್ತಾನವೂಭಾರತದ ಮೇಲೆ ಬಾಂಬ್​​​ ಹಾಕಿ ಇಲ್ಲಿಂದ ಕಾಲ್ಕಿತ್ತಿದ್ದರಿಂದ ಎರಡು ಉಭಯ ದೇಶಗಳ ನಡುವೆ ಪ್ರಕ್ಷುಬ್ಧ ವಾತಾವರಣ ಉಂಟಾಗಿತ್ತು. ಬಳಿಕ ಭಾರತದ ವಿಂಗ್​​ ಕಮಾಂಡರ್​​​ ಪೈಲಟ್ ಅಭಿನಂದನ್​​ ಅವರನ್ನು ಪಾಕ್​​ ವಶಕ್ಕೆ ಪಡೆದಿತ್ತು. ಇದಕ್ಕೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಪಾಕ್​​ ಶಾಂತಿಯ ಸಂಕೇತವಾಗಿ ಅಭಿನಂದನ್​​ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡಿದೆ.

  ಈ ಕುರಿತಾದ ಕ್ಷಣ ಕ್ಷಣದ ಮಾಹಿತಿ ನ್ಯೂಸ್​ 18 ಕನ್ನಡದಲ್ಲಿ..