ಅಭಿಮನ್ಯು ಹತ್ಯೆ ಪ್ರಕರಣ: 600ಕ್ಕೂ ಹೆಚ್ಚು PFI, SDPI ಕಾರ್ಯಕರ್ತರ ಬಂಧನ


Updated:July 11, 2018, 5:46 PM IST
ಅಭಿಮನ್ಯು ಹತ್ಯೆ ಪ್ರಕರಣ: 600ಕ್ಕೂ ಹೆಚ್ಚು PFI, SDPI ಕಾರ್ಯಕರ್ತರ ಬಂಧನ

Updated: July 11, 2018, 5:46 PM IST
ನ್ಯೂಸ್ 18 ಕನ್ನಡ

ತಿರುವನಂತಪುರಂ(ಜು.11):  ಎರ್ನಾಕುಲಂ ಕಾಲೇಜಿನಲ್ಲಿ 20 ವರ್ಷದ SFI ನಾಯಕ ಅಭಿಮನ್ಯು ಕೊಲೆ ನಡೆದಿದ್ದು, ಇದಾದ ಬಳಿಕ ಈವರೆಗೂ, ಧರ್ಮಗಳ ನಡುವೆ ದ್ವೇಷ ಹರಡುವುದು ಸೇರಿದಂತೆ ವಿವಿಧ ಆರೋಪಗಳ ಮೇಲೆ ಸುಮಾರು 600ಕ್ಕೂ ಹೆಚ್ಚು ಪಾಪ್ಯುಲರ್​ ಫ್ರಂಟ್​​ ಆಫ್​ ಇಂಡಿಯಾ(PFI) ಹಾಗೂ ಸೋಕ್ಷಿಯಲ್​ ಡೆಮಾಕ್ರಟಿಕ್​ ಪಾರ್ಟಿ(SDPI) ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್​ ಮೂಲಗಳಿಂದ ಲಭ್ಯವಾದ ಮಾಹಿತಿ ಅನ್ವಯ ಶೀಘ್ರದಲ್ಲೇ ಮತ್ತಷ್ಟು ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಮತ್ತೊಂದು ಮೂಲದಿಂದ ಲಭ್ಯವಾದ ಮಾಹಿತಿ ಅನ್ವಯ ಅಭಿಮನ್ಯು ಕೊಲೆ ಪಿತೂರಿ ರೂಪಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಪಿಎಫ್​ಐ ಸದಸ್ಯರ ಬಂಧಿಸಲಾಗುತ್ತದೆ ಎನ್ನಲಾಗಿದೆ. ಈ ಕೊಲೆ ಪ್ರಕರಣಕ್ಕೆ ಸಮಬಂಧಿಸಿದಂತೆ ಈವರೆಗೂ ಕ್ಯಾಂಪಸ್​ ಫ್ರಂಟ್​, ಪಿಎಫ್​ಐ ಹಾಗೂ ಎಸ್​ಡಿಪಿಐ ಕಾರ್ಯಕರ್ತರು ಸೇರಿದಂತೆ ಒಟ್ಟು 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜುಲೈ 1 ರಂದು ಕೇರಳದ ಮಹಾರಾಜ ಕಾಲೇಜಿನಲ್ಲಿ ಪೋಸ್ಟರ್​ ಅಂಟಿಸುವ ವಿಚಾರವಾಗಿ ಸಿಪಿಐ(ಎಂ) ಹಾಗೂ ಕ್ಯಾಂಪಸ್​ ಫ್ರಂಟ್​ ವಿಧ್ಯಾರ್ಥಿ ಘಟಕಗಳ ನಡುವೆ ಮಾರಾಮಾರಿ ನಡೆದಿತ್ತು. ಈ ಜಗಳದಲ್ಲಿ ಚಾಕು ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಅಭಿಮನ್ಯು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ.
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...