• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Farmers Protest: ರಿಹಾನಾ ಅವರ ಮುಂದಿನ ವಿಡಿಯೋದಲ್ಲಿ ನೀವಿರುತ್ತೀರಿ; ತಾಪ್ಸಿ, ಸ್ವರ ಭಾಸ್ಕರ್​ ಬೆನ್ನಿಗೆ ನಿಂತ ಅಭಯ್​ ಡಿಯೋಲ್

Farmers Protest: ರಿಹಾನಾ ಅವರ ಮುಂದಿನ ವಿಡಿಯೋದಲ್ಲಿ ನೀವಿರುತ್ತೀರಿ; ತಾಪ್ಸಿ, ಸ್ವರ ಭಾಸ್ಕರ್​ ಬೆನ್ನಿಗೆ ನಿಂತ ಅಭಯ್​ ಡಿಯೋಲ್

ತಾಪ್ಸಿ ಪೊನ್ನು, ಸ್ವರಾ ಭಾಸ್ಕರ್ ಮತ್ತು ಅಭಯ್​ ಡಿಯೋಲ್.

ತಾಪ್ಸಿ ಪೊನ್ನು, ಸ್ವರಾ ಭಾಸ್ಕರ್ ಮತ್ತು ಅಭಯ್​ ಡಿಯೋಲ್.

ಸ್ವರ ಭಾಸ್ಕರ್ ಈಗಾಗಲೇ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಖುದ್ದು ಹೋಗಿ ಭಾಗವಹಿಸಿ ಬಂದಿದ್ದಾರೆ. ಅಲ್ಲದೆ ಭಾರತದಲ್ಲಿ ನಡೆಯುತ್ತಿರುವ ಟ್ವಿಟರ್ ಆಂದೋಲನದಲ್ಲಿ ರಿಹಾನ್ನಾ ಗ್ರೇಟಾ ಥನ್‌ಬರ್ಗ್ ಮತ್ತು ಮಿಯಾ ಖಲೀಫ್ ಸೇರಿದಂತೆ ಹಲವರ ಪರ ದನಿಯೆತ್ತಿದ್ದಾರೆ.

  • Share this:

    ಭಾರತದಲ್ಲಿ ಕಳೆದ ಎರಡು ತಿಂಗಳಿನಿಂದ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನೆ ವೇಳೆ 150ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದಾರೆ. ಆದರೆ, ಈವರೆಗೆ ಯಾವ ಬಾಲಿವುಡ್​ ನಟ-ನಟಿಯರು ಕ್ರಿಕೆಟಿಗರು ಈ ಕುರಿತು ಧ್ವನಿ ಎತ್ತಿರಲಿಲ್ಲ. ಆದರೆ, ಕಳೆದ ಬುಧವಾರ ದೆಹಲಿಯಲ್ಲಿನ ರೈತ ಹೋರಾಟಕ್ಕೆ ಸಂಬಂಧಿಸಿದಂತೆ ಅಮೆರಿಕದ ಖ್ಯಾತ ಪಾಪ್​ ಹಾಡುಗಾರ್ತಿ ರಿಹಾನಾ ಟ್ವೀಟ್​ ಮಾಡುತ್ತಿದ್ದಂತೆ, ಇದೀಗ ಕ್ರಿಕೆಟರ್​ ಸಚಿನ್ ತೆಂಡೂಲ್ಕರ್​, ರವಿಶಾಸ್ತ್ರಿ, ಅನಿಲ್ ಕುಂಬ್ಳೆ, ನಟರಾದ ಅಕ್ಷಯ್​ ಕುಮಾರ್, ಕಂಗನಾ ರಣಾವತ್​ ಈ ಟ್ವೀಟ್​ ವಿರೋಧಿಸಿ ರಾಷ್ಟ್ರೀಯತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ರಿಹಾನ್ನಾ ಟ್ವೀಟ್​ಗೆ ಭಾರತೀಯ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ ರೀತಿಯನ್ನು ಬಾಲಿವುಡ್​ ನಟಿಯರಾದ ತಾಪ್ಸಿ ಪೊನ್ನು ಹಾಗೂ ಸ್ವರಾ ಭಾಸ್ಕರ್​ ಟೀಕಿಸಿದ್ದರು. ಹೀಗಾಗಿ ಇವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ದಾಳಿಗಳು ಆರಂಭವಾಗಿವೆ. ಆದರೆ, ಮತ್ತೋರ್ವ ನಟ ಅಭಯ್​ ಡಿಯೋಲ್ ಮಾತ್ರ ಈ ಇಬ್ಬರು ನಟಿಯರ ಬೆನ್ನಿಗೆ ನಿಂತಿದ್ದಾರೆ.









    View this post on Instagram






    A post shared by Abhay Deol (@abhaydeol)





    ನಟಿ ತಾಪ್ಸಿ ಪೊನ್ನು ಟ್ವೀಟ್​ನ ಸ್ಕ್ರೀನ್​ಶಾಟ್​ ಅನ್ನು ಹಂಚಿಕೊಳ್ಳುವ ಮೂಲಕ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಅಭಯ್​ ಡಿಯೋಲ್​, "ನನ್ನ ಮುಂದಿನ ರಿಹಾನ್ನಾ ಕುರಿತ ಬಾದಗಲ್‌ರಿರಿ ವಿಡಿಯೋದಲ್ಲಿ ನೀವಿರಲೇಬೇಕು. ಏಕೆಂದರೆ ಅದಕ್ಕೆ ಧೈರ್ಯವಿರಬೇಕು. ಈ ಮೂವರು ಪ್ರಿಯ ಮಹಿಳೆಯರನ್ನು ನೋಡಿ ಜನರಲ್ಲಿ ಧೈರ್ಯ ಉಕ್ಕಬೇಕು" ಎಂದು ಅಭಯ್ ಡಿಯೋಲ್ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.


    ರೈತ ಹೋರಾಟ ಮತ್ತು ರಿಹಾನ್ನಾ ಟ್ವೀಟ್​ ಗೆ ಪ್ರತಿಕ್ರಿಯಿಸಿದ್ದ ಭಾರತೀಯ ಸೆಲೆಬ್ರಿಟಿಗಳ ಬಗ್ಗೆ ಗುರುವಾರ ಟ್ವೀಟ್ ಮಾಡಿದ್ದ ತಾಪ್ಸಿ ಪೊನ್ನು, "ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಅಲ್ಲಾಡಿಸುವುದಾದರೆ, ಒಂದು ಜೋಕ್ ನಿಮ್ಮ ನಂಬಿಕೆಯನ್ನು ಅಲ್ಲಾಡಿಸುವುದಾದರೆ, ಒಂದು ಕಾರ್ಯಕ್ರಮ ನಿಮ್ಮ ಧಾರ್ಮಿಕ ನಂಬಿಕೆಯನ್ನು ಅಲ್ಲಾಡಿಸುವುದಾದರೆ, ಮೊದಲು ನೀವು ನಂಬಿರುವ ಮೌಲ್ಯಗಳನ್ನು ಗಟ್ಟಿಗೊಳಿಸಲು ಕೆಲಸ ಮಾಡಿ. ಬದಲಿಗೆ ಉಳಿದವರಿಗೆ ಪ್ರೊಪಗಂಡಾ ಪಾಠ ಮಾಡಲು ಬರಬೇಡಿ" ಎಂದಿದ್ದರು. ಈ ಟ್ವೀಟ್​ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ.


    ಇನ್ನು ಸ್ವರ ಭಾಸ್ಕರ್ ಈಗಾಗಲೇ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಖುದ್ದು ಹೋಗಿ ಭಾಗವಹಿಸಿ ಬಂದಿದ್ದಾರೆ. ಅಲ್ಲದೆ ಭಾರತದಲ್ಲಿ ನಡೆಯುತ್ತಿರುವ ಟ್ವಿಟರ್ ಆಂದೋಲನದಲ್ಲಿ ರಿಹಾನ್ನಾ ಗ್ರೇಟಾ ಥನ್‌ಬರ್ಗ್ ಮತ್ತು ಮಿಯಾ ಖಲೀಫ್ ಸೇರಿದಂತೆ ಹಲವರ ಪರ ದನಿಯೆತ್ತಿದ್ದಾರೆ.


    ಇನ್ನು ಫರಾಹ್ ಖಾನ್ ಅಲಿ ಸಹ ಟ್ವೀಟ್ ಮಾಡಿದ್ದು,"ರೀಲ್ ಲೈಫ್ ಹೀರೋಗಳು ಮತ್ತು ರಿಯಲ್ ಲೈಫ್ ಹೀರೋಗಳು" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಡಿಯಾ ಎಗೆನೆಸ್ಟ್ ಪ್ರೊಪಗಾಂಡ ಎಂಬ ಹ್ಯಾಷ್‌ಟ್ಯಾಗ್ ಬಳಸಿ ಒಂದೇ ರೀತಿಯ ಟ್ವೀಟ್‌ಗಳನ್ನು ಮಾಡಿರುವುದು ಮಾರ್ಕೆಟ್ ಗಿಮ್ಮಿಕ್ಕ್ ನಂತೆ ತೋರುತ್ತದೆ. ಏನೇ ಕಾರಣಗಳಿರಲಿ ಮತ್ತು ನಾನು ಅದನ್ನು ನಿರ್ಣಯಿಸಲು ಯಾರು ಅಲ್ಲ, ಆದರೆ ನೀವು ಅದನ್ನು ಒರಿಜಿನಲ್ ನಂತೆ ತೋರಿಸಲು ಪ್ರಯತ್ನಿಸಬಹುದಿತ್ತು. ಈಗ ನೀವು ಅದರಿಂದ ದೂರ ಸರಿದಿದ್ದೀರಿ. ರೀಲ್ ಲೈಫ್ ಹೀರೋಗಳ ವಿರುದ್ಧ ರಿಯಲ್ ಲೈಫ್ ಹೀರೋಗಳು ಎಂದು ಅವರು ಬರೆದಿದ್ದಾರೆ.


    ಇದನ್ನೂ ಓದಿ: ಕೃಷಿ ಕಾಯ್ದೆಗಳನ್ನ ಸಂಸದೀಯ ಸಮಿತಿಯೊಂದರ ಅವಗಾಹನೆಗೆ ಬಿಡಲು ಕೇಂದ್ರ ಚಿಂತನೆ


    "ನಮ್ಮ ದೇಶದ ಕಾರ್ಯಚಟುವಟಿಕೆಗಳನ್ನು ಹೊರಗಿನ ಶಕ್ತಿಗಳು ನಿಯಂತ್ರಿಸಲು ಪ್ರಯತ್ನಿಸುತ್ತಿವೆ ಎಂದು ನಿಮ್ಮನ್ನು ನಂಬಿಸಲು ಸುದ್ದಿ ಮಾಧ್ಯಮಗಳು ಪ್ರಯತ್ನಿಸುತ್ತಿವೆ. ಆದರೆ ನೀವು ನೆನಪಿಡಿ ಟೀಕಿಸಿದವರ್ಯಾರೂ ಅನ್ಯಗ್ರಹ ಜೀವಿಗಳಲ್ಲ. ಮತ್ತೊಬ್ಬರ ಹಕ್ಕುಗಳಿಗಾಗಿ ಧ್ವನಿ ಎತ್ತಿರುವ ಸಹಜೀವಿ ಮನುಷ್ಯರು ಅವರು. ಇವೆರಡು ಭಿನ್ನ ಚರ್ಚೆಗಳು. ನೀತಿ, ಕಾಯ್ದೆ, ಕಾನೂನು ಮತ್ತು ಅವುಗಳ ಪರಿಣಾಮದ ಮೇಲೆ ನಿಮಗೆ ಭಿನ್ನ ಅಭಿಪ್ರಾಯಗಳು ಇರಬಹುದು. ಆದರೆ ಆ ಭಿನ್ನಾಭಿಪ್ರಾಯವನ್ನು “ಅನ್ಯ” ವಾದಕ್ಕೆ ಬಳಸಿಕೊಳ್ಳಲು ಅವಕಾಶ ಕೊಡಬೇಡಿ. ಟೀಕೆ ಇರುವುದು ಮಾನವ ಹಕ್ಕುಗಳ ಮತ್ತು ಸ್ವಾತಂತ್ರ್ಯದ ಹರಣದ ಬಗ್ಗೆ.." ಎಂದು ಸೋನಾಕ್ಷಿ ಸಿನ್ಹಾ ಟ್ವೀಟ್ ಮಾಡಿದ್ದಾರೆ.


    ಒಟ್ಟಾರೆಯಾಗಿ ಅಕ್ಷಯ್ ಕುಮರ್, ಅಜಯ್ ದೇವಗನ್, ಕರಣ್ ಜೋಹಾರ್, ಏಕ್ತ ಕಪೂರ್, ಸುನೀಲ್ ಶೆಟ್ಟಿ ಸರ್ಕಾರದ ಪರವಾಗಿ ಟ್ವೀಟ್ ಮಾಡಿದರೆ ಕೆಲವರು ರೈತರ ಪರ ಟ್ವೀಟ್ ಮಾಡುವ ಮೂಲಕ ಭಾರತದಲ್ಲಿ ಕೊನೆಗೂ ರೈತರ ಹೋರಾಟಕ್ಕೆ ಸ್ಟಾರ್​ ವ್ಯಾಲ್ಯೂ ದೊರೆತಂತಾಗಿದೆ.

    Published by:MAshok Kumar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು