• Home
  • »
  • News
  • »
  • national-international
  • »
  • Global Terrorist: ಲಷ್ಕರ್-ಎ-ತೊಯ್ಬಾದ ಅಬ್ದುಲ್ ರೆಹಮಾನ್ ಮಕ್ಕಿ ಇನ್ಮೇಲೆ ಜಾಗತಿಕ ಭಯೋತ್ಪಾದಕ

Global Terrorist: ಲಷ್ಕರ್-ಎ-ತೊಯ್ಬಾದ ಅಬ್ದುಲ್ ರೆಹಮಾನ್ ಮಕ್ಕಿ ಇನ್ಮೇಲೆ ಜಾಗತಿಕ ಭಯೋತ್ಪಾದಕ

ಅಬ್ದುಲ್ ರೆಹಮಾನ್ ಮಕ್ಕಿ

ಅಬ್ದುಲ್ ರೆಹಮಾನ್ ಮಕ್ಕಿ

ನಿಧಿ ಸಂಗ್ರಹ, ನೇಮಕಾತಿ, ಯುವಕರನ್ನು ಹಿಂಸಾಚಾರಕ್ಕೆ ಪ್ರಚೋದಿಸುವುದು ಹಾಗೂ ಭಾರತದ ಮೇಲೆ ದಾಳಿಗಳನ್ನು ನಡೆಸುವ ಯೋಜನೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದೆ.

  • Share this:

ಇಸ್ಲಾಮಾಬಾದ್: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಉಪ ಮುಖ್ಯಸ್ಥ ಅಬ್ದುಲ್ ರೆಹಮಾನ್ ಮಕ್ಕಿಯನ್ನು (Abdul Rehman Makki) ವಿಶ್ವಸಂಸ್ಥೆಯು ಜಾಗತಿಕ ಭಯೋತ್ಪಾದಕ (Global Terrorist) ಎಂದು ಕಪ್ಪು ಪಟ್ಟಿಗೆ ಸೇರಿಸಿದೆ. ನಿಧಿ ಸಂಗ್ರಹ, ನೇಮಕಾತಿ, ಯುವಕರನ್ನು ಹಿಂಸಾಚಾರಕ್ಕೆ ಪ್ರಚೋದಿಸುವುದು ಹಾಗೂ ಭಾರತದ ಮೇಲೆ ದಾಳಿಗಳನ್ನು ನಡೆಸುವ ಯೋಜನೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದೆ.


ಸ್ವತ್ತುಗಳನ್ನು ಹಿಡಿತಕ್ಕೆ ತೆಗೆದುಕೊಳ್ಳುವುದು, ಪ್ರಯಾಣ ನಿಷೇಧ, ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಒಳಪಟ್ಟಿರುವ ವ್ಯಕ್ತಿಗಳು ಮತ್ತು ಘಟಕಗಳ ಪಟ್ಟಿಗೆ ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನ ಅಲ್-ಖೈದಾ ನಿರ್ಬಂಧಗಳ ಸಮಿತಿಯು ಮಕ್ಕಿಯನ್ನು ಸೇರ್ಪಡೆಗೊಳಿಸಿದೆ.


ಚೀನಾದಿಂದ ಅಡ್ಡಿ
ಕಳೆದ ವರ್ಷ ಜೂನ್‌ನಲ್ಲಿ, ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನ 1267 ಅಲ್-ಖೈದಾ ನಿರ್ಬಂಧಗಳ ಸಮಿತಿಯ ಅಡಿಯಲ್ಲಿ ಮಕ್ಕಿಯನ್ನು ಪಟ್ಟಿಗೆ ಸೇರಿಸುವ ಭಾರತ ಮತ್ತು ಯುಎಸ್ ಜಂಟಿ ಪ್ರಸ್ತಾವನೆಯನ್ನು ಚೀನಾ ಕೊನೆಯ ಕ್ಷಣದಲ್ಲಿ ತಡೆಹಿಡಿದಿತ್ತು.


ಮಕ್ಕಿಯ ವಿವರ ನೀಡಿದವರಿಗೆ 2 ಮಿಲಿಯನ್ ಬಹುಮಾನ
US ಡಿಪಾರ್ಟ್‌ಮೆಂಟ್ ಆಫ್ ಸ್ಟೇಟ್‌ನ ರಿವಾರ್ಡ್ಸ್ ಫಾರ್ ಜಸ್ಟಿಸ್ ಕಾರ್ಯಕ್ರಮದ ಅಡಿಯಲ್ಲಿ ಅಮೆರಿಕಾ $2 ಮಿಲಿಯನ್ ಬಹುಮಾನವನ್ನು ಮಕ್ಕಿಯ ವಿವರ ನೀಡಿದವರಿಗೆ ಘೋಷಿಸಿದೆ. ಮಕ್ಕಿ ಅಮೆರಿಕದಿಂದ ಗೊತ್ತುಪಡಿಸಿದ ಭಯೋತ್ಪಾದಕ ಮತ್ತು ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಮತ್ತು 26/11 ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ನ ಸೋದರ ಮಾವ ಕೂಡ ಹೌದು.ಭಾಷಣಕಾರ ಕೂಡ ಹೌದು
ಮಕ್ಕಿ ಕೂಡ ಹಫೀಜ್ ಎಂಬ ಬಿರುದನ್ನು ಬಳಸುತ್ತಿದ್ದು, ಇದು ಖುರಾನ್ ಅನ್ನು ಕಂಠಪಾಠ ಮಾಡಿದವರಿಗೆ ಗೌರವಾರ್ಥವಾಗಿ ನೀಡುವ ಬಿರುದಾಗಿದೆ. ಜೊತೆಗೆ JuD ನ ನೈಬ್ ಎಮಿರ್ ಎಂಬ ಬಿರುದನ್ನು ಬಳಸುತ್ತಾನೆ.


ಸಯೀದ್ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ನ್ಯಾಯಾಲಯದ ವಿಚಾರಣೆಗಳಲ್ಲಿ ಹಫೀಜ್ ಹಾಜರಾಗಿದ್ದನು. ಕ್ರಾಂತಿಕಾರಿ ಭಾಷಣಕಾರ ಎಂದು ಹೆಸರುವಾಸಿಯಾಗಿರುವ ಮಕ್ಕಿ ಫೆಬ್ರವರಿಯಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆದ ಕಾಶ್ಮೀರ ಒಗ್ಗಟ್ಟಿನ ದಿನದ ರ‍್ಯಾಲಿಗಳಲ್ಲಿ ನಿಯಮಿತವಾಗಿ ಪಾಲ್ಗೊಂಡಿರುವುದು ವರದಿಯಾಗಿದೆ.


ಭಾರತದಲ್ಲಿ ರಕ್ತದ ಹೊಳೆ ಹರಿಸುವುದಾಗಿ ಎಚ್ಚರಿಕೆ
ಫೆಬ್ರವರಿ 5 ರಂದು ಪಾಕಿಸ್ತಾನದಲ್ಲಿ ಕಾಶ್ಮೀರ ಐಕಮತ್ಯ ದಿನವನ್ನು ಅಧಿಕೃತವಾಗಿ ಆಚರಿಸಲಾಗುತ್ತದೆ. ಮುಂಬೈ ದಾಳಿಯ ಎರಡು ವರ್ಷಗಳ ನಂತರ 2010 ರಲ್ಲಿ ನಡೆದ ಅಂತಹ ಒಂದು ರ‍್ಯಾಲಿಯಲ್ಲಿ, ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸದಿದ್ದಕ್ಕಾಗಿ ಮಕ್ಕಿ ಭಾರತದಲ್ಲಿ ರಕ್ತದ ನದಿ ಹರಿಯುತ್ತದೆ ಎಂದು ಬೆದರಿಕೆ ಹಾಕಿದ್ದನು ಮಾತ್ರವಲ್ಲದೆ ಕಾಶ್ಮೀರವನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದನು.


ಇದನ್ನೂ ಓದಿ: Nepal Plane Crash: ಮನಕಲಕುವ ಘಟನೆ: ಪತಿ ಮೃತಪಟ್ಟ ವಿಮಾನ ಸಂಸ್ಥೆಯಲ್ಲೇ 16 ವರ್ಷದ ಬಳಿಕ ಮಹಿಳಾ ಪೈಲಟ್‌ ದಹನ!


ಭಾರತದಲ್ಲಿ ಹಿಂಸಾಚಾರದ ಬೆದರಿಕೆಗಳು
2008 ರಲ್ಲಿ UNSC ರೆಸಲ್ಯೂಶನ್ 1267 ರ ಅಡಿಯಲ್ಲಿ ಮಕ್ಕಿಯನ್ನು ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಯತ್ನದಲ್ಲಿದ್ದಾಗ ಆತ ತಪ್ಪಿಸಿಕೊಂಡಿದ್ದನು ಎಂಬುದಾಗಿ ವರದಿಯಾಗಿದೆ. ಆದರೆ ತಿಂಗಳುಗಳ ನಂತರ, ಭಾರತದಲ್ಲಿ ಹಿಂಸಾಚಾರದ ಬೆದರಿಕೆಯ ಭಾಷಣಗಳೊಂದಿಗೆ, ಆತನನ್ನು ನವೆಂಬರ್ 2010 ರಲ್ಲಿ ಯುಎಸ್ ಟ್ರೆಶರಿ ಇಲಾಖೆಯ ಗೊತ್ತುಪಡಿಸಿದ ಮತ್ತು ಅನುಮೋದಿಸಲಾದ ಭಯೋತ್ಪಾದಕರ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವುದು ವರದಿಯಾಗಿದೆ.


ಮಕ್ಕಿಯ ಮೇಲಿದೆ 40 ಕ್ಕೂ ಹೆಚ್ಚು ಪ್ರಕರಣಗಳು
ಅಬ್ದುಲ್ ರೆಹಮಾನ್ ಮಕ್ಕಿ ಹಾಗೂ ಸಯೀದ್ 2014 ರಲ್ಲಿ ಲಾಹೋರ್ ಹೈಕೋರ್ಟ್‌ಗೆ ಜಂಟಿಯಾಗಿ ಅರ್ಜಿ ಸಲ್ಲಿಸಿದ್ದು, ಸಯೀದ್ ಮಾಹಿತಿಯ ಬಗ್ಗೆ ಯುಎಸ್ ಘೋಷಿಸಿದ $10 ಮಿಲಿಯನ್ ಬಹುಮಾನವನ್ನು ಪ್ರಶ್ನಿಸಿದ್ದಾರೆ.


ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು 2020 ರಲ್ಲಿ ದೋಷಾರೋಪಣೆ ಮಾಡಿದ ನಂತರವೂ, 2021 ರ ನವೆಂಬರ್‌ನಲ್ಲಿ ಲಾಹೋರ್ ಹೈಕೋರ್ಟ್‌ನಿಂದ ಎಲ್‌ಇಟಿ ಮುಂಭಾಗದ ಸಂಘಟನೆಯ ಮೂಲಕ ಭಯೋತ್ಪಾದಕ ನಿಧಿಯ ಆರೋಪದಿಂದ ಖುಲಾಸೆಗೊಂಡ ಆರು ಮಂದಿಯಲ್ಲಿ ಮಕ್ಕಿ ಕೂಡ ಸೇರಿದ್ದಾನೆ.


ಇದನ್ನೂ ಓದಿ: One Nation, One Uniform: ಏನಿದು 'ಒಂದು ದೇಶ, ಒಂದೇ ಸಮವಸ್ತ್ರ'? ಬದಲಾಗುತ್ತಾ ಕರ್ನಾಟಕ ಪೊಲೀಸರ ಖಾಕಿ ಯೂನಿಫಾರ್ಮ್?


ಪಾಕಿಸ್ತಾನದ ಪಂಜಾಬ್ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ವಿಭಾಗವು ಮಕ್ಕಿ ಮತ್ತು ಸಯೀದ್ ಸೇರಿದಂತೆ ಹಲವಾರು ಜೆಯುಡಿ ಸದಸ್ಯರ ವಿರುದ್ಧ 40 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ.

Published by:ಗುರುಗಣೇಶ ಡಬ್ಗುಳಿ
First published: