ತಾಲಿಬಾನ್ ಅಬ್ದುಲ್ ಬರಾದಾರ್ ಅಘ್ಘಾನಿಸ್ತಾನದ ಮುಂದಿನ ಅಧ್ಯಕ್ಷ? ಯಾರು ಈತ?

2020ರಲ್ಲಿ ಅಮೆರಿಕ ಅಂದಿನ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಬರಾದಾರ್ ನಡುವೆ ಮಾತುಕತೆಯಾಗಿತ್ತು. ಯುಎಸ್ ಅಧ್ಯಕ್ಷರೊಂದಿಗೆ ನೇರವಾಗಿ ಸಂವಹನ ನಡೆಸಿದ ಮೊದಲ ತಾಲಿಬಾನ್ ನಾಯಕ ಬರಾದಾರ್. ​ 

ಅಬ್ದುಲ್ ಘನಿ ಬರಾದಾರ್?

ಅಬ್ದುಲ್ ಘನಿ ಬರಾದಾರ್?

 • Share this:


  ಮುಸ್ಲಿಂ ಅಘ್ಘಾನ್ ಜನರಿಗೆ ಭಾರೀ ವಿಜಯದ ಅಭಿನಂದನೆ ಸಲ್ಲಿಸಲು ನಾನು ಬಯಸುತ್ತೇನೆ ಎಂದು ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರದಾರ್ ಅವರು ಆಗಸ್ಟ್ 15, ಭಾನುವಾರ ಘೋಷಿಸಿದರು. ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧ್ಯಕ್ಷೀಯ ಅರಮನೆಯನ್ನು ಸ್ವಾಧೀನಪಡಿಸಿಕೊಂಡಾಗ, ಅಮೆರಿಕ ಬೆಂಬಲಿತ ಸರ್ಕಾರದ ಶವಪೆಟ್ಟಿಗೆಯಲ್ಲಿ ಕೊನೆಯ ಮೊಳೆಯನ್ನು ಹೊಡೆಯಿತು. 

  ಭಾನುವಾರ, ಶಾಂತಿಯುತ ಅಧಿಕಾರ ವರ್ಗಾವಣೆಗೆ ಮುನ್ನ, ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪಲಾಯನ ಮಾಡಿದರು. ತಾಲಿಬಾನ್ 20 ವರ್ಷಗಳ ಯುದ್ಧವನ್ನು ಗೆದ್ದಿದ್ದಾರೆ ಎಂದು ಒಪ್ಪಿಕೊಂಡರು. ಈ ಮೂಲಕ ತಾಲಿಬಾನ್ ಭಯೋತ್ಪಾದಕರು ಕಾಬೂಲ್‌ನ ಅಧ್ಯಕ್ಷೀಯ ಅರಮನೆಗೆ ದಾರಿ ಮಾಡಿಕೊಟ್ಟರು.

  "ನಾವು ತುಂಬಾ ಕೆಳಮಟ್ಟದಲ್ಲಿದ್ದೆವು. ನಾವು ಗೆಲ್ಲುತ್ತೇವೆ ಅಥವಾ ಯಶಸ್ವಿಯಾಗುತ್ತೇವೆ ಎಂದು ಯಾರೂ ನಿರೀಕ್ಷಿಸುತ್ತಿರಲಿಲ್ಲ" ಎಂದು ಯುದ್ಧದಿಂದ ಹಾನಿಗೊಳಗಾದ ರಾಷ್ಟ್ರದ ಮುಂದಿನ ಅಧ್ಯಕ್ಷರಾಗುವ ನಿರೀಕ್ಷೆಯಿರುವ ತಾಲಿಬಾನ್ ನಾಯಕ ಅಬ್ದುಲ್ ಘನಿ ಬರಾದಾರ್ ಹೇಳಿದರು.

  ಯಾರು ಈ ಅಬ್ದುಲ್ ಘನಿ ಬರಾದಾರ್?

  ಬರಾದಾರ್ 1968ರಂದು ಉರುಜ್ಗಾನ್ ಪ್ರಾಂತ್ಯದಲ್ಲಿ ಜನಿಸಿದರು ಮತ್ತು 1980 ರ ದಶಕದಲ್ಲಿ ಸೋವಿಯತ್ ವಿರುದ್ಧ ಅಘ್ಘಾನ್ ಮುಜಾಹಿದ್ದೀನ್ ಪರ ಹೋರಾಡಿದರು.  ಅಬ್ದುಲ್ ಘನಿ ಬರಾದಾರ್ ಕತಾರ್‌ನ ದೋಹಾದಲ್ಲಿ ಶಾಂತಿ ಮಾತುಕತೆಯ ಸಂಧಾನಕಾರರಾಗಿ ಸೇವೆ ಸಲ್ಲಿಸಿದ್ದ ಮತ್ತು ಆತ ಸಂಸ್ಥೆಯ ಉನ್ನತ ರಾಜಕೀಯ ನಾಯಕನೂ ಹೌದು. ತಾಲಿಬಾನ್‌ ಮೂಲ ಸಂಸ್ಥಾಪಕರಲ್ಲಿ ಅಬ್ದುಲ್ ಘನಿ ಕೂಡ ಒಬ್ಬನಾಗಿದ್ದಾನೆ. ಅಮೆರಿಕಾ ಸರ್ಕಾರದ ಕೋರಿಕೆಯ ಮೇರೆಗೆ 2018ರಲ್ಲಿ ಬಿಡುಗಡೆಯಾಗುವ ಮೊದಲು ಪಾಕಿಸ್ತಾನದಲ್ಲಿ 2010ರಲ್ಲಿ ಈತನನ್ನು ಜೈಲಿಗೆ ಹಾಕಲಾಯಿತು. ಆದ್ದರಿಂದ ಆತ ಶಾಂತಿ ಮಾತುಕತೆಯಲ್ಲಿ ಗುಂಪಿನ ನಾಯಕರಾಗಿ ಸೇವೆ ಸಲ್ಲಿಸುವ ಅವಕಾಶ ಪಡೆದ.

  ಅಫ್ಘಾನಿಸ್ತಾನದಲ್ಲಿದ್ದ ಅಮೆರಿಕಾ ಸೈನ್ಯವನ್ನು ಹಿಂಪಡೆಯಬೇಕು ಎಂಬ ಮನವಿಯನ್ನು ಬರಾದಾರ್​ ಮಾಡಿದ್ದ. ಆದರೆ ಬೈಡೆನ್ ಆಡಳಿತ ಸೇನೆ ನಿರ್ಗಮನ ದಿನಾಂಕವನ್ನು ಹಿಂದಕ್ಕೆ ತಳ್ಳುವ ಪ್ರಯತ್ನವನ್ನು ಮಾಡಿತ್ತು. ಆದರೆ ಬರಾದಾರ್ ಇದನ್ನು ವಿರೋಧಿಸಿದ್ದ. ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ತಾಲಿಬಾನ್ ಜೊತೆಗೆ ನಡೆಸಿದ ಶಾಂತಿ ಒಪ್ಪಂದದ ಷರತ್ತಿಗೆ ಅನುಗುಣವಾಗಿ ಯುಎಸ್ ಸೇನೆ ದೇಶವನ್ನು ತ್ಯಜಿಸಲು ಅಂಗೀಕರಿಸಿತು.

  ಒಪ್ಪಂದಕ್ಕೆ ಸಹಿ ಹಾಕಿದ ನಂತರ, 2020ರಲ್ಲಿ ಅಮೆರಿಕ ಅಂದಿನ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಬರಾದಾರ್ ನಡುವೆ ಮಾತುಕತೆಯಾಗಿತ್ತು. ಯುಎಸ್ ಅಧ್ಯಕ್ಷರೊಂದಿಗೆ ನೇರವಾಗಿ ಸಂವಹನ ನಡೆಸಿದ ಮೊದಲ ತಾಲಿಬಾನ್ ನಾಯಕ ಬರಾದಾರ್. ​ ಅಫ್ಘಾನಿಸ್ತಾನ ಅಧ್ಯಕ್ಷರಾದ ಅಶ್ರಫ್ ಘನಿ ದೇಶ ಬಿಟ್ಟು ಪಲಾಯನಗೈದ ನಂತರ ಅಪ್ಘಾನಿಸ್ತಾನದ ಪ್ರಜೆಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದು ಇದೇ ತಾಲಿಬಾನ್ ನಾಯಕ ಬರಾದಾರ್.

  ಇದನ್ನು ಓದಿ: ತಾಲಿಬಾನ್ ಬೆಂಬಲಿಸುವ ಖಾತೆ ನಿಷೇಧಗೊಳಿಸುವುದಾಗಿ ಹೇಳಿದ ಫೇಸ್​ಬುಕ್!

  ನಾವು ನಿರೀಕ್ಷಿಸದೇ ಇರುವ ವಿಜಯ ಪಡೆದುಕೊಂಡಿದ್ದೇವೆ. ಅಲ್ಲಾಹುವಿನ ಎದುರು ನಾವು ವಿನಮ್ರತೆ ತೋರಿಸಬೇಕು ಎಂಬುದಾಗಿ ದೋಹಾದಲ್ಲಿ ದಾಖಲಾಗಿರುವ ಹೇಳಿಕೆಯಲ್ಲಿ ಬರಾದಾರ್ ನುಡಿದಿದ್ದಾನೆ. ನಮ್ಮ ದೇಶದ ಜನರಿಗೆ ನಾವು ಹೇಗೆ ಸಲ್ಲಿಸುತ್ತೇವೆ. ಅವರನ್ನು ಹೇಗೆ ಸುರಕ್ಷಿತರಾಗಿ ಕಾಪಾಡುತ್ತೇವೆ ಹಾಗೂ ಅವರ ಭವಿಷ್ಯವನ್ನು ಹೇಗೆ ರೂಪಿಸುತ್ತೇವೆ ಎಂಬುದು ನಮ್ಮ ಕೈಯಲ್ಲಿದೆ ಎಂಬುದಾಗಿ ತಿಳಿಸಿದ್ದಾನೆ.

  ಈ ಹಿಂದೆ 1996ರಿಂದ 2001ರವರೆಗೆ ತಾಲಿಬಾನಿಗಳ ಆಳ್ವಿಕೆ ಅಫ್ಘಾನಿಸ್ತಾನದಲ್ಲಿ ಕ್ರೂರವಾಗಿತ್ತು. ತೀಕ್ಷ್ಣ ರೂಪದ ಧಾರ್ಮಿಕ ಆದೇಶಗಳು, ಸಾರ್ವಜನಿಕ ಮರಣದಂಡನೆಗಳು ಹಾಗೂ ಮಹಿಳೆಯರು ಮತ್ತು ಬಾಲಕಿಯರ ಸ್ವಾತಂತ್ರ್ಯವನ್ನು ಕಸಿದುಕೊಂಡ ತಾಲಿಬಾನಿ ಆಡಳಿತದ ವಿರುದ್ಧ ಪ್ರಪಂಚದ ದೊಡ್ಡಣ್ಣ ಅಮೆರಿಕಾ ಸಿಟ್ಟಿಗೆದ್ದಿತ್ತು. ನಂತರ ಭಯೋತ್ಪಾದನೆ ವಿರುದ್ಧ ಸಮರ (ವಾರ್​ ಆನ್​ ಟೆರರ್​) ಸಾರಿದ ಪರಿಣಾಮ ತಾಲಿಬಾನಿಗರು ಅಫ್ಘಾನಿಸ್ತಾನದ ಅಧಿಕಾರ ಕಳೆದುಕೊಂಡಿತ್ತು.

  Published by:HR Ramesh
  First published: