ನಿರ್ಭಯಾ ಅತ್ಯಾಚಾರಿಗಳ ಗಲ್ಲು ವಿಳಂಬಕ್ಕೆ ಎಎಪಿ ಸರ್ಕಾರದ ನಿರ್ಲಕ್ಷ್ಯವೇ ಕಾರಣ; ಪ್ರಕಾಶ್​ ಜಾವ್ಡೇಕರ್​ ಆಕ್ರೋಶ

ಸುಪ್ರೀಂ ಕೋರ್ಟ್​​ ಆದೇಶ ಬಂದ ಒಂದು ವಾರದಲ್ಲಿ ಅತ್ಯಾಚಾರಿಗಳಿಗೆ ಎಎಪಿ ಸರ್ಕಾರ ನೋಟಿಸ್​ ನೀಡಿದ್ದರೆ, ದೋಷಿಗಳನ್ನು ಈಗ ಗಲ್ಲಿಗೇರಿಸಬಹುದಿತ್ತು ಮತ್ತು ದೇಶಕ್ಕೆ ನ್ಯಾಯ ಸಿಗುತ್ತಿತ್ತು ಎಂದು ಕೇಂದ್ರ ಸಚಿವ ಪ್ರಕಾಶ್​ ಜಾವ್ಡೇಕರ್ ಅಭಿಪ್ರಾಯಪಟ್ಟಿದ್ದಾರೆ.

news18-kannada
Updated:January 16, 2020, 3:49 PM IST
ನಿರ್ಭಯಾ ಅತ್ಯಾಚಾರಿಗಳ ಗಲ್ಲು ವಿಳಂಬಕ್ಕೆ ಎಎಪಿ ಸರ್ಕಾರದ ನಿರ್ಲಕ್ಷ್ಯವೇ ಕಾರಣ; ಪ್ರಕಾಶ್​ ಜಾವ್ಡೇಕರ್​ ಆಕ್ರೋಶ
ಕೇಂದ್ರ ಸಚಿವ ಪ್ರಕಾಶ್​ ಜಾವ್ಡೇಕರ್​​
  • Share this:
ನವದೆಹಲಿ(ಜ.16): ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಗಲ್ಲುಗೇರಿಸಲು ವಿಳಂಬವಾಗುತ್ತಿರುವುದಕ್ಕೆ ಆಮ್​ ಆದ್ಮಿ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಬಿಜೆಪಿ ನಾಯಕ ಪ್ರಕಾಶ್​ ಜಾವ್ಡೇಕರ್​ ಆರೋಪಿಸಿದ್ದಾರೆ.

2017ರಲ್ಲಿ ಗಲ್ಲುಶಿಕ್ಷೆ ವಿರುದ್ಧದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್​​​ ತಿರಸ್ಕರಿಸಿದ ಬಳಿಕ, ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​​ ಅಪರಾಧಿಗಳಿಗೆ ನೋಟಿಸ್​ ನೀಡಲು ಎರಡೂವರೆ ವರ್ಷಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಂಡಿದ್ದಾರೆ ಎಂದು ಜಾವ್ಡೇಕರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯತ್ತ ಸಿ.ಎಂ. ಇಬ್ರಾಹಿಂ? ಕುತೂಹಲ ಕೆರಳಿಸಿದ ಹೇಳಿಕೆ

ಸುಪ್ರೀಂ ಕೋರ್ಟ್​​ ಆದೇಶ ಬಂದ ಒಂದು ವಾರದಲ್ಲಿ ಅತ್ಯಾಚಾರಿಗಳಿಗೆ ಎಎಪಿ ಸರ್ಕಾರ ನೋಟಿಸ್​ ನೀಡಿದ್ದರೆ, ದೋಷಿಗಳನ್ನು ಈಗ ಗಲ್ಲಿಗೇರಿಸಬಹುದಿತ್ತು ಮತ್ತು ದೇಶಕ್ಕೆ ನ್ಯಾಯ ಸಿಗುತ್ತಿತ್ತು ಎಂದು ಕೇಂದ್ರ ಸಚಿವ ಪ್ರಕಾಶ್​ ಜಾವ್ಡೇಕರ್ ಅಭಿಪ್ರಾಯಪಟ್ಟಿದ್ದಾರೆ.

ನಿರ್ಭಯಾ ಅತ್ಯಾಚಾರಿ ಮುಕೇಶ್​ ಸಿಂಗ್​ ಸಲ್ಲಿಸಿದ್ದ ಕ್ಷಮಾಪಣಾ ಅರ್ಜಿಯನ್ನು ತಿರಸ್ಕರಿಸುವಂತೆ ದೆಹಲಿ ಸರ್ಕಾರವು ಬುಧವಾರ ಶಿಫಾರಸ್ಸು ಮಾಡಿದೆ. 2012ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ. ದೆಹಲಿ ನ್ಯಾಯಾಲಯವೊಂದು ಜನವರಿ 7ರಂದು ಈ ನಾಲ್ವರಿಗೆ ಡೆತ್ ವಾರೆಂಟ್ ಹೊರಡಿಸಿದೆ.

Parliament Budget Session: ಜ.31ರಿಂದ ಸಂಸತ್​​ ಬಜೆಟ್ ಅಧಿವೇಶನ ಆರಂಭ

ಮುಕೇಶ್​ (32), ವಿನಯ್​ ಶರ್ಮಾ(26), ಅಕ್ಷಯ್​ ಕುಮಾರ್​​(31) ಮತ್ತು ಪವನ್​ ಗುಪ್ತಾ(25) ಈ ನಾಲ್ವರು ಅಪರಾಧಿಗಳನ್ನು ಜನವರಿ 22ರ ಬೆಳಗ್ಗೆ 7 ಗಂಟೆಗೆ ತಿಹಾರ್​​ ಜೈಲಿನಲ್ಲಿ ಗಲ್ಲಿಗೇರಿಸಬೇಕಿತ್ತು. ಆದರೆ, ಮುಕೇಶ್ ಸಿಂಗ್ ಎಂಬ ಆರೋಪಿಯು ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಆ ದಿನಕ್ಕೆ ನೇಣಿಗೆ ಹಾಕಲು ಸಾಧ್ಯವಾಗುವುದಿಲ್ಲ. ಆತನ ಕ್ಷಮಾದಾನ ಅರ್ಜಿ ಇತ್ಯರ್ಥವಾದ ಬಳಿಕ ನೇಣಿಗೇರಿಸುವ ದಿನಾಂಕ ನಿಗದಿಪಡಿಸುವ ಸಾಧ್ಯತೆ ಇದೆ.
Published by: Latha CG
First published: January 16, 2020, 3:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading