2019ರ ಲೋಕಸಭೆ ಚುನಾವಣೆಗೆ ವಿರೋಧ ಪಕ್ಷಗಳ ಮೈತ್ರಿ ಸೇರಲ್ಲ ಎಂದ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್

seema R
Updated:August 10, 2018, 9:56 AM IST
2019ರ ಲೋಕಸಭೆ ಚುನಾವಣೆಗೆ ವಿರೋಧ ಪಕ್ಷಗಳ ಮೈತ್ರಿ ಸೇರಲ್ಲ ಎಂದ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
seema R
Updated: August 10, 2018, 9:56 AM IST
ನ್ಯೂಸ್ 18 ಕನ್ನಡ

ರಾಜಸ್ಥಾನ (ಆ.10): 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಮಾಡಿಕೊಂಡಿರುವ ಮೈತ್ರಿಕೂಟಕ್ಕೆ ಆಮ್ ಆದ್ಮಿ ಪಕ್ಷ ಸೇರುವುದಿಲ್ಲ ಎಂದು ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.


 “ದೇಶದ ಅಭಿವೃದ್ಧಿಗೆ ಪಕ್ಷದ ಯಾವುದೇ ಪಾತ್ರ ಇಲ್ಲದಿರುವುದರಿಂದ ವಿರೋಧ ಪಕ್ಷಗಳ ಮೈತ್ರಿ ಸೇರುವ ಪ್ರಸ್ತಾವವನ್ನು ಕೈಬಿಡಲಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಎಎಪಿ ಯಾವುದೇ ಮೈತ್ರಿಕೂಟದ ಪಕ್ಷವಲ್ಲ,” ಎಂದು ರೋಹಟಕ್ನಲ್ಲಿ ಅವರು ಸುದ್ದಿಗಾರರಿಗೆ ತಿಳಿಸಿದರು.


“ಆಮ್ ಆದ್ಮಿ ಪಕ್ಷವೂ ಹರ್ಯಾಣ ವಿಧಾನಸಭಾ ಚುನಾವಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ,” ಎಂದು ತಿಳಿಸಿದ ಕೇಜ್ರಿವಾಲ್,“ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೆಹಲಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಬಾಕಿ ಉಳಿಸಿದೆ,” ಎಂದು ಕಿಡಿಕಾರಿದರು. “ಜನರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ತೆಗೆದುಕೊಳ್ಳುವ ಪ್ರತಿ ಹೆಜ್ಜೆಗೂ ಬಿಜೆಪಿ ಅಡ್ಡಗಾಲು ಹಾಕುತ್ತಿದೆ,” ಎಂದು ಆರೋಪ ಮಾಡಿದರು.ಶಿಕ್ಷಣ ಮತ್ತು ಆರೋಗ್ಯ ವಲಯದಲ್ಲಿ ನಾವು ಕ್ರಾಂತಿಕಾರಕ ಕೆಲಸ ಮಾಡಿದ್ದೇವೆ ಎಂದ ಅವರು “ದೆಹಲಿಯನ್ನು ಹರ್ಯಾಣಕ್ಕೆ ಹೋಲಿಸಿದರೆ ಹರ್ಯಾಣ ಅಭಿವೃದ್ಧಿ ತೀರಾ ಹಿಂದೆ ಉಳಿದಿದೆ. ಅಭಿವೃದ್ಧಿ ಹೇಗೆ ಮಾಡುವುದು ಎಂಬುದನ್ನು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಅವರು ದೆಹಲಿ ಸರ್ಕಾರ ನೋಡಿ ಕಲಿಯಲಿ,”ಎಂದು ಕುಟುಕಿದರು.


“ದೆಹಲಿ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಅಧಿಕಾರವಿಲ್ಲದಿದ್ದರೂ ವಿದ್ಯುತ್, ನೀರು, ಶಿಕ್ಷಣ, ಆರೋಗ್ಯ ವಲಯಗಳಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಿದೆ. ಹರ್ಯಾಣ ರಾಜ್ಯ ಸರ್ಕಾರಕ್ಕೆ ಎಲ್ಲ ಅಧಿಕಾರ ಇದ್ದರೂ ಏಕೆ ಕಟ್ಟರ್ ಅವರಿಗೆ ಇದು ಸಾಧ್ಯವಾಗಿಲ್ಲ,” ಎಂದು ಪ್ರಶ್ನೆ ಮಾಡಿದರು.


ಅಲ್ಲದೇ, ಜಮ್ಮು-ಕಾಶ್ಮೀರದ ಗುರ್ಜ್ ವಲಯದಲ್ಲಿ ಮಂಗಳವಾರ ಒಳನುಸುಳುಕೋರರನ್ನು ತಡೆಗಟ್ಟುವ ಪ್ರಯತ್ನದಲ್ಲಿ ಪ್ರಾಣ ಕಳೆದುಕೊಂಡ ಹರ್ಯಾಣದ ಅಂಬಲ ಜಿಲ್ಲೆಯ ಸೈನಿಕನ ಕುಟುಂಬಕ್ಕೆ ಅಲ್ಲಿನ ರಾಜ್ಯ ಸರ್ಕಾರ ಒಂದು ಕೋಟಿ ರೂಪಾಯಿ ಪರಿಹಾರ ನೀಡವಂತೆ ಕಟ್ಟರ್ ಸರ್ಕಾರವನ್ನು ಅರವಿಂದ್ ಕೇಜ್ರಿವಾಲ್ ಆಗ್ರಹಿಸಿದರು.

First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ