HOME » NEWS » National-international » AAP WILL CONTEST STATE ELECTIONS IN 2022 SESR

2022 ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಎಎಪಿ ಸಜ್ಜು; ಅರವಿಂದ್​ ಕೇಜ್ರಿವಾಲ್​

ಎಂಟು ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದ ಎಎಪಿ ದೆಹಲಿಯಲ್ಲಿ ಮೂರು ಬಾರಿ ಸರ್ಕಾರ ರಚಿಸಿದೆ. ಪಂಜಾಬ್​ನಲ್ಲಿ ಬಹುದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಿತು, ಈಗ ಉತ್ತರ ಪ್ರದೇಶದಲ್ಲಿ ಸ್ಪರ್ಧೆಗೆ ತಯಾರಿ ನಡೆಸಿದೆ

news18-kannada
Updated:December 15, 2020, 3:02 PM IST
2022 ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಎಎಪಿ ಸಜ್ಜು; ಅರವಿಂದ್​ ಕೇಜ್ರಿವಾಲ್​
ಅರವಿಂದ್ ಕೇಜ್ರಿವಾಲ್.
  • Share this:
ನವದೆಹಲಿ (ಡಿ.15): 2022ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದು ಪಕ್ಷದ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​ ತಿಳಿಸಿದ್ದಾರೆ. ಎಂಟು ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದ ಎಎಪಿ ದೆಹಲಿಯಲ್ಲಿ ಮೂರು ಬಾರಿ ಸರ್ಕಾರ ರಚಿಸಿದೆ. ಪಂಜಾಬ್​ನಲ್ಲಿ ಬಹುದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಿತು, ಈಗ ಉತ್ತರ ಪ್ರದೇಶದಲ್ಲಿ ಸ್ಪರ್ಧೆಗೆ ತಯಾರಿ ನಡೆಸಿದೆ ಈ ಕುರಿತು ಮಾತನಾಡಿದ ಅರವಿಂದ್​ ಕೇಜ್ರಿವಾಲ್​, ಉತ್ತರ ಪ್ರದೇಶದ ಅನೇಕ ನನ್ನ ಸಹೋದರ-ಸಹೋದರಿಯರು ದೆಹಲಿಯಲ್ಲಿ ವಾಸಿಸುತ್ತಿದ್ದು, ನಮ್ಮ ಆಡಳಿತ ಗಮನಿಸಿದ ಅವರು, ಯಾಕೆ ನೀವು ಉತ್ತರ ಪ್ರದೇಶದಲ್ಲಿ ಸ್ಪರ್ಧಿಸಬಾರದು ಎಂಬ ಸಲಹೆ ನೀಡಿದ್ದಾರೆ. ಅಲ್ಲಿನ ಪ್ರಸ್ತುತ ರಾಜಕೀಯ ಪಕ್ಷಗಳ ಬಗ್ಗೆ ಅಸಮಾಧಾನ ಹೊಂದಿರುವ ಹಿನ್ನಲೆ ನಮಗೆ ಸ್ಪರ್ಧಿಸುವಂತೆ ಅವರು ತಿಳಿಸಿದ್ದು, ಈ ಹಿನ್ನಲೆ ನಾವು ಕೂಡ ಚಿಂತನೆ ನಡೆಸಿದ್ದೇವೆ ಎಂದರು.



ಉತ್ತರ ಪ್ರದೇಶದಲ್ಲಿ ಆರೋಗ್ಯ ಸೇವೆ, ಶಿಕ್ಷಣ, ಅಗತ್ಯ ಸೌಕರ್ಯಗಳು ಸಿಗದೇ ಅವರು ದೆಹಲಿಯತ್ತ ಬರುತ್ತಿದ್ದಾರೆ. ತಮ್ಮ ರಾಜ್ಯದಲ್ಲಿ ಇವುಗಳನ್ನು ಪಡೆಯಲು ಯಾಕೆ ವಿಫಲವಾಗಿದ್ದಾರೆ ಎಂದು ಪ್ರಶ್ನಿಸಿದರು.

ಇನ್ನು ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯದಂತೆ ತಡೆಯಲು ಸಣ್ಣ ಪಕ್ಷಗಳೊಂದಿಗೂ ಮೈತ್ರಿ ಮಾಡಿಕೊಳ್ಳಲಿದ್ದೇವೆ. ದೊಡ್ಡ ಪಕ್ಷಗಳೊಂದಿಗಿನ ನಮ್ಮ ಮೈತ್ರಿ ಅನುಭವನ ಉತ್ತಮವಾಗಿಲ್ಲ ಎಂದರು.ಇದೇ ವೇಳೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತದಿಂದ ನಾವು ಸರ್ಕಾರ ರಚಿಸುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಇದರ ಬೆನ್ನಲ್ಲೇ ಇಂದು ಎಎಪಿ ಚುನಾವಣೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದೆ.
Published by: Seema R
First published: December 15, 2020, 2:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories