ಅಹಮದಾಬಾದ್ (ಜೂನ್ 14); ದೆಹಲಿಯಲ್ಲಿ ಸತತ ಮೂರನೇ ಭಾರಿ ಅಧಿಕಾರದ ಗದ್ದುಗೆ ಹಿಡಿದಿರುವ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ, ದೆಹಲಿ ಹೊರತಾಗಿ ಪಂಜಾಬ್ ರಾಜ್ಯದಲ್ಲಿ ಉತ್ತಮ ನೆಲೆ ಹೊಂದಿದೆ. ಇದೀಗ 2022ರಲ್ಲಿ ಗುಜರಾತ್ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಎದುರಾಗಲಿದೆ. ಈ ಭಾರಿಯಾದರೂ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಟ್ಟು ಗೆಲ್ಲುವ ಹುಮ್ಮಸ್ಸಿನಲ್ಲಿ ಕಾಂಗ್ರೆಸ್ ಇದೆ. ಆದರೆ, ಈ ನಡುವೆ ಆಮ್ ಆದ್ಮಿ ಪಕ್ಷವು ಗುಜರಾತ್‌ನ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎಂದು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೋಮವಾರ ಹೇಳಿರುವುದು ರಾಷ್ಟ್ರ ರಾಜಕಾರಣ ದಲ್ಲಿ ಕೋಲಾಹಲ ಮೂಡಿಸಿದೆ. ಈ ಬಗ್ಗೆ ಅಹಮದಾಬಾದ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಧಿಕೃತ ಮಾಹಿತಿ ನೀಡಿರುವ ಅರವಿಂದ ಕೇಜ್ರಿವಾಲ್, "ನಮ್ಮ ಪಕ್ಷದ ಅಭ್ಯರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದ್ದಾರೆ" ಎಂದು ತಿಳಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಗುಜರಾತಿ ಭಾಷೆಯಲ್ಲಿ ಟ್ವೀಟ್ ಸಹ ಮಾಡಿದ್ದಾರೆ.
હવે બદલાશે ગુજરાત.
કાલે હું ગુજરાત આવી રહ્યો છું, ગુજરાતના બધા ભાઈ-બહેનોને મળીશ
— Arvind Kejriwal (@ArvindKejriwal) June 13, 2021
ಗುಜರಾತ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಸೋಮವಾರ ಚಾಲನೆ ನೀಡಲು ಗುಜರಾತ್ ತಲುಪಿದ್ದಾರೆ ಎನ್ನಲಾಗಿದೆ. "ರಾಜ್ಯವು ಈಗ ಬದಲಾಗುತ್ತದೆ. ನಾಳೆ ಗುಜರಾತ್‌ಗೆ ಬರುತ್ತೇನೆ ಮತ್ತು ರಾಜ್ಯದ ಜನರನ್ನು ಭೇಟಿಯಾಗುತ್ತೇನೆ" ಎಂದು ಕೇಜ್ರಿವಾಲ್ ಭಾನುವಾರ ಗುಜರಾತಿ ಭಾಷೆಯಲ್ಲಿ ಟ್ವೀಟ್ ಮಾಡಿದ್ದರು.
2021 ರಲ್ಲಿ ನಡೆದ ಸೂರತ್ ಮುನ್ಸಿಪಲ್ ಕಾರ್ಪೊರೇಷನ್ (ಎಸ್‌ಎಂಸಿ) ಚುನಾವಣೆಯಲ್ಲಿ 120 ಸ್ಥಾನಗಳ ಪೈಕಿ 27 ಸ್ಥಾನಗಳನ್ನು ಆಮ್ ಆದ್ಮಿ ಪಾರ್ಟಿ ಗಳಿಸಿತ್ತು. ಕೇಜ್ರಿವಾಲ್ ನೇತೃತ್ವದ ಪಕ್ಷವು ಎಲ್ಲಾ ಸ್ಥಳೀಯ ಸಂಸ್ಥೆಗಳಾದ ಪುರಸಭೆ ನಿಗಮಗಳು, ಪುರಸಭೆಗಳು, ಜಿಲ್ಲೆ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲೂ ಸ್ಪರ್ಧಿಸಿತ್ತು.
ಈ ಗೆಲುವಿನ ನಂತರ ಕೇಜ್ರಿವಾಲ್ ಅವರ ಎರಡನೇ ಗುಜರಾತ್ ಪ್ರವಾಸ ಇದಾಗಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಅಧಿಕ ಸ್ಥಾನಗಳನ್ನು ಗಳಿಸಿ ಪ್ರಧಾನಿ ನರೇಂದ್ರ ಮೋದಿಗೆ ಟಾಂಗ್ ನೀಡುವ ಯೋಜನೆಯಲ್ಲಿ ಎಎಪಿ ಮತ್ತು ದೆಹಲಿ ಸಿಎಂ ಅರವಿಂದ ಕೇಜ್ರವಾಲ್ ಇದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Same Sex Wedding: ಮನೆಯಿಂದ ಓಡಿಹೋಗಿ ಮದುವೆಯಾದ ಇಬ್ಬರು ಯುವತಿಯರು, ಪ್ರೀತಿಗೆ ದೇವರೇ ಸಾಕ್ಷಿ !
ಹೀಗಾಗಿ ಆಶ್ರಮ ರಸ್ತೆಯಲ್ಲಿರುವ ಎಎಪಿಯ ಹೊಸ ಗುಜರಾತ್ ರಾಜ್ಯ ಕಚೇರಿಯನ್ನು ಅರವಿಂದ ಕೇಜ್ರಿವಾಲ್ ಉದ್ಘಾಟಿಸಲಿದ್ದಾರೆ. ಗುಜರಾತ್‌ನ ಹಿರಿಯ ಪತ್ರಕರ್ತ ಇಸುದಾನ್ ಗಧ್ವಿ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಎಎಪಿಗೆ ಸೇರಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ