ಆಡಳಿತವಿರೋಧಿ ಅಲೆ ತಡೆದು ಗೆಲುವಿನ ನಗೆ ಬೀರಲು ಬಿಜೆಪಿ ಹಾದಿ ತುಳಿಯುತ್ತಿರುವ ಆಪ್!

ಆಮ್ ಆದ್ಮಿ ಪಕ್ಷ ಈ ಬಾರಿಯ ಚುನಾವಣೆ ಎದುರಿಸುತ್ತಿರುವುದೇ ಅದು ಮಾಡಿರುವ ಕೆಲಸದ ಮೂಲಕ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಂದ ಹಿಡಿದು ಆಪ್ ನಾಯಕರೆಲ್ಲರೂ 'ಕೆಲಸ ನೋಡಿ ಓಟು ಕೊಡಿ' ಎಂದೇ ಹೇಳುತ್ತಿದ್ದಾರೆ. ಹಾಗಿದ್ದರೆ ಈಗ ಟಿಕೆಟ್ ನಿರಾಕರಿಸಲ್ಪಟ್ಟಿರುವ 15 ಮಂದಿ ಹಾಲಿ ಶಾಸಕರು ಸರಿಯಾಗಿ ಕೆಲಸ ಮಾಡಿರಲಿಲ್ಲವೇ? ಎಂಬ ಪ್ರಶ್ನೆ ಮೂಡುತ್ತದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

  • Share this:
ನವದೆಹಲಿ: ರಾಜಕೀಯ ಪಕ್ಷಗಳ ಐಡಿಯಾಲಜಿಗಳು ಬದಲಾದರೂ ಚುನಾವಣೆ ಗೆಲ್ಲೋಕೆ ಅವುಗಳ ತಂತ್ರಗಾರಿಕೆಗಳು ಕೆಲವೊಮ್ಮೆ ಒಂದೇ ರೀತಿ ಇರುತ್ತವೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲೂ ಇದೇ ರೀತಿ ಆಗುತ್ತಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷವು ಬಿಜೆಪಿ ತುಳಿದ ಹಾದಿಯಲ್ಲೇ ಸಾಗುತ್ತಿದೆ.

ಚುನಾವಣೆಯಲ್ಲಿ ಗೆಲುವು ಸಾಧಿಸಲಿಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಬಹಳ ನಿರ್ಣಾಯಕವಾದ ಘಟ್ಟ. ಈ ವಿಷಯದಲ್ಲಿ ಪರಿಣಾಮಕಾರಿಯಾದ ಪ್ರಯೋಗ ಮಾಡಿದ್ದು ಎಂದರೆ ಬಿಜೆಪಿ. 2014ರ ಲೋಕಸಭಾ ಚುನಾವಣೆ ಗೆದ್ದ ಬಳಿಕ ನಡೆದ ಎಲ್ಲಾ ವಿಧಾನಸಭಾ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿ ಕೆಲವು ಹಾಲಿ ಸದಸ್ಯರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಟ್ಟಿತು. ಈ ಮೂಲಕ ಆಡಳಿತವಿರೋಧಿ ಅಲೆಯನ್ನು ತಡೆದು ಗೆಲುವಿನ ನಗೆ ಬೀರಲು ಆ ಪಕ್ಷಕ್ಕೆ ಸಾಧ್ಯವಾಯಿತು. ಈಗ ಆಮ್ ಆದ್ಮಿ‌ ಪಕ್ಷ ಕೂಡ ಇದೇ ತಂತ್ರಗಾರಿಕೆಯನ್ನು ಅನುಸರಿಸಲೊರಟಿದೆ.

ದೆಹಲಿ 70 ವಿಧಾನಸಭಾ ಕ್ಷೇತ್ರಗಳ ಪೈಕಿ ಕಳೆದ ಬಾರಿ ಆಮ್ ಆದ್ಮಿ ಪಕ್ಷ 67 ಸ್ಥಾನಗಳಲ್ಲಿ ಭರ್ಜರಿ ಜಯ ದಾಖಲಿಸಿತ್ತು. ನಂತರ ಕೆಲ ಶಾಸಕರು ಆಪ್ ಜೊತೆ ಅಸಮಾಧಾನಗೊಂಡು ಹೊರಹೋದರು. ಉಳಿದವರ ಪೈಕಿ ಕೂಡ ಆಮ್ ಅದ್ಮಿ ಪಕ್ಷ 15 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದೆ. 23 ಹೊಸಮುಖಗಳಿಗೆ ಮಣೆ ಹಾಕಿದೆ.

ಆಮ್ ಆದ್ಮಿ ಪಕ್ಷ ಈ ಬಾರಿಯ ಚುನಾವಣೆ ಎದುರಿಸುತ್ತಿರುವುದೇ ಅದು ಮಾಡಿರುವ ಕೆಲಸದ ಮೂಲಕ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಂದ ಹಿಡಿದು ಆಪ್ ನಾಯಕರೆಲ್ಲರೂ 'ಕೆಲಸ ನೋಡಿ ಓಟು ಕೊಡಿ' ಎಂದೇ ಹೇಳುತ್ತಿದ್ದಾರೆ. ಹಾಗಿದ್ದರೆ ಈಗ ಟಿಕೆಟ್ ನಿರಾಕರಿಸಲ್ಪಟ್ಟಿರುವ 15 ಮಂದಿ ಹಾಲಿ ಶಾಸಕರು ಸರಿಯಾಗಿ ಕೆಲಸ ಮಾಡಿರಲಿಲ್ಲವೇ? ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಅವರು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಿಲ್ಲ ಎನ್ನುವುದಕ್ಕಿಂತ ಹೆಚ್ಚಾಗಿ ವಿವಾದ ಸೃಷ್ಟಿಸಿಕೊಂಡಿದ್ದೇ ಅವರನ್ನು ದೂರವಿಡಲು ಕಾರಣ ಎನ್ನಲಾಗಿದೆ.‌ ಜೊತೆಗೆ ಅಧಿಕಾರ ಬಂದಾಗ ಜನರಿಂದ ಅಂತರ ಕಾಯ್ದುಕೊಂಡವರನ್ನೂ ಕಡೆಗಣಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಪಕ್ಷನಿಷ್ಟರಾಗಿದ್ದವರಿಗೆ ಹಾಗೂ ಪರಿಶ್ರಮ ಹಾಕುವವರಿಗೆ ಈ ಬಾರಿಯ ಚುನಾವಣೆಯಲ್ಲಿ ಆಮ್ ಅದ್ಮಿ ಪಕ್ಷ ಮಣೆ ಹಾಕಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲುಂಡಿದ್ದ ಯುವ ನಾಯಕರಾದ ಮತ್ತು ರಾಘವ್ ಚಡ್ಡಾ ಮತ್ತು ಅತಿಶಿ ಅವರಿಗೆ ಅವರ ಕಾರ್ಯಕ್ಷಮತೆ ಗುರುತಿಸಿ ಈ ವಿಧಾನಸಭೆಯಲ್ಲಿ ಟಿಕೆಟ್ ನೀಡಲಾಗಿದೆ. ರಾಜೇಂದರ್ ನಗರದಿಂದ ರಾಘವ್ ಚಡ್ಡಾ ಸ್ಪರ್ಧಿಸಲಿದ್ದರೆ, ಅತಿಶಿ ಕಲ್ಕಾಜಿಯಿಂದ ಹೋರಾಡಲಿದ್ದಾರೆ. ರಾಘವ್ ಚಡ್ಡಾ ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ರಮೇಶ್ ಬಿಧುರಿ ವಿರುದ್ಧ ಸೋತಿದ್ದರು. ಅತಿಶಿ ಅವರು ಪೂರ್ವ ದೆಹಲಿ ಕ್ಷೇತ್ರದಿಂದ ಬಿಜೆಪಿಯ ಗೌತಮ್ ಗಂಭೀರ್ ವಿರುದ್ಧ ಪರಾಭವಗೊಂಡಿದ್ದರು.

ಇದನ್ನು ಓದಿ: ಮತ್ತೊಮ್ಮೆ ದೆಹಲಿ ಗದ್ದುಗೆ ಹಿಡಿಯಲು ಎಚ್ಚರಿಕೆಯ ಹೆಜ್ಜೆ ಇಡುತ್ತಿರುವ ಆಪ್; ಸಿಎಎ ವಿಚಾರವಾಗಿ ತಟಸ್ಥ ನಿಲುವು

ರಾಜಕಾರಣದಲ್ಲಿ 'ಇದಮಿತ್ತಂ' ಎನ್ನುವುದು ಯಾವುದೂ ಇರುವುದಿಲ್ಲ‌. ಪ್ರಯೋಗಗಳು ಎಲ್ಲಾ ಕಾಲದಲ್ಲೂ, ಎಲ್ಲಾ ಪಕ್ಷಗಳಿಗೂ, ಎಲ್ಲಾ ವ್ಯಕ್ತಿಗಳಿಗೂ ಒಂದೇ ರೀತಿಯ ಫಲಿತಾಂಶವನ್ನು ನೀಡುವುದಿಲ್ಲ. ಇಷ್ಟಕ್ಕೂ ಮೀರಿ ಯಥಾತಥಿತ ರಾಜಕೀಯ ಪಕ್ಷಗಳಿಗಿಂತ ಭಿನ್ನವಾಗಿ ಯೋಚಿಸುವ ಮತ್ತು ಭಿನ್ನವಾದ ಕಾರ್ಯತಂತ್ರಗಳನ್ನು ಅಳವಡಿಸಿಕೊಂಡಿರುವ‌ ಆಮ್ ಆದ್ಮಿ ಪಕ್ಷವೂ 'ಹೊಸಬರಿಗೆ ಅವಕಾಶ‌ ಕೊಡುವ' ವಿಷಯದಲ್ಲೂ ಅಳೆದು-ತೂಗಿಯೇ ನಿಶ್ಚಯಿಸಿರುತ್ತದೆ. ಮುಂದೆ ಆ ಅಭ್ಯರ್ಥಿಗಳ ಸಾಮರ್ಥ್ಯಕ್ಕೆ ಬಿಟ್ಟಿದ್ದು.
Published by:HR Ramesh
First published: