ಆಮ್​ ಆದ್ಮಿ ಪಕ್ಷದಿಂದ ಹಿಂದುತ್ವದ ರಾಜಕಾರಣ..? ಆಯೋಧ್ಯೆಯಲ್ಲಿ ತಿರಂಗಾ ಯಾತ್ರೆಗೆ ಸಿದ್ದತೆ

ವರದಿಗಳ ಪ್ರಕಾರ, ರಾಷ್ಟ್ರದ ರಾಜಧಾನಿಯಲ್ಲಿ ಅಧಿಕಾರದಲ್ಲಿರುವ ಎಎಪಿ  ಸರ್ಕಾರವು 500 ಭಾಗಗಳಲ್ಲಿ high-mast  ತ್ರಿವರ್ಣಧ್ವಜಗಳನ್ನು,  85  ಕೋಟಿಗೂ ಅತ್ಯಧಿಕ ವೆಚ್ಚದಲ್ಲಿ ಸ್ಥಾಪಿಸುತ್ತಿದೆ ಎಂದು ಹೇಳಲಾಗಿದೆ.

ವರದಿಗಳ ಪ್ರಕಾರ, ರಾಷ್ಟ್ರದ ರಾಜಧಾನಿಯಲ್ಲಿ ಅಧಿಕಾರದಲ್ಲಿರುವ ಎಎಪಿ  ಸರ್ಕಾರವು 500 ಭಾಗಗಳಲ್ಲಿ high-mast  ತ್ರಿವರ್ಣಧ್ವಜಗಳನ್ನು,  85  ಕೋಟಿಗೂ ಅತ್ಯಧಿಕ ವೆಚ್ಚದಲ್ಲಿ ಸ್ಥಾಪಿಸುತ್ತಿದೆ ಎಂದು ಹೇಳಲಾಗಿದೆ.

ವರದಿಗಳ ಪ್ರಕಾರ, ರಾಷ್ಟ್ರದ ರಾಜಧಾನಿಯಲ್ಲಿ ಅಧಿಕಾರದಲ್ಲಿರುವ ಎಎಪಿ  ಸರ್ಕಾರವು 500 ಭಾಗಗಳಲ್ಲಿ high-mast  ತ್ರಿವರ್ಣಧ್ವಜಗಳನ್ನು,  85  ಕೋಟಿಗೂ ಅತ್ಯಧಿಕ ವೆಚ್ಚದಲ್ಲಿ ಸ್ಥಾಪಿಸುತ್ತಿದೆ ಎಂದು ಹೇಳಲಾಗಿದೆ.

 • Share this:
  Aam Aadmi Party ಆಮ್ ಆದ್ಮಿ ಪಕ್ಷವು ಸೆಪ್ಟೆಂಬರ್ 14 ರಂದು ಅಯೋಧ್ಯೆಯಲ್ಲಿ "ತಿರಂಗ ಯಾತ್ರೆ" ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದೆ, ಇದು ರಾಮ ಲಲ್ಲಾ ದೇವಸ್ಥಾನಕ್ಕೆ ಹೋಗಿ ಹನುಮನ್‌ಗರಿಯಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಮಾಹಿತಿ ನೀಡಲಾಗೆ.  ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಈ ಯಾತ್ರೆಯ ನೇತೃತ್ವ ವಹಿಸಲಿದ್ದಾರೆ.

  ಯಾತ್ರೆಯ ಹಿಂದಿರುವ ಸಂದೇಶವೆಂದರೆ ಹಿಂದೂ ಗುರುತು, ಧರ್ಮ ಮತ್ತು ರಾಷ್ಟ್ರೀಯತೆಯನ್ನು 'ಅತ್ಯಂತ ವಿಭಿನ್ನ' ಪದಗಳಲ್ಲಿ ಅಂದರೆ BJP ಪ್ರತಿಪಾದಿಸುವ ’ಕೆಟ್ಟ ಹಿಂದುತ್ವ’ಕ್ಕಿಂತ ನಮ್ಮ ಹಿಂದುತ್ವ ವಿಭಿನ್ನ, ಎಲ್ಲರನ್ನೂ ಪ್ರೀತಿಸು ಹಿಂದುತ್ವ  ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿ ಹೇಳಿದೆ.

  ಅರವಿಂದ್ ಕೇಜ್ರಿವಾಲ್ ಉತ್ತರ ಪ್ರದೇಶ, ಗುಜರಾತ್ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಅಧಿಕಾರಕ್ಕೆ ಏರಲು ಪ್ರಯತ್ನಿಸುತ್ತಿರುವ ಈ ಸಂದರ್ಭದಲ್ಲೆ ಈ ತಿರಂಗಾ ಯಾತ್ರೆಯನ್ನು ಕೈಗೊಳ್ಳಲಾಗಿದೆ. ಇತ್ತೀಚೆಗೆ ಪಕ್ಷವು ಭಾರತೀಯ ಸೇನೆಯ ಮಾಜಿ ಕರ್ನಲ್ ಅಜಯ್ ಕೊತಿಯಾಲ್ ಅವರನ್ನು ಉತ್ತರಾಖಂಡದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿತು. ಅಲ್ಲದೇ, ಗುಡ್ಡಗಾಡು ರಾಜ್ಯವನ್ನು "ಹಿಂದೂಗಳ ಆಧ್ಯಾತ್ಮಿಕ ರಾಜಧಾನಿ" ಯನ್ನಾಗಿ ಮಾಡುವ ಭರವಸೆಯನ್ನು ನೀಡಿತ್ತು.

  ಮತ್ತೊಬ್ಬ ಎಎಪಿ ನಾಯಕರು ಮಾತನಾಡಿ, ರಾಮ್ ಲಲ್ಲಾ ದೇವಸ್ಥಾನ ಮತ್ತು ಹನುಮನ್‌ಗರಿಯಲ್ಲಿ ಈ ಯಾತ್ರೆಯನ್ನು ಕೊನೆಗೊಳಿಸುವ ಅಂತಿಮ ನಿರ್ಧಾರವನ್ನು ಇನ್ನೂ ಸರಿಯಾಗಿ ತೆಗೆದುಕೊಂಡಿಲ್ಲ. ಆದರೆ ಇದೇ ಅಂತಿಮ ಪ್ಲಾನ್ ಎಂದು ಹೇಳಲಾಗಿಲ್ಲ ಅಥವಾ ಹೇಳಲೂಬಹುದು ಎನ್ನುವ ಅಸ್ಪಷ್ಟ ಮಾತುಗಳನ್ನು ಆಡಿದ್ದಾರೆ,

  ಎಎಪಿ ನಾಯಕ ಸಂಜಯ್ ಸಿಂಗ್ ಅವರು, ಅಯೋಧ್ಯೆ ಕಾರ್ಯಕ್ರಮಕ್ಕೆ ಮುಂಚಿತವಾಗಿ ಪಕ್ಷವು ಆಗ್ರಾದಲ್ಲಿ ಭಾನುವಾರ ಮತ್ತು ಸೆಪ್ಟೆಂಬರ್ 1 ರಂದು ನೋಯ್ಡಾದಲ್ಲಿ Tiranga Yatraಗಳನ್ನು ನಡೆಸಲಿದೆ ಎಂದು ಹೇಳಿದರು.


  ವರದಿಗಳ ಪ್ರಕಾರ, ರಾಷ್ಟ್ರದ ರಾಜಧಾನಿಯಲ್ಲಿ ಅಧಿಕಾರದಲ್ಲಿರುವ ಎಎಪಿ  ಸರ್ಕಾರವು 500 ಭಾಗಗಳಲ್ಲಿ high-mast  ತ್ರಿವರ್ಣಧ್ವಜಗಳನ್ನು,  85  ಕೋಟಿಗೂ ಅತ್ಯಧಿಕ ವೆಚ್ಚದಲ್ಲಿ ಸ್ಥಾಪಿಸುತ್ತಿದೆ ಎಂದು ಹೇಳಲಾಗಿದೆ.

  "ಭಾರತದ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸಲು ಮುಂದಿನ ಒಂದು ವರ್ಷದಲ್ಲಿ ಪಕ್ಷವು ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಚಿಸಿದೆ. ನಮ್ಮ ಆಮ್​ ಆದ್ಮಿ ಪಕ್ಷದ ಸಂದೇಶ ಸರಳವಾಗಿದೆ: ಬಿಜೆಪಿಯ ರಾಷ್ಟ್ರೀಯತೆ, ನಮ್ಮ ಹಿಂದುತ್ವ , ಅದೂ, ಇದೂ ಎಂದು ಕರೆಯುತ್ತಿರುವುದು ಭಾರತವನ್ನು ಅನಾರೋಗ್ಯಕ್ಕೆ ತಳ್ಳುತ್ತಿದೆ. ರಾಷ್ಟ್ರೀಯತೆ ಎಂದರೆ ಜನರಿಗೆ ಸರ್ಕಾರವು ಅವರ ಹಕ್ಕುಗಳನ್ನು ನೀಡಿವುದೇ ಹೊರತು, ಬೇರೆ- ಬೇರೆ ಆಡುವುದಲ್ಲ ಎಂದು ಎಎಪಿ ನಂಬುತ್ತದೆ.

  ಇದನ್ನು ಓದಿ: Weather Report: ಸೆಪ್ಟೆಂಬರ್ 1 ರ ವರೆಗೆ ರಾಜ್ಯದಲ್ಲಿ ಭಾರೀ ಮಳೆ, ಕರಾವಳಿ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

  ನಾವು ರಾಷ್ಟ್ರೀಯತೆಯನ್ನು ಈ ರೀತಿ ಮಾಡಬೇಕು. ಅಂದರೆ, ಅದು ಉತ್ತಮ ಶಿಕ್ಷಣ, ಆರೋಗ್ಯ ವ್ಯವಸ್ಥೆಯಿಂದ ಮಾತ್ರ ಸಾಧ್ಯ. ನಮಗೆ, ತ್ರಿವರ್ಣದ ಮೇಲಿನ ನಿಜವಾದ ಪ್ರೀತಿ ಇದೆ ಎಂದಾದರೆ. ದೇಶದ  ಅಭಿವೃದ್ಧಿ ಮತ್ತು ದೇಶದ ನಾಗರಿಕರ ಯೋಗಕ್ಷೇಮವನ್ನು ಅಲ್ಲಿನ ಸರ್ಕಾರ ಹೇಗೆ ನೋಡಿಕೊಳ್ಳೂತ್ತದೆ ಎನ್ನುವುದರಲ್ಲಿ ವ್ಯಕ್ತವಾಗುತ್ತದೆ "ಎಂದು ಸಂಜಯ್​ ಸಿಂಗ್ ಸಂಡೇ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. "ಇದು ನಿರುದ್ಯೋಗದಂತಹ ನಮ್ಮ ಕಾಲದ ಅತ್ಯಂತ ಗಂಭೀರ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಈ ಮೂಲಕ ಯೋಚನೆ ಮಾಡಲಾಗುತ್ತಿದೆ." ಎಂಬುದಾಗಿ ಹೇಳಿದರು.  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: