AAP Candidate List: ಪಂಜಾಬ್ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಎಎಪಿ

ಆಮ್ ಆದ್ಮಿ ಪಕ್ಷದ ಹಲವು ಶಾಸಕರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಿಲ್ಲ ಅಥವಾ ತಮ್ಮ ಕ್ಷೇತ್ರವನ್ನು ಬದಲಾಯಿಸಲು ಬಯಸುತ್ತಿದ್ದಾರೆ ಎಂಬುದು ಪಂಜಾಬ್‌ನಲ್ಲಿ ಹಲವು ಸಮಯದಿಂದ ಸಾಮಾನ್ಯ ಚರ್ಚೆಯಾಗಿದೆ. ಈಗ ಪಕ್ಷವು ಆಯಾ ವಿಧಾನಸಭಾ ವಲಯದ ಎಲ್ಲಾ ಹಾಲಿ ಶಾಸಕರಿಗೆ ಟಿಕೆಟ್ ನೀಡುವ ಮೂಲಕ ಈ ಚರ್ಚೆಗಳಿಗೆ ಅಂತ್ಯ ಹಾಡಲು ಪ್ರಯತ್ನಿಸಿದೆ.

ಅರವಿಂದ್ ಕೇಜ್ರಿವಾಲ್.

ಅರವಿಂದ್ ಕೇಜ್ರಿವಾಲ್.

  • Share this:
    Punjab assembly election 2022 ಪಂಜಾಬ್ ವಿಧಾನಸಭೆ ಚುನಾವಣೆಗೆ ಇನ್ನು ನಾಲ್ಕು ತಿಂಗಳು ಬಾಕಿ ಇರುವಂತೆ ಆಮ್​ ಆದ್ಮಿ ಪಕ್ಷ (AAP Candidate First List) ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ ಪಕ್ಷದ 10 ಹಾಲಿ ಶಾಸಕರು ಸ್ಥಾನ ಪಡೆದುಕೊಂಡಿದ್ದಾರೆ. ಪಕ್ಷ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ, ಜೈಕಿಶನ್ ರೋಡಿ ಗಢಶಂಕರ್, ಸರ್ವಜಿತ್ ಕೌರ್ ಮನುಕೆ ಜಾಗರಾನ್, ಮಂಜಿತ್ ಬಿಲಾಸ್‌ಪುರ್ ನಿಹಾಲ್ ಸಿಂಗ್ ವಾಲಾ, ಕುಲತಾರ್ ಸಿಂಗ್ ಸಂಧ್ವಾನ್ ಕೋಟ್ಕಾಪುರ, ಬಲ್ಜಿಂದರ್ ಕೌರ್ ತಲವಂಡಿ ಸಾಬೊ, ಪ್ರಾಂಶುಪಾಲ ಬುಧ್ರಾಮ್ ಬುಧ್ಲಾಡಾ, ಹರ್ಪಾಲ್ ಸಿಂಗ್ ಚೀಮಾ ದಿರ್ಬಾ, ಅಮನ್ ಅರೋರಾ ಸುನಮ್, ಗುರ್ಮೀತ್ ಸಿಂಗ್ ಪನ್ಡೋ ಮೀತ್ ಹರ್‌ವಾನ್‌ ಅವರು ಪಕ್ಷದ ಅಭ್ಯರ್ಥಿಗಳಾಗಿದ್ದಾರೆ.

    ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಲೂಧಿಯಾನ ಜಿಲ್ಲೆಯ ರಾಯ್‌ಕೋಟ್ ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಶಾಸಕ ಜಗತಾರ್ ಸಿಂಗ್ ಹಿಸ್ಸೋವಾಲ್ ಹೆಸರನ್ನು ಕೈ ಬಿಡಲಾಗಿದೆ. ನವೆಂಬರ್ 11 ರಂದು ನಡೆದ ಪಂಜಾಬ್ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ, ಜಗತಾರ್ ಸಿಂಗ್ ಹಿಸೋವಾಲ್ ಅವರು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಬಹಿರಂಗವಾಗಿ ಹೊಗಳಿದ್ದರು. ಅಂದಿನಿಂದ ಜಗತಾರ್ ಸಿಂಗ್ ಹಿಸೋವಾಲ್ ಆಮ್ ಆದ್ಮಿ ಪಕ್ಷ ತೊರೆಯಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಶುಕ್ರವಾರ ಬಿಡುಗಡೆಯಾದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಹಿಸೋವಾಲ್‌ಗೆ ಟಿಕೆಟ್ ನೀಡದಿರುವ ಮೂಲಕ ಪಕ್ಷವು ಈ ಚರ್ಚೆಗಳನ್ನು ಖಚಿತಪಡಿಸಿದೆ. ಜಗತಾರ್ ಸಿಂಗ್ ಹಿಸ್ಸೋವಾಲ್ ಹೊರತುಪಡಿಸಿ, ಎಎಪಿ ಮೊದಲ ಪಟ್ಟಿಯಲ್ಲಿ ರೋಪರ್ ಅಮರ್‌ಜಿತ್ ಸಿಂಗ್ ಸಂಡೋವಾ ಮತ್ತು ಪಕ್ಷದ ಶಾಸಕ ಬಲ್ದೇವ್ ಸಿಂಗ್ ಜೈತೋ ಅವರ ಹೆಸರನ್ನು ಸಹ ಘೋಷಿಸಿಲ್ಲ.

    ಏತನ್ಮಧ್ಯೆ, ಲೂಧಿಯಾನ ಜಿಲ್ಲೆಯ ಜಾಗರಾನ್ ಕ್ಷೇತ್ರದ ಸರ್ವಜಿತ್ ಕೌರ್ ಮನುಕೆ ಮತ್ತು ಮೊಗಾ ಜಿಲ್ಲೆಯ ನಿಹಾಲ್ ಸಿಂಗ್ ವಾಲಾ ಶಾಸಕ ಮಂಜಿತ್ ಬಿಲಾಸ್ಪುರ್ ಆಮ್ ಆದ್ಮಿ ಪಕ್ಷವನ್ನು ತೊರೆಯುವ ಚರ್ಚೆಗಳು ನಡೆಯುತ್ತಿವೆ. ಆದರೆ ಪಕ್ಷವು ಶುಕ್ರವಾರ ಇಬ್ಬರನ್ನೂ ಮುಂದಿನ ವಿಧಾನಸಭೆಗೆ ಅಭ್ಯರ್ಥಿಯನ್ನಾಗಿ ಮಾಡಿದೆ. ಇದರೊಂದಿಗೆ ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆಯಲು ಎಎಪಿ ಪ್ರಯತ್ನಿಸಿದೆ.

    ಆಮ್ ಆದ್ಮಿ ಪಕ್ಷದ ಹಲವು ಶಾಸಕರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಿಲ್ಲ ಅಥವಾ ತಮ್ಮ ಕ್ಷೇತ್ರವನ್ನು ಬದಲಾಯಿಸಲು ಬಯಸುತ್ತಿದ್ದಾರೆ ಎಂಬುದು ಪಂಜಾಬ್‌ನಲ್ಲಿ ಹಲವು ಸಮಯದಿಂದ ಸಾಮಾನ್ಯ ಚರ್ಚೆಯಾಗಿದೆ. ಈಗ ಪಕ್ಷವು ಆಯಾ ವಿಧಾನಸಭಾ ವಲಯದ ಎಲ್ಲಾ ಹಾಲಿ ಶಾಸಕರಿಗೆ ಟಿಕೆಟ್ ನೀಡುವ ಮೂಲಕ ಈ ಚರ್ಚೆಗಳಿಗೆ ಅಂತ್ಯ ಹಾಡಲು ಪ್ರಯತ್ನಿಸಿದೆ.

    ಇದನ್ನು ಓದಿ: Bitcoin Scam: ಸಿಎಂ ಬದಲಾವಣೆ ಚರ್ಚೆ; ಜಗದೀಶ್ ಶೆಟ್ಟರ್ ದೆಹಲಿಗೆ ಕರೆಸಿಕೊಂಡ ಬಿಜೆಪಿ ಹೈಕಮಾಂಡ್!

    20 ಜನ ಶಾಸಕರಲ್ಲಿ 7 ಮಂದಿ ಹೊರಕ್ಕೆ

    2017ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 20 ಶಾಸಕರನ್ನು ಗೆದ್ದಿತ್ತು. ಈ ಪೈಕಿ 7 ಶಾಸಕರು ಆಮ್ ಆದ್ಮಿ ಪಕ್ಷ ತೊರೆದಿದ್ದಾರೆ ಅಥವಾ ಪಕ್ಷವೇ ಅವರಿಗೆ ದಾರಿ ತೋರಿಸಿದೆ. ಇವರಲ್ಲಿ ಸುಖಪಾಲ್ ಸಿಂಗ್ ಖೈರಾ, ನಜರ್ ಸಿಂಗ್ ಮನ್ಶಾಹಿಯಾನ್, ಕನ್ವರ್ ಸಂಧು, ಎಚ್ ಎಸ್ ಫೂಲ್ಕಾ, ಪಿಯರ್ಮಲ್ ಸಿಂಗ್ ಖಾಲ್ಸಾ, ರೂಪಿಂದರ್ ಕೌರ್ ರೂಬಿ ಮತ್ತು ಜಗದೇವ್ ಸಿಂಗ್ ಕಮಲು ಸೇರಿದ್ದಾರೆ. ಇವರಲ್ಲಿ ಕನ್ವರ್ ಸಂಧು ಪಕ್ಷದಿಂದ ಕಣಕ್ಕಿಳಿಯುತ್ತಿದ್ದರೆ ಎಚ್ ಎಸ್ ಫೂಲ್ಕಾ ಅವರೇ ಪಕ್ಷ ತೊರೆದಿದ್ದಾರೆ. ಇದಲ್ಲದೆ ಸುಖಪಾಲ್ ಸಿಂಗ್ ಖೈರಾ, ರೂಪಿಂದರ್ ಕೌರ್ ರೂಬಿ, ಪಿಯರ್ಮಲ್ ಸಿಂಗ್ ಖಾಲ್ಸಾ, ಜಗದೇವ್ ಸಿಂಗ್ ಕಮಲು ಕಾಂಗ್ರೆಸ್ ಸೇರಿದ್ದಾರೆ.
    Published by:HR Ramesh
    First published: