ಚುನಾವಣೆಗೆ ಮುನ್ನ Punjab Model ಅನಾವರಣಗೊಳಿಸಿದ Aravind Kejriwal ; ಉದ್ಯೋಗ, ಭಷ್ಟಚಾರ ಮುಕ್ತ ಸರ್ಕಾರದ ಭರವಸೆ

ತಮ್ಮ ಪಕ್ಷವನ್ನು ಜನರು ಅಧಿಕಾರಕ್ಕೆ ತಂದರೆ, ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯ, ಯುವಕರಿಗೆ ಉದ್ಯೋಗ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​

 • Share this:
  ನವದೆಹಲಿ (ಜ. 12):  ಪಂಜಾಬ್​ ವಿಧಾನಸಭಾ ಚುನಾವಣೆ (Punjab Assembly Election) ಘೋಷಣೆ ಆಗಿದ್ದು, ಮತದಾನಕ್ಕೆ ಇನ್ನೇನು ತಿಂಗಳು ಬಾಕಿ ಇದೆ. ಈ ನಡುವೆ ಮತದಾರರ ಸೆಳೆಯಲು ಮುಂದಾಗಿದ್ದಾರೆ. ಇನ್ನು ಪಂಜಾಬ್​ನಲ್ಲಿ ಕಳೆದ ಬಾರಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದ ಆಮ್ ಆದ್ಮಿ ಪಕ್ಷ (Aam Aadmi Party) ಈ ಬಾರಿ ಸರ್ಕಾರ ರಚಿಸಲು ಸಿದ್ದತೆ ನಡೆಸಿದೆ. ಇದೇ ಕಾರಣಕ್ಕೆ ಮತದಾರರ ಓಲೈಕೆಗೆ ಮುಂದಾಗಿದ್ದು, ಭರ್ಜರಿ ಘೋಷಣೆಗಳನ್ನು ಹೊರಡಿಸಿ ಗಮನ ಸೆಳೆದಿದೆ. ಈ ಕುರಿತು ಮಾತನಾಡಿರುವ ಎಎಪಿ ರಾಷ್ಟ್ರೀಯ ಸಂಚಾಲಕರಾಗಿರುವ ಅರವಿಂದ್ ಕೇಜ್ರಿವಾಲ್ (Aravind Kejriwal)​, ಚುನಾವಣೆಯ ಘೋಷಣೆಯೊಂದಿಗೆ, ಜನರು ಬದಲಾವಣೆಯನ್ನು ತರಲು ಅವಕಾಶ ಸಿಕ್ಕಿದೆ ಎಂದು ಸಂತಸ ವ್ಯಕ್ತವಾಗಿದೆ ಎಂದರು. 

  10 ಅಂಶದ ಕಾರ್ಯ ಸೂಚಿ ಬಿಡುಗಡೆ

  ಮುಂದಿನ ತಿಂಗಳು ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ತಮ್ಮ ಪಕ್ಷದ ‘ಪಂಜಾಬ್ ಮಾದರಿ’ಯನ್ನು ಇಂದು ಅವರು ಅನಾವರಣಗೊಳಿಸಿದರು. ತಮ್ಮ ಪಕ್ಷವನ್ನು ಜನರು ಅಧಿಕಾರಕ್ಕೆ ತಂದರೆ, ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯ, ಯುವಕರಿಗೆ ಉದ್ಯೋಗ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

  ಚುನಾವಣೆ ಪ್ರಣಾಳಿಕೆ ಸಂಬಂಧ ಇಂದು 10 ಅಂಶಗಳ ಕಾರ್ಯಸೂಚಿಯನ್ನು ಬಿಡುಗಡೆಯನ್ನು ಮಾಡಿದ್ದಾರೆ. ಇದರಲ್ಲಿ 300 ಯೂನಿಟ್‌ಗಳವರೆಗೆ ಜನರಿಗೆ ಉಚಿತ ವಿದ್ಯುತ್ ಒದಗಿಸುವ ಭರವಸೆ ನೀಡಿದ್ದಾರೆ.

  ಉದ್ಯೋಗ ಸೃಷ್ಟಿಯ ಭರವಸೆ

  ಅಷ್ಟೇ ಅಲ್ಲದೇ ಉದ್ಯೋಗ ಅರಸಿ ಸಾಗರ ದಾಟಿ ಹೋಗಿರುವ ಯುವಕರನ್ನು ರಾಜ್ಯದಲ್ಲಿ ಮರಳಿ ಬಂದು ಉದ್ಯೋಗ ಪಡೆಯಲು ಅನೇಕ ಉದ್ಯೋಗ ಮಾರ್ಗಗಳನ್ನು ಸೃಷ್ಟಿಸುತ್ತೇವೆ. ರಾಜ್ಯದಲ್ಲಿನ ಡ್ರಗ್ಸ್​ ಹಾವಳಿಯನ್ನು ಹತ್ತಿಕ್ಕಲಾಗುವುದು ಎಂದು ಘೋಷಿಸಿದ್ದಾರೆ ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳ ಸ್ಥಿತಿಯನ್ನು ಸುಧಾರಿಸುವುದು.

  ಇದನ್ನು ಓದಿ: Nitin Gadkariಗೆ ಮತ್ತೆ ಕೋವಿಡ್​; ಅನೇಕ ನಾಯಕರಲ್ಲಿ ಎರಡನೇ ಬಾರಿ ಕಾಣಿಸಿಕೊಳ್ಳುತ್ತಿರುವ ಸೋಂಕು

  ಈ ರೀತಿ ಇದೇ ಕೇಜ್ರಿವಾಲ್​ ಪಂಜಾಬ್ ಮಾದರಿ

  ಆರೋಗ್ಯ ಕ್ಷೇತ್ರದಲ್ಲಿ 16,000 ಮೊಹಲ್ಲಾ ಕ್ಲಿನಿಕ್‌ಗಳನ್ನು ತೆರೆಯಲಾಗುವುದು
  18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ತಿಂಗಳಿಗೆ 1,000 ರೂ ನೀಡಲಾಗುತ್ತದೆ
  ರೈತರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು
  "ರೈಡ್ ರಾಜ್" ಮತ್ತು "ಭ್ರಷ್ಟಾಚಾರ" ತೊಡೆದುಹಾಕಲಾಗುತ್ತದೆ
  ವ್ಯಾಪಾರ ಮತ್ತು ಉದ್ಯಮವು ಅಭಿವೃದ್ಧಿ ಹೊಂದಲು ಸೌಹಾರ್ದ ವಾತಾವರಣವನ್ನು ನಿರ್ಮಿಸಲಾಗುವುದು.

  ಕಾಂಗ್ರೆಸ್-​​ ಬಾದಲ್​ ಕುಟುಂಬದ ವಿರುದ್ಧ ವಾಗ್ದಾಳಿ
  1966 ರಲ್ಲಿ ಪಂಜಾಬ್ ಪ್ರತ್ಯೇಕ ರಾಜ್ಯವಾಯಿತು. ಅಂದಿನಿಂದ ಇಂದಿನವರೆಗೆ 25 ವರ್ಷಗಳ ಕಾಲ ಕಾಂಗ್ರೆಸ್ ರಾಜ್ಯವನ್ನು ಆಳಿದರೆ, 19 ವರ್ಷಗಳ ಕಾಲ ಬಾದಲ್ ಕುಟುಂಬ ಆಳ್ವಿಕೆ ನಡೆಸಿತು. ಇಬ್ಬರೂ ಒಂದು ರೀತಿಯ ಪಾಲುದಾರಿಕೆಯಲ್ಲಿ ರಾಜ್ಯವನ್ನು ಆಳಿದರು. ಬಾದಲ್ ಪಕ್ಷ ಅಧಿಕಾರಕ್ಕೆ ಬರಲಿ ಅಥವಾ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ, ಅವರು ತಮ್ಮ ಸರ್ಕಾರಗಳನ್ನು ಪಾಲುದಾರಿಕೆಯಲ್ಲಿ ನಡೆಸುತ್ತಿದ್ದರು. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಪರಸ್ಪರರ ವಿರುದ್ಧ ಕ್ರಮ ಕೈಗೊಳ್ಳುತ್ತಿರಲಿಲ್ಲ. ಆದರೆ, ಇದೀಗ ಜನರು ಇವರ ಸಹಭಾಗಿತ್ವವನ್ನು ಮುರಿದು ಹೊಸ ಸರ್ಕಾರ ತರಲು ಮನಸ್ಸು ಮಾಡಿದ್ದಾರೆ ಎಂಬ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

  ಇದನ್ನು ಓದಿ: ಪಂಚ ರಾಜ್ಯಗಳ ಚುನಾವಣೆಯಲ್ಲಿ ವರ್ಚ್ಯುಯಲ್ ರ್‍ಯಾಲಿ ನಡೆಸಲು ಕಾಂಗ್ರೆಸ್ ತಯಾರಿ

  ಎಎಪಿ ಸರ್ಕಾರ ರಚಿಸಿದರೆ ಅದು  ಹೊಸ ಪಂಜಾಬ್ ಅನ್ನು ರಚಿಸುತ್ತೇವೆ. ಈ ಮೂಲಕ ರಾಜ್ಯದ  ಸಮೃದ್ಧ ಮತ್ತು ಬೆಳವಣಿಗೆಗೆ ನಾಂದಿ ಹಾಡಲಿದೆ ಎಂದರು.

  ಇನ್ನು ಪಂಜಾಬ್​ನಲ್ಲಿ ಏಕ ಹಂತದದಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಮತದಾನ ನಡೆಯಲಿದ್ದು, ಫೆ ಬ್ರವರಿ 14 ರಂದು ಮತ ಏಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ.
  Published by:Seema R
  First published: