Punjab Election 2022: ಯಾರಾಗ್ತಾರೆ ಪಂಜಾಬ್ ಅಧಿಪತಿ? ಸೋಲು-ಗೆಲುವಿನ ಕಂಪ್ಲೀಟ್​ ಲೆಕ್ಕಚಾರ ಇಲ್ಲಿದೆ ನೋಡಿ..!

ಎಎಪಿ ಪಕ್ಷ ವಿಶೇಷವಾಗಿ ಆಯೋಜಿಸಿರೋ ಫೋನ್ ಲೈನ್ ಅಭಿಯಾನದಲ್ಲಿ ಭಗವಂತ್ ಮನ್ ಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ಪಂಜಾಬ್ ಸಿಎಂ ಅಭ್ಯರ್ಥಿಯಾಗಿ ಭಗವಂತ್ ಮನ್ ರನ್ನು ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪಂಜಾಬ್ ವಿಧಾನಸಭೆ ಚುನಾವಣಾ (Punjab Assembly Elections) ಅಖಾಡ ರಂಗೇರಿದೆ. ಫೆಬ್ರವರಿಯಲ್ಲಿ ಎಲೆಕ್ಷನ್ ನಡೆಯಲಿದ್ದು, ಎಲ್ಲ ಪಕ್ಷಗಳು ತನ್ನ ಅಭ್ಯರ್ಥಿಗಳ ಘೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಪಂಜಾಬ್ ನಲ್ಲಿ ಸರ್ಕಾರ ರಚನೆಯ ಕನಸು ಕಾಣ್ತಿರೋ ಎಎಪಿ (AAP), ಶೀಘ್ರದಲ್ಲೇ ಪಂಜಾಬ್ ಸಿಎಂ ಅಭ್ಯರ್ಥಿ (Punjab CM candidate) ಘೋಷಿಸೋದಾಗಿ ಹೇಳ್ತಿತ್ತು. ಕೊನೆಗೂ ಇವತ್ತು ಪಂಜಾಬ್ ಸಿಎಂ ಅಭ್ಯರ್ಥಿಯನ್ನ ಫೋನ್ ಲೈನ್ ಅಭಿಯಾನ (Phone line campaign)ದ ಮೂಲಕ ಫೈನಲ್ ಮಾಡಿದೆ. ಮಾಜಿ ಹಾಸ್ಯನಟ, ಪಕ್ಷದ ಪಂಜಾಬ್ ಘಟಕದ ಅಧ್ಯಕ್ಷ ಭಗವಂತ್ ಮನ್ (Bhagwant Man) ರನ್ನ ಪಂಜಾಬ್ ಸಿಎಂ ಕ್ಯಾಂಡಿಡೇಟ್ ಎಂದು ಅರವಿಂದ ಕೇಜ್ರಿವಾಲ್ ಘೋಷಿಸಿದ್ರು. ಪಂಜಾಬ್ ನ ಹೆಮ್ಮೆಯಾಗಿರೋ ಸಿಖ್ ಸಮುದಾಯದವರನ್ನೇ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕು ಎಂದು ಪಕ್ಷದಲ್ಲಿ ನಡೆದ ಯತ್ನಗಳು ವಿಫಲವಾಗಿದೆ.

ಜನಪ್ರಿಯ ನಾಯಕ ಭಗವಂತ್ ಮನ್!

ಪಂಜಾಬ್​ನ ಸಂಗ್ರೂರ್‌ನಿಂದ ಭಗವಂತ್ ಮನ್ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಎಎಪಿ ಪಕ್ಷದ ಪಂಜಾಬ್ ಘಟಕದ ಅಧ್ಯಕ್ಷರಾಗಿಯೂ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಎಪಿ ಪಕ್ಷದಿಂದ ಯಾರು ಸಿಎಂ ಅಭ್ಯರ್ಥಿಯಾಗ್ಬೇಕು ಅಂತ ಜನಾಭಿಪ್ರಾಯದ ಮೊರೆ ಹೋಗಿತ್ತು. ಇದಕ್ಕಾಗಿ ಫೋನ್ ನಂಬರ್ ನೀಡಿ 2 ದಿನಗಳ ಕಾಲ ಫೋನ್ ಲೈನ್ ತೆರೆದಿತ್ತು. ಫೋನ್ ಲೈನ್ ಅಭಿಯಾನದಲ್ಲಿ ಪಕ್ಷವೂ 22 ಲಕ್ಷ ಪ್ರತಿಕ್ರಿಯನ್ನು ಪಡೆದಿದೆ. ಭಗವಂತ್ ಮನ್ ಅವರು 93.3% ಮತಪಡೆಯೋ ಮೂಲಕ ಸಿಎಂ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

ಮನ್ ಹೆಸರು ಘೋಷಿಸಿದ ಕೇಜ್ರಿವಾಲ್!

ಪಂಜಾಬ್ ನಲ್ಲಿ ಎಎಪಿ ಪಕ್ಷ ಸರ್ಕಾರ ರಚಿಸಬೇಕು ಅನ್ನೋದು ಅರವಿಂದ್ ಕೇಜ್ರಿವಾಲ್ ಕನಸಾಗಿದೆ ಇದಕ್ಕಾಗಿಯೇ ಹಲವು ರಣತಂತ್ರಗಳನ್ನು ರೂಪಿಸಿದ್ದಾರೆ. ಪ್ರತಿ ಕ್ಷೇತ್ರದಲ್ಲೂ ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡ್ತಿದ್ದಾರೆ. ಎಎಪಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಭಗವಂತ ಮನ್ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲು ಬಯಸಿದ್ದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇನ್ನು ಈವರೆಗೆ ಎಎಪಿ 112 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ಇದನ್ನು ಓದಿ: ಪ್ರಧಾನಿ ಮೋದಿಗೆ ಧನ್ಯವಾದ ಸಲ್ಲಿಸಿದ ಯುಕೆ ಸಿಖ್ ಸಮುದಾಯ! ಇಲ್ಲಿದೆ ನೋಡಿ ಪುಲ್‌ ಡಿಟೈಲ್ಸ್

ಉತ್ತರ ಭಾರತ ಸೇರಿದಂತೆ ಪಂಚರಾಜ್ಯಗಳ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಫೆ.10ರಿಂದ ಶುರುವಾಗಲಿರೋ ಚುನಾವಣೆ ಮಾ.7ಕ್ಕೆ ಮುಗಿಯಲಿದೆ. ಮಾ.10ರಂದು ಐದು ರಾಜ್ಯಗಳ ಚುನಾವಣೆ ಫಲಿತಾಂಶ ಮಾ.10 ರಂದು ಒಮ್ಮೆಗೆ ಹೊರಬೀಳಲಿದೆ.
ಉತ್ತರ ಪ್ರದೇಶ 403 ಕ್ಷೇತ್ರ, ಪಂಜಾಬ್ ನ 117, ಉತ್ತರಾಖಂಡದ 70, ಮಣಿಪುರದ 60 ಮತ್ತು ಗೋವಾದ 40 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದಲ್ಲಿ 7 ಹಂತದ ಚುನಾವಣೆ ನಡೆಯಲಿದ್ದು, ಮೊದಲ ಹಂತ ಫೆ.10, ದ್ವಿತೀಯ ಹಂತ ಫೆ.14, ತೃತೀಯ ಹಂತ ಫೆ.20, ನಾಲ್ಕನೇ ಹಂತ ಫೆ.23, ಐದನೇ ಹಂತ ಫೆ.27, ಆರನೇ ಹಂತ ಮಾ.3 ಮತ್ತು ಏಳನೇ ಹಂತ ಮಾ.7ಕ್ಕೆ ನಡೆಯಲಿದೆ. ಇನ್ನು ಮಣಿಪುರದಲ್ಲಿ ಫೆ.27 ಮತ್ತು ಮಾರ್ಚ್ 3ಕ್ಕೆ 2 ಹಂತದ ಚುನಾವಣೆ ಜರುಗಲಿದೆ.

ಇದನ್ನು ಓದಿ: ಅನುಮಾನ ಹುಟ್ಟುಹಾಕಿದ ಪಾಟ್ನಾ ಸಾಹಿಬ್ ಗುರುದ್ವಾರದ ಮುಖ್ಯ 'ಗ್ರಂಥಿ' ಸಾವು

ಪಂಜಾಬ್ , ಗೋವಾ, ಉತ್ತರಾಖಂಡದಲ್ಲಿ ಫೆ.14ರಂದು ಒಂದೇ ಹಂತದಲ್ಲಿ ಚುನಾವಣೆ ಮುಗಿಯಲಿದೆ. ಸದ್ಯ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಅಧಿಕಾರದಲ್ಲಿದೆ. ಪಂಜಾಬ್ ನಲ್ಲಿ ಮಾತ್ರ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ಮುಂದೆ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ ಅನ್ನೋದೆ ಕುತೂಹಲ.
Published by:Vasudeva M
First published: