Bypoll: ಪಂಜಾಬ್ ಉಪಚುನಾವಣೆಯಲ್ಲಿ AAPಗೆ ಭಾರೀ ಮುಖಭಂಗ; ಸಿಎಂ ಮಾನ್ ಕ್ಷೇತ್ರದಲ್ಲೇ ಸೋಲು!

ಸಿಮ್ರಂಜಿತ್ ಸಿಂಗ್ ಮಾನ್ (Simranjit Singh Mann) ತಮ್ಮ ಎಎಪಿ ಪ್ರತಿಸ್ಪರ್ಧಿ ಗುರ್ಮೈಲ್ ಸಿಂಗ್ ಅವರನ್ನು ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ 7,000 ಮತಗಳ ಅಂತರದಿಂದ ಸೋಲಿಸಿದರು. ಆ ಮೂಲಕ ಸಿಎಂ ಭಗವಂತ್ ಮಾನ್ ಅವರ ಕ್ಷೇತ್ರವನ್ನು ಆಪ್​ ಕಳೆದುಕೊಂಡಂತೆ ಆಗಿದೆ.

ಭಗವಂತ್ ಮಾನ್

ಭಗವಂತ್ ಮಾನ್

  • Share this:
ಚಂಡೀಗಢ: ಪಂಜಾಬ್ ಉಪಚುನಾವಣೆಯಲ್ಲಿ (Punjab By-Election) ಆಮ್ ಆದ್ಮಿ ಪಕ್ಷ ಹೀನಾಯ ಸೋಲು ಕಂಡಿದ್ದು, ಮುಖ್ಯಮಂತ್ರಿ ಭಗವಂತ್ ಮಾನ್ (Chief Minister Bhagwant Mann) ಅವರ ಲೋಕಸಭಾ ಕ್ಷೇತ್ರದಲ್ಲಿ ಆಪ್​​ ಅಭ್ಯರ್ಥಿಯನ್ನು ಶಿರೋಮಣಿ ಅಕಾಲಿದಳದ ಅಭ್ಯರ್ಥಿ (Shiromani Akali Dal-Amritsar) ಸಿಮ್ರಂಜಿತ್ ಸಿಂಗ್ ಮಾನ್ ಸೋಲಿಸಿದ್ದಾರೆ. ಸಿಮ್ರಂಜಿತ್ ಸಿಂಗ್ ಮಾನ್ (Simranjit Singh Mann) ತಮ್ಮ ಎಎಪಿ ಪ್ರತಿಸ್ಪರ್ಧಿ ಗುರ್ಮೈಲ್ ಸಿಂಗ್ ಅವರನ್ನು ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ 7,000 ಮತಗಳ ಅಂತರದಿಂದ ಸೋಲಿಸಿದರು. ಆ ಮೂಲಕ ಸಿಎಂ ಭಗವಂತ್ ಮಾನ್ ಅವರ ಕ್ಷೇತ್ರವನ್ನು ಆಪ್​ ಕಳೆದುಕೊಂಡಂತೆ ಆಗಿದೆ. 77 ವರ್ಷದ ಸಿಮ್ರಂಜಿತ್ ಸಿಂಗ್ ಮಾನ್ ಅವರು ಮಾಜಿ ಸಂಸದ ಮತ್ತು ಶಿರೋಮಣಿ ಅಕಾಲಿದಳದ (ಅಮೃತಸರ) ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ದಲ್ವೀರ್ ಸಿಂಗ್ ಗೋಲ್ಡಿ, ಬಿಜೆಪಿಯ ಕೇವಲ್ ಧಿಲ್ಲೋನ್ ಮತ್ತು ಅಕಾಲಿದಳದ ಕಮಲದೀಪ್ ಕೌರ್ ರಾಜೋನಾ ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

ಉಪಚುನಾವಣೆಯಲ್ಲಿ ಭಾರೀ ಮುಖಭಂಗ

ಬಿಗಿ ಭದ್ರತೆಯ ನಡುವೆ ಭಾನುವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಯಿತು. ಜೂನ್ 23 ರಂದು 16 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.  ಸಂಗ್ರೂರ್ ಲೋಕಸಭಾ ಕ್ಷೇತ್ರಕ್ಕೆ ನಡೆದ 2019 ರ ಲೋಕಸಭೆ ಚುನಾವಣೆಯಲ್ಲಿ ಶೇ. 72.44ರಷ್ಟು, 2014 ರ ಚುನಾವಣೆಯಲ್ಲಿ ಶೇಕಡಾ 76.71 ರಷ್ಟು ಮತದಾನಕ್ಕೆ  ಆಗಿತ್ತು. ಇದಕ್ಕೆ ಹೋಲಿಸಿದರೆ ಈಗ ಶೇಕಡಾ 45.30 ರಷ್ಟು ಕಡಿಮೆ ಮತದಾನವಾಗಿದೆ. ಈ ಬಾರಿ 15.69 ಲಕ್ಷ ಮತದಾರರಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ನಂತರ ಭಗವಂತ್ ಮಾನ್ ಅವರು ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಉಪಚುನಾವಣೆ ನಡೆದಿತ್ತು. ಈಗ ರಾಜ್ಯದ ಮುಖ್ಯಮಂತ್ರಿಯಾಗಿರುವ ಭಗವಂತ್ ಮಾನ್ ಅವರು 2014 ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ಸಂಗ್ರೂರ್ ಕ್ಷೇತ್ರವನ್ನು ಗೆದ್ದಿದ್ದರು.

ಇದನ್ನೂ ಓದಿ: Shiv Sena: ಕೊನೆಗೂ ಇಬ್ಭಾಗವಾಯ್ತಾ ಶಿವಸೇನೆ? ಬಾಳಾ ಠಾಕ್ರೆ ಹೆಸರು ಬಳಸದಂತೆ ಉದ್ಧವ್ ಎಚ್ಚರಿಕೆ

ಉಪ ಚುನಾವಣಾ ಕಣದ ಲೆಕ್ಕಾಚಾರ

ಈ ವರ್ಷದ ಮಾರ್ಚ್‌ನಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವಿನ ನಂತರ ನಡೆದ ಮೊದಲ ಪ್ರಮುಖ ಚುನಾವಣಾ ಕದನ ಇದಾಗಿತ್ತು.  ಆಡಳಿತಾರೂಢ ಎಎಪಿಗೆ ಈ ಉಪಚುನಾವಣೆ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಪ್ರತಿಷ್ಠೆಯ ಯುದ್ಧವಾಗಿ ಕಂಡುಬಂದರೆ, ವಿರೋಧ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಎಸ್‌ಎಡಿ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಗೆಲುವು ದಾಖಲಿಸಲು ಎದುರು ನೋಡುತ್ತಿದ್ದವು.  ಎಎಪಿ ಪಕ್ಷದ ಸಂಗ್ರೂರ್ ಜಿಲ್ಲಾ ಉಸ್ತುವಾರಿ ಸಿಂಗ್ (38) ಅವರನ್ನು ಕಣಕ್ಕಿಳಿಸಿತು, ಆದರೆ ಕಾಂಗ್ರೆಸ್ ಮಾಜಿ ಧುರಿ ಶಾಸಕ ಗೋಲ್ಡಿ ಅವರ ಮೇಲೆ ಪಣತೊಟ್ಟಿತು. ಈ ತಿಂಗಳ ಆರಂಭದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಮಾಜಿ ಬರ್ನಾಲಾ ಶಾಸಕ ಧಿಲ್ಲೋನ್ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು.

2022 ರ ವಿಧಾನಸಭಾ ಚುನಾವಣೆಯಲ್ಲಿ ಲೆಹ್ರಾ, ದಿರ್ಬಾ, ಬರ್ನಾಲಾ, ಸುನಮ್, ಭದೌರ್, ಮೆಹಲ್ ಕಲಾನ್, ಮಲೇರ್‌ಕೋಟ್ಲಾ, ಧುರಿ ಮತ್ತು ಸಂಗ್ರೂರ್  ಎಲ್ಲಾ ಒಂಬತ್ತು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಸಂಗ್ರೂರ್ ಸಂಸದೀಯ ಕ್ಷೇತ್ರವನ್ನು ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಭಗವಂತ್ ಮಾನ್ ಅವರು 2014 ರ ಲೋಕಸಭಾ ಚುನಾವಣೆಯಲ್ಲಿ ಸಂಗ್ರೂರ್ ಕ್ಷೇತ್ರದಲ್ಲಿ ಎಸ್‌ಎಡಿ ಅಭ್ಯರ್ಥಿ ಸುಖದೇವ್ ಸಿಂಗ್ ಧಿಂಡ್ಸಾ ಅವರನ್ನು 2.11 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು.
Published by:Kavya V
First published: