Delhi Election Results; ದೆಹಲಿಯಲ್ಲಿ ಕೇಜ್ರಿವಾಲ್ ಗೆಲುವಿನ ಆರ್ಭಟ, ಬಿಜೆಪಿ-ಕಾಂಗ್ರೆಸ್​ ಧೂಳೀಪಟ; ಮೂರನೇ ಬಾರಿ ಅಧಿಕಾರದ ಗದ್ದುಗೆಗೆ 'ಆಮ್ ಆದ್ಮಿ'

Delhi Assembly Election results 2020: ಕಳೆದ ಚುನಾವಣೆಯಲ್ಲಿ 70 ಕ್ಷೇತ್ರಗಳ ಪೈಕಿ ಆಮ್ ಆದ್ಮಿ 67 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು. ಆದರೆ, ಈ ಬಾರಿ ಚುನಾವಣೆ ಆಪ್ ಕನಿಷ್ಟ 44  ಸ್ಥಾನಗಳಲ್ಲಿ ಗೆಲುವು ದಾಖಲಿಸಿ ಮತ್ತೊಮ್ಮೆ ಬಹುಮತ ಸರ್ಕಾರ ರಚಿಸಲಿದೆ ಎಂದೇ ಮತಗಟ್ಟೆ ಸಮೀಕ್ಷೆಗಳು ಊಹಿಸಿದ್ದವು. ಆದರೆ, ಸಮೀಕ್ಷೆಗಳ ಊಹೆಗೂ ಮೀರಿ ಆಪ್ ಅಧಿಕ ಸ್ಥಾನಗಳನ್ನು ಪಡೆಯುವಲ್ಲಿ ಸಫಲವಾಗಿದೆ.

ಅರವಿಂದ ಕೇಜ್ರಿವಾಲ್.

ಅರವಿಂದ ಕೇಜ್ರಿವಾಲ್.

 • Share this:
  ನವ ದೆಹಲಿ (ಫೆಬ್ರವರಿ 11); ಬಹು ನಿರೀಕ್ಷಿತ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಮತಗಟ್ಟೆ ಸಮೀಕ್ಷೆಗಳ ಭವಿಷ್ಯದಂತೆ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್​ ಆದ್ಮಿ ಪಕ್ಷ ಮತ್ತೊಂದು ಅವಧಿಗೆ ದೆಹಲಿಯ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಸಫಲವಾಗಿದೆ.

  ಕಳೆದ ಚುನಾವಣೆಯಲ್ಲಿ 70 ಕ್ಷೇತ್ರಗಳ ಪೈಕಿ ಆಮ್ ಆದ್ಮಿ 67 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು. ಆದರೆ, ಈ ಬಾರಿ ಚುನಾವಣೆ ಆಪ್ ಕನಿಷ್ಟ 44  ಸ್ಥಾನಗಳಲ್ಲಿ ಗೆಲುವು ದಾಖಲಿಸಿ ಮತ್ತೊಮ್ಮೆ ಬಹುಮತ ಸರ್ಕಾರ ರಚಿಸಲಿದೆ ಎಂದೇ ಮತಗಟ್ಟೆ ಸಮೀಕ್ಷೆಗಳು ಊಹಿಸಿದ್ದವು. ಆದರೆ, ಸಮೀಕ್ಷೆಗಳ ಊಹೆಗೂ ಮೀರಿ ಆಪ್ ಅಧಿಕ ಸ್ಥಾನಗಳನ್ನು ಪಡೆಯುವಲ್ಲಿ ಸಫಲವಾಗಿದೆ.

  ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾದಾಗಿನಿಂದಲೂ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಆಮ್ ಆದ್ಮಿ ಅಭ್ಯರ್ಥಿಗಳು ಸಫಲವಾಗಿದ್ದರು. ಮೊದಲ ಒಂದು ಗಂಟೆಯ ಅವಧಿಯಲ್ಲೇ ಸುಮಾರು 50 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವಲ್ಲಿ ಆಪ್ ಯಶಸ್ವಿಯಾಗಿತ್ತು.

  ಅಂತಿಮ ಫಲಿತಾಂಶದಲ್ಲಿ 70 ಕ್ಷೇತ್ರಗಳ ಪೈಕಿ ಆಮ್​ ಆದ್ಮಿ 59 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದರೆ, ಕಳೆದ ಚುನಾವಣೆಯಲ್ಲಿ 3 ಸ್ಥಾನಕ್ಕೆ ಮೀಸಲಾಗಿದ್ದ ಬಿಜೆಪಿ ಈ ಬಾರಿ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿ ತೃಪ್ತಿಪಟ್ಟುಕೊಂಡಿದೆ. ಇನ್ನೂ ಕಾಂಗ್ರೆಸ್​ ಶೂನ್ಯ ಸಾಧನೆ ಮಾಡಿದೆ.

  ದೆಹಲಿ ಚುನಾವಣಾ ಫಲಿತಾಂಶ:

  ಆಮ್​ ಆದ್ಮಿ - 59

  ಬಿಜೆಪಿ - 11

  ಕಾಂಗ್ರೆಸ್​ - 00

  ಇದನ್ನೂ ಓದಿ : ದ್ವೇಷ ರಾಜಕಾರಣ vs ಅಭಿವೃದ್ಧಿ; ದೆಹಲಿಯಲ್ಲಿ ಆಮ್ ಆದ್ಮಿ ಮತ್ತೊಮ್ಮೆ ಗೆಲುವು ಸಾಧಿಸಲು ಈ ಎಲ್ಲಾ ವಿಚಾರಗಳು ಕಾರಣ!
  First published: