AAP UP Election Campaign| ಉತ್ತರಪ್ರದೇಶ ಚುನಾವಣೆಯಲ್ಲಿ ಕಮಾಲ್ ಮಾಡಲಿದೆಯಾ ಎಎಪಿ?; 300 ಯೂನಿಟ್​ವರೆಗೆ ಉಚಿತ ವಿದ್ಯುತ್​ ಭರವಸೆ!

ದೆಹಲಿ ಅಭಿವೃದ್ಧಿ ಯೋಜನೆಗಳ ಜನಪ್ರಿಯತೆಯನ್ನು ಮುಂದಿಟ್ಟು ಎಎಪಿ ಪಂಜಾಬ್​ನಲ್ಲಿ ಅಧಿಕಾರದ ಗದ್ದುಗೆ ಏರುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಇದೀಗ ಉತ್ತರಪ್ರದೇಶ ಚುನಾವಣೆಯಲ್ಲೂ ಸಹ ಎಎಪಿ ಸ್ಪರ್ಧೆಗೆ ಮುಂದಾಗಿದ್ದು, ಯಾವ ರೀತಿಯ ಫಲಿತಾಂಶವನ್ನು ಪಡೆಯಲಿದೆ? ಎಂಬುದನ್ನು ಕಾದುನೋಡಬೇಕಿದೆ. 

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್.

  • Share this:
    ನೋಯ್ಡಾ: ಉತ್ತರಪ್ರದೇಶ ಚುನಾವಣೆ (UttaraPradesh) ಮೇಲೆ ಎಲ್ಲಾ ಪಕ್ಷಗಳೂ ಕಣ್ಣಿಟ್ಟಿವೆ. ಉತ್ತರಪ್ರದೇಶ ಗೆದ್ದವರು ಇಡೀ ದೇಶವನ್ನೇ ಗೆಲ್ಲುತ್ತಾರೆ ಎಂಬುದು ಚುನಾವಣಾ ನಾಡ್ನುಡಿ. ಹೀಗಾಗಿ ಬಿಜೆಪಿ ಉತ್ತರಪ್ರದೇಶದಲ್ಲಿ ಮತ್ತೊಂದು ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಸಮಾಜವಾದಿ ಪಾರ್ಟಿ (Samajwadi Party) ಮತ್ತು ಬಹುಜನ ಸಮಾಜವಾದಿ ಪಾರ್ಟಿ (Bahujana Samajwadi Party) ಮತ್ತೆ ಅಧಿಕಾರದ ಗದ್ದುಗೆಗೆ ಏರುವ ಪರಿಶ್ರಮದಲ್ಲಿದೆ. ಇನ್ನೂ ಕಾಂಗ್ರೆಸ್​ಗೆ (Congress) ಉತ್ತರಪ್ರದೇಶದಲ್ಲಿ ತನ್ನ ಅಸ್ಥಿತ್ವವನ್ನು ಕಾಯ್ದುಕೊಳ್ಳುವ ಅಗತ್ಯವಿದೆ. ಈ ನಡುವೆ ದೆಹಲಿಯಲ್ಲಿ ಆರಂಭಿಸಿದ ಶಿಕ್ಷ-ಆರೋಗ್ಯ ಮತ್ತು ಮೂಲಭೂತ ಸೌಕರ್ಯ ವಿಭಾಗದಲ್ಲಿನ ಕ್ರಾಂತಿಯನ್ನು ಉತ್ತರಪ್ರದೇಶಕ್ಕೂ ವಿಸ್ತರಿಸಲು ಮುಂದಾಗಿರುವ ಎಎಪಿ (AAP) ಈಗಾಗಲೇ ಚುನಾವಣಾ ಪ್ರಚಾರಗಳನ್ನು ಆರಂಭಿಸಿದೆ. ಅಲ್ಲದೆ, ಜನ ಸಾಮಾನ್ಯರಿಗೆ 300 ಯೂನಿಟ್​ವರೆಗೆ ಉಚಿತ ಕರೆಂಟ್​ ನೀಡುವ ಭರವಸೆಯನ್ನೂ ನೀಡಿದೆ ಎಂದು ವರದಿಯಾಗಿದೆ.

    ಗೆದ್ದರೆ ವಿದ್ಯುತ್​ ಉಚಿತ: ಅರವಿಂದ ಕೇಜ್ರಿವಾಲ್;

    ಉಚಿತ ವಿದ್ಯುತ್​ ಮತ್ತು ಉಚಿತ ಕುಡಿಯುವ ನೀರು ನವ ದೆಹಲಿಯಲ್ಲಿ ಸಿಎಂ ಅರವಿಂದ ಕೇಜ್ರಿವಾಲ್​ ಘೋಷಿಸಿದ ಜನಪ್ರಿಯ ಯೋಜನೆಗಳಲ್ಲೊಂದು. ಈ ಯೋಜನೆಗಳ ಜನಪ್ರಿಯತೆ ಕಾರಣಕ್ಕೆ ಎಎಪಿ ಈವರೆಗೆ ದೆಹಲಿಯಲ್ಲಿ ಅಧಿಕಾರವನ್ನು ಜನರ ಭರವಸೆಯನ್ನೂ ಉಳಿಸಿಕೊಂಡಿದೆ. ಹೀಗಾಗಿ ಈ ಭರವಸೆಯನ್ನು ಉತ್ತರಪ್ರದೇಶಕ್ಕೂ ವಿಸ್ತರಿಸಲು ಮುಂದಾಗಿರುವ ಎಎಪಿ ಗೌತಮಬುದ್ಧ ನಗರದಿಂದ ಚುನಾವಣಾ ಅಭಿಯಾನವನ್ನು ಆರಂಭಿಸಿದ್ದು, ರಾಜ್ಯದ ಜನತೆಗೆ "ಉಚಿತ ವಿದ್ಯುತ್‌" ನೀಡುವ ಭರವಸೆಯನ್ನು ಮುಂದಿಟ್ಟು ಚುನಾವಣೆಯನ್ನು ಎದುರಿಸಲು ಸಿದ್ಧವಾಗಿದೆ.

    ರಾಜ್ಯದ ಜನತೆಗೆ ಪಕ್ಷವು 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿದೆ ಎಂದು ಪಕ್ಷದ ಪದಾಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಉಚಿತ ವಿದ್ಯುತ್ ಅಭಿಯಾನವನ್ನು ಪಕ್ಷದ ಉತ್ತರ ಪ್ರದೇಶ ಉಸ್ತುವಾರಿ ಸಂಜಯ್ ಸಿಂಗ್ ಅವರು ಅಕ್ಟೋಬರ್ 10 ರಂದು ಆರಂಭಿಸಿದ್ದಾರೆ ಎಂದು ಎಎಪಿ ಗೌತಮ್ ಬುದ್ಧ ನಗರ ಘಟಕದ ಅಧ್ಯಕ್ಷ ಭೂಪೇಂದ್ರ ಜಡೌನ್ ಹೇಳಿದ್ದಾರೆ.

    "ಈ ಅಭಿಯಾನ ಇದುವರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಎಎಪಿ ಕಾರ್ಯಕರ್ತರು ಇಲ್ಲಿರುವ ಎಲ್ಲಾ ಮೂರು ವಿಧಾನಸಭಾ ಕ್ಷೇತ್ರಗಳಾದ ನೋಯ್ಡಾ, ಜೇವರ್ ಮತ್ತು ದಾದ್ರಿಗಳಲ್ಲಿ ಮತದಾರರನ್ನು ತಲುಪುತ್ತಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

    ರೈತರಿಗೂ ಯೋಜನೆ:

    ಅರವಿಂದ ಕೇಜ್ರಿವಾಲ್ ಅವರು ಉತ್ತರ ಪ್ರದೇಶದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ 300 ಯೂನಿಟ್ ವಿದ್ಯುತ್ ಅನ್ನು ಜನರಿಗೆ ಉಚಿತವಾಗಿ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ರೈತರಿಗೆ ಉಚಿತ ವಿದ್ಯುತ್ ನೀಡಲಾಗುವುದು ಮತ್ತು ಅವರ ಬಾಕಿ ಮನ್ನಾ ಮಾಡಲಾಗುವುದು ಎಂದು ಜಡೌನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    "ಅಭಿಯಾನದ ಭಾಗವಾಗಿ, ಎಎಪಿ ಕಾರ್ಯಕರ್ತರು "ಪ್ರೀ ಬಿಜ್ಲಿ ಕಿ ಬಾತ್, ಜನತಾ ಕೇ ಸಾಥ್" ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಜಿಲ್ಲೆಯ ಪ್ರತಿ ಮನೆಗೂ "ಖಾತರಿ ಕಾರ್ಡ್" ನೀಡಲಾಗುತ್ತಿದೆ. ಮೂಲ ಸೌಕರ್ಯಗಳ ಸಮಸ್ಯೆಗಳೊಂದಿಗೆ ಸಾರ್ವಜನಿಕರ ಬಳಿಗೆ ಹೋಗುವುದರಿಂದ, ಜನರ ಪ್ರೀತಿ ಮತ್ತು ಬೆಂಬಲ ಲಭ್ಯವಾಗುತ್ತದೆ ಎಂದು ನಾವು ನಂಬುತ್ತೇವೆ" ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: Bhabesh Kalita| ಪೆಟ್ರೋಲ್ ಬೆಲೆ 200ಕ್ಕೆ ಏರಿದರೆ ಟ್ರಿಪಲ್ ರೈಡಿಂಗ್​ಗೆ ಅವಕಾಶ; ಅಸ್ಸಾಂ ಬಿಜೆಪಿ ಅಧ್ಯಕ್ಷನ ವಿಲಕ್ಷಣ ಹೇಳಿಕೆ!

    ಉತ್ತರಪ್ರದೇಶದಲ್ಲೂ ನಡೆಯುವುದೇ ದೆಹಲಿ ಕಮಾಲ್?

    ಅರವಿಂದ ಕೇಜ್ರಿವಾಲ್ ಸರ್ಕಾರ ದೆಹಲಿಯಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿರುವುದು ಸುಳ್ಳಲ್ಲ. ಸರ್ಕಾರಿ ಶಾಲೆಗಳನ್ನು ವಿಶ್ವದರ್ಜೆಗೆ ಏರಿಸಿದ್ದು, ಬಡ ಮಕ್ಕಳಿಗೆ ಖಾಸಗಿ ಶಾಲೆಗಳೂ ನಾಚುವಂತಹ ಶಿಕ್ಷಣವನ್ನು ನೀಡಲಾಗುತ್ತಿದೆ. ಗಲ್ಲಿ ಗಲ್ಲಿ ಗಳಲ್ಲಿ ಮೊಹಲ್ಲಾ ಕ್ಲಿನಿಕ್​ಗಳನ್ನು ಆರಂಭಿಸಿ ಬಡವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇದಲ್ಲದೆ, ಉಚಿತ ಕುಡಿಯುವ ನೀರು, ವಿದ್ಯುತ್ ಮತ್ತು ಮಹಿಳೆಯರಿಗೆ ಉಚಿತ ಸಾರಿಗೆಯಂತಹ ಅನೇಕ ಜನಪರ ಯೋಜನೆಗಳು ಎಎಪಿ ಪಕ್ಷಕ್ಕೆ ಮತ್ತಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿದೆ.

    ಇದನ್ನೂ ಓದಿ: Savarkar Controversy| ಸಾವರ್ಕರ್​ ಕ್ಷಮಾಪಣೆಗೆ ಗಾಂಧಿ ಸಲಹೆ ನೀಡಿದ್ದರೇ? ನಿಜಕ್ಕೂ ಇದೊಂದು ಹಾಸ್ಯಾಸ್ಪದ ಹೇಳಿಕೆ; ರಾಜಮೋಹನ್ ಗಾಂಧಿ

    ಇದೇ ಜನಪ್ರಿಯತೆಯನ್ನು ಮುಂದಿಟ್ಟು ಎಎಪಿ ಪಂಜಾಬ್​ನಲ್ಲಿ ಅಧಿಕಾರದ ಗದ್ದುಗೆ ಏರುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಇದೀಗ ಉತ್ತರಪ್ರದೇಶ ಚುನಾವಣೆಯಲ್ಲೂ ಸಹ ಅರವಿಂದ ಕೇಜ್ರಿವಾಲ್ ಅವರ ಎಎಪಿ ಸ್ಪರ್ಧಿಸುತ್ತಿದ್ದು, ಯಾವ ರೀತಿಯ ಫಲಿತಾಂಶವನ್ನು ಪಡೆಯಲಿದೆ? ಎಂಬುದನ್ನು ಕಾದುನೋಡಬೇಕಿದೆ.
    Published by:MAshok Kumar
    First published: