Punjab Election : ಸಿಎಂ ಆಯ್ಕೆಗೆ SMS ಮೂಲಕ ವೋಟಿಂಗ್​; ಅಭ್ಯರ್ಥಿ ಆಯ್ಕೆಯನ್ನು ಜನತೆಗೆ ಬಿಟ್ಟ AAP

ಪಂಜಾಬ್‌ನ ಜನರು ತಮ್ಮ ಸಿಎಂ ಅಭ್ಯರ್ಥಿಯ ಆಯ್ಕೆಯನ್ನು ಮಾಡಲು ಕರೆ , ಸಂದೇಶ ಅಥವಾ ವಾಟ್ಸಾಪ್ ಮಾಡಬೇಕು

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​

  • Share this:
    ಮೊಹಾಲಿ (ಜ. 13):  ಪಂಜಾಬ್ ಚುನಾವಣೆಗೆ (Punjab Election) ಇನ್ನೇನು ತಿಂಗಳು ಬಾಕಿ ಉಳಿದಿದೆ. ಈಗಾಗಲೇ ಮಾದರಿ ಪಂಜಾಬ್​ ಅನ್ನು ಜನತೆ ಮುಂದಿಟ್ಟಿರುವ ಆಮ್​ ಆದ್ಮಿ ಪಕ್ಷದಿಂದ (AAP) ಸಿಎಂ ಅಭ್ಯರ್ಥಿ (CM Candidate) ಯಾರಗಾಗಲಿದ್ದಾರೆ ಎಂಬ ಕುತೂಹಲ ಜನರಲ್ಲಿ ಮೂಡಿತ್ತು. ಈ ಪ್ರಶ್ನೆಗೆ ಉತ್ತರವನ್ನು ಎಎಪಿ ಪ್ರಧಾನ ಸಂಚಾಲಕರೂ ಹಾಗೂ ದೆಹಲಿ ಮುಖ್ಯಮಂತ್ರಿಯಾದ ಅರವಿಂದ್​​ ಕೇಜ್ರಿವಾಲ್ (Arvind Kejriwal)​ ಜನತೆಗೆ ಬಿಟ್ಟಿದ್ದಾರೆ. ತಮ್ಮ ಪಕ್ಷದ ಸಿಎಂ ಅಭ್ಯರ್ಥಿ ಯಾರಾಗ ಬೇಕು ಎಂಬುದನ್ನು ಜನರೇ ನಿರ್ಧರಿಸುತ್ತಾರೆ. ಜನರು ಆಯ್ಕೆ ಮಾಡಿದ ಅಭ್ಯರ್ಥಿಯೇ ಎಎಪಿ ಸಿಎಂ ಆಗಲಿದ್ದಾರೆ ಎಂದಿದ್ದಾರೆ.

    ಈ ಸಂಖ್ಯೆಗೆ ಕರೆ ಮಾಡುವಂತೆ ಜನರಿಗೆ ಮನವಿ
    ಅಷ್ಟೇ ಅಲ್ಲದೇ, ಜನತೆ ಆಯ್ಕೆಗೆ ವಿನೂತನ ಕ್ರಮವನ್ನು ಹೊರಡಿಸಿದ್ದಾರೆ ಅರವಿಂದ್​ ಕೇಜ್ರಿವಾಲ್​. 70748 70748 ಈ ಸಂಖ್ಯೆಗೆ ಜನರು ತಮ್ಮ ಪಕ್ಷದಿಂದ ಯಾರು ಸಿಎಂ ಆಗಬೇಕು ಎಂಬ ಕುರಿತು ಸಂದೇಶ ರವಾನಿಸಬೇಕು. ಇದರಲ್ಲಿ ಜನರು ಅತಿ ಹೆಚ್ಚು ಯಾರನ್ನು ಆಯ್ಕೆ ಮಾಡಿರುತ್ತಾರೋ ಅವರನ್ನೇ ಸಿಎಂ ಆಗಿ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.

    ಜನವರಿ 17ವರೆಗೆ ಜನರ ಆಯ್ಕೆಗೆ ಅವಕಾಶ
    ಪಂಜಾಬ್‌ನ ಜನರು ತಮ್ಮ ಸಿಎಂ ಅಭ್ಯರ್ಥಿಯ ಆಯ್ಕೆಯನ್ನು ಮಾಡಲು ಕರೆ, ಸಂದೇಶ ಅಥವಾ ವಾಟ್ಸಾಪ್ ಮಾಡಬೇಕು. ಸಿಎಂ ಆಯ್ಕೆಯನ್ನು ನಾವು ಪಂಜಾಬ್‌ನ 3 ಕೋಟಿ ಜನರಿಗೆ ಬಿಡಲು ಬಯಸುತ್ತೇವೆ. ಜನವರಿ 17 ರ ಸಂಜೆ 5 ಗಂಟೆಯೊಳಗೆ ಜನರು ತಮ್ಮ ಆಯ್ಕೆಯನ್ನು ನಮಗೆ ನೀಡಬಹುದು. ಜನಾಭಿಪ್ರಾಯದಿಂದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಗುರುತಿಸಲು ಇಂತಹ ವಿಧಾನ ಅನುಸರಿಸುತ್ತಿರುವುದು ಇದೇ ಮೊದಲು ಎಂದಿದ್ದಾರೆ.

    ಭಗವಂತ್​ ಮಾನ್​ ಗೆ ಸಿಎಂ ಪಟ್ಟ ಇಲ್ಲ
    ಈ ಸಿಎಂ ರೇಸ್​ನಿಂದ ಅರವಿಂದ್​ ಕೇಜ್ರಿವಾಲ್​ ದೂರ ಉಳಿದಿದ್ದು, ರಾಜ್ಯದಲ್ಲಿ ಸಿಎಂ ಅಭ್ಯರ್ಥಿ ಎಂಬಂತಹ ದೊಡ್ಡ ಮುಖಗಳು ಸದ್ಯ ಕಂಡು ಬಂದಿಲ್ಲ. ಇನ್ನು ಎಎಪಿ ನಾಯಕತ್ವವನ್ನು ಭಗವಂತ್ ಮಾನ್​ ಅವರಿಗೆ ನೀಡಲು ಪಕ್ಷ ಬಯಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

    ಇದನ್ನು ಓದಿ: ಚುನಾವಣೆಗೆ ಮುನ್ನ Punjab Model ಅನಾವರಣಗೊಳಿಸಿದ Aravind Kejriwal ; ಉದ್ಯೋಗ, ಭಷ್ಟಚಾರ ಮುಕ್ತ ಸರ್ಕಾರದ ಭರವಸೆ

    ಜನರ ಆಯ್ಕೆಯೇ ನಮ್ಮ ನಿರ್ಧಾರ
    ಇನ್ನು ಈ ಹಿಂದೆ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಆಗಬಹುದು ಎಂಬ ಲೆಕ್ಕಾಚಾರ ತಲೆಕೆಳಗೆ ಆದ ಕುರಿತು ಪ್ರತಿಕ್ರಿಯಿಸಿದ ಅವರು, ಭಗವಂತ್ ಮಾನ್ ನನಗೆ ಅತ್ಯಂತ ಪ್ರಿಯ. ಅವನು ದೊಡ್ಡ ಮುಖ. ಮಾನ್ ಅವರನ್ನು ಸಿಎಂ ಎಂದು ಘೋಷಿಸೋಣ ಎಂದು ಹೇಳಿದ್ದೆ. ಆದರೆ ಸಿಎಂ ಅಭ್ಯರ್ಥಿ ಆಯ್ಕೆಗೆ ಜನರ ಬಳಿ ಹೋಗುವುದು ಮಾನ್​ ಅವರ ಯೋಚನೆಯಾಗಿತ್ತು. ಮುಚ್ಚಿದ ಬಾಗಿಲಿನ ಹಿಂದೆ ಸಿಎಂ ಮುಖವನ್ನು ನಿರ್ಧರಿಸಬೇಡಿ ಎಂದು ಭಗವಂತ್ ಮಾನ್ ಕೂಡ ಹೇಳಿದ್ದಾರೆ

    ಸದ್ಯ ರಾಜ್ಯದಲ್ಲಿ ಉಳಿದ ಪಕ್ಷಗಳು ಕೂಡ ಇನ್ನು ಸಿಎಂ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಇನ್ನು ಪಿಸಿಸಿ ಮುಖ್ಯಸ್ಥ ನವಜೋತ್​ ಸಿಂಗ್​​ ಸಿಧು ಪಂಜಾಬ್​ ಸಿಎಂಯನ್ನು ಜನರು ನಿರ್ಧರಿಸುತ್ತಾರೆ ಹೊರತು ಪಕ್ಷವಲ್ಲ ಎಂಬ ಹೇಳಿಕೆ ಬೆನ್ನಲೇ ಎಎಪಿ ಈ ಜಾಣ ನಡೆ ತೋರಿದೆ.

    ಇದನ್ನು ಓದಿ: 2017ರ ಅತ್ಯಾಚಾರ ಸಂತ್ರಸ್ತೆಯ ತಾಯಿಯನ್ನು ಚುನಾವಣಾ ಕಣಕ್ಕೆ ಇಳಿಸಲು ಸಜ್ಜಾದ ಕಾಂಗ್ರೆಸ್​

    ಈ ಬಾರಿ ಸರ್ಕಾರ ರಚಿಸುವ ಭರವಸೆ
    ಇನ್ನು ನಿನ್ನೆ ಮೊಹಾಲಿಯಲ್ಲಿ ಮಾತನಾಡಿದ ಅರವಿಂದ್​ ಕೇಜ್ರಿವಾಲ್​, ಕಳೆದ ಚುನಾವಣೆಯಲಲಿ ಜನರು ನಮಗೆ ಬೆಂಬಲ ನೀಡಿದ್​ದಾರೆ, ಇನ್ನೂ ಎರಡು ಮೂರು ಸ್ಥಾನಗಳು ನಮಗೆ ಬೇಕಾಗಬಹುದು. ಹಾಗಾಗಿ ನಮಗೆ ಬಲವಾದ ಬೆಂಬಲ ನೀಡಿ ಮತ ಹಾಕುವಂತೆ ಜನರಿಗೆ ನಾನು ಮನವಿ ಮಾಡುತ್ತೇನೆ ಎಂದರು.

    ಇದೇ ವೇಳೆ ಉಳಿದ ಪಕ್ಷಗಳ ವಿರುದ್ಧ ಹರಿಹಾಯ್ದ ಅವರು, ಬಹುತೇಕ ಪಕ್ಷಗಳು ತಮ್ಮ ಮಕ್ಕಳು ಅಥವಾ ಸೊಸೆಯರನ್ನು ಸಿಎಂ ಅಭ್ಯರ್ಥಿಯನ್ನಾಗಿ ಸೂಚಿಸುತ್ತವೆ. ಆದರೆ ಜನ ನಮ್ಮನ್ನ ನಿರ್ಧರಿಸುತ್ತಾರೆ ಎಂದಿದ್ದರು
    Published by:Seema R
    First published: