ಪಕ್ಷದ ಪರ ಪ್ರಚಾರ ಮಾಡಲ್ಲ ಎಂದ ಆಪ್​ ಶಾಸಕಿ ಅಲ್ಕಾ ಲಂಬಾ

ಕಳೆದ ನಾಲ್ಕು ತಿಂಗಳಿನಿಂದ ಪಕ್ಷದ ನಾಯಕರ ಸಮಯಕಕ್ಕಾಗಿ ನಾನು ಹಲವು ಪ್ರಯತ್ನ ಮಾಡಿದ್ದೇನೆ. ಆದರೆ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯೂ ನನಗೆ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈ ಗೊಂಡಿದ್ದೇನೆ ಎಂದಿದ್ದಾರೆ.

Seema.R | news18
Updated:April 26, 2019, 1:19 PM IST
ಪಕ್ಷದ ಪರ ಪ್ರಚಾರ ಮಾಡಲ್ಲ ಎಂದ ಆಪ್​ ಶಾಸಕಿ ಅಲ್ಕಾ ಲಂಬಾ
ಅಲ್ಕಾ ಲಂಬಾ
  • News18
  • Last Updated: April 26, 2019, 1:19 PM IST
  • Share this:
ದೆಹಲಿ(ಏ.26): ತಾನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಎಎಪಿಯ ಪರ ಪ್ರಚಾರ ಮಾಡುವುದಿಲ್ಲ ಎಂದು ಚಾಂದಿನಿ ಚೌಕ್​ ಕ್ಷೇತ್ರದ ಆಪ್​​ ಶಾಸಕಿ ಅಲ್ಕಾ ಲಂಬಾ ಸ್ಪಷ್ಟಪಡಿಸಿದ್ದು, ಪಕ್ಷಕ್ಕೆ ಶಾಕ್​ ನೀಡಿದ್ದಾರೆ.

ಕಳೆದ ನಾಲ್ಕು ತಿಂಗಳಿನಿಂದ ಪಕ್ಷದ ಶಾಸಕರ ಸಭೆಗೆ ನನ್ನನ್ನು ಆಹ್ವಾನಿಸಿಲ್ಲ ಈ ಹಿನ್ನೆಲೆಯಲ್ಲಿ ಪಕ್ಷದ ಪರ ನಾನು ಪ್ರಚಾರ ನಡೆಸುವುದಿಲ್ಲ ಎಂದು ಕಾರಣ ನೀಡಿದ್ದಾರೆ.  ಶಾಸಕಿಯಾಗಿ ನಾನು ನನ್ನ ಕ್ಷೇತ್ರದ ಜನರಿಗಾಗಿ ಸೇವೆ ಮಾಡಲಿದ್ದೇನೆ. ಆದರೆ, ಎಎಪಿ ಪರ ಯಾವುದೇ ಪ್ರಚಾರದಲ್ಲಿ ಭಾಗಿಯಾಗುವುದಿಲ್ಲ ಎಂದಿದ್ದಾರೆ.

ಕಳೆದ ನಾಲ್ಕು ತಿಂಗಳಿನಿಂದ ಪಕ್ಷದ ನಾಯಕರ ಸಮಯಕಕ್ಕಾಗಿ ನಾನು ಹಲವು ಪ್ರಯತ್ನ ಮಾಡಿದ್ದೇನೆ. ಆದರೆ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನನಗೆ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈ ಗೊಂಡಿದ್ದೇನೆ ಎಂದಿದ್ದಾರೆ.
ಈ ಹಿಂದೆ ರಾಜೀವ್​ ಗಾಂಧಿ ಅವರಿಗೆ ನೀಡಿರುವ ಭಾರತ ರತ್ನವನ್ನು ವಾಪಸ್ಸು ಪಡೆಯುವ ವಿಧಾನಸಭೆಯ ನಿರ್ಣಯವನ್ನು ನಾನು ಒಪ್ಪುವುದಿಲ್ಲ ಎಂದಿದ್ದ ಅಲ್ಕಾ ಲಂಬಾ ಅವರ ರಾಜೀನಾಮೆಗೆ ಸಿಎಂ ಅರವಿಂದ್​ ಕೇಜ್ರಿವಾಲ್​ ಒತ್ತಾಯಿಸಿದ್ದರು. ಇನ್ನು ಕಳೆದ ತಿಂಗಳು ಕೂಡ ಪಕ್ಷದ ಮತ್ತೊಬ್ಬ ಶಾಸಕ ಸೌರಭ್​ ಭಾರದ್ವಾಜ್​ ಕೂಡ ಲಾಂಬಾ ಅವರ ರಾಜೀನಾಮೆಗೆ ಆಗ್ರಹಿಸಿದ್ದರು.

 ಈ ಕುರಿತು ಮಾತನಾಡಿದ ಲಂಬಾ, ಪಕ್ಷದ ನಾಯಕರು ಪದೇ ಪದೇ ನನ್ನ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಈ ಕುರಿತು ಏಪ್ರಿಲ್​ 25ರ ಬಳಿಕ ನಿರ್ಧಾರ ಕೈಗೊಳ್ಳುವುದಾಗಿ ಸುಳಿವು ನೀಡಿದ್ದರು.

ಇದನ್ನು ಓದಿ: ಎನ್​ಡಿಎ ನಾಯಕರ ಶಕ್ತಿ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ

ಮತ್ತೆ ಈ ಬಗ್ಗೆ ಉತ್ತರಿಸಿರುವ ಅವರು, ಏನೇ ಆಗಿದ್ದರೂ ಪಕ್ಷ ಮತ್ತು ನನ್ನ ನಡುವೆ ಆಗಿದೆ. ನನ್ನ ಕ್ಷೇತ್ರದ ಜನರ ಕೈಯನ್ನು ನಾನು ಬಿಡುವುದಿಲ್ಲ. ಅವರಿಂದ ಆಯ್ಕೆಯಾಗಿರುವ ನಾನು ಅವರ ಒಳಿತಿಗೆ ಪ್ರಾರ್ಥಿಸುತ್ತೇನೆ. ಆದಕಾರಣ ನನ್ನ ಕ್ಷೇತ್ರದ ಅಭಿವೃದ್ಧಿಯತ್ತ ಮಾತ್ರ ನಾನು ಗಮನ ಹರಿಸುತ್ತೇನೆ ಎಂದರು.

First published:April 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading