Free electricity: ಪ್ರತಿಮನೆಗೆ 300 ಯುನಿಟ್ ಫ್ರೀ ವಿದ್ಯುತ್, ಮಾನ್​ ಸೌಲಭ್ಯಕ್ಕೆ ಮನಸೋತ ಜನ

ಮುಂದಿನ ಜುಲೈನಿಂದ ರಾಜ್ಯದಲ್ಲಿ ಪ್ರತಿ ಮನೆಗೂ 300 ಯುನಿಟ್ ಗಳ ಉಚಿತ ವಿದ್ಯುತ್ (Free electricity) ನೀಡಲಾಗುವುದು ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಘೋಷಣೆ ಮಾಡಿದ್ದಾರೆ. ಪಂಜಾಬ್‌ನ ಆಮ್ ಆದ್ಮಿ ಪಕ್ಷ (AAP) ಸರ್ಕಾರವು ಜುಲೈ 1 ರಿಂದ ಗೃಹ ಗ್ರಾಹಕರಿಗೆ 300 ಯೂನಿಟ್ ಉಚಿತ ವಿದ್ಯುತ್ ಅನ್ನು ಘೋಷಿಸಿದೆ.

ವಿದ್ಯುತ್​

ವಿದ್ಯುತ್​

 • Share this:
  ಪಂಜಾಬ್​ನ ನೂತನ ಸಿಎಂ ಭಗವಂತ್ ಮಾನ್ (Bhagwant Mann) ಅವರು ಚುನಾವಣೆಯಲ್ಲಿ ಗೆದ್ದಾಗಿನಿಂದ ಸುದ್ದಿಯಲ್ಲಿದ್ದಾರೆ. ತಮ್ಮ ವಿಶೇಷ ರೂಲ್ಸ್ ಮೂಲಕ ಸಕತ್ ಸೌಂಡ್ ಮಾಡುತ್ತಿದ್ದಾರೆ. ಈಗ ಜನರಿಗೆ ತಮ್ಮ ಸರ್ಕಾರ ನೀಡೋ ವಿಶೇಷ ಸೌಲಭ್ಯಗಳ ಮೂಲಕ ಜನರ ಮೆಚ್ಚುಗೆ ಗಳಿಸುತ್ತಿದ್ದಾರೆ. ಮುಂದಿನ ಜುಲೈನಿಂದ ರಾಜ್ಯದಲ್ಲಿ ಪ್ರತಿ ಮನೆಗೂ 300 ಯುನಿಟ್ ಗಳ ಉಚಿತ ವಿದ್ಯುತ್ (Free electricity) ನೀಡಲಾಗುವುದು ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಘೋಷಣೆ ಮಾಡಿದ್ದಾರೆ. ಪಂಜಾಬ್‌ನ ಆಮ್ ಆದ್ಮಿ ಪಕ್ಷ (AAP) ಸರ್ಕಾರವು ಜುಲೈ 1 ರಿಂದ ಗೃಹ ಗ್ರಾಹಕರಿಗೆ 300 ಯೂನಿಟ್ ಉಚಿತ ವಿದ್ಯುತ್ ಅನ್ನು ಘೋಷಿಸಿದೆ.

  ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಅಧಿಕಾರಕ್ಕೆ ಒಂದು ತಿಂಗಳು ಪೂರೈಸುವ ದಿನವಾದ ಶನಿವಾರದಂದು ಔಪಚಾರಿಕ ಪ್ರಕಟಣೆಗಾಗಿ ಕಾಯುತ್ತಿರುವಾಗ, ಎಎಪಿ ಸರ್ಕಾರವು ಜುಲೈ 1 ರಿಂದ ಉಚಿತ ವಿದ್ಯುತ್ ಪ್ರಯೋಜನವನ್ನು ಹೊರತರಲಾಗುವುದು ಎಂದು ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ಸೇರಿಸಿದೆ.

  "ನಮ್ಮ ನಾಯಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Delhi CM Arvind Kejriwal) ಅವರೊಂದಿಗೆ ಅದ್ಭುತವಾದ ಸಭೆ ನಡೆಸಿದ್ದೇವೆ. ಶೀಘ್ರದಲ್ಲೇ, ಪಂಜಾಬ್ ಜನರಿಗೆ ಒಳ್ಳೆಯ ಸುದ್ದಿ ನೀಡುತ್ತೇನೆ" ಎಂದು ಭಗವಂತ್ ಮಾನ್ ಟ್ವಿಟರ್ ಸಂದೇಶದ ಮೂಲಕ ತಿಳಿಸಿದ್ದರು.

  ಕೇಜ್ರಿವಾಲ್ ಅವರ ಮೊದಲ ಭರವಸೆ 300 ಯುನಿಟ್‌ಗಳ ಉಚಿತ ವಿದ್ಯುತ್

  ಜೂನ್ 2021 ರಲ್ಲಿ ಪಂಜಾಬ್‌ನ ಮತದಾರರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೊದಲ ಭರವಸೆ 300 ಯುನಿಟ್‌ಗಳ ಉಚಿತ ವಿದ್ಯುತ್ ಆಗಿತ್ತು. ಈ ಭರವಸೆಯು ಅವರ ಸರ್ಕಾರವು ಹೊಸ ದೆಹಲಿಯಲ್ಲಿ ಜಾರಿಗೊಳಿಸಿದ ಯೋಜನೆಯಂತೆಯೇ ಇತ್ತು. ಇದಕ್ಕೂ ಮೊದಲು, ಪಂಜಾಬ್‌ನ ಗ್ರಾಹಕರು ದೇಶದಲ್ಲೇ ಅತ್ಯಂತ ದುಬಾರಿ ವಿದ್ಯುತ್ ಪಡೆಯುತ್ತಿದ್ದರು.

  ದೀರ್ಘ ವಿದ್ಯುತ್ ಕಡಿತ

  ಪ್ರತಿ ಮನೆಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸುವುದು ಪಂಜಾಬ್ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಆಪ್ ನೀಡಿದ ಪ್ರಮುಖ ಭರವಸೆಗಳಲ್ಲಿ ಒಂದಾಗಿತ್ತು.

  ಇದನ್ನೂ ಓದಿ: BJPಯಿಂದ ಮೊಟ್ಟ ಮೊದಲ ಹಲಾಲ್ ಆದ ವ್ಯಕ್ತಿ Eshwarappa: ಜಾರಕಿಹೊಳಿ ವ್ಯಂಗ್ಯ ; ಇತ್ತ ಡಿಕೆಶಿ-ಸಿ.ಟಿ.ರವಿ ನಡ್ವೆ ಟಾಕ್ ವಾರ್

  ಭರವಸೆ ನೀಡುವ ವೇಳೆ ಮಾತನಾಡಿದ್ದ ಎಎಪಿ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಯ ಹೊರತಾಗಿಯೂ, ದೀರ್ಘ ವಿದ್ಯುತ್ ಕಡಿತವನ್ನು ವಿಧಿಸಲಾಗುತ್ತದೆ ಮತ್ತು ಅನೇಕ ಜನರು ದೊಡ್ಡ ಮೊತ್ತದ ಬಿಲ್ ಗಳನ್ನು ಪಡೆಯುತ್ತಾರೆ ಎಂದು ಹೇಳಿದ್ದರು.

  ತಪ್ಪು ತಪ್ಪು ಬಿಲ್, ಇದಕ್ಕೇನು ಪರಿಹಾರ

  ಪಂಜಾಬ್ ನ ಹೆಚ್ಚಿನ ಗ್ರಾಮದಲ್ಲಿ "ತಪ್ಪಾದ" ವಿದ್ಯುತ್ ಬಿಲ್ ಗಳನ್ನು ಪಡೆದವರಿದ್ದಾರೆ. ಬಿಲ್ ಪಾವತಿ ಮಾಡದ ಇಂಥ ಮನೆಗಳ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಲಾಗಿದೆ. ಇದೇ ಕಾರಣದಿಂದಾಗಿ ಇವರುಗಳು ವಿದ್ಯುತ್ ಕಳ್ಳತನಕ್ಕೆ ಇಳಿದಿದ್ದರು ಎಂದು ಕೇಜ್ರಿವಾಲ್ ಹೇಳಿಕೆ ನೀಡಿದ್ದರು. ದೆಹಲಿಯಲ್ಲಿ, ಎಎಪಿ ಸರ್ಕಾರವು ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದೆ.

  ಇದನ್ನೂ ಓದಿ: Just Escape: ವೇದಿಕೆಗೆ ಬಿದ್ದ ಕಬ್ಬಿಣದ ರಚನೆ, ಕೇಂದ್ರ ಸಚಿವರು ಜಸ್ಟ್ ಬಚಾವ್, 1 ಸಾವು ನಾಲ್ವರು ಗಾಯ

  ರೇಷನ್​ಗೆ ಹೋಗೋದೆ ಬೇಡ, ರೇಷನ್ ಮನೆಗೆ ಬರುತ್ತೆ

  ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕಳೆದ ತಿಂಗಳು ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆಯನ್ನು ಘೋಷಿಸಿದರು, ಇದು ಚುನಾವಣೆಯಲ್ಲಿ ಎಎಪಿಯ ಪ್ರಮುಖ ಪ್ರಚಾರ ಕಾರ್ಯಸೂಚಿಯಾಗಿತ್ತು. ಮಾರ್ಚ್ 19 ರಂದು, ಭಗವಂತ್ ಮಾನ್ ಅವರು ತಮ್ಮ ಮೊದಲ ಕ್ಯಾಬಿನೆಟ್ ಸಭೆಯ ಮೊದಲ ನಿರ್ಧಾರದಲ್ಲಿ, ಪೊಲೀಸ್ ಇಲಾಖೆಯಲ್ಲಿ 10,000 ಸೇರಿದಂತೆ ವಿವಿಧ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ 25,000 ಉದ್ಯೋಗಗಳ ನೋಟಿಫಿಕೇಶನ್ ಅನ್ನು ಪ್ರಕಟಿಸಿದ್ದರು.
  Published by:Divya D
  First published: