National Party Status: ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದ ಎಎಪಿ, ಸ್ಥಾನಮಾನ ಕಳೆದುಕೊಂಡ ಟಿಎಂಸಿ!

ರಾಷ್ಟ್ರೀಯ ಪಕ್ಷವಾದ  ಎಎಪಿ, ಸ್ಥಾನಮಾನ ಕಳೆದುಕೊಂಡ ಟಿಎಂಸಿ-ಎನ್​ಸಿಪಿ

ರಾಷ್ಟ್ರೀಯ ಪಕ್ಷವಾದ ಎಎಪಿ, ಸ್ಥಾನಮಾನ ಕಳೆದುಕೊಂಡ ಟಿಎಂಸಿ-ಎನ್​ಸಿಪಿ

ಕೇಂದ್ರ ಚುನಾವಣಾ ಆಯೋಗದ ಈ ನಿರ್ಧಾರದ ನಂತರ, ದೇಶದಲ್ಲಿ ಕೇವಲ ಆರು ರಾಷ್ಟ್ರೀಯ ಪಕ್ಷಗಳಿವೆ. ಬಿಜೆಪಿ ಕಾಂಗ್ರೆಸ್, ಸಿಪಿಎಂ, ಬಹುಜನ ಸಮಾಜ ಪಕ್ಷ, ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಹಾಗೂ ಹೊಸದಾಗಿ ಆಮ್ ಆದ್ಮಿ ಪಕ್ಷ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

  • News18 Kannada
  • 2-MIN READ
  • Last Updated :
  • New Delhi, India
  • Share this:

ನವದೆಹಲಿ: ಲೋಕಸಭಾ ಚುನಾವಣೆ (Lok Sabha) ಹತ್ತಿರ ಬರುತ್ತಿದ್ದಂತೆ ಚುನಾವಣಾ ಆಯೋಗ (Election Commission of India) ಕೆಲವು ಪಕ್ಷಗಳಿಗೆ ಶಾಕ್​ ಕೊಟ್ಟಿದೆ. ಕಳೆದ ಕೆಲವು ವರ್ಷಗಳಿಂದ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು (National Party Status) ಪಡೆದುಕೊಂಡಿದ್ದ ಮೂರು ಪಕ್ಷಗಳನ್ನು ಈ ಪಟ್ಟಿಯಿಂದ ಹೊರಬಿದ್ದಿವೆ. ಪಶ್ಚಿಮ ಬಂಗಾಳದಲ್ಲಿ ಆಡಳಿತ ಪಕ್ಷವಾದ ತೃಣಮೂಲ ಕಾಂಗ್ರೆಸ್ (Trinamool Congress), ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (Nationalist Congress Party) ಮತ್ತು ಸಿಪಿಐ (Communist Party of India) ತಮ್ಮ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡಿವೆ. ಈ ಮೂರೂ ಪಕ್ಷಗಳಿಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ತೆಗೆದುಹಾಕಲು ಕೇಂದ್ರ ಚುನಾವಣಾ ಆಯೋಗ ನಿರ್ಧಾರ ಕೈಗೊಂಡಿದೆ.


ಇದೇ ಸಂದರ್ಭದಲ್ಲಿ ಇತ್ತೀಚೆಗೆ ಹಲವು ರಾಜ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ (Aam Aadmi Party) ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡುವ ನಿರ್ಧಾರವನ್ನು ಕೇಂದ್ರ ಚುನಾವಣಾ ಆಯೋಗ ಕೈಗೊಂಡಿದೆ. ಕಳೆದ ವಾರ ಕರ್ನಾಟಕ ಹೈಕೋರ್ಟ್ ಏಪ್ರಿಲ್ 13 ರೊಳಗೆ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಪಕ್ಷ ಸ್ಥಾನಮಾನದ ಬಗ್ಗೆ ಸೂಕ್ತ ಆದೇಶಗಳನ್ನು ಹೊರಡಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.


ಇದನ್ನೂ ಓದಿ: Assembly Election 2023: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲ್ಲಲು ಒಳ್ಳೆಯ ಅವಕಾಶವಿದೆ: ಶರದ್ ಪವಾರ್


2019ರ ಚುನಾವಣೆ ಬಳಕ ನೋಟಿಸ್​ ನೀಡಿದ್ದ ಇಸಿ


2019ರ ಲೋಕಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನಂತರ ಏಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಬೇಕು ಎಂದು ವಿವರಣೆ ಕೇಳಿ, 2019 ಜುಲೈನಲ್ಲಿ ಎನ್​ಸಿಪಿ, ಟಿಎಂಸಿ ಮತ್ತು ಸಿಪಿಐ ಪಕ್ಷಗಳಿಗೆ ಆಯೋಗ ನೋಟಿಸ್ ನೀಡಿತ್ತು. ಚುನಾವಣಾ ಚಿಹ್ನೆಗಳು (ಮೀಸಲಾತಿ ಮತ್ತು ಹಂಚಿಕೆ) ಆದೇಶ 1968ರ ಪ್ಯಾರಾ 6 ಬಿ ಅಡಿಯಲ್ಲಿ ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಮಾನ್ಯತೆ ಪಡೆದ ಪಕ್ಷವಾಗಿದ್ದರೆ ರಾಷ್ಟ್ರೀಯ ಪಕ್ಷವೆಂದು ಪರಿಗಣಿಸಲು ಅರ್ಹವಾಗಿದೆ. ಆದರೆ ಈ ಪಕ್ಷಗಳು ಒಂದು ಅಥವಾ ಎರಡು ರಾಜ್ಯಗಳಿಗೆ ಸೀಮಿತವಾಗಿದ್ದರಿಂದ ರಾಷ್ಟ್ರೀಯ ಸ್ಥಾನಮಾನ ಕಳೆದುಕೊಂಡಿದೆ.




ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆಯಲು ಬೇಕಾದ ಅರ್ಹತೆಗಳೇನು


ನಿಯಮಗಳ ಪ್ರಕಾರ, ಒಂದು ಪಕ್ಷವನ್ನು ರಾಷ್ಟ್ರೀಯ ಪಕ್ಷವೆಂದು ಗುರುತಿಸಲು, ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಅಥವಾ ಲೋಕಸಭೆಯಲ್ಲಿ 2% ಸ್ಥಾನಗಳನ್ನು ಪಡೆಯಬೇಕು. ಆಗ ಮಾತ್ರ ಅದು ರಾಷ್ಟ್ರೀಯ ಪಕ್ಷವಾಗಿ ಗುರುತಿಸಲ್ಪಡುತ್ತದೆ. ಒಮ್ಮೆ ಪಕ್ಷವು ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡರೆ, ಬೇರೆ ರಾಜ್ಯಗಳಲ್ಲಿ ಪಕ್ಷ ತನ್ನ ಅಭ್ಯರ್ಥಿಗಳಿಗೆ ಸಾಮಾನ್ಯ ಚಿಹ್ನೆಯನ್ನು ನೀಡಲು ಸಾಧ್ಯವಿಲ್ಲ. ಉದಾಹರಣಗೆ ಟಿಎಂಸಿ ಕರ್ನಾಟಕದಲ್ಲಿ ಅಭ್ಯರ್ಥಿಗಳನ್ನು ಸ್ಪರ್ಧಿಸಲು ಆಯ್ಕೆ ಮಾಡಿದರೆ ಚುನಾವಣೆಯಲ್ಲಿ ಆ ಪಕ್ಷದ ಚಿಹ್ನೆಯನ್ನು ಬಳಸುವಂತಿಲ್ಲ.


ದೇಶದಲ್ಲಿ 6 ರಾಷ್ಟ್ರೀಯ ಪಕ್ಷಗಳು


ಇನ್ನು ಕೇಂದ್ರ ಚುನಾವಣಾ ಆಯೋಗದ ಈ ನಿರ್ಧಾರದ ನಂತರ, ದೇಶದಲ್ಲಿ ಕೇವಲ ಆರು ರಾಷ್ಟ್ರೀಯ ಪಕ್ಷಗಳಿವೆ. ಬಿಜೆಪಿ ಕಾಂಗ್ರೆಸ್, ಸಿಪಿಎಂ, ಬಹುಜನ ಸಮಾಜ ಪಕ್ಷ, ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಜೊತೆಗೆ ಆಮ್ ಆದ್ಮಿ ಪಕ್ಷಗಳು ಇತ್ತೀಚೆಗೆ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.


ಎಎಪಿಗೆ ರಾಷ್ಟ್ರೀಯ ಪಕ್ಷ ಸ್ಥಾನಮಾನ

top videos


    ಇನ್ನು ಆಮ್​ ಆದ್ಮಿ ದೆಹಲಿ ಮತ್ತು ಪಂಜಾಬ್‌ನಲ್ಲಿ ದೊಡ್ಡ ಬಹುಮತ ಮತ್ತು ಅತಿ ದೊಡ್ಡ ಮತ ಹಂಚಿಕೆಗಳೊಂದಿಗೆ ಎಎಪಿ ಅಧಿಕಾರ ಪಡೆದುಕೊಂಡಿದೆ. ಅಲ್ಲದೇ ಮಾರ್ಚ್​ನಲ್ಲಿ ನಡೆದ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಶೇ. 6.77ರಷ್ಟು ಮತಗಳನ್ನು ಪಡೆದಿತ್ತು. ಕಳೆದ ವರ್ಷ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲೂ ಎಎಪಿ ಐದು ಸ್ಥಾನಗಳನ್ನು ಗೆಲ್ಲುವ ಮೂಲಕ ಉತ್ತಮ ಆರಂಭ ಪಡೆದುಕೊಂಡಿದೆ.

    First published: