Punjab Elections: ನಾಳೆ‌ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ ಘೋಷಣೆ

ಪಂಜಾಬ್​ನಲ್ಲಿ ಚುನಾವಣಾ ನಾಮಪತ್ರ ಸಲ್ಲಿಕೆ 25 ಜನವರಿಯಿಂದ ಆರಂಭವಾಗಲಿದ್ದು, ನಾಮಪತ್ರ ಸಲ್ಲಿಕೆಗೆ ಫೆಬ್ರವರಿ 1 ಕಡೆಯ ದಿನವಾಗಿದೆ. ನಾಮಪತ್ರ ಹಿಂಪಡೆಯಲು ಫೆಬ್ರವರಿ 4 ಕಡೆಯ ದಿನಾಂಕವಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನವದೆಹಲಿ, ಜ. 17: ಸಂಪೂರ್ಣ ರಾಜ್ಯದ ಸ್ಥಾನಮಾನ (State wood) ಇರುವ  ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕೆಂದು ಐದಾರು ವರ್ಷಗಳಿಂದ ಕನಸು ಕಾಣುತ್ತಿರುವ ಆಮ್ ಆದ್ಮಿ ಪಕ್ಷ (Aam Admi Party) ನಾಳೆ ಪಂಜಾಬಿನಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು (Chief Minister Candidate) ಘೋಷಣೆ ಮಾಡಲಿದೆ. ದೆಹಲಿಯ ಮುಖ್ಯಮಂತ್ರಿಯೂ ಆದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ (Dehli CM and Aam Admi Party National Convener Aravind Kejriwal) ಅವರು ನಾಳೆ ಮಧ್ಯಾಹ್ನ 12 ಗಂಟೆಗೆ ಮೊಹಾಲಿಯಲ್ಲಿ ತಮ್ಮ ಪಕ್ಷದ ಪಂಜಾಬಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಮಾನ್ ಮತ್ತು ಚೀಮಾ ನಡುವೆ ಸ್ಪರ್ಧೆ

ಆಮ್ ಆದ್ಮಿ ಪಕ್ಷದ ಪಂಜಾಬ್ ಘಟಕದ ಅಧ್ಯಕ್ಷ ಹಾಗೂ ಸಂಗ್ರುರ್ ಕ್ಷೇತ್ರದ ಸಂಸದ ಭಗವಂತ ಮಾನ್ ಹಾಗೂ ಪಂಜಾಬ್ ವಿರೋಧ ಪಕ್ಷದ ನಾಯಕ ಹರ್ಪಾಲ್ ಚೀಮಾ ನಡುವೆ ಮುಖ್ಯಮಂತ್ರಿ ಅಭ್ಯರ್ಥಿ ಆಗಲು ತೀವ್ರ ಸ್ಪರ್ಧೆ ಇದೆ. ಭಗವಂತ ಮಾನ್ ಮತ್ತು ಹರ್ಪಾಲ್ ಚೀಮಾ ಇಬ್ಬರು ಕೂಡ  ಸ್ಥಳೀಯವಾಗಿ ತಮ್ಮದೇಯಾದ ಪ್ರಭಾವ ಹೊಂದಿದ್ದಾರೆ.

ಇದನ್ನೂ ಓದಿ: ರಾಜಕೀಯ ಪಕ್ಷಗಳ ಬೇಡಿಕೆ ಹಿನ್ನಲೆ Punjab Election ದಿನಾಂಕ ಮುಂದೂಡಿಕೆ; ಫೆ 20ಕ್ಕೆ ಮತದಾನ

ಈ ನಡುವೆ ಸಂಪೂರ್ಣ ರಾಜ್ಯದ ಸ್ಥಾನಮಾನ ಇರುವ ರಾಜ್ಯಕ್ಕೆ ಮುಖ್ಯಮಂತ್ರಿ ಆಗಬೇಕು ಎಂದು ಕನಸು ಕಾಣುತ್ತಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಕೂಡ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಪ್ರಯತ್ನಿಸುತ್ತಿದ್ದರು‌. ಈಗ ಬಹುತೇಕ ಅರವಿಂದ ಕೇಜ್ರಿವಾಲ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದು ಭಗವಂತ ಮಾನ್ ಹಾಗೂ ಹರ್ಪಾಲ್ ಚೀಮಾ ಇಬ್ಬರಲ್ಲಿ ಒಬ್ಬರು ಆಮ್ ಆದ್ಮಿ ಪಕ್ಷದ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಆಗುವ ಸಾಧ್ಯತೆಗಳಿವೆ.

ಪಂಜಾಬ್ ಚುನಾವಣೆ ಮುಂದೂಡಿಕೆ

ಪಂಜಾಬ್​ ವಿಧಾನಸಭಾ ಚುನಾವಣಾ ದಿನಾಂಕವನ್ನು ಮುಂದೂಡಿ ಕೇಂದ್ರ ಚುನಾವಣಾ ಆಯೋಗ ಸೋಮವಾರ ಹೊಸ ದಿನಾಂಕ ಪ್ರಕಟಿಸಿದೆ. ಈ ಹಿಂದೆ ನಿಗದಿಪಡಿಸಿದ್ದ ಫೆಬ್ರವರಿ 14ರ ಬದಲು ಫೆಬ್ರವರಿ 20ರಂದು ಪಂಜಾಬ್​​​ನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಸಲು ನಿರ್ಧರಿಸಿದೆ. ಗುರು ರವಿದಾಸ್​ ಜಯಂತಿ ಹಿನ್ನಲೆಯಲ್ಲಿ ಚುನಾವಣೆಯನ್ನು ಮುಂದೂಡುವಂತೆ ಆಡಳಿತಾರೂಢ ಕಾಂಗ್ರೆಸ್​, ಬಿಜೆಪಿ ಸೇರಿದಂತೆ ಸ್ಥಳೀಯ ಪಕ್ಷಗಳು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದವು. ಅದರಂತೆ ಚುನಾವಣಾ ದಿನಾಂಕವನ್ನು ಮರು ಪರಿಶೀಲಿಸಿದ ಕೇಂದ್ರ ಚುನಾವಣಾ ಆಯೋಗ ಮತದಾನದ ದಿನಾಂಕವನ್ನು ಫೆಬ್ರವರಿ 20ಕ್ಕೆ ನಿಗದಿ ಮಾಡಿದೆ ಆದೇಶ ಹೊರಡಿಸಿದೆ.

ಗುರು ರವಿದಾಸ್​ ಜಯಂತಿ ಆಚರಣೆ ಹಿನ್ನಲೆ

ಪಂಜಾಬಿನಲ್ಲಿ ಗುರು ರವಿದಾಸ್​ ಜಯಂತಿ ಅತ್ಯಂತ ದೊಡ್ಡ ಆಚರಣೆ. ಗುರು ರವಿದಾಸ್ ಜಯಂತಿ ವೇಳೆ ಪಂಜಾಬಿನ ಲಕ್ಷಾಂತರ ಜನ ಉತ್ತರ ಪ್ರದೇಶದ ವಾರಣಾಸಿಗೆ ತೆರಳುತ್ತಾರೆ. ಈ ಹಿನ್ನಲೆಯಲ್ಲಿ ಮತದಾನದ ಸಂಖ್ಯೆ ಇಳಿಕೆಯಾಗುವ ಸಾಧ್ಯತೆ ಇದೆ. ಈ ಕಾರಣದಿಂದ ದಿನಾಂಕಗಳನ್ನು ಮರುಪರಿಶೀಲನೆ ಮಾಡುವಂತೆ ಮುಖ್ಯಮಂತ್ರಿ ಚರಣಜಿತ್ ಚನ್ನಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಅದರಂತೆ ಇದೀಗ ಹೊಸ ದಿನಾಂಕ ಪ್ರಕಟಿಸಲಾಗಿದೆ.

ನಾಮಪತ್ರ ದಿನಾಂಕವೂ ಬದಲು

ಪಂಜಾಬ್​ನಲ್ಲಿ ಚುನಾವಣಾ ನಾಮಪತ್ರ ಸಲ್ಲಿಕೆ 25 ಜನವರಿಯಿಂದ ಆರಂಭವಾಗಲಿದ್ದು, ನಾಮಪತ್ರ ಸಲ್ಲಿಕೆಗೆ ಫೆಬ್ರವರಿ 1 ಕಡೆಯ ದಿನವಾಗಿದೆ. ನಾಮಪತ್ರ ಹಿಂಪಡೆಯಲು ಫೆಬ್ರವರಿ 4 ಕಡೆಯ ದಿನಾಂಕವಾಗಿದೆ. ಮತದಾನ ಫೆಬ್ರವರಿ 20ರ ಭಾನುವಾರ ನಡೆಯಲಿದ್ದು, ಮತದಾನ ಮಾರ್ಚ್ 10ರಂದು ಮಂಗಳವಾರ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದನ್ನೂ ಓದಿ: ಪಂಜಾಬ್​ ಚುನಾವಣೆ: ಕಡೆಗೂ ಬಿಜೆಪಿ ಜೊತೆ ಕೈಜೋಡಿಸಿದ ಕ್ಯಾಪ್ಟನ್ ಅಮರೀಂದರ್ ಸಿಂಗ್

ಬನರಾಸ್​​ಗೆ ತೆರಳಲಿರುವ ಭಕ್ತರು

ಗುರು ರವಿದಾಸ್​ ಜಯಂತಿ ಆಚರಣೆಗಾಗಿ ರಾಜ್ಯದ ಪರಿಶಿಷ್ಠ ಜಾತಿ ಸಮುದಾಯದ ಭಕ್ತರು ವಾರಣಾಸಿಗೆ ಭೇಟಿನೀಡುವ ಸಾಧ್ಯತೆ ಇದೆ. ಫೆಬ್ರವರ 10 ರಿಂದ 16ರವರೆಗೆ ಅವರು ಪ್ರವಾಸ ಕೈಗೊಳ್ಳಲಿದ್ದಾರೆ. ರಾಜ್ಯದ ಸುಮಾರು 20 ಲಕ್ಷ ಪರಿಶಿಷ್ಟ ಜಾತಿ ಸಮುದಾಯ ಈ ಪ್ರವಾಸ ನಡೆಸುವ ಸಾಧ್ಯತೆ ಇದೆ. ಪರಿಶಿಷ್ಟ ಜಾತಿಗಳ ಸಮುದಾಯವು ಪಂಜಾಬ್‌ನ ಜನಸಂಖ್ಯೆಯ 32 ಪ್ರತಿಶತವನ್ನು ಒಳಗೊಂಡಿದೆ. ಈ ಸಮುದಾಯದ ಅನೇಕ ಜನರು ರಾಜ್ಯ ವಿಧಾನಸಭೆಗೆ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ, ಮತದಾನ ಅವ ಸಾಂವಿಧಾನಿಕ ಹಕ್ಕು ಈ ಹಿನ್ನಲೆ ಮತದಾನದ ದಿನಾಂಕ ಮುಂದೂಡುವಂತೆ ಸಿಎಂ ಚನ್ನಿ ಪತ್ರದ ಮೂಲಕ ಆಯೋಗಕ್ಕೆ ಮನವಿ ಮಾಡಿದ್ದರು.
Published by:Soumya KN
First published: