• Home
  • »
  • News
  • »
  • national-international
  • »
  • Uttar Pradesh: ದೆಹಲಿ ಗೆದ್ದಾಯ್ತು, ಮುಂದಿನ ಗುರಿ ಉತ್ತರ ಪ್ರದೇಶ! ಆಪ್ ನಾಯಕರ ತಯಾರಿ ಹೀಗಿದೆ ನೋಡಿ

Uttar Pradesh: ದೆಹಲಿ ಗೆದ್ದಾಯ್ತು, ಮುಂದಿನ ಗುರಿ ಉತ್ತರ ಪ್ರದೇಶ! ಆಪ್ ನಾಯಕರ ತಯಾರಿ ಹೀಗಿದೆ ನೋಡಿ

ಅರವಿಂದ್ ಕೇಜ್ರಿವಾಲ್‌

ಅರವಿಂದ್ ಕೇಜ್ರಿವಾಲ್‌

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮೂಲಸೌಕರ್ಯ ಮತ್ತು ಸೌಲಭ್ಯಗಳ ಕೊರತೆಯ ಬಗ್ಗೆ ಆಪ್ ಪಕ್ಷವು ಯೋಗಿ ಆದಿತ್ಯನಾಥ್ ಸರ್ಕಾರವನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.

  • Share this:

ಈ ವರ್ಷದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (MCD) ಚುನಾವಣೆಯ ಫಲಿತಾಂಶವು ಅನೇಕರ ರಾಜಕೀಯ ಪಕ್ಷಗಳ ಊಹೆಗಳನ್ನು ಸುಳ್ಳು ಮಾಡಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ, ಎಂಸಿಡಿ ಚುನಾವಣೆಯಲ್ಲಿ (MCD Election Results) ಸುಮಾರು 15 ವರ್ಷಗಳಿಂದ ಭಾರತೀಯ ಜನತಾ ಪಾರ್ಟಿ (BJP) ಅಧಿಕಾರದಲ್ಲಿತ್ತು ಅಂತ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ ಈ ಬಾರಿಯ ಎಂಸಿಡಿ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ (AAP) ಪಕ್ಷ ಗೆಲುವು ಸಾಧಿಸುವ ಮೂಲಕ ಕಳೆದ ಬುಧವಾರ ಇತಿಹಾಸ ನಿರ್ಮಿಸಿದೆ.


ಇದು ಬಿಜೆಪಿಯ 15 ವರ್ಷಗಳ ಆಡಳಿತವನ್ನು ಕೊನೆಗೊಳಿಸಿದೆ ಅಂತಾನೆ ಹೇಳಬಹುದು. ಈ ಚುನಾವಣೆಯಲ್ಲಿ ಆಪ್ ಪಕ್ಷವು 134 ವಾರ್ಡ್ ಗಳನ್ನು ಗೆದ್ದುಕೊಂಡಿತು.


ಬಿಜಪಿ ಕಾಂಗ್ರೆಸ್​ಗೆ ಸೋಲುಣಿಸಿದ ಆಪ್
ಬಿಜೆಪಿ 104, ಕಾಂಗ್ರೆಸ್ 9 ಮತ್ತು ಪಕ್ಷೇತರ ಅಭ್ಯರ್ಥಿಗಳು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಎಂಸಿಡಿ ಸುಮಾರು 250 ವಾರ್ಡ್ ಗಳನ್ನು ಹೊಂದಿದೆ. ಸರಳ ಬಹುಮತ ಪಡೆಯಲು 126 ಸ್ಥಾನಗಳ ಅಗತ್ಯವಿತ್ತು. 2007 ರಿಂದ ದೆಹಲಿ ಎಂಸಿಡಿಯಲ್ಲಿ ಬಿಜೆಪಿ ಪಕ್ಷವು ಅಧಿಕಾರದಲ್ಲಿತ್ತು. ಈ ಹಿಂದೆ ಎಂದರೆ 2017ರಲ್ಲಿ ನಡೆದ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ 270 ವಾರ್ಡ್​ಗಳ ಪೈಕಿ 181 ವಾರ್ಡ್​ಗಳನ್ನು ಗೆಲ್ಲುವ ಮೂಲಕ ಆಮ್ ಆದ್ಮಿ ಪಾರ್ಟಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳನ್ನು ಸೋಲಿಸಿತ್ತು.


ದೆಹಲಿಯ ಮೂರು ನಿಗಮಗಳಾದ ಎನ್‌ಡಿಎಂಸಿ, ಎಸ್‌ಡಿಎಂಸಿ ಮತ್ತು ಇಡಿಎಂಸಿಯನ್ನು ಎಂಸಿಡಿಗೆ ಸೇರಿಸಿದ ನಂತರ ದೆಹಲಿಯಲ್ಲಿ ನಡೆಯುತ್ತಿರುವ ಮೊದಲ ಪಾಲಿಕೆ ಚುನಾವಣೆಯಾಗಿದೆ.


ಯುಪಿ ಪಾಲಿಕೆ ಚುನಾವಣೆ ಮೇಲೆ ಕಣ್ಣಿಟ್ಟ ಆಪ್
ಎಂಸಿಡಿ ಚುನಾವಣೆಯಲ್ಲಿ ಅದ್ಭುತ ಗೆಲುವು ದಾಖಲಿಸಿದ ನಂತರ, ಈಗ ಆಮ್ ಆದ್ಮಿ ಪಕ್ಷ ಅಷ್ಟಕ್ಕೆ ಸಂತೃಪ್ತರಾಗದೆ ಉತ್ತರ ಪ್ರದೇಶದಲ್ಲಿ ಮುಂಬರುವ ನಗರ ಮುನ್ಸಿಪಲ್ ಚುನಾವಣೆಯಲ್ಲಿ ಸ್ಪರ್ಧಿಸಲು ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ.


ಚುನಾವಣೆಯಲ್ಲಿ ಎಲ್ಲಾ ಮೇಯರ್ ಸ್ಥಾನಗಳು, ನಾಗರಿಕ ಸಂಸ್ಥೆಗಳ ವಾರ್ಡ್ ಗಳು ಮತ್ತು ನಗರ ಪಂಚಾಯತ್ ಸ್ಥಾನಗಳಿಗೆ ಪಕ್ಷವು ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಆಪ್ ನಾಗರಿಕ ಚುನಾವಣೆಯ ರಾಜ್ಯ ಉಸ್ತುವಾರಿ ಸಭಾಜಿತ್ ಸಿಂಗ್ ಹೇಳಿದ್ದಾರೆ.


ಇದನ್ನೂ ಓದಿ:  Royal Navy Team: ನೌಕಾಸೇನೆಯ ಸಾಹಸ, ಹಿಮದಲ್ಲಿ ಮುಚ್ಚಿ ಹೋದ ವಿಶ್ವದ ಅತ್ಯಂತ ದೂರದ ಅಂಚೆ ಕಚೇರಿ ಪತ್ತೆ!


"ಎಂಸಿಡಿ ಚುನಾವಣೆಯಲ್ಲಿ ಜನರು ಆಮ್ ಆದ್ಮಿ ಪಕ್ಷವನ್ನು ಅಧಿಕಾರಕ್ಕೆ ತರಲು ಮತ ಚಲಾಯಿಸಿದರು. ಗುಜರಾತ್​ನಲ್ಲಿ, ನಾವು ನಮ್ಮ ಉಪಸ್ಥಿತಿಯನ್ನು ದಾಖಲಿಸಲು ಸಾಧ್ಯವಾಯಿತು. ಇದೀಗ ನಮ್ಮ ಪಕ್ಷವು ಉತ್ತರ ಪ್ರದೇಶ ನಾಗರಿಕ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿದೆ" ಎಂದು ಅವರು ಹೇಳಿದರು.


ಇದನ್ನೂ ಓದಿ:  Pope Francis: ಉಕ್ರೇನ್ ಜನತೆಯ ಸ್ಥಿತಿ ನೆನೆದು ಕಣ್ಣೀರಾದ ಪೋಪ್ ಫ್ರಾನ್ಸಿಸ್, ಎಲ್ಲರಿಗೂ ಒಂದು ವಿಶೇಷ ಮನವಿ ಮಾಡಿದ ಧರ್ಮಗುರು


ಪಕ್ಷವು, ಈಗಾಗಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪ್ರಾರಂಭಿಸಿದೆ. ನವೆಂಬರ್ 20 ಮತ್ತು 30 ರ ನಡುವೆ, ಉತ್ತರಪ್ರದೇಶದಾದ್ಯಂತ ಪಕ್ಷದ ಕಾರ್ಯಕರ್ತರ 800 ಸಭೆಗಳನ್ನು ಆಯೋಜಿಸಿದೆ. "ಗಂದಗಿ ಹಟಾವೋ, ಜಾಡು ಲಗಾವೋ" ಅಭಿಯಾನದೊಂದಿಗೆ ಪಕ್ಷವು ನಗರ ಪಂಚಾಯಿತಿಗಳಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಲು ನೋಡುತ್ತಿದೆ. ಅಂತಹ ಹೆಚ್ಚಿನ ಸಭೆಗಳನ್ನು ನಡೆಸಲು ಇನ್ನೂ 77 ಪದಾಧಿಕಾರಿಗಳನ್ನು ಹೆಚ್ಚಿಗೆ ನೇಮಿಸಿದೆ


ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳ ಕೊರತೆಯನ್ನು ಎತ್ತಿ ತೋರಿಸಲು ಸಿದ್ಧತೆ
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮೂಲಸೌಕರ್ಯ ಮತ್ತು ಸೌಲಭ್ಯಗಳ ಕೊರತೆಯ ಬಗ್ಗೆ ಆಪ್ ಪಕ್ಷವು ಯೋಗಿ ಆದಿತ್ಯನಾಥ್ ಸರ್ಕಾರವನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ದೆಹಲಿಯಲ್ಲಿ ಎಂಸಿಡಿ ವಿಜಯದ ನಂತರ, ಯುಪಿ ಮುನ್ಸಿಪಲ್ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ಅರ್ಜಿದಾರರಲ್ಲಿ ಹೆಚ್ಚಳವಾಗಿದೆ ಎಂದು ಆಪ್ ನಾಯಕರು ಹೇಳಿದರು.


"ನಾವು ಅಭ್ಯರ್ಥಿಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸುತ್ತಿದ್ದೇವೆ ಮತ್ತು ಪಕ್ಷಕ್ಕೆ ನಿಷ್ಠವಾಗಿ ಕೆಲಸ ಮಾಡಿರುವ ಮತ್ತು ಪ್ರಾಮಾಣಿಕತೆಯ ಆಧಾರದ ಮೇಲೆ ಫೈನಲ್ ಲಿಸ್ಟ್ ಅನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ" ಎಂದು ನಾಯಕರೊಬ್ಬರು ಹೇಳಿದರು.

Published by:ಗುರುಗಣೇಶ ಡಬ್ಗುಳಿ
First published: