Aaditya Thackeray: ಮಸೀದಿಯಲ್ಲಿ ಆಝಾನ್ ಸಂದರ್ಭ ಭಾಷಣ ನಿಲ್ಲಿಸಿದ ಆದಿತ್ಯ ಠಾಕ್ರೆ!

ಮಾಜಿ ಸಚಿವ ಆದಿತ್ಯ ಠಾಕ್ರೆ ಅವರು ಆಝಾನ್ ಸಮಯದಲ್ಲಿ ತಮ್ಮ ಭಾಷಣವನ್ನು (Speech) ಕೆಲವು ನಿಮಿಷಗಳ ಕಾಲ ವಿರಾಮಗೊಳಿಸಿದ ವೀಡಿಯೊ (Video) ಸಾಮಾಜಿಕ ಮಾಧ್ಯಮದಲ್ಲಿ (Social Media) ಹೊರಹೊಮ್ಮಿದೆ ಮತ್ತು ವೈರಲ್ (Viral) ಆಗುತ್ತಿದೆ.

ಆದಿತ್ಯ ಠಾಕ್ರೆ

ಆದಿತ್ಯ ಠಾಕ್ರೆ

  • Share this:
ಮುಂಬೈ(ಜು.31): ಮಹಾರಾಷ್ಟ್ರದಲ್ಲಿ ದೊಡ್ಡ ರಾಜಕೀಯ ಬದಲಾವಣೆ ನಂತರವೂ ಉದ್ಧವ್ ಠಾಕ್ರೆ ಹಾಗೂ ಆದಿತ್ಯ ಠಾಕ್ರೆ (Aaditya Thackeray) ಹಿಂದಿನಂತೆಯೇ ಮುಂದುವರಿಯುತ್ತಿದ್ದಾರೆ. ತಮ್ಮದೇ ಪಕ್ಷದ ಪಕ್ಷ ನಿಷ್ಠರಿಂದಲೇ ವಂಚಿಸಲ್ಪಟ್ಟ ನಂತರವೂ ಅವರು ಸದೃಢವಾಗಿ ನಿಂತಿರುವುದನ್ನು ಕಾಣಬಹುದು. ಏಕನಾಥ್​ ಶಿಂಧೆ (Eknath Shindhe) ಸರ್ಕಾರ ರಚಿಸಿದ ನಂತರ ತಂದೆ ಹಾಗೂ ಮಗ ಸೈಡ್​ಲೈನ್ ಆದರೂ ಇನ್ನೂ ಅವರನ್ನು ಬೆಂಬಲಿಸುವ ಒಂದಷ್ಟು ಜನ ಅವರ ಸಾಥ್ ಬಿಟ್ಟುಕೊಟ್ಟಿಲ್ಲ. ಮಹಾರಾಷ್ಟ್ರದ (Maharastra) ಮಾಜಿ ಸಚಿವ ಆದಿತ್ಯ ಠಾಕ್ರೆ ಅವರು ಆಝಾನ್ ಸಮಯದಲ್ಲಿ ತಮ್ಮ ಭಾಷಣವನ್ನು (Speech) ಕೆಲವು ನಿಮಿಷಗಳ ಕಾಲ ವಿರಾಮಗೊಳಿಸಿದ ವೀಡಿಯೊ (Video) ಸಾಮಾಜಿಕ ಮಾಧ್ಯಮದಲ್ಲಿ (Social Media) ಹೊರಹೊಮ್ಮಿದೆ ಮತ್ತು ವೈರಲ್ (Viral) ಆಗುತ್ತಿದೆ.

'ನಿಷ್ಠಾ ಯಾತ್ರೆ'ಯ ವಿಡಿಯೋ

ಮುಂಬೈನ (Mumbai) ಚಂಡಿವಲಿಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಚಂಡಿವಲಿಗೆ ಆದಿತ್ಯ ಠಾಕ್ರೆ ಅವರ ಭೇಟಿಯು ಒಂದು ವಾರದ ಹಿಂದೆ ಅವರು ಪ್ರಾರಂಭಿಸಿದ ಅವರ 'ನಿಷ್ಠಾ ಯಾತ್ರೆ'ಯ ಭಾಗವಾಗಿತ್ತು - ಶಿವಸೇನಾ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲು ಮಹಾರಾಷ್ಟ್ರದ ವಿವಿಧ ಭಾಗಗಳಿಗೆ ಅವರು ಪ್ರಯಾಣಿಸಿದರು.

ಆಜಾನ್ ಸಮಯದಲ್ಲಿ ಮಾತು ನಿಲ್ಲಿಸಿದ ಆದಿತ್ಯ ಠಾಕ್ರೆ

ವೀಡಿಯೊದಲ್ಲಿ ಕಂಡುಬಂದಂತೆ, ಆಜಾನ್ ಪ್ರಾರಂಭವಾದಾಗ ಆದಿತ್ಯ ಠಾಕ್ರೆ ಮಾತನಾಡುತ್ತಿದ್ದರು. ಆಝಾನ್ ಮುಂದುವರೆದಂತೆ ಅವರು ಎರಡು ನಿಮಿಷಗಳ ಕಾಲ ವಿರಾಮ ತೆಗೆದುಕೊಂಡರು. ನಂತರ ಅವರು ಮತ್ತೆ ತಮ್ಮ ಭಾಷಣವನ್ನು ಮುಂದುವರೆಸಿದರು.

ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ ಠಾಕ್ರೆ ಮತ್ತು ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆಯಿಂದ ಪ್ರಚೋದಿಸಲ್ಪಟ್ಟ ಮಹಾರಾಷ್ಟ್ರದಲ್ಲಿ ಧ್ವನಿವರ್ಧಕದ ಗದ್ದಲದ ಸಂದರ್ಭದಲ್ಲಿ, ಆದಿತ್ಯ ಠಾಕ್ರೆ ವಿವಾದವನ್ನು ವಿರೋಧಿಸಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಹಿಂದಿನ ಕಾರಣಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಧ್ವನಿವರ್ಧಕಗಳನ್ನು ಬಳಸಬೇಕು ಎಂದು ಅವರು ಆ ಸಮಯದಲ್ಲಿ ಹೇಳಿದ್ದರು.

maharashtra new cm eknath shinde has to prove his majority by july 4
ಮಹಾರಾಷ್ಟ್ರ ನೂತನ ಸಿಎಂ ಏಕನಾಥ್ ಶಿಂಧೆ


ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನ ಮಾಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಬದಲಾವಣೆ. ಉದ್ಧವ್ ಠಾಕ್ರೆ ವಿರುದ್ಧ ಏಕನಾಥ್ ಶಿಂಧೆ ಅವರ ಬಂಡಾಯದ ನಂತರ, ಆದಿತ್ಯ ಠಾಕ್ರೆ ಅವರು ತಮ್ಮ ಪ್ರಚಾರ ಅಭಿಯಾನವನ್ನು ಪ್ರಾರಂಭಿಸಿದರು. ಅಲ್ಲಿ ಅವರು ಉದ್ಧವ್ ಠಾಕ್ರೆ ಅವರು ಅನಾರೋಗ್ಯದಿಂದ ಬಳಲುತ್ತಿರುವಾಗ ಹೇಗೆ ಬೆಂಬಲವಾಗಿ ನಿಲ್ಲುತ್ತಾರೆ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.

ಮತ್ತೊಂದು ಚುನಾವಣೆ ಭವಿಷ್ಯ 

ಇತ್ತೀಚಿನ ಪ್ರಚಾರದಲ್ಲಿ, ಆದಿತ್ಯ ಠಾಕ್ರೆ ಶಿಂಧೆ ಸರ್ಕಾರದ ಪತನದ ಬಗ್ಗೆ ಭವಿಷ್ಯ ನುಡಿದು ನನ್ನ ಮಾತುಗಳನ್ನು ಗುರುತಿಸಿಡಿ. ಈ ಸರ್ಕಾರ ಶೀಘ್ರದಲ್ಲೇ ಪತನಗೊಳ್ಳುತ್ತದೆ. ಮಹಾರಾಷ್ಟ್ರವು ಮಧ್ಯಂತರ ಚುನಾವಣೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ಈಗಿರುವ ಶಿವಸೇನೆ ಬಿಕ್ಕಟ್ಟಿನಲ್ಲಿ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅವರ ಸೋದರಳಿಯ ನಿಹಾರ್ ಠಾಕ್ರೆ ಅವರು ಸಿಎಂ ಏಕನಾಥ್ ಶಿಂಧೆಗೆ ಬೆಂಬಲ ನೀಡಿದ ನಂತರ ಉದ್ಧವ್ ಠಾಕ್ರೆ ಬಣ ಗಮನಾರ್ಹವಾದ ಹೊಡೆತವನ್ನು ಎದುರಿಸಿತು.

ಇದನ್ನೂ ಓದಿ: ಮ್ಯಾಟ್ರಿಮೋನಿ ಸೈಟಲ್ಲಿ ಹುಡುಗಿಯರು ಹೆಚ್ಚಾಗಿ ಹುಡುಕಿದ್ದು ಇಂಥದ್ದೇ ಹುಡುಗರನ್ನು!

“ಪೂಜ್ಯ ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆಯವರ ಮೊಮ್ಮಗ ಮತ್ತು ಬಿಂದುಮಾಧವ್ ಠಾಕ್ರೆಯವರ ಪುತ್ರ ನಿಹಾರ್ ಠಾಕ್ರೆ ಇಂದು ಸಮ್ಮಿಶ್ರ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ಘೋಷಿಸಿದರು. ಈ ಸಂದರ್ಭದಲ್ಲಿ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಲಾಯಿತು. ಅವರ ಮುಂದಿನ ಸಾಮಾಜಿಕ ಮತ್ತು ರಾಜಕೀಯ ವೃತ್ತಿಜೀವನಕ್ಕೆ ಹಾರೈಸಿದರು, ”ಎಂದು ಮಹಾರಾಷ್ಟ್ರ ಸಿಎಂ ಶುಕ್ರವಾರ ಟ್ವೀಟ್ ಮಾಡಿದ್ದಾರೆ.
Published by:Divya D
First published: