News18 India World Cup 2019

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಬಿಜೆಪಿ-ಶಿವಸೇನೆ ಮೈತ್ರಿ; ಇವರೇ ಮುಂದಿನ ಸಿಎಂ ಅಭ್ಯರ್ಥಿ?

ಇನ್ನು ಮುಂದಿನ ಸಿಎಂ ಅಭ್ಯರ್ಥಿ ಕೂಡ ತನ್ನ ಪಕ್ಷದವರೇ ಆಗಬೇಕೆಂದು ಉದ್ದೇಶವನ್ನು ಬಿಜೆಪಿ ಹೊಂದಿದೆ. ಒಂದು ವೇಳೆ ಶಿವಸೇನೆ ತನಗೇ ಸಿಎಂ ಹುದ್ದೆ ನೀಡಬೇಕೆಂದು ಪಟ್ಟು ಹಿಡಿದರೆ, ಎರಡೂ ಪಕ್ಷಗಳ ನಡುವೆ ಮತ್ತೆ ಭಿನ್ನಮತ ಶುರುವಾಗುವ ಸಾಧ್ಯತೆಯಿದೆ.

Ganesh Nachikethu | news18
Updated:June 14, 2019, 4:06 PM IST
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಬಿಜೆಪಿ-ಶಿವಸೇನೆ ಮೈತ್ರಿ; ಇವರೇ ಮುಂದಿನ ಸಿಎಂ ಅಭ್ಯರ್ಥಿ?
ಸಭೆ ವೇಳೆ ಅಮಿತ್​ ಶಾ ಹಾಗೂ ಉದ್ಧವ್​ ಠಾಕ್ರೆ ಪರಸ್ಪರ ಶುಭಾಶಯಕೋರಿಕೊಂಡರು
Ganesh Nachikethu | news18
Updated: June 14, 2019, 4:06 PM IST
ನವದೆಹಲಿ(ಜೂನ್​​.14): ವರ್ಷಾಂತ್ಯಕ್ಕೆ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ನಡೆಯಲಿದೆ. ಆಗಲೇ ಚುನಾವಣೆ ಗೆಲ್ಲಲು ಬಿಜೆಪಿ ಮತ್ತು ಶಿವಸೇನೆ ಭಾರೀ ಸರ್ಕಸ್​​ ನಡೆಸುತ್ತಿವೆ. ಉಭಯ ಪಕ್ಷಗಳು ತಲಾ 135 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದು, ಮಿತ್ರ ಪಕ್ಷಗಳಿಗೆ 18 ಸೀಟುಗಳನ್ನು ಬಿಟ್ಟುಕೊಡಲು ನಿರ್ಧರಿಸಿವೆ. ಈ ಮಧ್ಯೆ ಮೈತ್ರಿಕೂಟದ ಮುಂದಿನ ಸಿಎಂ ಅಭ್ಯರ್ಥಿ ಇವರೇ ಎಂದು ಹೇಳಲಾಗುತ್ತಿದೆ.

ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆಯವರ ಪುತ್ರ ಆದಿತ್ಯ ಠಾಕ್ರೆಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸಬೇಕೆಂಬ ಬೇಡಿಕೆ ಇಡಲಾಗುತ್ತಿದೆ. ಪಕ್ಷದ ಯುವ ಘಟಕದ ಮುಖ್ಯಸ್ಥರಾಗಿರುವ ಆದಿತ್ಯ ಠಾಕ್ರೆ ಚುನಾವಣೆ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ ಎಂದು ಶಿವಸೇನೆ ಮೂಲಗಳು ತಿಳಿಸಿದ್ದರು. ಈ ಬೆನ್ನಲೀಗ ಮರಾಠಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಪಕ್ಷದ ವಕ್ತಾರ ಸಂಜಯ್ ರಾವತ್ ಈ ಹೇಳಿಕೆ ನೀಡಿದ್ದಾರೆ.

ಇಲ್ಲಿನ ಸಂದರ್ಶನದಲ್ಲಿ ಮಾತಾಡಿದ ರಾವತ್​​, ಆದಿತ್ಯ ಠಾಕ್ರೆ ಈಗಾಗಲೇ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. ಠಾಕ್ರೆ ಕುಟುಂಬ ಯಾವತ್ತೂ ಉಪಮುಖ್ಯಮಂತ್ರಿ ಹುದ್ದೆ ವಹಿಸಿಕೊಳ್ಳದು. ಈ ಕುಟುಂಬದ ಸದಸ್ಯ ಯಾವತ್ತಿಗೂ ಮುಖ್ಯಸ್ಥರು ಎನ್ನುವ ಮೂಲಕ ಆದಿತ್ಯ ಠಾಕ್ರೆ ಮುಂದಿನ ಸಿಎಂ ಅಭ್ಯರ್ಥಿ ಎಂಬ ಸುಳಿವು ರಾವತ್​​ ಬಿಟ್ಟುಕೊಟ್ಟಿದ್ದಾರೆ.

ಇದನ್ನೂ ಓದಿ: ಪಾಕ್ ಪೋಷಿತ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ; ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್​​ಗೆ ಮೋದಿ ಖಡಕ್​​ ಸೂಚನೆ

ಇನ್ನು ಮುಂದಿನ ಸಿಎಂ ಅಭ್ಯರ್ಥಿ ಕೂಡ ತನ್ನ ಪಕ್ಷದವರೇ ಆಗಬೇಕೆಂದು ಉದ್ದೇಶವನ್ನು ಬಿಜೆಪಿ ಹೊಂದಿದೆ. ಒಂದು ವೇಳೆ ಶಿವಸೇನೆ ತನಗೇ ಸಿಎಂ ಹುದ್ದೆ ನೀಡಬೇಕೆಂದು ಪಟ್ಟು ಹಿಡಿದರೆ, ಎರಡೂ ಪಕ್ಷಗಳ ನಡುವೆ ಮತ್ತೆ ಭಿನ್ನಮತ ಶುರುವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ನೀತಿ ಆಯೋಗ ಸಭೆಗೆ ಸಿಎಂ ಜಗನ್​​: ಆಂಧ್ರದ ವಿಶೇಷ ಸ್ಥಾನಮಾನಕ್ಕಾಗಿ ಪಟ್ಟು
Loading...

ಒಟ್ಟು 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 122 ಹಾಗೂ ಶಿವಸೇನೆ 63 ಶಾಸಕರನ್ನು ಹೊಂದಿದೆ. ಕಳೆದ ವಿಧಾನಸಭೆ ಚುನಾವಣೆ ಪ್ರತ್ಯೇಕವಾಗಿ ಎದುರಿಸಿದ್ದ ಉಭಯ ಪಕ್ಷಗಳು, ನಂತರ ಮತ್ತೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದ್ದವು. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ -ಶಿವಸೇನೆ ಮೈತ್ರಿಯು ಮಹಾರಾಷ್ಟ್ರದ 48 ಸೀಟುಗಳ ಪೈಕಿ 41ರಲ್ಲಿ ಜಯಗಳಿಸಿತ್ತು.
-----------
First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...