ಆಧಾರ್​ಗಿದೆ ಸಂವಿಧಾನಿಕ ಮಾನ್ಯತೆ, ಆದ್ರೆ ಕಡ್ಡಾಯಪಡಿಸುವಂತಿಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರ, ನ್ಯಾ. ಎ.ಎಂ. ಖನ್ವಿಲ್ಕರ್, ನ್ಯಾ. ಡಿ.ವೈ. ಚಂದ್ರಚೂಡ್, ನ್ಯಾ. ಅಶೋಕ್ ಭೂಷಣ್, ನ್ಯಾ. ಎ.ಕೆ. ಸಿಕ್ರಿ ಅವರು ಇಂದು ಈ ಮಹತ್ವದ ತೀರ್ಪು ನೀಡಿದ್ದಾರೆ. ನ್ಯಾ. ಎ.ಕೆ. ಸಿಕ್ರಿ ಅವರು 40 ಪುಟಗಳ ತೀರ್ಪಿನ ಸಾರಾಂಶ ಬರೆದಿದ್ದಾರೆ. ಆದರೆ, ಆಧಾರ್ ಕಾರ್ಡ್​ಗೆ ಸಂವಿಧಾನದ ಮಾನ್ಯತೆ ನೀಡುವ ವಿಚಾರದಲ್ಲಿ ಐವರು ನ್ಯಾಯಮೂರ್ತಿಗಳ ಪೈಕಿ ನ್ಯಾ| ಚಂದ್ರಚೂಡ್ ಅವರೊಬ್ಬರು ಮಾತ್ರ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Updated:September 26, 2018, 6:33 PM IST
ಆಧಾರ್​ಗಿದೆ ಸಂವಿಧಾನಿಕ ಮಾನ್ಯತೆ, ಆದ್ರೆ ಕಡ್ಡಾಯಪಡಿಸುವಂತಿಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ಸುಪ್ರೀಂ ಕೋರ್ಟ್

Updated: September 26, 2018, 6:33 PM IST
- ನ್ಯೂಸ್18 ಕನ್ನಡ

ನವದೆಹಲಿ(ಸೆ. 26): ಆಧಾರ್ ಕಾರ್ಡ್ ಬೇಕೋ ಬೇಡವೋ, ಎಲ್ಲೆಲ್ಲಿ ಬಳಸಬೇಕು ಎಂಬಿತ್ಯಾದಿ ಗೊಂದಲಗಳಿಗೆ ಸುಪ್ರೀಮ್ ಕೋರ್ಟ್ ತೆರೆ ಎಳೆದಿದೆ. ಸುಪ್ರೀಂಕೋರ್ಟ್​ನ ಐದು ಸದಸ್ಯರ ಸಾಂವಿಧಾನಿಕ ಪೀಠವು ಮಹತ್ವದ ತೀರ್ಪು ನೀಡಿದ್ದು, ಆಧಾರ್ ಕಾರ್ಡ್​ಗೆ ಕೆಲ ಷರತ್ತುಗಳೊಂದಿಗೆ ಸಾಂವಿಧಾನಿಕ ಮಾನ್ಯತೆ ನೀಡಿದೆ. ಸರಕಾರಕ್ಕೆ ಸಂಬಂಧಿಸಿದ ಐಟಿ ರಿಟರ್ನ್ಸ್, ಪ್ಯಾನ್ ಕಾರ್ಡ್​ಗಳಲ್ಲಿ ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸುವ ಅವಕಾಶವನ್ನು ಸರಕಾರಕ್ಕೆ ನೀಡಲಾಗಿದೆ. ಆದರೆ, ಬ್ಯಾಂಕ್ ಖಾತೆ ತೆರೆಯಲು, ಮೊಬೈಲ್ ನಂಬರ್ ಹೊಂದಲು ಇತ್ಯಾದಿ ಕಾರ್ಯಗಳಿಗೆ ಆಧಾರ್ ಕಡ್ಡಾಯಗೊಳಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ. ಖಾಸಗಿ ಸಂಸ್ಥೆಗಳು ಯಾವುದೇ ಕಾರಣಕ್ಕೂ ಆಧಾರ್ ಕಾರ್ಡನ್ನು ಒತ್ತಾಯವಾಗಿ ಪಡೆಯುವಂತಿಲ್ಲ. ಶಾಲೆಗಳು ಮಕ್ಕಳಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸುವಂತಿಲ್ಲ ಎಂದೂ ಕೋರ್ಟ್ ತಿಳಿಸಿದೆ. ಹಾಗೆಯೇ, ಹಣಕಾಸು ಮಸೂದೆ ಹೆಸರಲ್ಲಿ ಆಧಾರ್ ಯೋಜನೆಗೆ ಅನುಮತಿ ಪಡೆಯುವ ಸರಕಾರದ ಕ್ರಮಕ್ಕೆ ಸುಪ್ರೀಂ ಹಸಿರುನಿಶಾನೆ ತೋರಿಸಿದೆ. ಇದರೊಂದಿಗೆ ಆಧಾರ್ ವಿಚಾರದಲ್ಲಿ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಮಿಶ್ರಫಲ ಕೊಟ್ಟಿದೆ.

ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರ, ನ್ಯಾ. ಎ.ಎಂ. ಖನ್ವಿಲ್ಕರ್, ನ್ಯಾ. ಡಿ.ವೈ. ಚಂದ್ರಚೂಡ್, ನ್ಯಾ. ಅಶೋಕ್ ಭೂಷಣ್, ನ್ಯಾ. ಎ.ಕೆ. ಸಿಕ್ರಿ ಅವರು ಇಂದು ಈ ಮಹತ್ವದ ತೀರ್ಪು ನೀಡಿದ್ದಾರೆ. ನ್ಯಾ. ಎ.ಕೆ. ಸಿಕ್ರಿ ಅವರು 40 ಪುಟಗಳ ತೀರ್ಪಿನ ಸಾರಾಂಶ ಬರೆದಿದ್ದಾರೆ. ಆದರೆ, ಆಧಾರ್ ಕಾರ್ಡ್​ಗೆ ಸಂವಿಧಾನದ ಮಾನ್ಯತೆ ನೀಡುವ ವಿಚಾರದಲ್ಲಿ ಐವರು ನ್ಯಾಯಮೂರ್ತಿಗಳ ಪೈಕಿ ನ್ಯಾ| ಚಂದ್ರಚೂಡ್ ಅವರೊಬ್ಬರು ಮಾತ್ರ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಧಾರ್ ಕಾರ್ಡ್​ಗೆ ಸಂವಿಧಾನದ ಮಾನ್ಯತೆ ಕೊಡಲು ಆಗುವುದಿಲ್ಲ. ಐಟಿ ರಿಟರ್ಸ್​ಗೆ ಆಧಾರ್ ಕಡ್ಡಾಯಗೊಳಿಸುವುದು ಸರಿಯಲ್ಲ ಎಂದವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಉಳಿದ ನಾಲ್ವರು ನ್ಯಾಯಮೂರ್ತಿಗಳು ಆಧಾರ್​ಗೆ ಮಾನ್ಯತೆ ಕೊಡಲು ತೀರ್ಮಾನಿಸಿದ್ದಾರೆ. ಹೀಗಾಗಿ, 4:1 ಬಹುಮತದೊಂದಿಗೆ ಸಂವಿಧಾನ ಪೀಠವು ಆಧಾರ್ ಕಾರ್ಡ್​ಗೆ ಸಾಂವಿಧಾನಿಕ ಮಾನ್ಯತೆಯ ತೀರ್ಪು ನೀಡಿದೆ.

ವಿವಿಧ ಸೇವೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸುವ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ 27 ದೂರುಗಳು ದಾಖಲಾಗಿದ್ದವು. ಎಲ್ಲಾ ದೂರುಗಳನ್ನು ಒಟ್ಟಿಗೆ ಪರಿಗಣಿಸಿ ಸುದೀರ್ಘ ವಿಚಾರಣೆ ನಡೆಸಲಾಗಿದೆ. ಮೇ ತಿಂಗಳಲ್ಲೇ ವಿಚಾರಣೆ ಮುಕ್ತಾಯವಾಗಿದ್ದು, ಸಾಂವಿಧಾನಿಕ ಪೀಠವು ತೀರ್ಪನ್ನು ಕಾಯ್ದಿರಿಸಿತ್ತು.

ಕೇಂದ್ರ ಸರಕಾರವು ಕೋರ್ಟ್​ನಲ್ಲಿ ಆಧಾರ್ ಕಾರ್ಡ್ ಯೋಜನೆಯನ್ನು ಬಲವಾಗಿ ಸಮರ್ಥಿಸಿಕೊಂಡಿತು. ಆಧಾರ್ ಕಾರ್ಡ್ ಸಂಪೂರ್ಣ ಸುರಕ್ಷಿತವಾಗಿದೆ. ಅದರಲ್ಲಿರುವ ಯಾವುದೇ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ. ಜನರ ಖಾಸಗಿ ಮಾಹಿತಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಪ್ರತಿಪಾದಿಸಿದೆ.

ಆದರೆ, ಕೇಂದ್ರದ ವಾದವನ್ನು ಸುಪ್ರೀಂ ಭಾಗಶಃ ಒಪ್ಪಿಕೊಂಡಿತು. ಆಧಾರ್​ನಲ್ಲಿ ಜನರಿಂದ ಕನಿಷ್ಠತಮ ದತ್ತಾಂಶವನ್ನಷ್ಟೇ ಪಡೆಯಲಾಗುತ್ತದೆ. ಆಧಾರ್ ಕಾರ್ಡ್​ನಿಂದ ಡೂಪ್ಲಿಕೇಟ್ ಐಡಿಗಳ ಸೃಷ್ಟಿಯನ್ನು ತಡೆಯಬಹುದು. ದೀನ ಸಮುದಾಯಗಳಿಗೆ ಆಧಾರ್ ಒಂದು ವರವಾಗಿದ್ದು, ಅವರಿಗೆ ಹಲವು ಸೌಲಭ್ಯಗಳನ್ನು ಕೊಡಲು ಸಾಧ್ಯವಾಗುತ್ತದೆ. ಆಧಾರ್ ಒಂದು ವಿಶೇಷ ಯೋಜನೆ ಎಂಬುದರಲ್ಲಿ ಅನುಮಾನವಿಲ್ಲ ಎಂದು ಆಧಾರ್ ಯೋಜನೆಯನ್ನು ಸುಪ್ರೀಂಕೋರ್ಟ್ ಶ್ಲಾಘಿಸಿದೆ. ಆದರೆ, ಖಾಸಗಿ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸುವುದು ಸರಿಯಲ್ಲ ಎಂದು ಒಮ್ಮತದ ತೀರ್ಪು ಕೊಟ್ಟಿದೆ. ಇದೇ ವೆಳೆ, ಆಧಾರ್ ಕಾಯ್ದೆಯಲ್ಲಿನ ಕೆಲ ಸೆಕ್ಷನ್​ಗಳನ್ನು ಸುಪ್ರೀಂಕೋರ್ಟ್ ಕಿತ್ತುಹಾಕಿದೆ. ವಜಾಗೊಂಡ ಸೆಕ್ಷನ್​ಗಳಲ್ಲಿ 57 ಕೂಡ ಒಳಗೊಂಡಿದೆ. ಸೆಕ್ಷನ್ 57ರ ಅಡಿಯಲ್ಲಿ ಬ್ಯಾಂಕು, ಶಾಲೆ, ಮೊಬೈಲ್ ಕಂಪನಿಗಳಂಥ ಖಾಸಗಿ ಸಂಸ್ಥೆಗಳು ಗ್ರಾಹಕರಿಂದ ಆಧಾರ್ ಕಾರ್ಡ್ ಪಡೆಯುವುದು ಕಡ್ಡಾಯವಾಗಿತ್ತು. ಇದೀಗ, ಆ ಸೆಕ್ಷನನ್ನು ಕೋರ್ಟ್ ಕಿತ್ತುಹಾಕಿದೆ.

ಆಧಾರ್ ರೂವಾರಿ ನಿಲೇಕಣಿ ಸ್ವಾಗತ:
Loading...

ಆಧಾರ್ ಯೋಜನೆಯ ರೂವಾರಿ ನಂದನ್ ನಿಲೇಕಣಿ ಅವರು ಸುಪ್ರೀಂ ತೀರ್ಪನ್ನು ಸ್ವಾಗತಿಸಿದ್ದಾರೆ. ಇದು ಆಧಾರ್ಗೆ ಸಿಕ್ಕ ಜಯ ಎಂದು ಬಣ್ಣಿಸಿದ್ದಾರೆ. ಆಧಾರ್ ಯೋಜನೆಯ ಮೂಲೋದ್ದೇಶವನ್ನು ಕೋರ್ಟ್ ಎತ್ತಿಹಿಡಿದಿದೆ. ದೇಶದ ಅಭಿವೃದ್ಧಿ ಯೋಜನೆಗಳಿಗೆ ಆಧಾರ್ ಪೂರಕವಾಗಿ ಕೆಲಸ ಮಾಡುತ್ತದೆ ಎಂದು ನಿಲೇಕಣಿ ಅಭಿಪ್ರಾಯಪಟ್ಟಿದ್ಧಾರೆ.ಆಧಾರ್ ಕಾರ್ಡ್ ವಿರುದ್ಧ ಸಮರ ಸಾರಿದ್ದ ಹಾಗೂ ಮೊತ್ತಮೊದಲು ದೂರು ದಾಖಲಿಸಿದ್ದ ಕರ್ನಾಟಕ ಹೈಕೋರ್ಟ್ ನಿವೃತ್ತ ಜಡ್ಜ್ ಎಸ್. ಪುಟ್ಟಸ್ವಾಮಿ ಅವರು ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ. ಹಾಗೆಯೇ, ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಕೂಡ ತೀರ್ಪನ್ನು ಸ್ವಾಗತಿಸಿದ್ದಾರೆ. ಆಧಾರ್ ಕಾರ್ಡ್​ ಎಲ್ಲಿ ಅಗತ್ಯವೋ ಅಲ್ಲಿ ಮಾತ್ರ ಸಲ್ಲಿಕೆಯಾಗಬೇಕು ಎಂದು ಹೇಳಿ ರಾಜ್ಯಸಭಾ ಸದಸ್ಯ ಸ್ವಾಮಿ ಟ್ವೀಟ್ ಮಾಡಿದ್ದಾರೆ.
First published:September 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...