Aadhaar-PF Link: ಪಿಎಫ್ ಖಾತೆಗೆ ಇನ್ನೂ Aadhar Card ಲಿಂಕ್ ಮಾಡಿಲ್ವಾ? ಹೆಚ್ಚು ಕಾಲಾವಕಾಶ ಕೊಟ್ಟಿದ್ದಾರೆ ನೋಡಿ

Aadhaar-PF Linking Extended: ನಿಮ್ಮ ಪಿಫ್​ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡದಿದ್ದರೆ, ಉದ್ಯೋಗಿಗಳ ಖಾತೆಗೆ ಬರುವ ಉದ್ಯೋಗದಾತರ ಕೊಡುಗೆಯನ್ನು EPFO ​​ಸುಲಭವಾಗಿ ನಿಲ್ಲಿಸುತ್ತದೆ ಮತ್ತು ದಾಖಲೆಗಳನ್ನು ಲಿಂಕ್ ಮಾಡಿದ ನಂತರವೇ ಅದನ್ನು ಪ್ರಾರಂಭಿಸಬಹುದು. ಆದ್ದರಿಂದ, ಈ ದಾಖಲೆಗಳನ್ನು ಲಿಂಕ್ ಮಾಡುವುದು ಮುಖ್ಯವಾಗಿದೆ.

ಆಧಾರ್​ ಕಾರ್ಡ್.

ಆಧಾರ್​ ಕಾರ್ಡ್.

  • Share this:
    ನವದೆಹಲಿ(ಸೆ.14): ನೌಕರರ ಭವಿಷ್ಯ ನಿಧಿ ಸಂಸ್ಥೆಯು( Employees’ Provident Fund Organisation-EPFO) ತನ್ನ ಸದಸ್ಯರಿಗೆ ಪಿಎಫ್​ ಖಾತೆಯನ್ನು ಆಧಾರ್​​(Aadhaar card)ನೊಂದಿಗೆ ಲಿಂಕ್ ಮಾಡುವ ಗಡುವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಿದೆ. ಇದು ಲಕ್ಷಾಂತರ ನೌಕರರಿಗೆ ಬಿಗ್ ರಿಲೀಫ್ ಆಗಿದೆ. ಈಶಾನ್ಯ ಭಾಗದ ಉದ್ಯೋಗಿಗಳಿಗೆ ಮಾತ್ರ ಈ ಅವಕಾಶ ನೀಡಿದೆ. ಇಪಿಎಫ್​ಒ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಆಧಾರ್​-ಪಿಎಫ್​ ಲಿಂಕ್ ಮಾಡುವ ಗಡುವನ್ನು ವಿಸ್ತರಿಸಿರುವುದಾಗಿ ಹೇಳಿದೆ. ಕೋವಿಡ್​-19 ಬಿಕ್ಕಟ್ಟಿನ ನಡುವೆ ನೌಕರರು ತಮ್ಮ ​ಯುಎಎನ್​​ನ್ನು (UAN) ಆಧಾರ್​ನೊಂದಿಗೆ ಲಿಂಕ್ ಮಾಡಲು ತೀವ್ರತರವಾದ ಅನಾನುಕೂಲತೆಯನ್ನು ಎದುರಿಸಿದ ಪರಿಣಾಮ, ನೌಕರರ ಭವಿಷ್ಯ ನಿಧಿ ಸಂಸ್ಥೆಯು ಪರಿಸ್ಥಿತಿ ಅರಿತುಕೊಂಡು ಗಡುವನ್ನು ವಿಸ್ತರಿಸಿದೆ. ಸೆ.11ರಂದು ಈ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದೆ.

    ಇಪಿಎಫ್​ಒ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿರುವ ಮಾಹಿತಿ ಹೀಗಿದೆ. ‘‘ಯುಎನ್​ನೊಂದಿಗೆ ಆಧಾರ್​ ಲಿಂಕ್ ಮಾಡುವ ಗಡುವನ್ನು ಈಶಾನ್ಯ ಭಾಗದ ಸಂಸ್ಥೆಗಳಿಗೆ ಡಿಸೆಂಬರ್ 31, 2021ರವರೆಗೆ ವಿಸ್ತರಿಸಲಾಗಿದೆ. ದಯವಿಟ್ಟು ಸುತ್ತೋಲೆಯನ್ನು ಇಲ್ಲಿ ಪರಿಶೀಲಿಸಿ: ಸುತ್ತೋಲೆಯನ್ನು ಪೋಸ್ಟ್​​​ಗೆ ಅಟ್ಯಾಚ್ ಮಾಡಲಾಗಿದೆ‘‘ ಎಂದು ಹೇಳಿದೆ.

    ಸುತ್ತೋಲೆಯಲ್ಲಿ ಏನಿದೆ?

    ಕೇಂದ್ರ ಸರ್ಕಾರದ ಪೂರ್ವಾನುಮತಿಯೊಂದಿಗೆ ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್​ (ECR)​​ ಸಲ್ಲಿಸಲು ಆಧಾರ್​-ಯುಎಎನ್​ ಲಿಂಕ್​ ಪ್ರಕ್ರಿಯೆಯ ಗಡುವನ್ನು ವಿಸ್ತರಿಸಲಾಗಿದೆ. ಇಲ್ಲಿ ಈ ಹಿಂದೆ ನೀಡಲಾಗಿದ್ದ ಗಡುವಿನ ದಿನಾಂಕ ಸೆ.1, 2021 ನ್ನು ಉಲ್ಲೇಖಿಸಿದೆ. ಆದಾಗ್ಯೂ ಉದ್ಯೋಗದಾತರು ಮತ್ತು ಉದ್ಯೋಗಿಗಳು ಇಬ್ಬರೂ ಆಧಾರ್-ಯುಎಎನ್​ ಲಿಂಕ್ ಮಾಡಲು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಏಕೆಂದರೆ, ಹೆಚ್ಚಿನ ಉದ್ಯೋಗಿಗಳ ಆಧಾರ್​ ಕಾರ್ಡ್​​ನಲ್ಲಿ ತಿದ್ದುಪಡಿಗಳು ಅಗತ್ಯವಿದೆ. ಈ ವರ್ಷ ಕೊರೋನಾ 2ನೇ ಅಲೆಯ ಪರಿಣಾಮ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

    ಇದನ್ನೂ ಓದಿ:Karnataka Dams Water Level: ಮೈದುಂಬಿ ಹರಿಯುತ್ತಿವೆ ನದಿಗಳು, ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

    ಉದ್ಯೋಗದಾತರು ಮತ್ತು ಉದ್ಯೋಗಿಗಳು ಎದುರಿಸುತ್ತಿರುವ ಈ ಎಲ್ಲಾ ಸವಾಲುಗಳನ್ನು ಪರಿಗಣಿಸಿ ಹಾಗೂ ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ಆಧಾರ್ ಕಾರ್ಡ್​ ಡೇಟಾದಲ್ಲಿ ಅಗತ್ಯವಾದ ತಿದ್ದುಪಡಿಗಳನ್ನು ಗಮನದಲ್ಲಿರಿಸಿಕೊಂಡು, ಕೇಂದ್ರ ಸರ್ಕಾರದ ಪೂರ್ವಾನುಮೋದನೆಯೊಂದಿಗೆ ಇಪಿಎಫ್​ಒ ಗಡುವನ್ನು ವಿಸ್ತರಿಸಿದೆ. ಯುಎಎನ್​ನಲ್ಲಿ ಆಧಾರ್​​ನ್ನು ಕಡ್ಡಾಯವಾಗಿ ಲಿಂಕ್ ಮಾಡಲು ಇಸಿಆರ್​ನ್ನು ಸೆ.1 2021ರವರೆಗೆ ಸಲ್ಲಿಸಲು ಉಲ್ಲೇಖಿಸಲಾಗಿದೆ.

    ಪಿಎಫ್​-ಆಧಾರ್​ ಲಿಂಕ್ ಮಾಡುವುದು ಹೇಗೆ?

    ನಿಮ್ಮ ಯೂನಿವರ್ಸಲ್​ ಅಕೌಂಟ್ ನಂಬರ್​ನ್ನು ಆಧಾರ್​ ಕಾರ್ಡ್​​ಗೆ ಲಿಂಕ್ ಮಾಡಲು ಈ ಕೆಳಗೆ ನೀಡಿರುವ ಹಂತಗಳನ್ನು ಅನುಸರಿಸಿ.

    1) ಪಿಎಫ್ ಖಾತೆಗೆ ಆಧಾರ್ ಲಿಂಕ್ ಮಾಡಲು, epfindia.gov.in ಗೆ ಭೇಟಿ ನೀಡಿ

    2) ನಂತರ ಆನ್‌ಲೈನ್ ಸೇವೆಗಳಲ್ಲಿ ಇ-ಕೆವೈಸಿ ಪೋರ್ಟಲ್ ಮೇಲೆ ಕ್ಲಿಕ್ ಮಾಡಿ

    3) ಈಗ ಆಧಾರ್ ಸಂಖ್ಯೆಯನ್ನು ನಮೂದಿಸಿ. ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನಂತರ ಆ ನಂಬರ್ ಗೆ OTP ಬರುತ್ತದೆ.

    4) ಮತ್ತೊಮ್ಮೆ, ಆಧಾರ್ ಸಂಖ್ಯೆಯನ್ನು ಭರ್ತಿ ಮಾಡಬೇಕಾಗುತ್ತದೆ. ಈಗ OTP ಅನ್ನು ಪರಿಶೀಲಿಸಿ.

    5) OTP, ಆಧಾರ್ ಸಂಖ್ಯೆ ಮತ್ತು ಮೊಬೈಲ್ ಫೋನ್ ಸಂಖ್ಯೆಯನ್ನು ಮೂರು ಬಾರಿ ನಮೂದಿಸಿದ ನಂತರ,

    ನಿಮ್ಮ ಪಿಎಫ್ ಖಾತೆಯೊಂದಿಗೆ ಆಧಾರ್ ಲಿಂಕ್ ಆಗುತ್ತದೆ.

    ಇದನ್ನೂ ಓದಿ:Corona in Kids: ಮಕ್ಕಳಲ್ಲಿ ಹೆಚ್ಚಾಗುತ್ತಿವೆ ಕೋವಿಡ್‌ ಪ್ರಕರಣಗಳು; ಆತಂಕ ಬೇಡ, ಎಚ್ಚರಿಕೆ ಇರಲಿ ಎಂದ ತಜ್ಞರು..!

    ನಿಮ್ಮ ಪಿಫ್​ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡದಿದ್ದರೆ, ಉದ್ಯೋಗಿಗಳ ಖಾತೆಗೆ ಬರುವ ಉದ್ಯೋಗದಾತರ ಕೊಡುಗೆಯನ್ನು EPFO ​​ಸುಲಭವಾಗಿ ನಿಲ್ಲಿಸುತ್ತದೆ ಮತ್ತು ದಾಖಲೆಗಳನ್ನು ಲಿಂಕ್ ಮಾಡಿದ ನಂತರವೇ ಅದನ್ನು ಪ್ರಾರಂಭಿಸಬಹುದು. ಆದ್ದರಿಂದ, ಈ ದಾಖಲೆಗಳನ್ನು ಲಿಂಕ್ ಮಾಡುವುದು ಮುಖ್ಯವಾಗಿದೆ.
    Published by:Latha CG
    First published: