Digital India: ಒಂದೇ ಐಡಿಯಲ್ಲಿ ಆಧಾರ್, ಪಾಸ್‌ಪೋರ್ಟ್‌ ಲಿಂಕ್, ಹೊಸ ಮಾದರಿ ಯೋಜನೆಗೆ ಸಿದ್ಧತೆ

ಆಧಾರ್, ಪ್ಯಾನ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್‌ ಇವೆಲ್ಲ ಒಂದೇ ಐಡಿಗೆ ಲಿಂಕ್ ಆಗುತ್ತಾ? ಈ ಬಗ್ಗೆ ಕೇಂದ್ರ ಸರ್ಕಾರ ಹೊಸ ಯೋಜನೆ ತರಲು ಹೊರಟಿದೆಯಾ?

ಡಿಜಿಟಲ್ ಇಂಡಿಯಾ

ಡಿಜಿಟಲ್ ಇಂಡಿಯಾ

  • Share this:
ಪ್ರಸ್ತುತ ಕೇಂದ್ರ ಸರಕಾರವು (Central Government)  ಆಧಾರ್ ಕಾರ್ಡ್‌ಗೆ (Aadhar Card) ಬದಲಿಯಾಗಿರುವ ವ್ಯವಸ್ಥೆಯೊಂದನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಎಲೆಕ್ಟ್ರಾನಿಕ್ಸ್ (Electronics) ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಪ್ರಸ್ತಾವಿತ ಯೋಜನೆಯ ಪ್ರಕಾರ, ಡ್ರೈವಿಂಗ್ ಲೈಸೆನ್ಸ್ (Driving License) , ಪಾಸ್‌ಪೋರ್ಟ್ (Passport) ಸಂಖ್ಯೆಗಳು, ಪ್ಯಾನ್‌ನಂತಹ (PAN) ಬಹು ಡಿಜಿಟಲ್ ಐಡಿಗಳನ್ನು (Digital Id) ಲಿಂಕ್ ಮಾಡಲು ಸರ್ಕಾರವು “ಫೆಡರೇಟೆಡ್ ಡಿಜಿಟಲ್ ಐಡೆಂಟಿಟೀಸ್” (Federated Digital Identities ) ಎಂಬ ಹೊಸ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಫೆಡರೇಟೆಡ್ ಐಡೆಂಟಿಟಿ ಎಂಬುದು ಗ್ರಾಹಕರ ಡಿಜಿಟಲ್ ಗುರುತು ಹಾಗೂ ಗುಣಲಕ್ಷಣಗಳನ್ನು ಹೆಚ್ಚಿನ ಸಂಬಂಧವಿಲ್ಲದ ಗುರುತಿನ ನಿರ್ವಹಣಾ ವ್ಯವಸ್ಥೆಗಳಲ್ಲಿ ಸಂಗ್ರಹಿಸಲಾಗುವ ವಿಧಾನವಾಗಿದೆ.

ಹೊಸ ಮಾದರಿಯ ಡಿಜಿಟಲ್ ಅನನ್ಯ ಐಡಿ

ಈ ಹೊಸ ಮಾದರಿಯ ಡಿಜಿಟಲ್ ಐಡಿಯು ಅನನ್ಯ ಐಡಿಯ ರೀತಿಯಲ್ಲಿ ಪ್ರಸ್ತಾವನೆಗೊಳ್ಳುತ್ತದೆ. ಅಂದರೆ ಇದು ಆಧಾರ್ ಕಾರ್ಡ್ ಸಂಖ್ಯೆಯಂತೆಯೇ ಕಂಡುಬರಲಿದೆ. ಈ ಪ್ರಸ್ತಾವಿತ ಯೋಜನೆಯು ಡಿಜಿಟಲ್ ಗುರುತನ್ನು ಹೊಂದಿದ್ದು, ನಾಗರಿಕರನ್ನು ಸಬಲಗೊಳಿಸುತ್ತದೆ. ಅಂತೆಯೇ ಈ ಗುರುತುಗಳ ನಿಯಂತ್ರಣದಲ್ಲಿ ಯಾವ ಉದ್ದೇಶಕ್ಕಾಗಿ ಯಾವುದನ್ನು ಬಳಸಬೇಕೆಂಬ ಆಯ್ಕೆಯನ್ನು ಒದಗಿಸುತ್ತದೆ ಎಂಬುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ.

ಐಡಿ ಪ್ರಮಾಣೀಕರಿಸಲು KYC ಬಳಕೆ

ಫೆಡರಲ್ ಡಿಜಿಟಲ್ ಐಡೆಂಟಿಟಿಯು ಕೇಂದ್ರ ಹಾಗೂ ರಾಜ್ಯ ಸಂಬಂಧಿತ ಐಡಿ ಅಂಕಿಅಂಶಗಳನ್ನು ಸಂಗ್ರಹಿಸುವ ಗಮ್ಯಸ್ಥಾನವಾಗಿ ಕೆಲಸ ಮಾಡುತ್ತದೆ. ಈ ಡಿಜಿಟಲ್ ಐಡಿಯನ್ನು ಕೆವೈಸಿ (KYC) ಅಥವಾ ಇಕೆವೈಸಿ (eKYC) (ನಿಮ್ಮ ಗ್ರಾಹಕರನ್ನು ಅರಿತುಕೊಳ್ಳಿ) ಪ್ರಕ್ರಿಯೆಯನ್ನು ನಡೆಸಲು ಬಳಸಲಾಗುತ್ತದೆ.

ಇಂಡಿಯಾ ಎಂಟರ್‌ಪ್ರೈಸ್ ಆರ್ಕಿಟೆಕ್ಚರ್ (ಇಂಡಿಎ) 2.0 ಅಡಿಯಲ್ಲಿ ಪ್ರಸ್ತಾವಿತ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂಬುದಾಗಿ ವರದಿಯು ಹೈಲೈಟ್ ಮಾಡಿದೆ. ಆನ್‌ಲೈನ್ ಗುರುತಿನ ಪ್ರಕ್ರಿಯೆಯನ್ನು ಸರಾಗಗೊಳಿಸಲು ಸರಕಾರಿ ಹಾಗೂ ಖಾಸಗಿ ಘಟಕಗಳನ್ನು ಮೂಲಭೂತವಾಗಿ ತರಲು 2017ರಲ್ಲಿ ಇದನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು.

ಇದನ್ನೂ ಓದಿ: Aadhar Cardನಲ್ಲಿ ಫೋಟೋ ಬದಲಿಸಬೇಕಾ? ಹೀಗೆ ಮಾಡಿ

ಫೆಡರಲ್ ಡಿಜಿಟಲ್ ಐಡೆಂಟಿಟಿಯಲ್ಲಿ ಯಾರು ಕೆಲಸ ಮಾಡುತ್ತಾರೆ?

ಪ್ರಸ್ತಾವನೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಕೇಂದ್ರವು ಅಥವಾ ಏಕಕಾಲೀನ ಅಥವಾ ರಾಜ್ಯ ವಿಷಯಗಳೊಂದಿಗೆ ವ್ಯವಹರಿಸುವ ಸಚಿವಾಲಯಗಳು ವ್ಯಾಪಕವಾದ ಕೆಲಸವನ್ನು ಕೈಗೊಳ್ಳುವಲ್ಲಿ ಸರಕಾರವು ಪರಿಷ್ಕೃತ ಚೌಕಟ್ಟನ್ನು ಸೂಚಿಸಿದೆ.

ರಾಜ್ಯ ಸರಕಾರಗಳು ರಾಜ್ಯದ ರಚನಾ ವಿನ್ಯಾಸದ ಮೇಲ್ವಿಚಾರಣೆ ಮಾಡುತ್ತದೆ ಮತ್ತು ರಾಜ್ಯ ಹಾಗೂ ಕೇಂದ್ರ ಸರಕಾರಗಳೆರಡೂ ‘IndEA' ಲೈಟ್ ರಚನಾ ವಿನ್ಯಾಸದ ಮೇಲೆ ಕಾರ್ಯನಿರ್ವಹಿಸುತ್ತದೆ. ಸರಕಾರಿ ಸಂಸ್ಥೆಗಳ ವ್ಯವಹಾರ ದೃಷ್ಟಿಯೊಂದಿಗೆ ಐಟಿ ಜೋಡಣೆಗಳನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ 2017ರಲ್ಲಿ ಇಂಡಿಯಾ ಎಂಟರ್‌ಪ್ರೈಸ್ ಆರ್ಕಿಟೆಕ್ಚರ್  ಅನ್ನು ವಿನ್ಯಾಸಗೊಳಿಸಲಾಗಿದೆ.

ಫೆಡರಲ್ ಡಿಜಿಟಲ್ ಐಡೆಂಟಿಟಿಯ ಉದ್ದೇಶ

ಅಂತರ್‌ಸಂಪರ್ಕ ಮಾಹಿತಿ ವಿನಿಮಯ ಹಾಗೂ ಮಾಹಿತಿಯ ಉದ್ದೇಶವನ್ನು ಬಳಸುವ ಗುರಿ ಹೊಂದಿರುವ ಹೊಸ ಡಿಜಿಟಲ್ ಆರ್ಕಿಟೆಕ್ಚರ್ ಅನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಪ್ರಸ್ತಾವಿತ ಫ್ರೇಮ್‌ವರ್ಕ್ ಒಳಗೊಂಡಿದೆ. ಕೇವಲ ಒಂದು ಅನನ್ಯ IDಯೊಂದಿಗೆ eKYC ಪ್ರಕ್ರಿಯೆಯನ್ನು ಸುಲಭಗೊಳಿಸುವ ಆಶಯವನ್ನು ಫೆಡರಲ್ ಡಿಜಿಟಲ್ ಐಡೆಂಟಿಟಿ ಹೊಂದಿದೆ.

ಇದನ್ನೂ ಓದಿ: ಯಾವ ಬ್ಯಾಂಕ್ ಖಾತೆಗೆ ನಿಮ್ಮ Aadhaar Card ಲಿಂಕ್ ಆಗಿದೆ ಗೊತ್ತಾ? ಹೀಗೆ ಚೆಕ್ ಮಾಡಿ

ಈ ಯೋಜನೆಯಲ್ಲಿಯೂ ಇದೆಯಾ ಸಮಸ್ಯೆ?

ಈ ಯೋಜನೆಯು ಕೆಲವೊಂದು ಸಮಸ್ಯೆಗಳನ್ನು ಒಳಗೊಂಡಿದ್ದು, ಡಿಜಿಟಲ್ ಭದ್ರತೆಯ ಅಪಾಯಗಳನ್ನುಂಟು ಮಾಡಬಹುದು ಹಾಗೂ ಗುರುತು ನಿರ್ಣಾಯಕ ಅಂಕಿ ಅಂಶಗಳನ್ನು ಬಹಿರಂಗಪಡಿಸುವ ಕಡೆಗೆ ಹೆಚ್ಚಿನ ಅಪಾಯಗಳನ್ನುಂಟು ಮಾಡಬಹುದು. ಆದರೆ ಈ ಕಲ್ಪನೆಯು ಇದೀಗ ಆರಂಭ ಹಂತದಲ್ಲಿದ್ದು, ಆಂತರಿಕ ಕಾರ್ಯಗಳು ಇನ್ನೂ ನಿಖರ ಸಂದೇಶವನ್ನು ನೀಡಿಲ್ಲ. ಸಾರ್ವಜನಿಕ ಡೊಮೇನ್‌ನಲ್ಲಿ ಪ್ರಸ್ತಾವನೆಯು ಶೀಘ್ರದಲ್ಲೇ ಲಭ್ಯವಾಗಲಿದೆ ಎಂಬ ಸುದ್ದಿ ಇದ್ದು ಸಚಿವಾಲಯವು ಫೆಬ್ರವರಿ 27 ರೊಳಗೆ ಕಾಮೆಂಟ್‌ಗಳನ್ನು ಪಡೆಯಬಹುದು ಎಂಬುದಾಗಿ ವರದಿ ತಿಳಿಸಿದೆ.

ಫೆಡರೇಟೆಡ್ ಡಿಜಿಟಲ್ ಗುರುತಿನ ಹೊರತಾಗಿ, ಹೊಸ ಚೌಕಟ್ಟು ವಿವಿಧ ಸರ್ಕಾರಿ ಏಜೆನ್ಸಿಗಳಿಗೆ ಮೂರು ಪ್ರಮುಖ ವಾಸ್ತುಶಿಲ್ಪದ ಮಾದರಿಗಳನ್ನು ಪ್ರಸ್ತಾಪಿಸಿದೆ. ಹೊಸ ವಾಸ್ತುಶಿಲ್ಪದ ಅಡಿಯಲ್ಲಿ ನಿರ್ಮಿಸಲಾದ ಮಾಹಿತಿ ತಂತ್ರಜ್ಞಾನ ಯೋಜನೆಗಳು ಪರಸ್ಪರ ಸಂಬಂಧ ಹೊಂದಿರುವ ಮತ್ತು ಪರಸ್ಪರ ಕಾರ್ಯಸಾಧ್ಯವಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂಬುದಾಗಿ ಹೊಸ ಕರಡು ಚೌಕಟ್ಟು ಸೂಚಿಸುತ್ತದೆ. ಈ ಯೋಜನೆಗಳು ಸರ್ಕಾರದ ಮುಕ್ತ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ ನೀತಿಯನ್ನು ಅನುಸರಿಸಬೇಕು ಎಂದಾಗಿದೆ.
Published by:Annappa Achari
First published: