ಪ್ಯಾನ್​​ ಕಾರ್ಡ್​​ಗೆ ಆಧಾರ್​​ ಲಿಂಕ್​​ ಕಡ್ಡಾಯ: ಮುಂದಿನ ಮಾರ್ಚ್​​​ ತಿಂಗಳಾಂತ್ಯದವರೆಗೂ ಗಡುವು ವಿಸ್ತರಣೆ


Updated:December 30, 2019, 9:29 PM IST
ಪ್ಯಾನ್​​ ಕಾರ್ಡ್​​ಗೆ ಆಧಾರ್​​ ಲಿಂಕ್​​ ಕಡ್ಡಾಯ: ಮುಂದಿನ ಮಾರ್ಚ್​​​ ತಿಂಗಳಾಂತ್ಯದವರೆಗೂ ಗಡುವು ವಿಸ್ತರಣೆ
  • Share this:
ನವದೆಹಲಿ(ಡಿ.30): ಕೇಂದ್ರ ಸರ್ಕಾರದ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಇಲಾಖೆ(ಸಿಬಿಡಿಟಿ) ಪ್ಯಾನ್​​ ಕಾರ್ಡ್​ಗೆ ಆಧಾರ್​ ಲಿಂಕ್​​ ಮಾಡಲು ಗಡುವು ವಿಸ್ತರಿಸಿದೆ. 2020ರ ಮಾರ್ಚ್​ ತಿಂಗಳಾಂತ್ಯದೊಳಗೆ ಪ್ಯಾನ್​​ ಕಾರ್ಡ್​​ಗೆ ಆಧಾರ್​​ ನಂಬರ್​​ ಜೋಡಣೆ ಮಾಡಲೇಬೇಕೆಂದು ​ಸಿಬಿಡಿಟಿ ಇಲಾಖೆ ಆದೇಶಿಸಿದೆ. 

ಈ ಹಿಂದೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಜೊತೆಗೆ ಲಿಂಕ್​​ ಮಾಡಲು ಡಿಸೆಂಬರ್ 31ನೇ ತಾರೀಕು ಕೊನೆಯ ದಿನಾಂಕ ಎಂದು ಹೇಳಲಾಗಿತ್ತು. ಆದಾಯ ತೆರಿಗೆ ಕಾಯ್ದೆ 139AA ಅಡಿಯಲ್ಲಿ ಆಧಾರ್​​ನೊಂದಿಗೆ ಜೋಡಣೆಯಾಗದ ಪ್ಯಾನ್ ಸಂಖ್ಯೆ ಅಮಾನ್ಯ ಎಂದು ಅಧಿಕೃತವಾಗಿ ಪರಿಗಣಿಸಲಾಗುತ್ತೆ ಎಂದು ಸಿಬಿಡಿಟಿ ಇಲಾಖೆ ಘೋಷಿಸಿತ್ತು.

 ಈ ಮುನ್ನ ಫೆಬ್ರವರಿ 7ನೇ ತಾರಿಕಿನಂದು  ಐಟಿ ರಿಟರ್ನ್ಸ್‌(ಆದಾಯ ತೆರಿಗೆ ವಿವರ) ಸಲ್ಲಿಸಲು ಪ್ಯಾನ್‌ಗೆ ಆಧಾರ್‌ ಸಂಖ್ಯೆ ಲಿಂಕ್​​ ಕಡ್ಡಾಯ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ದ್ವಿಸದಸ್ಯ ಪೀಠ ಈ ಆದೇಶ ಹೊರಡಿಸಿದ್ದು, ಆದಾಯ ತೆರಿಗೆ ಕಾಯ್ದೆಯಲ್ಲಿನ 139ಎಎ ಸೆಕ್ಷನ್‌ ಅನ್ನು ಎತ್ತಿ ಹಿಡಿದಿತ್ತು.

ಈ ಹಿಂದೆ ಆಧಾರ್‌ ಮತ್ತು ಪ್ಯಾನ್‌ ಲಿಂಕ್​​ ಮಾಡದಿದ್ದರೂ ಆದಾಯ ತೆರಿಗೆ ವಿವರ ಸಲ್ಲಿಸಬಹುದು ಎಂದು ಹೇಳಲಾಗಿತ್ತು. ಐಟಿ ರಿಟರ್ನ್ಸ್‌ ಸಲ್ಲಿಸಲು ಶ್ರೇಯಾ ಸೇನ್‌ ಮತ್ತು ಜಯಶ್ರೀ ಸಾತ್ಪುತೆ ಎಂಬುವವರಿಗೆ ದೆಹಲಿ ಹೈಕೋರ್ಟ್‌ ಅವಕಾಶ ನೀಡಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂಗೆ ಅರ್ಜಿ ಸಲ್ಲಿಸಿತ್ತು. ಇದೀಗ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ದ್ವಿಸದಸ್ಯ ಪೀಠ ಈ ತೀರ್ಪು ನೀಡಿತ್ತು.

ಕೋರ್ಟ್​ ಆದೇಶದ ಅನುಸಾರವೇ 2019-20ನೇ ಸಾಲಿನ ಆದಾಯ ತೆರಿಗೆ ಲೆಕ್ಕಪತ್ರ ವಿವರವನ್ನು ಸಲ್ಲಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಆಧಾರ್​​ ಮತ್ತು ಪ್ಯಾನ್​​ ಜೋಡಣೆ ಇಲ್ಲದೇ ಐಟಿ ರಿಟರ್ನ್ಸ್​​ ಸಲ್ಲಿಸಲಾಗುವುದಿಲ್ಲ. ಒಂದು ವೇಳೆ ಹಾಗೆಯೇ ಆಗಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೀಠ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಭರ್ಜರಿ ಕೊಡುಗೆ ನೀಡಿದ ಮಾರುತಿ ಸುಜುಕಿ; ಬಿಡುಗಡೆಯಾಗುತ್ತಿದೆ ಸಣ್ಣ ಕಾರು

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಡ್ಯಾನ್ಸ್​ ನೋಡಿ ‘ಸ್ವೀಟ್‘​ ಎಂದ ಬಾಲಿವುಡ್​ ನಟ!
First published:December 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ