ಪಿಎಫ್​ ಹಣ ಪಡೆಯಬೇಕೆಂದ್ರೆ ಆಧಾರ್-ಇಪಿಎಫ್​​ ಲಿಂಕ್ ಮಾಡುವುದು‌ ಕಡ್ಡಾಯ; ಲಿಂಕ್​ ಮಾಡುವ ಸರಳ ಮಾರ್ಗ ಇಲ್ಲಿದೆ

EPF-Aadhaar verification : ನಿಮ್ಮ ಆಧಾರ್ ಕಾರ್ಡ್ ಅನ್ನು  ಪಿಎಫ್‌ನ ಸಾರ್ವತ್ರಿಕ ಖಾತೆ ಸಂಖ್ಯೆಯೊಂದಿಗೆ (ಯುಎಎನ್) ಲಿಂಕ್ ಮಾಡಲು ಆಗಸ್ಟ್​​​ 30 ಕಡೆ ದಿನಾಂಕವಾಗಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಪಿಎಫ್​ ಸವಲತ್ತು ಪಡೆಯಲು ಆಧಾರ್ ಕಾರ್ಡ್ ಅನ್ನು ಉದ್ಯೋಗದಾತರ ಭವಿಷ್ಯನಿಧಿಯೊಂದಿಗೆ (ಇಪಿಎಫ್) ಲಿಂಕ್ ಮಾಡುವುದು ಈಗ ಕಡ್ಡಾಯವಾಗಿದೆ. ನಿಮ್ಮ ಆಧಾರ್ ಕಾರ್ಡ್ ಅನ್ನು  ಪಿಎಫ್‌ನ ಸಾರ್ವತ್ರಿಕ ಖಾತೆ ಸಂಖ್ಯೆಯೊಂದಿಗೆ (ಯುಎಎನ್) ಲಿಂಕ್ ಮಾಡಲು ಆಗಸ್ಟ್​​​ 30 ಕಡೆ ದಿನಾಂಕವಾಗಿದೆ. ಈ ಹೊಸ ನಿಯಮವನ್ನು ಜಾರಿಗೆ ತರಲು ನೌಕರರ ಭವಿಷ್ಯ ನಿಧಿ ಸಂಸ್ಥೆ ಸಾಮಾಜಿಕ ಭದ್ರತೆ 2020 ಸಂಹಿತೆಯ ಸೆಕ್ಷನ್ 142 ಅನ್ನು ತಿದ್ದುಪಡಿ ಮಾಡಿದೆ. ಕೆವೈಸಿ ಅಪ್ಡೇಟ್‌ ಆಗಿರಬಹುದು. ಮುಂಗಡಗಳಿಗಾಗಿ ವಿನಂತಿ, ಹಿಂಪಡೆಯುವಿಕೆ ಇತ್ಯಾದಿ- ಹೀಗೆ ಎಲ್ಲಾ ಪ್ರಯೋಜನಗಳಿಗಾಗಿ ಇಪಿಎಫ್‌ಒ ಆನ್‌ಲೈನ್ ವಿಧಾನದತ್ತ ಸಾಗುತ್ತಿದೆ. ಈ ಹಿನ್ನೆಲೆ ಫಲಾನುಭವಿಯ ಗುರುತನ್ನು ಸ್ಥಾಪಿಸುವುದು ನಿರ್ಣಾಯಕವಾಗುತ್ತದೆ, ಮತ್ತು ಇದಕ್ಕಾಗಿ ಆಧಾರ್ ಕಾರ್ಡ್‌ ಅನ್ನು ಕೇಳಲಾಗುತ್ತಿದೆ

  ಪ್ಯಾನ್ ಮತ್ತು ಆಧಾರ್ ಕಾರ್ಡ್‌ನ ಸಂಪರ್ಕವು ಎಲ್ಲಾ ಬ್ಯಾಂಕುಗಳು, ಪಿಪಿಎಫ್ ಖಾತೆಗಳು ಮತ್ತು ಇಪಿಎಫ್ ಖಾತೆಗಳ ಮೂಲಭೂತ ನಿಮ್ಮ ಗ್ರಾಹಕ (ಕೆವೈಸಿ) ಅವಶ್ಯಕತೆಯಾಗಿದೆ. ಇದನ್ನು ಮಾಡುವಲ್ಲಿ ವಿಫಲರಾದರೆ ಸಾಲ ಪಡೆಯುವ ಸೌಲಭ್ಯ, ಪಿಎಫ್ ಅಕೋಕ್ಯೂಂಟ್‌ಗಳು ನಿರಾಕರಣೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಹಿನ್ನಲೆ ಆಧಾರ್​ ಕಾರ್ಡ್​ ಲಿಂಕ್​ ಮಾಡುವುದು ಮೂಲಭೂತ ಕರ್ತವ್ಯವಾಗಿದೆ ಎಂದು ಕಾನೂನು ಸಂಸ್ಥೆ ಎಂ.ವಿ.ಕಿನಿ ಪಾಲುದಾರ ವಿದಿಶಾ ಕ್ರಿಶನ್ ತಿಳಿಸಿದ್ದಾರೆ.

  ಪಿಎಫ್ ಖಾತೆಗೆ ಆಧಾರ್ ಕಾರ್ಡ್   ಲಿಂಕ್ ಹೇಗೆ

  1) ನೌಕರರ ಭವಿಷ್ಯ ನಿಧಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ - www.epfindia.gov.in ಗೆ ಭೇಟಿ ನೀಡಿ.

  2) ಉದ್ಯೋಗಿಗಳ ಟ್ಯಾಬ್‌ ಬಟನ್‌ ಕ್ಲಿಕ್ ಮಾಡಿ ಮತ್ತು ‘ಯುಎಎನ್ ಸದಸ್ಯ ಇ-ಸೇವಾ’ ಲಿಂಕ್ ಆಯ್ಕೆ ಮಾಡಿ.

  3) ನಿಮ್ಮ ಯುಎಎನ್ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಿ.4) ‘ಟ್ಯಾಬ್ ನಿರ್ವಹಿಸು’ಅಥವಾ ಮ್ಯಾನೇಜ್‌ ಟ್ಯಾಬ್‌ ಅಡಿಯಲ್ಲಿ, ಕೆವೈಸಿ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ.

  5) ನಿಮ್ಮನ್ನು ಬೇರೊಂದು ವೆಬ್‌ ಪೇಜ್‌ಗೆ ಮರು ನಿರ್ದೇಶಿಸಲಾಗುತ್ತದೆ.

  ನಿಮ್ಮ ಇಪಿಎಫ್ ಖಾತೆಯೊಂದಿಗೆ ಲಿಂಕ್ ಮಾಡಲು ಹಲವಾರು ದಾಖಲೆಗಳನ್ನು ಅಪ್‌ಲೋಡ್ ಮಾಡಲು ನೀವು ಅಲ್ಲಿ ಟ್ಯಾಬ್‌ಗಳನ್ನು ಕಾಣಬಹುದು.

  6) ‘ಆಧಾರ್’ಎಂದು ತೋರಿಸುವ ಟ್ಯಾಬ್ ಅನ್ನು ಆಯ್ಕೆ ಮಾಡಿ.

  7) ವಿವರಗಳನ್ನು ಭರ್ತಿ ಮಾಡಿ ಮತ್ತು 'ಸೇವ್‌' ಆಪ್ಷನ್‌ ಮೇಲೆ ಕ್ಲಿಕ್‌ ಮಾಡಿ.

  8) ನಂತರ, ನಿಮ್ಮ ಆಧಾರ್ ಸಂಖ್ಯೆಯನ್ನು ಪರಿಶೀಲಿಸಲಾಗುತ್ತದೆ.

  9) ಉದ್ಯೋಗದಾತರು ಮತ್ತು ಯುಐಡಿಎಐ ನಿಮ್ಮ ವಿವರಗಳನ್ನು ಅನುಮೋದಿಸಿದ ನಂತರ, ನಿಮ್ಮ ಇಪಿಎಫ್ ಖಾತೆಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾಗುತ್ತದೆ.

  ಯುಎಎನ್‌ನೊಂದಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. 1 ಸೆಪ್ಟೆಂಬರ್ 2021 ರಿಂದ ಲಿಂಕ್ ಮಾಡದಿರುವ ಉದ್ಯೋಗಿಗಳಿಗೆ ಪಿಎಫ್ ರವಾನಿಸಲು ಸಾಧ್ಯವಾಗುವುದಿಲ್ಲ ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ಸರಸ್ವತಿ ಕಸ್ತೂರಿ ರಂಗನ್ ಹೇಳಿದ್ದಾರೆ

  ಇದನ್ನು ಓದಿ: ಕೆಲಸಕ್ಕೆ ಅಡ್ಡಿ ಮಾಡುತ್ತಿವೆ ಎಂದು ಎರಡು ದೆವ್ವಗಳ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು

  ಇನ್ನು, ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ ) ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ (ಇಸಿಆರ್) ಫೈಲಿಂಗ್ ಮಾಡುವ ದಿನಾಂಕವನ್ನು ಸೆಪ್ಟೆಂಬರ್​ 1ರವರೆಗೆ ವಿಸ್ತರಿಸಲಾಗಿದೆ, . ಉದ್ಯೋಗದಾತರು ತಮ್ಮ ಆಧಾರ್ ಅನ್ನು ಪಿಎಫ್ ಯುಎಎನ್‌ಗೆ ಲಿಂಕ್ ಮಾಡಿದ ಉದ್ಯೋಗಿಗಳಿಗೆ ಮಾತ್ರ ಇಸಿಆರ್ ಸಲ್ಲಿಸಬಹುದು ಎಂದು ಇಪಿಎಫ್‌ಒ ತಿಳಿಸಿದೆ. ಆಧಾರ್‌ ಸೀಡಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಉದ್ಯೋಗದಾತರು ಆಧಾರ್ ಅಲ್ಲದ ಯುಎಎನ್‌ಗೆ ಪ್ರತ್ಯೇಕ ಇಸಿಆರ್ ಸಲ್ಲಿಸಬಹುದು ಎಂದು ನಿಯಂತ್ರಕ ಸಂಸ್ಥೆ ತಿಳಿಸಿದೆ

  ಹೊಸ ಸಾಮಾಜಿಕ ಭದ್ರತಾ ಸಂಹಿತೆ 2002 ರ ಅಡಿಯಲ್ಲಿ, ಈ ಸಂಹಿತೆಯಡಿ ಪ್ರಯೋಜನಗಳನ್ನು ಬಯಸುವ ನೌಕರರನ್ನು ಗುರುತಿಸುವ ಉದ್ದೇಶದಿಂದ ಆಧಾರ್ ಸಂಖ್ಯೆಯನ್ನು ಒದಗಿಸಬೇಕಾಗುತ್ತದೆ. ಸಾಮಾಜಿಕ ಭದ್ರತಾ ಸಂಹಿತೆ, 2002 ಇನ್ನೂ ಜಾರಿಗೆ ಬಂದಿಲ್ಲವಾದರೂ, ಆಧಾರ್ ಒದಗಿಸುವ ಅಗತ್ಯವನ್ನು ಕಡ್ಡಾಯಗೊಳಿಸುವ ಈ ನಿರ್ದಿಷ್ಟ ನಿಬಂಧನೆಯನ್ನು ಸರ್ಕಾರ ತಿಳಿಸಿದೆ
  Published by:Seema R
  First published: