Adhar Card: ನಿಮ್ಮ ಆಧಾರ್ ಕಾರ್ಡ್ ಅಸಲಿಯೋ, ನಕಲಿಯೋ ತಿಳಿಯುವುದು ಹೇಗೆ? ಇಲ್ಲಿದೆ ವಿವರ..

Adhar Card: ಈ ಲಿಂಕ್ ಮೂಲಕ https://resident.uidai.gov.in/ 2 ಸರಳ ಹಂತಗಳಲ್ಲಿ ಆನ್‍ಲೈನ್‍ನಲ್ಲಿ ಆಧಾರ್ ಅನ್ನು ಪರಿಶೀಲಿಸಬಹುದು. ಜೊತೆಗೆ ವಂಚನೆ ಮತ್ತು ನಕಲಿ ಆಧಾರ್ ಕಾರ್ಡ್‍ಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನಾಗರಿಕರು ಕ್ರಮಗಳನ್ನು ತೆಗೆದುಕೊಳ್ಳಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಈ ಹಿಂದೆ ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಆಧಾರ್ ಕಾರ್ಡ್ ವಂಚಕರ ಬಗ್ಗೆ ಮಾಹಿತಿ ನೀಡಿತ್ತು. ಆಧಾರ್ ಕಾರ್ಡ್ ನೀಡುವ ಘಟಕವು ಜಾಗರೂಕರಾಗಿರಬೇಕು ಮತ್ತು ಗುರುತಿನ ಪುರಾವೆಯಾಗಿ ಸ್ವೀಕರಿಸುವ ಮೊದಲು ಆಧಾರ್ ಕಾರ್ಡ್‍ಗಳನ್ನು ಪರಿಶೀಲಿಸುವಂತೆ ಎಚ್ಚರಿಸಿದೆ. ಟ್ವೀಟ್‍ನಲ್ಲಿ ಯುಐಡಿಎಐ ಎಲ್ಲಾ 12-ಅಂಕಿಯ ಸಂಖ್ಯೆಗಳು ಆಧಾರ್ ಅಲ್ಲ ಎಂದು ವಂಚಕರ ವಿರುದ್ಧ ನಾಗರಿಕರಿಗೆ ಎಚ್ಚರಿಕೆ ನೀಡಿದೆ.ಟ್ವೀಟ್‍ನಲ್ಲಿ, ಆಧಾರ್ ಕಾರ್ಡ್‌ ನೀಡುವ ಪ್ರಾಧಿಕಾರವು, “ಎಲ್ಲಾ 12-ಅಂಕಿಯ ಸಂಖ್ಯೆಗಳು ಆಧಾರ್ ಅಲ್ಲ. ಗುರುತಿನ ಪುರಾವೆಯಾಗಿ ಸ್ವೀಕರಿಸುವ ಮೊದಲು ಆಧಾರ್ ಅನ್ನು ಪರಿಶೀಲಿಸಬೇಕು'' ಎಂದು ಶಿಫಾರಸು ಮಾಡಲಾಗಿದೆ.


ಈ ಲಿಂಕ್ ಮೂಲಕ https://resident.uidai.gov.in/ 2 ಸರಳ ಹಂತಗಳಲ್ಲಿ ಆನ್‍ಲೈನ್‍ನಲ್ಲಿ ಆಧಾರ್ ಅನ್ನು ಪರಿಶೀಲಿಸಬಹುದು. ಜೊತೆಗೆ ವಂಚನೆ ಮತ್ತು ನಕಲಿ ಆಧಾರ್ ಕಾರ್ಡ್‍ಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನಾಗರಿಕರು ಕ್ರಮಗಳನ್ನು ತೆಗೆದುಕೊಳ್ಳಬಹುದು.


ಹಂತ 1:ಮೊದಲು ಯುಐಡಿಎಐ ಅಧಿಕೃತ ಪೋರ್ಟಲ್‌ಗೆ ಹೋಗಬೇಕು ಮತ್ತು ವೆಬ್‍ಸೈಟ್‍ನ ಮೇಲಿನ ಬಲಭಾಗದಲ್ಲಿ, ಡ್ರಾಪ್-ಡೌನ್ ಮೆನುವಿನಲ್ಲಿರುವ 'ನನ್ನ ಆಧಾರ್' ಎಂಬ ಆಯ್ಕೆಯನ್ನು ಆರಿಸಿ.


ಹಂತ 2: ಡ್ರಾಪ್-ಡೌನ್ ಮೆನುವಿನಲ್ಲಿ, 'ಆಧಾರ್ ಸಂಖ್ಯೆಯನ್ನು ಪರಿಶೀಲಿಸಿ' ಎಂಬ ಆಯ್ಕೆಯನ್ನು ಆರಿಸಿ. ಈ ಆಯ್ಕೆಯು 'ಆಧಾರ್ ಸೇವೆಗಳು' ಎಂಬ ವಿಭಾಗದ ಅಡಿಯಲ್ಲಿ ಕಾಣಬಹುದು.


ಹಂತ 3: ಇದು ನಿಮ್ಮನ್ನು ಹೊಸ ಪುಟಕ್ಕೆ ಕರೆದೊಯ್ಯುತ್ತದೆ, ಅಲ್ಲಿ ಕ್ಯಾಪ್ಚಾದೊಂದಿಗೆ 12-ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ. ನೀವು ಪರಿಶೀಲಿಸಲು ಬಯಸುವ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು ಕೆಳಭಾಗದಲ್ಲಿರುವ 'ಪರಿಶೀಲಿಸಲು ಮುಂದುವರಿಯಿರಿ' ಎಂಬ ಬಟನ್ ಕ್ಲಿಕ್ ಮಾಡಿ.


ಇದನ್ನೂ ಓದಿ: ಕೋವಿಡ್ ಮೂರನೇ ಅಲೆ; ಮಕ್ಕಳಿಗೆ ಸಮರ್ಪಕ ಚಿಕಿತ್ಸಾ ವ್ಯವಸ್ಥೆ ಇಲ್ಲ: ತಜ್ಞರ ಸಮಿತಿ ವರದಿ

ಮೇಲಿನ ಎಲ್ಲಾ ಹಂತಗಳನ್ನು ನೀವು ಪೂರ್ಣಗೊಳಿಸಿದ ನಂತರ, ನಿಮ್ಮನ್ನು ಆಧಾರ್ ಕಾರ್ಡ್‍ನ ಮಾನ್ಯತೆಯ ವಿವರಗಳನ್ನು ಪ್ರದರ್ಶಿಸುವ ಹೊಸ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ. ಕಾರ್ಡ್ ಎಂದಾದರೂ ನೀಡಲಾಗಿದೆಯೇ ಎಂದು ಇದು ನಿಮಗೆ ತಿಳಿಸುತ್ತದೆ. ಅದನ್ನು ನೀಡದಿದ್ದರೆ, ಅದು ನಕಲಿ ಎಂದು ನಿಮಗೆ ಈ ಮೂಲಕ ತಿಳಿಯುತ್ತದೆ.


ನೀವು ತಕ್ಷಣ ಯುಐಡಿಎಐ ವೆಬ್‍ಸೈಟ್‍ಗೆ ಪ್ರವೇಶಿಸಲು ಸಾಧ್ಯವಾಗದಿದ್ದರೆ ಮತ್ತು ತಕ್ಷಣವೇ ಪರಿಶೀಲನೆ ಮಾಡಲು ಬಯಸಿದರೆ, ನೀವು ಯುಐಡಿಎಐ ಆಧಾರ್ ಸಂಖ್ಯೆಯನ್ನು ಫೋನಿನಲ್ಲಿ ಎಂ ಆಧಾರ್ ಆ್ಯಪ್ ಮೂಲಕ ಪರಿಶೀಲಿಸುವ ಅವಕಾಶವಿದೆ. ಈ ಆ್ಯಪ್ ನಿಮಗೆ ಗೂಗಲ್ ಪ್ಲೇಸ್ಟೋರ್ ಮತ್ತು ಆ್ಯಪಲ್‌ ಸ್ಟೋರ್‌ನಲ್ಲಿ ಲಭ್ಯವಿದೆ.


ಇತರ ಜನರ ಆಧಾರ್ ಕಾರ್ಡ್ ಸಂಖ್ಯೆಗಳನ್ನು ಪರಿಶೀಲಿಸುವುದಲ್ಲದೆ ಮತ್ತು ನೀವು ಮೋಸ ಹೋಗದಂತೆ ನೋಡಿಕೊಳ್ಳುವುದರ ಜೊತೆಗೆ, ನಿಮ್ಮ ಸ್ವಂತ ಆಧಾರ್ ಕಾರ್ಡ್‍ನ ಭದ್ರತೆಯನ್ನು ಕಾಪಾಡಲು ಹಲವು ಮಾರ್ಗಗಳಿವೆ. ನಿಮ್ಮ ಆಧಾರ್ ಕಾರ್ಡ್‍ನ ಭದ್ರತೆಯನ್ನು ನೀವು ಹೇಗೆ ಖಚಿತಪಡಿಸಿಕೊಳ್ಳಬಹುದು ಎಂಬುದರ ಕುರಿತು ಯುಐಡಿಎಐ ಕೆಲವು ಮೂಲಭೂತ ಮಾರ್ಗಸೂಚಿಗಳನ್ನು ಒದಗಿಸಿದೆ.


1) ಸಾರ್ವಜನಿಕ ಕಂಪ್ಯೂಟರ್‌ಗಳಿಂದ ಡೌನ್‍ಲೋಡ್ ಮಾಡಿದ ಎಲ್ಲಾ ಇ-ಆಧಾರ್ ಅಂಶಗಳನ್ನು ಡಿಲೀಟ್ ಮಾಡಿ
2) ಯಾವುದೇ ಸಂದರ್ಭದಲ್ಲಿ ನೀವು ನಿಮ್ಮ ಒನ್-ಟೈಮ್ ಪಾಸ್‍ವರ್ಡ್ (OTP) ಅನ್ನು ಯಾರೊಂದಿಗೂ ಹಂಚಿಕೊಳ್ಳಬಾರದು.
3) ಇತರರು ನಿಮ್ಮ ಮೊಬೈಲ್ ಸಂಖ್ಯೆಗಳನ್ನು ನಿಮ್ಮ ಆಧಾರ್ ಕಾರ್ಡ್‍ಗೆ ಲಗತ್ತಿಸಲು ಅಥವಾ ಲಿಂಕ್ ಮಾಡಲು ಅನುಮತಿಸಬೇಡಿ.
4) ವರ್ಚುವಲ್ ಐಡಿ (ವಿಐಡಿ) ಬಳಸಿ. ಇದು ತಾತ್ಕಾಲಿಕ ಹಿಂತೆಗೆದುಕೊಳ್ಳಬಹುದಾದ 16 ಅಂಕಿಯ ಯಾದೃಚ್ಛಿಕ ಸಂಖ್ಯೆಯಾಗಿದ್ದು, ನೀವು ದೃಢೀಕರಣ ಅಥವಾ ಇ-ಕೆವೈಸಿ ವಹಿವಾಟು ನಡೆಸಬೇಕಾದಾಗ ಆಧಾರ್ ಸಂಖ್ಯೆಯ ಸ್ಥಳದಲ್ಲಿ ಇದನ್ನು ಬಳಸಬಹುದು. ಇದು ಸೂಕ್ತವಾಗಿರುತ್ತದೆ. ಏಕೆಂದರೆ ಆಧಾರ್ ಸಂಖ್ಯೆಯನ್ನು ವಿಐಡಿಯಿಂದ ಪಡೆಯಲಾಗುವುದಿಲ್ಲ.
5) ನಿಮ್ಮ ಬಯೋಮೆಟ್ರಿಕ್ ಲಾಕ್ ಸಕ್ರಿಯಗೊಳಿಸಿ. ಇದನ್ನು ಯುಐಡಿಎಐ ವೆಬ್‍ಸೈಟ್ ಅಥವಾ ಎಸ್‍ಎಂಎಸ್ ಮೂಲಕ ಮಾಡಬಹುದು. ಅಲ್ಲಿ ಕಾರ್ಡುದಾರರು ಕಾರ್ಡ್ ಲಾಕ್ ಮಾಡಬಹುದು ಅಥವಾ ಅನ್‍ಲಾಕ್ ಮಾಡಬಹುದು. ವಂಚನೆಯನ್ನು ತಡೆಗಟ್ಟುವಲ್ಲಿ ಇದು ಹೆಚ್ಚು ಪರಿಣಾಮಕಾರಿಯಾಗಿದೆ.
6) ನಿಮ್ಮ ಆಧಾರ್ ದೃಢೀಕರಣದ ಇತಿಹಾಸವನ್ನು ನಿಯಮಿತವಾಗಿ ಪರಿಶೀಲಿಸಿ ಎಲ್ಲವೂ ನಿರ್ದಿಷ್ಟವಾಗಿದೆ ಎಂದು ಖಚಿತಪಡಿಸಿಕೊಳ್ಳಿ.




7) ಇತ್ತೀಚೆಗೆ, ಆಧಾರ್ ಟ್ವಿಟ್ಟರ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಹೊರತಂದಿದೆ, ಇದು 'ಐರಿಸ್ ವೆರಿಫಿಕೇಶನ್' ಅನ್ನು ಉತ್ತೇಜಿಸುತ್ತದೆ. ಸಂಸ್ಥೆಯು ಇದನ್ನು ದೋಷರಹಿತ ದೃಢೀಕರಣ ವಿಧಾನ ಎಂದು ಹೇಳಿಕೊಂಡಿದೆ. ಇದರಿಂದ ಆಧಾರ್ ಹೆಚ್ಚು ಸುರಕ್ಷಿತವಾಗಿರುತ್ತದೆ.


Published by:Sandhya M
First published: