Murder: ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡ್ತೀರಾ? ಮನೆಗೆ ಬಂದು ಗುಂಡು ಹಾರಿಸ್ತಾರೆ ಹುಷಾರ್!

ನೀವು ಸೋಶಿಯಲ್ ಮೀಡಿಯಾಗಳಲ್ಲಿ ಆ್ಯಕ್ಟೀವ್ ಆಗಿದ್ದೀರಾ? ಕಂಡ ಕಂಡದ್ದಕ್ಕೆಲ್ಲ ಕಮೆಂಟ್ ಮಾಡ್ತೀರಾ? ಹಾಗಿದ್ರೆ ಈ ಸ್ಟೋರಿ ತಪ್ಪದೇ ಓದಿ. ಇಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದಕ್ಕೆ ಹಾಡಹಗಲೆ ಕೊಲೆಯೇ ನಡೆದುಹೋಗಿದೆ!

ಆರೋಪಿ ಹಾಗೂ ಮೃತ ವಿದ್ಯಾರ್ಥಿನಿ

ಆರೋಪಿ ಹಾಗೂ ಮೃತ ವಿದ್ಯಾರ್ಥಿನಿ

  • Share this:
ಉತ್ತರಾಖಂಡ: ಈಗಿನ ಯುವಕ (Boys), ಯುವತಿಯರು (Girls) ಕಾಲೇಜ್‌ನಲ್ಲಿ (College) ಸರಿಯಾಗಿ ಓದುತ್ತಾರೆೋ ಇಲ್ಲವೋ ಗೊತ್ತಿಲ್ಲ. ಆದ್ರೆ ಸೋಶಿಯಲ್ ಮೀಡಿಯಾಗಳಲ್ಲಿ (Social Media) ಮಾತ್ರ ಸದಾ ಆ್ಯಕ್ಟೀವ್ (Active) ಆಗಿ ಇರುತ್ತಾರೆ. ಪ್ರತಿ ದಿನ ತಾವು ಏನೇನ್ ಮಾಡ್ತೀವಿ ಅನ್ನೋದನ್ನೆಲ್ಲ ತಂದೆ ತಾಯಿಗೆ ಹೇಳ್ತಾರೋ ಇಲ್ವೋ, ಗೊತ್ತಿಲ್ಲ. ಆದ್ರೆ ಅದನ್ನೆಲ್ಲ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಅಪ್‌ಡೇಟ್ (Update) ಮಾಡ್ತಾನೇ ಇರ್ತಾರೆ. ಅದಕ್ಕೊಂದಿಷ್ಟು ಲೈಕ್ಸ್ (Likes), ಕಮೆಂಟ್ಸ್ (Comments) ಬರುತ್ತೆ. ಆ ಕಮೆಂಟ್ಸ್‌ಗೆ ಮತ್ತೆ ಕೆಲವರು ರಿಪ್ಲೈ (Replay) ಮಾಡ್ತಾರೆ. ಕೆಲವರು ಅದೇ ಕಾರಣಕ್ಕೆ ಸೋಶಿಯಲ್ ಮೀಡಿಯಾಗಳಲ್ಲೇ ಕಿತ್ತಾಡಿಕೊಳ್ಳುತ್ತಾರೆ. ಅಷ್ಟೇ ಆಗಿದ್ರೆ ಪರವಾಗಿರಲಿಲ್ಲ. ಆದ್ರೆ ಇಲ್ಲೊಂದು ಘಟನೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಕ್ಕೆ ಕೊಲೆಯೇ (Murder) ನಡೆದು ಹೋಗಿದೆ.

ಹಾಸ್ಟೆಲ್‌ಗೆ ಬಂದು ವಿದ್ಯಾರ್ಥಿನಿಯನ್ನು ಕೊಂದು ಹೋದ ಯುವಕ

ಇಲ್ಲೊಂದು ಘಟನೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್‌ನಲ್ಲಿ ಇದ್ದು, ಕಾಲೇಜ್‌ಗೆ ಹೋಗುತ್ತಾ ಇದ್ದಳು. ಆಕೆ ಇದ್ದ ಹಾಸ್ಟೆಲ್‌ ಬಳಿ ವಿದ್ಯಾರ್ಥಿಯೊಬ್ಬ ಬೈಕ್‌ನಲ್ಲಿ ಬಂದಿದ್ದಾನೆ. ಹೀಗೆ ಬಂದವನೇ ಮಾತನಾಡಬೇಕು ಬಾ ಅಂತ ಅವಳನ್ನು ಕರೆದಿದ್ದಾನೆ. ಬಳಿಕ ಇಬ್ಬರಿಗೂ ಜಗಳ ಆಗಿದೆ. ಕೊನೆಗೆ ಜಗಳ ವಿಪರೀತಕ್ಕೆ ಹೋಗಿ ಆಕೆಯನ್ನು ಹಿಡಿದು ಎಳೆದಾಡಿದ್ದಾನೆ. ಕೊನೆಗೆ ಬಂದೂಕಿನಿಂದ ಆಕೆಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.

ಈ ಭಯಾನಕ ಘಟನೆ ನಡೆದಿದ್ದು ಎಲ್ಲಿ?

ಉತ್ತರಾಖಂಡ್ ರಾಜ್ಯದ ಡೆಹ್ರಾಡೂನ್‌ನಲ್ಲಿ ಇಂಥದ್ದೊಂದು ಭಯಾನಕ ಘಟನೆ ನಡೆದಿದೆ. ಡೆಹ್ರಾಡೂನ್​​ನ ಸಿದ್ಧಾರ್ಥ ಕಾಲೇಜಿನಲ್ಲಿ ಡಿ ಫಾರ್ಮಾ ವಿದ್ಯಾರ್ಥಿನಿ ವಂಶಿಕಾ ಬನ್ಸಾಲ್ ಎಂಬಾಕೆಯನ್ನು ಆಕೆಯ ಸಹಪಾಠಿ ವಿದ್ಯಾರ್ಥಿ ಆದಿತ್ಯ ತೋಮರ್ ಎಂಬಾತ ಗುಂಡು ಹಾರಿಸಿ, ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ: Crime: 70ರ ಮುದುಕನಿಗೆ 20ರ ಹುಡುಗಿಯೇ ಬೇಕಂತೆ! ಚಪಲ ತೀರಿಸಿಕೊಳ್ಳಲು ಕಳ್ಳತನ ಮಾಡ್ತಿದ್ದವನಿಗೆ 2 ಮದುವೆ!

 ಸ್ಥಳದಲ್ಲಿಯೇ ಮೃತಪಟ್ಟ ವಿದ್ಯಾರ್ಥಿನಿ

ವಿದ್ಯಾರ್ಥಿನಿ ವಂಶಿಕಾ ಬನ್ಸಾಲ್ ತನ್ನ ಸ್ನೇಹಿತೆಯೊಂದಿಗೆ ರಾಯ್​ಪುರ ಠಾಣೆ ವ್ಯಾಪ್ತಿಯ ದಾದಾ ನಗರದಲ್ಲಿ ಹಾಸ್ಟೆಲ್​​ವೊಂದರಲ್ಲಿ ವಾಸವಾಗಿದ್ದಳು. ಅಲ್ಲಿಂದಲೇ ಕಾಲೇಜ್‌ಗೆ ಬರುತ್ತಿದ್ದಳು. ಆಕೆಯನ್ನು ಹುಡುಕಿ ಹಾಸ್ಟೆಲ್‌ಗೇ ಬಂದಿದ್ದ ಆದಿತ್ಯ, ಆಕೆಯನ್ನು ಕೊಂದು ಎಸ್ಕೇಪ್‌ ಆಗಿದ್ದಾನೆ. ಎದೆಗೆ ಗುಂಡು ತಗುಲಿದ್ದರಿಂದ ವಂಶಿಕಾ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಳು.

ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದ್ದ ಜಗಳ

ಅಂದಹಾಗೆ ಮೃತ ವಂಶಿಕಾ ಹಾಗೂ ಆರೋಪಿ ಆದಿತ್ಯ ಇಬ್ಬರೂ ಒಂದೇ ಕಾಲೇಜ್‌ನ ವಿದ್ಯಾರ್ಥಿಗಳು. ಇಬ್ಬರೂ ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಆ್ಯಕ್ಟೀವ್ ಆಗಿದ್ದರು. ಈಗೊಂದು ತಿಂಗಳ ಹಿಂದೆ ವಂಶಿಕಾ ಸೋಷಿಯಲ್​ ಮೀಡಿಯಾದಲ್ಲಿ ಒಂದು ಫೋಟೋ ಅಪ್ಲೋಡ್ ಮಾಡಿದ್ದಳು. ಆ ಫೋಟೊಕ್ಕೆ ಆದಿತ್ಯ ಒಂದು ಕಮೆಂಟ್​ ಮಾಡಿದ್ದ. ಇದೇ ಕಮೆಂಟ್​ ವಿಚಾರಕ್ಕೆ ವಂಶಿಕಾ ಮತ್ತು ಆದಿತ್ಯ ನಡುವೆ ಗಲಾಟೆಯಾಗಿತ್ತು.

ಕಾಲಿಗೆ ಬೀಳಿಸಿ ಕ್ಷಮೆ ಕೇಳಿಸಿದ್ದ ವಂಶಿಕಾ

ಸೋಶಿಯಲ್ ಮೀಡಿಯಾದ ಕಾಮೆಂಟ್‌ನಿಂದ ಇಬ್ಬರ ನಡುವೆ ಜಗಳ ಶುರುವಾಗಿತ್ತು. ವಂಶಿಕಾ ತನ್ನ ಸ್ನೇಹಿತರ ಬಳಿಯೂ ಈ ಬಗ್ಗೆ ಹೇಳಿಕೊಂಡಿದ್ದಳು. ಆದಿತ್ಯ ಮತ್ತು ವಂಶಿಕಾ ಸಹಪಾಠಿಗಳಾಗಿದ್ದರಿಂದ ಸಹಜವಾಗಿ ಈಕೆಗೆ ಸ್ನೇಹಿತರಾಗಿದ್ದವರೇ ಅವನಿಗೂ ಗೊತ್ತಿರುವವರೇ ಆಗಿದ್ದರು. ವಂಶಿಕಾ ಸ್ನೇಹಿತರೆಲ್ಲ ಸೇರಿ, ಆದಿತ್ಯನ ಬಳಿ ಕ್ಷಮೆ ಕೇಳಿಸಿದ್ದರೂ. ಅದೂ ಕೂಡ ಆತ ವಂಶಿಕಾಳ ಕಾಲುಮುಟ್ಟಿ ಕ್ಷಮೆ ಕೇಳುವಂತೆ ಮಾಡಿದ್ದರು.

ಸ್ನೇಹಿತರ ಮುಂದೆ ಆದ ಅಪಮಾನಕ್ಕೆ ಪ್ರತಿಕಾರ

ಸ್ನೇಹಿತರ ಮುಂದೆ ವಂಶಿಕಾ ತನಗೆ ಅಪಮಾನ ಮಾಡಿದಳು ಅಂತ ಆದಿತ್ಯ ಆಕ್ರೋಶ ಗೊಂಡಿದ್ದ. ಇದೇ ವಿಚಾರ ಕಾಲೇಜ್‌ನಲ್ಲಿ ಮತ್ತೆ ಮತ್ತೆ ಚರ್ಚೆಯಾಗ್ತಿರೋದ್ರಿಂದ ಇನ್ನಷ್ಟು ಸಿಟ್ಟು ನೆತ್ತೇಗೇರಿತ್ತು. ಹೀಗಾಗಿ ಕೋಪದ ಕೈಗೆ ಬುದ್ದಿ ಕೊಟ್ಟು ಗುಂಡು ಹೊಡೆದು ವಂಶಿಕಾಳನ್ನು ಸಾಯಿಸಿದ್ದಾನೆ..

ಇದನ್ನೂ ಓದಿ: Video: ಬಾಂಡ್ಲಿ ತಲೆಯಲ್ಲೇ ಬರ್ಬೇಕು ಎಂದ ಸೀನಿಯರ್ಸ್! Ragingಗೆ ಹೆದರಿ ತಲೆ ಬೋಳಿಸ್ಕೊಂಡ ಸ್ಟೂಡೆಂಟ್ಸ್!

ಪೊಲೀಸರಿಂದ ಆರೋಪಿ ಆದಿತ್ಯ ಅರೆಸ್ಟ್

ವಂಶಿಕಾ ಸಾವನ್ನಪ್ಪುತ್ತಿದ್ದಂತೆ ಭಯಪಟ್ಟ ಆದಿತ್ಯ ಗನ್ ಅಲ್ಲೇ ಎಸೆದು, ಬೈಕ್ ಬಿಟ್ಟು ಎಸ್ಕೇಪ್ ಆಗಿದ್ದ. ಘಟನೆ ನಡೆದ ಮಾಹಿತಿ ಪಡೆದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಸ್ಥಳದಲ್ಲಿ ಇದ್ದವರನ್ನು ವಿಚಾರಣೆ ನಡೆಸಿದಾಗ ಸಿಕ್ಕ ಮಾಹಿತಿ ಆಧಾರದ ಮೇಲೆ ಪೊಲೀಸ್ ತಂಡ ಆರೋಪಿ ಪತ್ತೆ ಕಾರ್ಯ ಶುರು ಮಾಡಲಾಗಿತ್ತು. ಕೆಲವೇ ಹೊತ್ತಲ್ಲಿ ಆರೋಪಿ ಆದಿತ್ಯನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆದಿತ್ಯ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ.
Published by:Annappa Achari
First published: