• Home
  • »
  • News
  • »
  • national-international
  • »
  • Lover Murder: ಶ್ರದ್ಧಾ ಹತ್ಯೆ ಕೇಸ್‌ನಂತೆ ಮತ್ತೊಂದು ರಾಕ್ಷಸೀ ಕೃತ್ಯ, 4 ದಿನ ಪ್ರೇಯಸಿ ಮೃತದೇಹ ಬಚ್ಚಿಟ್ಟಿದ್ದ ಪ್ರಿಯಕರ!

Lover Murder: ಶ್ರದ್ಧಾ ಹತ್ಯೆ ಕೇಸ್‌ನಂತೆ ಮತ್ತೊಂದು ರಾಕ್ಷಸೀ ಕೃತ್ಯ, 4 ದಿನ ಪ್ರೇಯಸಿ ಮೃತದೇಹ ಬಚ್ಚಿಟ್ಟಿದ್ದ ಪ್ರಿಯಕರ!

ಕೊಲೆಯಾದ ಯುವತಿ ಮತ್ತು ಆರೋಪಿ ಪ್ರಿಯಕರ

ಕೊಲೆಯಾದ ಯುವತಿ ಮತ್ತು ಆರೋಪಿ ಪ್ರಿಯಕರ

ಪ್ರಿಯಕರನೇ ತನ್ನ ಪ್ರಿಯತಮೆಯನ್ನು ಕೊಂದು, ಆಕೆಯ ಮೃತದೇಹವನ್ನು ತನ್ನದೇ ಮೆಡಿಕಲ್ ಸ್ಟೋರ್ಸ್‌ನಲ್ಲಿ 4 ದಿನಗಳ ಕಾಲ ಬಚ್ಚಿಟ್ಟಿದ್ದ ಘಟನೆ ನಡೆದಿದೆ. ಶ್ರದ್ಧಾ ವಾಲ್ಕರ್ ಕೊಲೆ ಕೇಸ್‌ ಕರಾಳ ನೆನಪು ಮಾಸುವ ಮುನ್ನವೇ ಈ ಘಟನೆ ಬೆಳಕಿಗೆ ಬಂದಿದೆ.

  • News18 Kannada
  • Last Updated :
  • Chhattisgarh, India
  • Share this:

ರಾಯಪುರ, ಛತ್ತೀಸ್‌ಗಢ್: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಶ್ರದ್ಧಾ ವಾಲ್ಕರ್ (Shraddha Walker) ಎಂಬ ಯುವತಿಯ ಭೀಕರ ಹತ್ಯೆ ಕೇಸ್‌ನ (murder case) ತನಿಖೆ ಮುಂದುವರೆದಿದೆ. ಆಕೆಯ ಪಾಪಿ ಪ್ರಿಯಕರ ಅಫ್ತಾಬ್ ಪೂನಾವಾಲ (Aftab Poonawala) ಎಂಬಾತ ಶ್ರದ್ಧಾಳನ್ನು ಭೀಕರವಾಗಿ ಕೊಲೆ ಮಾಡಿದ್ದ.  ಮೇ 18ರಂದು ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ (South Delhi's Mehrauli) ಅಫ್ತಾಬ್‌ ಪೂನವಾಲ ಪ್ರೇಯಸಿ ಶ್ರದ್ಧಾ ವಾಲ್ಕರ್‌ ಕತ್ತುಸೀಳಿ ಕೊಂದಿದ್ದ. ಬಳಿಕ ಆಕೆಯ ದೇಹವನ್ನು ಸುಮಾರು 35 ಭಾಗಗಳಾಗಿ ಕತ್ತರಿಸಿ ಮೂರು ವಾರಗಳ ಕಾಲ ಫ್ರಿಡ್ಜ್‌ನಲ್ಲಿಟ್ಟಿದ್ದ. ಪ್ರತಿ ದಿನ ಒಂದೊಂದೇ ಪಾರ್ಟ್‌ ತೆಗೆದುಕೊಂಡು ಹೋಗಿ, ಹತ್ತಿರದ ಕಾಡು ಪ್ರದೇಶದಲ್ಲಿ ಎಸೆದು ಬರುತ್ತಿದ್ದ. ಸತ್ಯ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಈ ಘಟನೆಯ ತನಿಖೆ ಚುರುಕಿನಿಂದ ಸಾಗಿದೆ. ಅತ್ತ ಛತ್ತೀಸ್‌ಗಡದಲ್ಲೂ (Chhattisgarh) ಇದಕ್ಕೆ ಹೋಲುವಂತದ್ದೇ ಘಟನೆ ನಡೆದಿದೆ. ಇಲ್ಲಿ ಪಾಪಿ ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನು ಕೊಂದು, ಆಕೆಯ ಮೃತದೇಹವನ್ನು (Dead Body) ಮೆಡಿಕಲ್ ಸ್ಟೋರ್‌ನಲ್ಲಿ (Medical Stores) 4 ದಿನಗಳ ಕಾಲ ಬಚ್ಚಿಟ್ಟಿದ್ದ!


ಪ್ರಿಯಕರನಿಂದಲೇ ಪ್ರಿಯತಮೆಯ ಕೊಲೆ


ಪ್ರಿಯಕರನೇ ತನ್ನ ಪ್ರಿಯತಮೆಯನ್ನು ಕೊಂದು, ಆಕೆಯ ಮೃತದೇಹವನ್ನು ತನ್ನದೇ ಮೆಡಿಕಲ್ ಸ್ಟೋರ್ಸ್‌ನಲ್ಲಿ 4 ದಿನಗಳ ಕಾಲ ಬಚ್ಚಿಟ್ಟಿದ್ದ. ಇಂಥದ್ದೊಂದು ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಮೆಡಿಕಲ್ ಸ್ಟೋರ್‌ನ ಮಾಲೀಕ ಆಶಿಶ್ ಸಾಹು ಎಂಬಾತ ತನ್ನ ಗೆಳತಿ ಪ್ರಿಯಾಂಕಾ ಎಂಬಾತಳನ್ನು ಕೊಲೆ ಮಾಡಿದ್ದಾಗಿ ತಿಳಿದು ಬಂದಿದೆ. ಶ್ರದ್ಧಾ ವಾಲ್ಕರ್ ಕೊಲೆ ಕೇಸ್‌ ಕರಾಳ ನೆನಪು ಮಾಸುವ ಮುನ್ನವೇ ಈ ಘಟನೆ ಬೆಳಕಿಗೆ ಬಂದಿದೆ.


ಮೊದಲು ಪರಿಚಯ, ನಂತರ ಪ್ರೀತಿ, ಆಮೇಲೆ ವ್ಯವಹಾರ!
ಮೃತ ಪ್ರಿಯಾಂಕಾ ಹಾಗೂ ಆರೋಪಿ ಆಶಿಶ್ ಸಾಹು ಇಬ್ಬರೂ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಂತೆ.  ಪ್ರಿಯಾಂಕಾ ಬಿಲಾಸ್‌ಪುರದ ಹಾಸ್ಟೆಲ್‌ನಲ್ಲಿ ಛತ್ತೀಸ್‌ಗಢ್‌ ರಾಜ್ಯ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಪ್ರಿಯಾಂಕಾ ಮತ್ತು ಆಶಿಶ್ ಸಾಹು ಮಧ್ಯೆ ಆತ್ಮಿಯತೆ ಬೆಳೆಯಿತು. ನಂತರ ಅವರಿಬ್ಬರು ಪ್ರೇಮಿಗಳಾದರು. ನಂತರ ಇಬ್ಬರು ಒಟ್ಟಿಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದರು ಅಂತ ತಿಳಿದು ಬಂದಿದೆ.


ಇದನ್ನೂ ಓದಿ: Mangaluru Auto Blast: ಮಂಗಳೂರಿನಲ್ಲಿ ಆಟೋ ಸ್ಫೋಟಿಸಿದ್ದು ಉಗ್ರರಾ? ನಿಜಕ್ಕೂ ಅವರ ಟಾರ್ಗೆಟ್ ಯಾರಾಗಿದ್ದರು?


ಹಣದ ವಿಚಾರಕ್ಕೆ ಇಬ್ಬರ ನಡುವೆ ವೈಮನಸ್ಸು


ಈ ವ್ಯವಹಾರದ ನಡುವೆ ಆಶಿಶ್ ಸಾಹು ಪ್ರಿಯಾಂಕಾಳಿಂದ ಆಗಾಗ ಹಣಕಾಸಿನ ಸಹಾಯ ಪಡೆಯುತ್ತಿದ್ದಳಂತೆ. ಹೀಗಿದ್ದಾಗ ಪ್ರಿಯಾಂಕಾಗೆ ಷೇರು ಮಾರುಕಟ್ಟೆಯ ಹೂಡಿಕೆಯಲ್ಲಿ ಅಪಾರ ಪ್ರಮಾಣದ ನಷ್ಟ ಆಗಿತ್ತಂತೆ. ಭಾರೀ ನಷ್ಟದ ನಂತರ ತನ್ನಿಂದ ಸಾಲ ಪಡೆದಿದ್ದ 11 ಲಕ್ಷ ರೂಪಾಯಿಯನ್ನು ಹಿಂದಿರುಗಿಸುವಂತೆ ಆಶಿಶ್‌ಗೆ ಒತ್ತಡ ಹೇರುತ್ತಿದ್ದಳು ಎಂದು ಬಿಲಾಸ್‌ಪುರದ ಹಿರಿಯ ಪೊಲೀಸ್ ಅಧೀಕ್ಷಕ ಪಾರುಲ್ ಮಾಥುರ್ ತಿಳಿಸಿದ್ದಾರೆ.


ಮೆಡಿಕಲ್ ಸ್ಟೋರ್‌ನಲ್ಲಿ 4 ದಿನ ಇತ್ತು ಮೃತದೇಹ!


ಹೀಗೆ ಹಣಕಾಸಿನ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಬಳಿಕ ಅದು ವಿಪರೀತಕ್ಕೆ ತಿರುಗಿ ಸಿಟ್ಟಿನ ಭರದಲ್ಲಿ ಅಶಿಶ್ ಸಾಹು ಪ್ರಿಯಾಂಕಾಳನ್ನು ಕೊಂದಿದ್ದಾನೆ. ಬಳಿಕ ನಾಲ್ಕು ದಿನಗಳ ಕಾಲ ಆಕೆ ಮೃತದೇಹವನ್ನು ತನ್ನ ಅಂಗಡಿಯಲ್ಲಿಟ್ಟು, ಅಂಗಡಿ ಕ್ಲೋಸ್ ಮಾಡಿದ್ದಾನೆ.


ಇದನ್ನೂ ಓದಿ: Shraddha Murder Case: ಶ್ರದ್ಧಾ ದೇಹ ಕಟ್ ಮಾಡಲು 10 ಗಂಟೆ ಬೇಕಾಯ್ತಂತೆ! ಪಾಪಿ ಅಫ್ತಾಬ್ ಜೊತೆ ಇನ್ನಿಬ್ಬರು ಇದ್ರಾ?


ಕಾರಿನಲ್ಲಿ ಮನೆಗೆ ತೆಗೆದುಕೊಂಡು ಹೋಗುವಾಗ ಆರೋಪಿ ಅರೆಸ್ಟ್


ಇತ್ತ ಪ್ರಿಯಾಂಕಾ ಮನೆಯವರು ಮಗಳು ಕಾಣದೇ ಪೊಲೀಸರಿಗೆ ದೂರು ನೀಡಿದ್ದಾರೆ. ಅದರ ಅನ್ವಯ ತನಿಖೆ ನಡೆಸಿದ ಪೊಲೀಸರು, ಅಶಿಶ್‌ ಮೇಲೆ ಕಣ್ಣಿಟ್ಟಿದ್ದರು. ಇತ್ತ ಶವ ವಿಲೇವಾರಿ ಮಾಡಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಅಶಿಶ್ ಸಾಹು, ಪ್ರಿಯಾಂಕಾಳ ಮೃತದೇಹವನ್ನು ಬಟ್ಟೆಯೊಂದರಲ್ಲಿ ಸುತ್ತಿ ಕಾರಿನಲ್ಲಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದ. ಇದೇ ವೇಳೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Published by:Annappa Achari
First published: