• Home
  • »
  • News
  • »
  • national-international
  • »
  • Love Dhoka: ಆ ಹುಡುಗಿ ಪಾಲಿಗೆ ಪ್ರಿಯಕರನೇ ವಿಲನ್! ಅತ್ಯಾಚಾರದಿಂದ ನೊಂದು ವಿಷ ಕುಡಿದ ಸಂತ್ರಸ್ತೆ

Love Dhoka: ಆ ಹುಡುಗಿ ಪಾಲಿಗೆ ಪ್ರಿಯಕರನೇ ವಿಲನ್! ಅತ್ಯಾಚಾರದಿಂದ ನೊಂದು ವಿಷ ಕುಡಿದ ಸಂತ್ರಸ್ತೆ

ಬಂಧಿತ ಆರೋಪಿ

ಬಂಧಿತ ಆರೋಪಿ

ಪ್ರೀತಿ ಪ್ರೇಮದ (Love) ಹೆಸರಲ್ಲಿ ಆತ ಆಕೆಯ ಮನಸ್ಸು ಕೆಡಿಸಿದ. ಆತನನ್ನು ನಂಬಿದ ಆಕೆ, ಆತ ಹೇಳಿದ ಕಡೆಗಳಲ್ಲೆಲ್ಲ ಹೋದಳು. ಹೀಗೆ ಆತನ ಹಿಂದೆ ಹೋದ ಆಕೆ ಮೇಲೆ ಆತ ಮೃಗದಂತೆ ಎರಗಿಬಿಟ್ಟಿದ್ದಾನೆ. ಬಳಿಕ ಮದುವೆ (Marriage) ಆಗುವುದಾಗಿ ನಂಬಿಸಿ ಮತ್ತೆ ಮತ್ತೆ ಅತ್ಯಾಚಾರ ಮಾಡಿದ್ದಾನೆ. ಇದರಿಂದ ನೊಂದ ಆಕೆ ಇದೀಗ ದುಡುಕಿನ ನಿರ್ಧಾರ ಕೈಗೊಂಡು ಬಿಟ್ಟಿದ್ದಾಳೆ.

ಮುಂದೆ ಓದಿ ...
  • Share this:

ಮಹಾರಾಷ್ಟ್ರ: ಆಕೆ ಏನೂ ಅರಿಯದ ಅಮಾಯಕಿ. ಕಾಲೇಜ್‌ (College) ಓದುತ್ತಿದ್ದವಳು ತಾನಾಯ್ತು, ತನ್ನ ವಿದ್ಯಾಭ್ಯಾಸ (Studies) ಆಯ್ತು ಅಂತ ಇದ್ದಳು. ಆದ್ರೆ ಆಕೆ ಬಾಳಲ್ಲಿ ಬಂದವನೇ ಈ ಯುವಕ. ಪ್ರೀತಿ ಪ್ರೇಮದ (Love) ಹೆಸರಲ್ಲಿ ಆತ ಆಕೆಯ ಮನಸ್ಸು ಕೆಡಿಸಿದ. ಆತನನ್ನು ನಂಬಿದ ಆಕೆ, ಆತ ಹೇಳಿದ ಕಡೆಗಳಲ್ಲೆಲ್ಲ ಹೋದಳು. ಹೀಗೆ ಆತನ ಹಿಂದೆ ಹೋದ ಆಕೆ ಮೇಲೆ ಆತ ಮೃಗದಂತೆ ಎರಗಿಬಿಟ್ಟಿದ್ದಾನೆ. ಬಳಿಕ ಮದುವೆ (Marriage) ಆಗುವುದಾಗಿ ನಂಬಿಸಿ ಮತ್ತೆ ಮತ್ತೆ ಅತ್ಯಾಚಾರ ಮಾಡಿದ್ದಾನೆ. ಇದರಿಂದ ನೊಂದ ಆಕೆ ಇದೀಗ ದುಡುಕಿನ ನಿರ್ಧಾರ ಕೈಗೊಂಡು, ತನ್ನ ಜೀವಕ್ಕೆೇ ಕುತ್ತು ತಂದುಕೊಟ್ಟು ಬಿಟ್ಟಿದ್ದಾಳೆ.


ಆನ್‌ಲೈನ್‌ನಲ್ಲಿ ವಿಷ ತಿರಿಸಿಕೊಂಡು ಕುಡಿದ ಸಂತ್ರಸ್ತೆ


ಮಹಾರಾಷ್ಟ್ರದಲ್ಲಿ ಬದ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಬದ್ಲಾಪುರದಲ್ಲಿ ಅತ್ಯಾಚಾರ ಸಂತ್ರಸ್ತೆ ಆನ್‌ಲೈನ್ ಸೈಟ್‌ನಿಂದ ವಿಷ ಖರೀದಿಸಿದ್ದಳು. ಬಳಿಕ ಅದೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.


ಕಾಲೇಜ್‌ ಯುವತಿಯನ್ನು ಪ್ರೀತಿಯಲ್ಲಿ ಬೀಳಿಸಿದ ಯುವಕ


ಸಂತ್ರಸ್ತೆ ಕಾಲೇಜ್‌ನಲ್ಲಿ ಓದುತ್ತಿದ್ದು, ಸಂತ್ರಸ್ತೆಯು ಕಳೆದ 5 ತಿಂಗಳಿಂದ ಬದಲಾಪೂರ ಪೂರ್ವ ಭಾಗದ ಖರವಾಯಿ ಎಂಬಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದಳು. ತಾನಾಯಿತು, ತನ್ನ ಕಾಲೇಜು, ಪಾಠ ಆಯ್ತು ಅಂತ ಇದ್ದಳು. ಅಂತವಳ ಮನಸ್ಸನ್ನು ಓರ್ವ ಹುಡುಗ ಕೆಡಿಸಿ, ಪ್ರೀತಿ ಪ್ರೇಮದ ಬಲೆಗೆ ಬೀಳಿಸಿದ್ದ.


ಇದನ್ನೂ ಓದಿ: Crime News: ಸರಸಕ್ಕೆ ಕರೆದು ಪ್ರಿಯಕರನ ಮರ್ಮಾಂಗಕ್ಕೇ ಕತ್ತರಿ! ಅರ್ಜೆಂಟಲ್ಲಿ ಓಡೋಡಿ ಬಂದವ ಆಸ್ಪತ್ರೆ ಪಾಲು!


ಶಿವಸೇನೆ ಮಾರ್ಜಿ ಕಾರ್ಪೋರೇಟರ್ ಪುತ್ರನಿಂದ ದೋಖಾ


ಆರೋಪಿಯನ್ನು 25 ವರ್ಷದ ಮಹೇಂದ್ರ ಬೋರ್ ಎಂದು ಗುರುತಿಸಲಾಗಿದೆ. ಈತ ಶಿವಸೇನೆಯ ಮಾಜಿ ಕಾರ್ಪೋರೇಟರ್ ಪುತ್ರ ಎಂಬುದು ಬೆಳಕಿಗೆ ಬಂದಿದೆ. ಉಲ್ಹಾಸ್‌ನಗರದ ಮನೇರೆ ಪ್ರದೇಶದಲ್ಲಿ ವಾಸಿಸುತ್ತಿರುವ ಮಹೇಂದ್ರ ಭೋರ್ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದು, ದೋಖಾ ಮಾಡಿದ್ದಾನೆ.


ಕಾರಿನಲ್ಲೇ ಯುವತಿ ಮೇಲೆ ಅತ್ಯಾಚಾರ


2017 ರಲ್ಲಿ ಅದೇ ಪರಿಸರದಲ್ಲಿ ವಾಸಿಸುತ್ತಿದ್ದ ಮಹೇಂದ್ರನೊಂದಿಗೆ ಆಕೆಯ ದೋಸ್ತಿ ಆಗಿತ್ತು. ವರ್ಷ ಕಳೆಯುವಷ್ಟರಲ್ಲಿ ಇವರ ದೋಸ್ತಿ ಲವ್ ಆಗಿ ಬದಲಾಗಿತ್ತು. ಆದರೆ, ಪ್ರೇಮದ ಹೆಸರಲ್ಲಿ ಆತ ಕಿರುಕುಳ ನೀಡಿದ್ದರಿಂದ ಅವಳು ಆತನೊಂದಿಗೆ ಮಾತು ನಿಲ್ಲಿಸಿದ್ದಳು. ಹೆಚ್ಚೂಕಡಿಮೆ ಎರಡು ವರ್ಷ ಇಬ್ಬರ ಮಧ್ಯೆ ಯಾವುದೇ ಮಾತುಕತೆ ಇರಲಿಲ್ಲ. ಇದಾದ ನಂತರ ಅದು ಹೇಗೋ ಇಬ್ಬರ ಮಧ್ಯೆ ಸಂಪರ್ಕ ಏರ್ಪಟ್ಟಿತ್ತು. ಈ ಮಧ್ಯೆ ಒಂದು ದಿನ ಯುವಕ ಆಕೆಯನ್ನು ಸುತ್ತಾಡಿಸುವ ನೆಪದಲ್ಲಿ ಕಾರಿನಲ್ಲಿ ಕುಳ್ಳಿರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ.


ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಯುವತಿ


ಇದಾದ ಮೇಲೆ ಯುವತಿಗೆ ನಿನ್ನನ್ನು ಮದುವೆ ಆಗುತ್ತೀನಿ ಅಂತ ಆಮಿಷ ಒಡ್ಡಿದ್ದಾನೆ. ಆತನ ಮಾತನ್ನು ನಂಬಿದ ಯುವತಿ, ಮತ್ತೆ ಮತ್ತೆ ಆತನ ಕೈಗೆ ಸಿಕ್ಕಿದ್ದಾಳೆ. ಹೀಗೆ ಮದುವೆಯ ಆಮಿಷ ಒಡ್ಡಿ ಹಲವು ಬಾರಿ ಅತ್ಯಾಚಾರ ಎಸಗಿದ್ದ. ಬಳಿಕ ಸಂತ್ರಸ್ತೆಯನ್ನು ಮದುವೆಯಾಗಲು ಮಹೇಂದ್ರ ನಿರಾಕರಿಸಿದ್ದಾನೆ ಎನ್ನಲಾಗಿದೆ. ಇದರಿಂದ ಮನನೊಂದ ಯುವತಿ ವಿಷ ಕುಡಿಯಲು ನಿರ್ಧರಿಸಿದ್ದಾಳೆ.


ಇದನ್ನೂ ಓದಿ: Beef: ಮುಸ್ಲಿಂ ಹುಡುಗಿ ಮದ್ವೆಯಾದ ಹಿಂದೂ ಯುವಕ ಆತ್ಮಹತ್ಯೆ! ಗೋಮಾಂಸ ತಿನ್ನಿಸಿದ್ದಕ್ಕೆ ನೊಂದು ಸೂಸೈಡ್


ಆನ್‌ಲೈನ್‌ನಲ್ಲಿ ವಿಷ ತರಿಸಿಕೊಂಡು ಕುಡಿದ ಯುವತಿ


ವಿಷ ಕುಡಿಯೋದಕ್ಕೆ ನಿರ್ಧರಿಸಿದ ಸಂತ್ರಸ್ತೆ ಆನ್‌ಲೈನ್‌ನಲ್ಲಿ ವಿಷಕ್ಕಾಗಿ ಹುಡುಕಿದ್ದಾಳೆ.  ಆನ್‌ಲೈನ್‌ನಲ್ಲಿ 50 ಗ್ರಾಂ ವಿಷವನ್ನು ಆರ್ಡರ್ ಮಾಡಿದ್ದಾಳೆ. ಬಳಿಕ ವಿಷ ತರಿಸಿಕೊಂಡು ಕುಡಿದಿದ್ದಾಳೆ. ಇದೀಗ ಸಂತ್ರಸ್ತೆ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Published by:Annappa Achari
First published: