Murder Case: ಪ್ರೇಯಸಿಯನ್ನೇ ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿದ ಪಾಪಿ ಪ್ರಿಯಕರ! ಎಸ್ಕೇಪ್ ಆಗುತ್ತಿದ್ದವ ಸಿಕ್ಕಿಬಿದ್ದಿದ್ದೇ ರೋಚಕ ಕಥೆ

ಹೋಟೆಲ್ ರೂಂ ಒಳಗೆ ಹೋಗುವಾಗ ಸರಾಗವಾಗಿ ಸೂಟ್ಕೇಸ್ ತೆಗೆದುಕೊಂಡು ಹೋಗಿದ್ದ ಆತ, ವಾಪಸ್ ಬರುವಾಗ ಮಾತ್ರ ಸೂಟ್ಕೇಸ್ನ ಭಾರ ತಾಳಲಾರದೇ ತಿಣುಕಾಡುತ್ತಿದ್ದ. ಇದನ್ನು ನೋಡಿ ಅನುಮಾನಗೊಂಡ ಸಿಬ್ಬಂದಿ, ಪೊಲೀಸರಿಗೆ ವಿಷಯ ತಿಳಿಸಿದ್ರು. ಬಳಿಕ ಪೊಲೀಸರು ಬಂದು ಸೂಟ್ಕೇಸ್ ಓಪನ್ ಮಾಡಿ ನೋಡಿದಾಗ ಎಲ್ಲರೂ ಬೆಚ್ಚಿ ಬಿದ್ದಿದ್ರು!

ಬಂಧಿತ ಆರೋಪಿ

ಬಂಧಿತ ಆರೋಪಿ

  • Share this:
ಉತ್ತರಾಖಂಡ್: ಅವರಿಬ್ಬರು ಪ್ರೇಮಿಗಳು (Lovers), ಅದ್ಯಾವುದೋ ಕಾರಣಕ್ಕೆ ಇಬ್ಬರು ಹೋಟೆಲ್‌ಗೆ (Hotel) ಬಂದಿದ್ದರು. ಆಕೆ ಜೊತೆ ಬಂದಿದ್ದ ಆತನ ಕೈಯಲ್ಲಿ ದೊಡ್ಡದೊಂದು ಸೂಟ್‌ಕೇಸ್ ಇತ್ತು. ಸ್ವಲ್ಪ ಹೊತ್ತು ಹೋಟೆಲ್ ರೂಮಿನಲ್ಲೇ (Room) ಅವರಿಬ್ಬರು ಇದ್ದರು. ಅದಾದ ಬಳಿಕ ಆತ ಒಬ್ಬನೇ ಹೋಟೆಲ್‌ ರೂಮಿನಿಂದ ಹೊರ ಬಂದ. ಹೋಗುವಾಗ ಸರಾಗವಾಗಿ ಸೂಟ್‌ಕೇಸ್ (Suitcase) ತೆಗೆದುಕೊಂಡು ಹೋಗಿದ್ದ ಆತ, ಹೋಟೆಲ್‌ ರೂಂನಿಂದ ವಾಪಸ್ ಬರುವಾಗ ಮಾತ್ರ ಸೂಟ್‌ಕೇಸ್‌ನ ಭಾರ ತಾಳಲಾರದೇ ತಿಣುಕಾಡುತ್ತಿದ್ದ. ಇದನ್ನು ನೋಡಿ ಅನುಮಾನಗೊಂಡ ಸಿಬ್ಬಂದಿ, ಆತನನ್ನು ವಿಚಾರಿಸಿದರು. ಆದರೆ ಆತ ಸತ್ಯ ಬಾಯ್ಬಿಡಲಿಲ್ಲ. ಕೊನೆಗೆ ಪೊಲೀಸರಿಗೆ (Police) ವಿಷಯ ತಿಳಿಸಿ, ಅವರೂ ಸ್ಥಳಕ್ಕೆ ಬಂದಿದ್ದಾಯ್ತು. ಕೊನೆಗೆ ಸೂಟ್‌ಕೇಸ್ ಓಪನ್ (Open) ಮಾಡಿ ನೋಡಿದಾಗ ಪೊಲೀಸರು ಸೇರಿದಂತೆ, ಅಲ್ಲಿದ್ದವರೆಲ್ಲ ಆಘಾತಕ್ಕೆ ಒಳಗಾದರು. ಕಾರಣ ಆತನ ಜೊತೆ ಹೋಟೆಲ್‌ ರೂಂಗೆ ಬಂದಿದ್ದ ಯುವತಿ ಶವ (Dead Body) ಆ ಸೂಟ್‌ಕೇಸ್‌ನಲ್ಲಿ ಇತ್ತು!

ಹೋಟೆಲ್‌ಗೆ ಕರೆಸಿ ಕೊಂದು ಬಿಟ್ಟಿದ್ದ ಹಂತಕ

ಅಸಲಿಗೆ ಆ ಯುವಕನಿಗೆ 23 ವರ್ಷ, ಆ ಯುವತಿಗೆ 22 ವರ್ಷ. ಅವರಿಬ್ಬರೂ ಒಬ್ಬರಿಗೊಬ್ಬರು ಪ್ರೀತಿಸುತ್ತಾ ಇದ್ದರಂತೆ. ಇಬ್ಬರ ಪ್ರೀತಿಯ ವಿಚಾರ ಮನೆಯವರಿಗೆ ಗೊತ್ತಾಗಿದೆ. ಯುವತಿ ಮನೆಯಲ್ಲಿ ಇದೇ ಕಾರಣಕ್ಕೆ ದೊಡ್ಡ ರಂಪಾಟವೇ ನಡೆದಿದೆ. ಹೀಗಾಗಿ ಈ ವಿಚಾರ ಮಾತನಾಡಬೇಕು ಬಾ ಅಂತ ಆ ಯುವಕ ಯುವತಿಯನ್ನು ಹೋಟೆಲ್‌ ರೂಂಗೆ ಕರೆಸಿಕೊಂಡಿದ್ದಾನೆ.

ಘಟನೆ ನಡೆದಿರುವುದು ಎಲ್ಲಿ?

ಈ ಭೀಕರ ಘಟನೆ ನಡೆದಿದ್ದು ಉತ್ತರಾಖಂಡ್ ರಾಜ್ಯದ ರೂರ್ಕಿ ಎಂಬಲ್ಲಿ. ಕೊಲೆಯಾದ ಯುವತಿಯನ್ನು ರಾಮ್ಸಾ ಅನ್ಸಾರಿ ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯಕರ ಹರಿದ್ವಾರದ ಜ್ವಾಲಾಪುರ ನಿವಾಸಿ ಗುಲ್ಜೆಬ್ ಹುಸೇನ್ ಅನ್ಸಾರಿ ಎನ್ನಲಾಗಿದೆ.

ಇದನ್ನೂ ಓದಿ: Murder Case: ಗುರಾಯಿಸಿದ ಎಂಬ ಕಾರಣಕ್ಕೆ ಯುವಕನನ್ನೇ ಕೊಂದಿದ್ದ ಪಾಪಿಗಳು! ಹಂತಕರಿಗೆ ಈಗ ಜೀವಾವಧಿ ಶಿಕ್ಷೆ

 ಇಬ್ಬರ ನಡುವೆ ಅರಳಿತ್ತು ಪ್ರೀತಿ

ಗುಲ್ಜೆಬ್ ಹುಸೇನ್ ಅನ್ಸಾರಿ  ಹಾಗೂ ರಾಮ್ಸಾ ಅನ್ಸಾರಿ  ಇಬ್ಬರೂ ಪರಸ್ಪರ ಪ್ರೀತಿಸುತ್ತಾ ಇದ್ದರು. ಈತ ಹರಿದ್ವಾರದ ಜ್ವಾಲಾಪುರ ನಿವಾಸಿಯಾಗಿದ್ದು, ಅಲ್ಲೇ ಕಾಸ್ಮೆಟಿಕ್ ಅಂಗಡಿ ನಡೆಸುತ್ತಿದ್ದ. ಇನ್ನು ರಾಮ್ಸಾ ಅನ್ಸಾರಿ ಕಾರ್ಮಿಕನ ಮಗಳಾಗಿದ್ದು, ಬಿಕಾಂ ಮುಗಿಸಿ, ಕೆಲಸ ಹುಡುಕುತ್ತಾ ಇದ್ದಳು ಎನ್ನಲಾಗಿದೆ.

ಕೊಲೆ ಮಾಡಿ ಬೇರೆಯದ್ದೇ ಕಥೆ ಹೇಳಿದ ಯುವಕ

ರಾಮ್ಸಾ ಅನ್ಸಾರಿ ಶವ ಸೂಟ್‌ಕೇಸ್‌ನಲ್ಲಿ ಕಾಣಿಸುತ್ತಿದ್ದಂತೆ ಗುಲ್ಜೆಬ್ ಹುಸೇನ್ ಅನ್ಸಾರಿ ಬೇರೆಯದ್ದೇ ಕಥೆ ಹೇಳಿದ್ದಾನೆ. ಆರಂಭದಲ್ಲಿ ಆರೋಪಿ ಗುಲ್ಜೇಬ್ ಹೋಟೆಲ್ ಸಿಬ್ಬಂದಿಗೆ ಸಿಕ್ಕಿಬಿದ್ದಾಗ ಆತ ಹೇಳಿದ್ದು ಬೇರೆಯದೇ ಕಥೆ. ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದೇವೆ ಎಂದು ಹೇಳಿದ್ದಾನೆ. ಆದರೆ, ಆಕೆ ಮೊದಲೇ ವಿಷ ಸೇವಿಸಿ ಸಾವನ್ನಪ್ಪಿದ್ದಾಳೆ. ಆಕೆಯ ಶವವನ್ನು ಗಂಗ್ನಾಹರ್‌ನಲ್ಲಿ ವಿಲೇವಾರಿ ಮಾಡಿದ ನಂತರ ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದ.

ಮದುವೆಗೆ ನಿರಾಕರಿಸಿದ್ದಕ್ಕೆ ಕೊಲೆ

ಹುಸೇನ್ ಅನ್ಸಾರಿ  ಹಾಗೂ ರಾಮ್ಸಾ ಅನ್ಸಾರಿ ಪ್ರೀತಿಗೆ ಮನೆಯವರ ವಿರೋಧ ವ್ಯಕ್ತವಾಗಿದೆ. ರಾಮ್ಸಾ ಮನೆಯಲ್ಲಿಬೇರೆ ಗಂಡು ನೋಡಿ, ಆಕೆಯ ಮದುವೆ ತಯಾರಿಯನ್ನೂ ನಡೆಸಿದ್ದರು ಎನ್ನಲಾಗಿದೆ. ಆಕೆಯೂ ನಾನು ಮನೆಯವರ ಮಾತಿನಂತೆ ಬೇರೆ ಮದುವೆಯಾಗುತ್ತೇನೆ ಅಂತ ಈತನಿಗೆ ಹೇಳಿದ್ದಾಳೆ.

ಇದೇ ಕಾರಣಕ್ಕೆ ಆತ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಇನ್ನು ಗುಲ್ಜೇಬ್ ಸಂಪೂರ್ಣ ಪ್ಲಾನ್ ಮಾಡಿಕೊಂಡೇ ಘಟನೆ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸೂಟ್‌ಕೇಸ್ ಅನ್ನು ಈ ಕಾರಣಕ್ಕಾಗಿಯೇ ರೆಡಿ ಮಾಡಿ ಇಟ್ಟುಕೊಂಡಿದ್ದನಂತೆ.

ಇದನ್ನೂ ಓದಿ: Bengal Violence: 8 ಜನರ ಸಜೀವ ದಹನದ ನಂತರ ದೀದಿ ರಾಜ್ಯದಲ್ಲಿ ಹೆಚ್ಚಿದ ಗದ್ದಲ, ಐವರು BJP ಶಾಸಕರು ಅಮಾನತು

ಕೊಲೆಯಾದ ಯುವತಿಯ ತಂದೆ ಮೊಹಮ್ಮದ್ ರಶೀದ್ ಅನ್ಸಾರಿ ನೀಡಿದ ದೂರಿನ ಮೇರೆಗೆ, ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಯುವಕನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಇದೀಗ ಯುವಕನನ್ನು ಬಂಧಿಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.
Published by:Annappa Achari
First published: