• Home
  • »
  • News
  • »
  • national-international
  • »
  • Suicide for Hair Loss: ಕೂದಲು ಉದುರಿದ್ದಕ್ಕೆ ನೊಂದು ಯುವಕ ಆತ್ಮಹತ್ಯೆ, ಡೆತ್‌ ನೋಟ್‌ನಲ್ಲಿತ್ತು ಡಾಕ್ಟರ್ ಹೆಸರು!

Suicide for Hair Loss: ಕೂದಲು ಉದುರಿದ್ದಕ್ಕೆ ನೊಂದು ಯುವಕ ಆತ್ಮಹತ್ಯೆ, ಡೆತ್‌ ನೋಟ್‌ನಲ್ಲಿತ್ತು ಡಾಕ್ಟರ್ ಹೆಸರು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಾಡಲ್ಲೊಂದು ಸೊಪ್ಪು ಸಿಕ್ತದೆ, ಅದನ್ನ ಹಾಕಿದ್ರೆ ಕೂದಲು ಬರುತ್ತದೆ ಅಂತ ಜೋಕ್ ಮಾಡುವಷ್ಟು ಸುಲಭವಲ್ಲ ಕೂದಲು ಉದುರುವ ಸಮಸ್ಯೆಯನ್ನು ಸಹಿಸಿಕೊಳ್ಳುವುದು. ಈ ಸಮಸ್ಯೆಯಿಂದ ಹೆದರಿದ ಯುವಕನೊಬ್ಬ ದುಡುಕಿನ ನಿರ್ಧಾರ ಕೈಗೊಂಡಿದ್ದಾನೆ!

  • News18 Kannada
  • Last Updated :
  • Kerala, India
  • Share this:

ಕೇರಳ: ಪುರುಷ (Man) ಇರಲಿ ಅಥವಾ ಮಹಿಳೆಯೇ (Woman) ಇರಲಿ ಕೂದಲು (Hair) ಎನ್ನುವುದು ಎಲ್ಲರ ಸೌಂದರ್ಯದ (beauty) ಪ್ಲಸ್ ಪಾಯಿಂಟ್. ಆದರೆ ಆಧುನಿಕ ಜೀವನ, ವಿವಿಧ ರೀತಿಯ ಮಾಲಿನ್ಯಗಳು, ರಾಸಾಯನಿಕ ಮಿಶ್ರಿತ ಆಹಾರಗಳು, ಮಾಲಿನ್ಯಕಾರಕ ನೀರು ಇತ್ಯಾದಿಗಳಿಂದ ಅಕಾಲಿಕವಾಗಿ ಕೂದಲುಗಳು ಉದುರುತ್ತವೆ (Hair Falls). ಕಾಡಲ್ಲೊಂದು ಸೊಪ್ಪು ಸಿಕ್ತದೆ, ಅದನ್ನ ಹಾಕಿದ್ರೆ ಕೂದಲು ಬರುತ್ತದೆ ಅಂತ ಜೋಕ್ ಮಾಡುವಷ್ಟು ಸುಲಭವಲ್ಲ ಕೂದಲು ಉದುರುವ ಸಮಸ್ಯೆಯನ್ನು (Problem) ಸಹಿಸಿಕೊಳ್ಳುವುದು. ಹಾಗಂತ ಇದೇನು ದೊಡ್ಡ ಸಮಸ್ಯೆಯೂ ಅಲ್ಲ. ಆದರೆ ಇದೇ ಕೂದಲು ಉದುರುವ ಸಮಸ್ಯೆಯಿಂದ ಹೆದರಿದ ಯುವಕನೊಬ್ಬ ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ! ಇಂಥದ್ದೊಂದು ಘಟನೆ ಕೇರಳದ (Kerala) ಕೋಝಿಕೋಡ್ (Kozhikode) ಜಿಲ್ಲೆಯಲ್ಲಿ ನಡೆದಿದೆ.  


ಕೂದಲು ಉದುರಿದ್ದಕ್ಕೆ ನೊಂದು ಯುವಕ ಆತ್ಮಹತ್ಯೆ


ಬಹಳ ಸಮಯದಿಂದ ಔಷಧಿ ಸೇವಿಸಿದರೂ ಹುಬ್ಬು ಸೇರಿದಂತೆ ತಲೆ ಕೂದಲು ಉದುರಿದ ಹಿನ್ನೆಲೆಯಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಆತ್ಮಹತ್ಯೆ ಪತ್ರದಲ್ಲಿ ತನಗೆ ಚಿಕಿತ್ಸೆ ನೀಡಿದ ವೈದ್ಯರೇ ಕಾರಣ ಅಂತ ದೂಷಿಸಿದ್ದಾರೆ.ಕೇರಳದ ಕೋಝಿಕೋಡ್ ಜಿಲ್ಲೆಯ ಅಥೋಲಿ ಗ್ರಾಮದ ನಿವಾಸಿ, 29 ವರ್ಷದ ಪ್ರಶಾಂತ್ ಎಂಬಾತನೇ ಆತ್ಮಹತ್ಯೆಗೆ ಶರಣಾದ ಯುವಕ.


ಆತ್ಮಹತ್ಯೆಗೆ ಶರಣಾದ ಯುವಕ


ಸಾವಿಗೂ ಮುನ್ನ ಡೆತ್‌ ನೋಟ್ ಬರೆದಿಟ್ಟ ಯುವಕ


ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪ್ರಶಾಂತ್ ಡೆತ್ ನೋಟ್ ಬರೆದಿಟ್ಟಿದ್ದಾರೆ. ಆ ಪತ್ರದಲ್ಲಿ  ನ್ನ ಸಾವಿಗೆ ಕೂದಲು ಉದುರುವಿಕೆಯ ಸಮಸ್ಯೆ ಹಾಗೂ ಅದಕ್ಕೆ ಚಿಕಿತ್ಸೆ ನೀಡಿದ ವೈದ್ಯರೇ ಕಾರಣ ಎಂದು ಪ್ರಶಾಂತ್ ಹೇಳಿದ್ದಾರೆ. ಮನೆಯಿಂದ ಹೊರಬರಲೂ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಅಂತ ನೋವಿನಿಂದ ಬರೆದುಕೊಂಡಿದ್ದಾರೆ.


ಇದನ್ನೂ ಓದಿ: Deadly Virus: ಚೀನಾ ತಯಾರಿಸ್ತಿದೆ ಕೋವಿಡ್‌ಗಿಂತಲೂ ಅಪಾಯಕಾರಿ ವೈರಸ್! ಈ ಬಾರಿ ಡ್ರ್ಯಾಗನ್ ರಾಷ್ಟ್ರಕ್ಕೆ ಪಾಕಿಸ್ತಾನ ಸಾಥ್!


ಸುಳ್ಳು ಭರವಸೆ ನೀಡಿದ್ದ ವೈದ್ಯರು


ಅವರು ಚಿಕಿತ್ಸೆ ಪಡೆಯುತ್ತಿರುವ ಕ್ಲಿನಿಕ್‌ನ ಹೆಸರನ್ನು ಉಲ್ಲೇಖಿಸಿದ್ದಾರೆ ಮತ್ತು ಅವರು ತನಗೆ ಸುಳ್ಳು ಭರವಸೆ ನೀಡಿದ್ದಾರೆ ಎಂದು ಹೇಳಲಾದ ವೈದ್ಯರನ್ನೂ ಉಲ್ಲೇಖಿಸಿದ್ದಾರೆ. ಮೊದಲ ಬಾರಿಗೆ ವೈದ್ಯರನ್ನು ಸಂಪರ್ಕಿಸಿದಾಗ ತನಗೆ ಸಣ್ಣ ಕೂದಲು ಉದುರುವ ಸಮಸ್ಯೆ ಇತ್ತು, ಆದರೆ ಕ್ಲಿನಿಕ್‌ನಿಂದ ಔಷಧಿಗಳನ್ನು ತೆಗೆದುಕೊಂಡ ನಂತರ ಅವರ ಸ್ಥಿತಿ ಹದಗೆಡಲು ಪ್ರಾರಂಭಿಸಿತು ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.


2014ರಿಂದಲೂ ಕೂದಲು ಸಮಸ್ಯೆಗೆ ಚಿಕಿತ್ಸೆ


ಪ್ರಶಾಂತ್ ವಾಹನ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಅವರು 2014 ರಿಂದ ಕೂದಲು ಉದುರುವಿಕೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರು ಸೂಚಿಸಿದ ಮಾತ್ರೆಗಳನ್ನು ತೆಗೆದುಕೊಂಡರೂ ಹುಬ್ಬುಗಳು ಮತ್ತು ಮೂಗಿನೊಳಗಿನ ಕೂದಲನ್ನು ಕಳೆದುಕೊಂಡರು. ಕೂದಲು ಉದುರುವುದು ನಿಲ್ಲುತ್ತದೆ ಎಂಬ ಭರವಸೆಯಿಂದ ಅವರು 2020 ರವರೆಗೆ ಔಷಧಿಗಳನ್ನು ತೆಗೆದುಕೊಂಡಿದ್ದಾರಂತೆ.


ಮದುವೆಗೂ ಅಡ್ಡಿಯಾದ ಹೇರ್ ಫಾಲ್ ಸಮಸ್ಯೆ


ಪ್ರಶಾಂತ್ 2014 ರಿಂದ ಕೂದಲು ಉದುರುವಿಕೆ ಸಮಸ್ಯೆಗಾಗಿ ಕೋಝಿಕ್ಕೋಡ್‌ನ ಚರ್ಮ ವಿಶೇಷ ಕೇಂದ್ರದಿಂದ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರು. ದಿನಗಳು ಕಳೆದಂತೆ ಅವರ ಸ್ಥಿತಿ ಹದಗೆಟ್ಟಿತು, ಇದು ಭಾರೀ ಖಿನ್ನತೆಗೆ ಕಾರಣವಾಯಿತು. ಅವರ ಕೂದಲು ಉದುರುವ ಸಮಸ್ಯೆಯು ಅವರ ಎಲ್ಲಾ ಮದುವೆಯ ಪ್ರಸ್ತಾಪಗಳನ್ನು ತಿರಸ್ಕರಿಸಲು ಕಾರಣವಾಗಿತ್ತು ಎನ್ನಲಾಗಿದೆ.


ಇದನ್ನೂ ಓದಿ: Instagram Reels: 24 ಗಂಟೆ ರೀಲ್ಸ್‌ನಲ್ಲೇ ಕಾಲ ಕಳಿತಾಳೆ ಅಂತ ಹೆಂಡ್ತಿಗೆ ಹೊಡೆದ ಗಂಡ! ರೀಲ್ ಅಲ್ಲ ರಿಯಲ್ ಆಗೇ ನಡೀತು ಮರ್ಡರ್!


ಪೊಲೀಸರ ವಿರುದ್ಧ ಕುಟುಂಬಸ್ಥರ ಅಸಮಾಧಾನ


ಪ್ರಶಾಂತ್‌ಗೆ ಹಾರ್ಮೋನ್ ಅಸಮತೋಲನದ ಕಾರಣ ಕೂದಲು ಉದುರುವಿಕೆಗೆ ಕಾರಣವಾಯಿತು ಎಂದು ಕೋಝಿಕ್ಕೋಡ್‌ನಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ. ಇನ್ನು ಪ್ರಶಾಂತ್‌ಗೆ ಚಿಕಿತ್ಸೆ ನೀಡಿದ ಡಾ.ರಫೀಕ್ ವಿರುದ್ಧ ಅಥೋಲಿ ಪೊಲೀಸರಿಗೆ ದೂರು ನೀಡಿದ್ದರೂ ತನಿಖೆಯಿಂದ ಸಮಾಧಾನವಾಗಿಲ್ಲ ಎಂದು ಪ್ರಶಾಂತ್ ಕುಟುಂಬಸ್ಥರು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಯಾವುದೇ ಅಪರಾಧ ಪತ್ತೆಯಾಗಿಲ್ಲ ಎಂದು ಅಥೋಲಿ ಎಸ್‌ಐ ತಿಳಿಸಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Published by:Annappa Achari
First published: