ಕೇರಳ: ಆಕೆ ಇನ್ನೂ ಕಾಲೇಜ್ (College) ಓದಿ, ಕಲಿತು, ತನ್ನ ಭವಿಷ್ಯವನ್ನು (Future) ರೂಪಿಸಿಕೊಳ್ಳಬೇಕಾಗಿದ್ದ ಅಪ್ರಾಪ್ತ ಬಾಲಕಿ (Girl). ಆದರೆ ಆಗಲೇ ಆಕೆ ಯುವಕೊಬ್ಬನ (Young Boy) ಪ್ರೀತಿಯ (Love) ಬಲೆಯಲ್ಲಿ ಬಿದ್ದಿದ್ದಳು. ಆತನೂ ಅಷ್ಟೇ ಆಕೆಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾ ಇದ್ದ. ಆದರೆ ಅವರಿಬ್ಬರ ನಡುವೆ ಅದೇನಾಯ್ತೋ ಏನೋ, ಪ್ರೀತಿಯಲ್ಲಿ ಬಿರುಕು ಮೂಡಿತ್ತು. ಹೀಗಿರುವಾಗಲೇ ಆತನ ಹುಟ್ಟುಹಬ್ಬ (Birth Day) ಬಂದೇ ಬಿಡ್ತು. ಬರ್ತ್ ಡೇ ಸೆಲಬ್ರೇಷನ್ (Celebration) ಮಾಡೋಣ ಬಾ ಅಂತ ಆ ಬಾಲಕಿಯನ್ನು ಯುವಕ ಮನೆಗೇ (House) ಕರೆಸಿಕೊಂಡಿದ್ದ. ಅಲ್ಲೂ ಏನಾಯ್ತೋ ಏನೋ. ಆಕೆಗೆ ಮಾಡಬಾರದ್ದು ಮಾಡಿ ಬಿಟ್ಟಿದ್ದಾನೆ. ಕೊನೆಗೆ ತಾನೂ ಆತ್ಮಹತ್ಯೆಗೆ (Suicide) ಯತ್ನಿಸಿದ್ದಾನೆ.
ಕೇರಳದ ಪಾಲಕ್ಕಾಡ್ನಲ್ಲಿ ನಡೆಯಿತು ದುರಂತ
ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಕೋಡ್ ಎಂಬ ಗ್ರಾಮದಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿ ಹಾಗೂ 23 ವರ್ಷದ ಯುವಕನ ಪ್ರೀತಿ ಕೊಲೆ ಹಾಗೂ ಆತ್ಮಹತ್ಯೆಯಲ್ಲಿ ಕೊನೆಯಾಗಿದೆ. ಸುಬ್ರಹ್ಮಣ್ಯಂ ಎಂಬ ಯುವಕ 17 ವರ್ಷದ ಬಾಲಕಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಬ್ರಹ್ಮಣ್ಯಂ ಎಂಬ ಯುವಕ ಕೊಲೆ ಮಾಡಿದ್ದಾನೆ.
ಕೊನೆಗೆ ತಾನೂ ಬೆಂಕಿ ಹಚ್ಚಿಕೊಂಡ ಪಾಗಲ್ ಪ್ರೇಮಿ
ಬಾಲಕಿ ಮೇಲೆ ಪೆಟ್ರೋಲ್ ಸುರಿದು, ಸುಬ್ರಹ್ಮಣ್ಯಂ ಬೆಂಕಿ ಹಚ್ಚಿದ್ದಾನೆ. ಆಕೆ ನೋವಿನಿಂದ ಕಿರುಚಿಕೊಂಡು, ನೆಲಕ್ಕೆ ಬಿದ್ದು ಹೊರಳಾಡಿದ್ದಾಳೆ. ಆಗ ತಾನೂ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.
ಇದನ್ನೂ ಓದಿ: Viral Video: ಚಲಿಸುತ್ತಿರುವ ಬೈಕ್ ಮೇಲೆಯೇ ರೊಮ್ಯಾನ್ಸ್! ಪ್ರೇಮಿಗಳ ಹುಚ್ಚಾಟಕ್ಕೆ ಛೀ, ಥೂ ಎಂದ ಜನರು
ಇಬ್ಬರ ಪ್ರೀತಿಗೆ ಮನೆಯವರ ವಿರೋಧ
ಇವರಿಬ್ಬರು ತುಂಬಾ ದಿನಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಇವರ ಪ್ರೀತಿಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಕೊನೆಗೆ ಹುಡುಗಿ ಅಪ್ರಾಪ್ತಳಾಗಿದ್ದು, ಆಕೆಗೆ 18 ವರ್ಷ ತುಂಬಿದ ಮೇಲೆ ಮದುವೆ ಮಾಡುವುದಾಗಿ ಹುಡುಗನ ಮನೆಯಲ್ಲಿ ಹೇಳಿದ್ದರು ಎನ್ನಲಾಗಿದೆ. ಮನೆಯವರ ವಿರೋಧದಿಂದಾಗಿ ಪ್ರೇಮಿಗಳು ದೂರವಾಗಿದ್ದರು ಎನ್ನಲಾಗಿದೆ.
ಹುಟ್ಟುಹಬ್ಬದ ದಿನ ಕರೆಸಿಕೊಂಡು ಬೆಂಕಿ ಇಟ್ಟ ಪ್ರೇಮಿ
ಹೀಗಿರುವಾಗ ತನ್ನ ಹುಟ್ಟುಹಬ್ಬದಂದು ಸುಬ್ರಹ್ಮಣ್ಯಂ ಆ ಬಾಲಕಿಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದಾನೆ. ಈ ವೇಳೆ ಆತನ ಸಹೋದರ ಹೊರಗೆ ಹೋಗಿದ್ದರೆ, ತಾಯಿ ಹಾಲು ತರಲು ಮಾರುಕಟ್ಟೆಗೆ ಹೋಗಿದ್ದರು. ಅಷ್ಟರಲ್ಲಿ ಏನಾಯ್ತೋ ಏನೋ, ಸುಬ್ರಹ್ಮಣ್ಯಂ ಆಕೆಗೆ ಬೆಂಕಿ ಹಚ್ಚಿ, ತಾನೂ ಸುಟ್ಟುಕೊಂಡಿದ್ದಾನೆ.
ಆಸ್ಪತ್ರೆಯಲ್ಲಿ ನರಳಾಡಿ ಪ್ರಾಣಬಿಟ್ಟ ಪ್ರೇಮಿಗಳು
ಇಬ್ಬರ ನರಳಾಟ, ಕಿರುಚಾಟ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು ಇಬ್ಬರನ್ನೂ ಮೊದಲು ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಎರ್ನಾಕುಲಂನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಬ್ಬರೂ ಆಸ್ಪತ್ರೆಯಲ್ಲೇ ಪ್ರಾಣ ಬಿಟ್ಟಿದ್ದಾರೆ ಅಂತ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: Love Letter: ಕುಸುಮಾ ನಿನ್ನನ್ನು ಕರೆಯಲು ಬರ್ತೀನಿ; ಬಂತು ವಿಶಾಲ್ ಸಂದೇಶ; ಇಬ್ಬರ ಮದ್ವೆ ನಡೆಯುತ್ತಾ?
ಪೊಲೀಸರಿಂದ ಮುಂದುವರೆದ ತನಿಖೆ
ಈ ಬಗ್ಗೆ ಸ್ಥಳೀಯ ಪೊಲೀಸರು ದೂರು ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ. ಹುಡುಗಿಗೆ 18 ವರ್ಷ ಆದ ಮೇಲೆ ಮದುವೆ ಮಾಡುತ್ತೇವೆ ಎಂದಿದ್ದೆವು ಅಂತ ಯುವಕನ ತಾಯಿ ಹೇಳುತ್ತಾರೆ. ಆದರೆ ಮನೆಯವರ ವಿರೋಧದಿಂದಲೇ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಅಂತ ಸ್ಥಳೀಯರು ಆರೋಪಿಸಿದ್ದಾರೆ. ಹೀಗಾಗಿ ಪೊಲೀಸರು ವಿವಿಧ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ