ಅಮೇರಿಕಾ: ಕೆಲವೊಂದು ಅಪರಾಧ ಪ್ರಕರಣಗಳು (Crime Case) ಹಲವಾರು ವರ್ಷಗಳ ನಂತರ ಬೆಳಕಿಗೆ ಬಂದ ಉದಾಹರಣೆಯನ್ನು ನಾವು ಕೇಳಿದ್ದೇವೆ. ಸಿನಿಮಾಗಳಲ್ಲಿ (Cinema) ಇಂತಹ ಹಲವು ಕ್ರೈಮ್ ಥ್ರಿಲ್ಲರ್ (Crime Thriller) ಕತೆಗಳನ್ನು ನೋಡಿದ್ದೇವೆ. ಯಾವುದೋ ಒಂದು ಸಣ್ಣ ಸುಳಿವು ಕೊಲೆ ಪ್ರಕರಣಗಳನ್ನು ಭೇದಿಸಿದ ಬಗ್ಗೆ ತಿಳಿದಿದ್ದೇವೆ. ಅಂತಹದ್ದೇ ಪ್ರಕರಣದ ಅಮೇರಿಕಾದ (America) ಉಟಾಹ್ ನಗರದಲ್ಲಿ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು ಗಂಡ ಹಠಾತ್ ಸಾವೀಗಾಡದ ನಂತರ ಆ ದುಃಖವನ್ನು ಹೇಗೆ ನಿಯಂತ್ರಣ ಮಾಡಿಕೊಳ್ಳುವುದು ಎಂಬುದರ ಕುರಿತು ಮಕ್ಕಳಿಗಾಗಿ ಪುಸ್ತಕ ಬರೆದಿದ್ದರು. ಆದರೆ ತನಿಖೆಯಲ್ಲಿ ಆಕೆಯೇ ತನ್ನ ಗಂಡನಿಗೆ ಔಷಧ ವಿಷ ಉಣಿಸಿ ಕೊಂದಿದ್ದಾಳೆ ಎಂಬ ಆರೋಪದ ಬಹಿರಂಗವಾಗಿದೆ.
ಸಮ್ಮಿಟ್ ಕೌಂಟಿಯ ಕೌರಿ ಡಾರ್ಡೆನ್ ರಿಚಿನ್ಸ್ ಎಂಬ 33 ವರ್ಷದ ಮಹಿಳೆ ಮಾರ್ಚ್ 4, 2023 ರಂದು ಕೊಲಂಬಸ್‌ನಲ್ಲಿರುವ ಅವರ ವಿಲೋ ಕೋರ್ಟ್ ಮನೆಯಲ್ಲಿ ತನ್ನ ಪತಿ ಎರಿಕ್ ರಿಚಿನ್ಸ್‌ಗೆ ವಿಷ ಹಾಕಿ ಕೊಂದ ಆರೋಪದಲ್ಲಿ ಬಂಧಿಸಲಾಗಿಗೆ ಎಂದು KUTV ವರದಿ ಮಾಡಿದೆ.
ಮಿತಿ ಮೀರಿದ ನೋವು ನಿವಾರಕ ಸೇವನೆಯಿಂದ ಸಾವು
ಮಾಧ್ಯಮ ವರದಿಗಳ ಪ್ರಕಾರ, ಡಾರ್ಡೆನ್ ಕರೆಯ ಮೇರೆಗೆ ಪೊಲೀಸರು ಎರಿಕ್ ಅವರ ಮನೆಗೆ ರಾತ್ರಿ 3.20ರ ಸುಮಾರಿಗೆ ಬಂದಿದ್ದರು. ಆ ಸಂದರ್ಭದಲ್ಲಿ ಆತ ಹಾಸಿಗೆಯ ಕೆಳಗೆ ಬಿದ್ದು ಒದ್ದಾಡುತ್ತಿರುವುದು ಕಂಡುಬಂದಿತ್ತು. ತಕ್ಷಣ ಆತನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿ ಜೀವ ಉಳಿಸುವ ಪ್ರಯತ್ನ ಮಾಡಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಎರಿಕ್ ಸಾವನ್ನಪ್ಪಿದ್ದರು. ವೈದ್ಯಕೀಯ ವರದಿಯಲ್ಲಿ ಎರಿಕ್ ರಿಚಿನ್ಸ್ ಹೆವಿ ಡೋಸ್ ಫೆಂಟಾನಿಲ್ (ನೋವು ನಿವಾರಕ) ಮಾತ್ರೆಗಳ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿತ್ತು.
ಡ್ರಗ್ ಕೇಸ್ನಲ್ಲಿ ಬಂಧಿತನಾಗಿದ್ದವನಿಂದ ಮೆಡಿಸನ್ ಪಡೆದಿದ್ದ ಮಹಿಳೆ
ನ್ಯಾಯಾಲಯದ ದಾಖಲೆಗಳ ಪ್ರಕಾರ, ಡಿಸೆಂಬರ್ 2021 ಮತ್ತು ಫೆಬ್ರವರಿ 2022 ರ ನಡುವೆ, ಸಂತ್ರಸ್ತನ ಪತ್ನಿ ಮಾದಕವಸ್ತು ಆರೋಪದ ಮೇಲೆ ಬಂಧಿಸಲಾದ ವ್ಯಕ್ತಿಗೆ ಹಲವು ಸಂದೇಶ ಕಳುಹಿಸಿದ್ದರು. ಅಲ್ಲದೆ ಆಕೆಯ ಅವರ ಬಳಿ ಹಲವು ಹೆವಿ ಡೋಸ್ ಹೈಡ್ರೊಕೊಡೋನ್ ಮಾತ್ರೆಗಳು ಕಂಡುಬಂದಿವೆ ಎಂದು ನ್ಯಾಯಾಲಯದ ದಾಖಲೆಗಳು ಬಹಿರಂಗಪಡಿಸಿವೆ. ಅಲ್ಲದೆ ಸಂದೇಶಗಳಲ್ಲಿ ಸ್ಟ್ರಾಂಗ್ ಡೊಸೇಜ್ ಇರುವ ಮಾತ್ರೆಗಳು ಬೇಕೆ ಬೇಕು ಎಂದು ಮನವಿ ಮಾಡಿ ತೆಗೆದುಕೊಂಡಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಪೊಲೀಸರಿಗೆ ಕರೆ ಮಾಡಿದ್ದ ಆರೋಪಿ
ಈ ದಂಪತಿ ವ್ಯಾಲೆಂಟೈನ್ಸ್ ಡೇ ಆಚರಿಸಿದ್ದು, ಆ ದಿನ ಡಿನ್ನರ್ ಮಾಡಿದ ನಂತರ, ಎರಿಕ್ ರಿಚಿನ್ಸ್ ಆರೋಗ್ಯದಲ್ಲಿ ಏರು ಪೇರಾಗಿತ್ತು. ಈ ವೇಳೆ ಅವರು ಫೆಂಟಾನಿಲ್ ಮಾತ್ರೆಗಳನ್ನು ನಿಯಮಿತವಾಗಿ ತೆಗೆದುಕೊಂಡಿದ್ದರು. ಅವರು ಮಾರ್ಚ್ 4 ರಂದು ನಿತ್ರಾಣಗೊಂಡಿದ್ದರು.
ಈ ವೇಳೆ ರಿಚಿನ್ಸ್ ಪತ್ನಿ ತಡರಾತ್ರಿ ಪೊಲೀಸರಿಗೆ ಕರೆ ಮಾಡಿ ತನ್ನ ಪತಿ ಮಾತನಾಡುತ್ತಿಲ್ಲ ಎಂದು ಹೇಳಿ ಸಹಾಯ ಕೇಳಿದ್ದರು. ತಕ್ಷಣ ಬಂದ ಪೊಲೀಸರು ವಿಚಾರಿಸಿದಾಗ, ತನ್ನ ಗಂಡನ ಮರಣದ ಗಂಟೆಗಳ ಹಿಂದ ವೋಡ್ಕಾ ಸೇವಿಸಿದ್ದರು ಎಂದಷ್ಟೇ ತಿಳಿಸಿದ್ದರು. ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ರಿಚಿನ್ಸ್ ಓವರ್ ಡೋಸೇಜ್ ಫೆಂಟಾನಿಲ್ ತೆಗೆದುಕೊಂಡಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟವಾಗಿತ್ತು. ತನಿಖೆಯಲ್ಲಿ ಆ ಮಾತ್ರೆಗಳನ್ನು ಆಕೆಯ ತಂದಿರುವುದು, ಆಕೆಯ ಬಳಿ ಮತ್ತಷ್ಟು ಮಾತ್ರೆಗಳು ಪತ್ತೆಯಾದ ನಂತರ ಆಕೆಯನ್ನು ಬಂಧಿಸಲಾಗಿದೆ.
ಮಕ್ಕಳಿಗಾಗಿ ಪುಸ್ತಕ ಬರೆದಿದ್ದ ಆರೋಪಿ
ಇನ್ನು ಗಂಡ ಸತ್ತಿದ್ದರಿಂದ ತನ್ನ ಮೂವರು ಮಕ್ಕಳಿಗೆ ನೋವು ಮರೆಯಲು ಹಾಗೂ ನೆಮ್ಮದಿ ತರುವುದಕ್ಕಾಗಿ 'ಆರ್ ಯು ವಿತ್ ಮಿ?' ಎಂಬ ಪುಸ್ತಕವನ್ನು ಬರೆದಿದ್ದರು. ಈ ಪುಸ್ತಕ ತನ್ನ ಮಕ್ಕಳಿಗಷ್ಟೇ ಅಲ್ಲದೇ ತಂದೆ ಕಳೆದುಕೊಂಡ ಅನೇಕ ಮಕ್ಕಳಿಗೆ ನೋವು ಮರೆಯಲು ನೆರವಾಗಲಿದೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ