ನವದೆಹಲಿ: ತಾಯಿ (Mother) ಅಂದರೆ ದೇವರ ಸಮಾನ (God) ಎನ್ನುತ್ತಾರೆ. ಆಕೆಯ ಸ್ಥಾನಕ್ಕೆ ಬರುವ ಮಲತಾಯಿಯೂ (Step Mother) ತಾಯಿಯಷ್ಟೇ ಪೂಜನೀಯಳು. ಆದರೆ ಅಂತಹ ಮಲತಾಯಿಯ ಮೇಲೆಯೇ ಕಾಮುಕ ಮಲ ಮಗನೊಬ್ಬ (Step Son) ಕಾಮದ ದೃಷ್ಟಿ ಬೀರಿದ್ದಾನೆ. ಅಲ್ಲದೇ ತನ್ನ ತಾಯಿ ಸಮಾನಳು ಎನ್ನುವುದನ್ನೂ ನೋಡದೇ ಮಲತಾಯಿ ಮೇಲೆ ಆ ಮಲಮಗ ಅತ್ಯಾಚಾರ ಮಾಡಿದ್ದಾನೆ. ಸಾಲದ್ದಕ್ಕೆ ಪತಿಯ ಸ್ನೇಹಿತರೂ (Friends) ಕೂಡ ಆ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಾರಂತೆ. ಇದರಿಂದ ನೊಂದ ಆಕೆ ತನ್ನ ಜೀವನವನ್ನೇ ಕೊನೆಗೊಳ್ಳಿಸಿಕೊಳ್ಳಲು ನಿರ್ಧರಿಸಿದ್ದಾಳೆ. ಅದಕ್ಕಾಗಿ ಭಾರತದ ರಾಷ್ಟ್ರಪತಿ (President of India) ದ್ರೌಪದಿ ಮುರ್ಮು (Draupadi Murmu) ಅವರಿಗೆ ಪತ್ರ (Letter) ಬರೆದಿರುವ ಆ ಸಂತ್ರಸ್ತ (Victims) ಮಹಿಳೆ, ತನಗೆ ದಯಾಮರಣ (euthanasia) ನೀಡಿ ಅಂತ ಮನವಿ ಮಾಡಿದ್ದಾಳೆ. ಚಂಡೀಗಡದಲ್ಲಿ (Chandigarh) ಇಂಥದ್ದೊಂದು ಘೋರ ಘಟನೆ ನಡೆದಿದ್ದು, ಇದೀಗ ಈ ಘಟನೆ ಬಗ್ಗೆ ತಿಳಿದ ಜನರೆಲ್ಲ ಬೆಚ್ಚಿ ಬಿದ್ದಿದ್ದಾರೆ.
ಮಲ ಮಗನಿಂದಲೇ ಮಲ ತಾಯಿ ಮೇಲೆ ಅತ್ಯಾಚಾರ
ತನ್ನ ಮಲಮಗನಿಂದ ನಿರಂತರ ಅತ್ಯಾಚಾರಕ್ಕೊಳಗಾದ ಮಹಿಳೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಮಲ ಮಗ ಅಲ್ಲದೇ, ಅವಳದ್ದೇ ಪತಿಯ ಸ್ನೇಹಿತರು ಅತ್ಯಾಚಾರವೆಸಗಿದ್ದಾಗಿ ಹೇಳಿದ್ದು, ಆ ಸಂತ್ರಸ್ತ ಮಹಿಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ‘ದಯಾಮರಣದಿಂದ ಸಾವಿಗೆ ಅನುಮತಿ ನೀಡುವಂತೆ ಕೋರಿ, ಮನವಿ ಮಾಡಿದ್ದಾರೆ.
55 ವರ್ಷದ ರೈತನನ್ನು ಮದ್ವೆಯಾಗಿದ್ದ 30ರ ಮಹಿಳೆ
ಚಂಡೀಗಡದ 30 ವರ್ಷದ ಮಹಿಳೆಯೊಬ್ಬರು 55 ವರ್ಷದ ರೈತನನ್ನು ವಿವಾಹವಾಗಿದ್ದರು, ಬಳಿಕ ವಿಚ್ಛೇದಿತರೂ ಆಗಿದ್ದರು. ಬಳಿಕ ಆ ಮಹಿಳೆ ತನ್ನ ತಾಯಿ, ಸಹೋದರ ಮತ್ತು ಆರು ವರ್ಷದ ಮಗನೊಂದಿಗೆ ಬರೇಲಿಯಲ್ಲಿ ವಾಸವಾಗಿದ್ದಾರೆ. ಮೂರು ವರ್ಷಗಳ ಹಿಂದೆ ಆಕೆಯ ಮಲಮಗ ಅಕ್ರಮ ಸಂಬಂಧಕ್ಕಾಗಿ ಏಪ್ರಿಲ್ನಲ್ಲಿ ತನ್ನನ್ನು ಸಂಪರ್ಕಿಸಿದನು ಮತ್ತು ಅಂದಿನಿಂದ ಪದೇ ಪದೇ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಅಕ್ರಮ ಸಂಬಂಧಕ್ಕೆ ಒಪ್ಪದೇ ಇದ್ದರೆ ಪರಿಣಾಮ ಎದುರಿಸಬೇಕಾದೀತು ಅಂತ ಬೆದರಿಕೆ ಹಾಕಿದ್ದನು. ಹೀಗಾಗಿ ಆರಂಭದಲ್ಲಿ ಆಕೆ ಭಯದಿಂದ ಸುಮ್ಮನೆ ಇದ್ದಳಂತೆ.
ಇದನ್ನೂ ಓದಿ: Madhya Pradesh High Court: ಅತ್ಯಾಚಾರ ಮಾಡಿದ್ದಾನೆ, ಆದರೆ ಕೊಂದಿಲ್ಲ! ಆರೋಪಿಯ ಶಿಕ್ಷೆ ಕಡಿತಗೊಳಿಸಿದ ನ್ಯಾಯಪೀಠ!
ಲೈಂಗಿಕ ದೌರ್ಜನ್ಯದಿಂದ ಗರ್ಭಿಣಿಯಾದ ಮಹಿಳೆ
ಆತನ ನಿರಂತರ ಅತ್ಯಾಚಾರದಿಂದ ನಾನು ಗರ್ಭಿಣಿಯಾದೆ. ಡಿಎನ್ಎ ಪರೀಕ್ಷೆಗೆ ಹೋಗಲು ಬಯಸಿದಾಗ ನನ್ನ ಹೊಟ್ಟೆಗೆ ನಿಷ್ಕರುಣೆಯಿಂದ ಹೊಡೆಯಲಾಯಿತು. ನಂತರ, ಪುರನ್ಪುರದ ಖಾಸಗಿ ಆಸ್ಪತ್ರೆಯಲ್ಲಿ ನನಗೆ ಬಲವಂತವಾಗಿ ಗರ್ಭಪಾತ ಮಾಡಿಸಲಾಯಿತು ಎಂದು ಆಕೆ ಹೇಳಿದ್ದಾರೆ.
ಪತಿಯ ಸ್ನೇಹಿತರಿಂದಲೂ ಅತ್ಯಾಚಾರ
ಇನ್ನು ಜುಲೈ 18 ರಂದು ಪತಿಯ ಸ್ನೇಹಿತನ ಫಾರ್ಮ್ಹೌಸ್ಗೆ ಕರೆದೊಯ್ಯಲಾಯಿತು. ಅಲ್ಲಿ ಆತನ ಸಂಬಂಧಿಕರೊಬ್ಬರು ಮತ್ತು ಇಬ್ಬರು ಸಹೋದ್ಯೋಗಿಗಳು ನನ್ನ ಮೇಲೆ ಅತ್ಯಾಚಾರ ಎಸಗಿದರು ಅಂತ ಮಹಿಳೆ ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಅವರು ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ.
ಆರೋಪಿಗಳನ್ನು ಬಂಧಿಸದ ಪೊಲೀಸರು
ನ್ಯಾಯಾಲಯದ ಆದೇಶದ ನಂತರ ಅಕ್ಟೋಬರ್ 9 ರಂದು ಪುರನ್ಪುರ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದರೂ, ಪೊಲೀಸರು ಆರೋಪಿಗಳನ್ನು ಉದ್ದೇಶಪೂರ್ವಕವಾಗಿಯೇ ಬಂಧಿಸುತ್ತಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಅವರಿಂದ ನನಗೆ ಪದೇ ಪದೇ ಕೊಲೆ ಬೆದರಿಕೆಗಳು ಬರುತ್ತಿದೆ. ನನ್ನ ಮೇಲಿನ ದೌರ್ಜನ್ಯದ ಬಗ್ಗೆ ಮೌನವಾಗಿರುವಂತೆ ಹೆದರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: President: ನನ್ನನ್ನೂ ಭಾರತದ ರಾಷ್ಟ್ರಪತಿ ಮಾಡಿ! ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ ವ್ಯಕ್ತಿ
ದಯಾಮರಣಕ್ಕಾಗಿ ರಾಷ್ಪ್ರಪತಿಗೆ ಪತ್ರ
ಇನ್ನು ಅತ್ಯಾಚಾರ, ಲೈಂಗಿಕ ದೌರ್ಜನ್ಯದಿಂದ ನೊಂದಿರುವ ಸಂತ್ರಸ್ತೆ ದಯಾಮರಣಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ‘ನಾನು ಸಾಕಷ್ಟು ಹೋರಾಟ ಮಾಡಿದ್ದೇನೆ. ನ್ಯಾಯ ಸಿಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇನೆ. ಆದ್ದರಿಂದ, ನಿಮ್ಮ (ರಾಷ್ಟ್ರಪತಿ) ಅನುಮತಿಯೊಂದಿಗೆ ನನ್ನ ಜೀವನವನ್ನು ಅಂತ್ಯಗೊಳಿಸುತ್ತೇನೆ’ ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ