• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Mercy Killing: ದಯಾಮರಣ ಬೇಕು ಅಂತ ವಿದೇಶಕ್ಕೆ ಹೊರಟ ಗೆಳೆಯ, ಆತನನ್ನು ತಡೆಯಲು ಕೋರ್ಟ್ ಮೆಟ್ಟಿಲೇರಿದ ಗೆಳತಿ!

Mercy Killing: ದಯಾಮರಣ ಬೇಕು ಅಂತ ವಿದೇಶಕ್ಕೆ ಹೊರಟ ಗೆಳೆಯ, ಆತನನ್ನು ತಡೆಯಲು ಕೋರ್ಟ್ ಮೆಟ್ಟಿಲೇರಿದ ಗೆಳತಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತದ ವ್ಯಕ್ತಿಯೊಬ್ಬ ಸ್ವಿಡ್ಜರ್‌ಲ್ಯಾಂಡ್‌ಗೆ ಹೋಗಿ, ದಯಾಮರಣಕ್ಕೆ ಒಳಗಾಗುವ ತಯಾರಿ ನಡೆಸಿದ್ದ. ಆದರೆ ಆತನ ವಿದೇಶ ಪ್ರಯಾಣಕ್ಕೆ ಅವಕಾಶ ನೀಡಬಾರದು ಅಂತ ಮನವಿ ಮಾಡಿ, ಬೆಂಗಳೂರು ಮೂಲದ ಮಹಿಳೆಯೊಬ್ಬರು ದೆಹಲಿ ಕೋರ್ಟ್ ಮೊರೆ ಹೋಗಿದ್ದಾರೆ.

  • Share this:

ದೆಹಲಿ: ದಯಾಮರಣವನ್ನು (Euthanasia) ಜೀವನ ನಡೆಸಲಾಗದ ಸ್ಥಿತಿಯಲ್ಲಿರುವ ವ್ಯಕ್ತಿಗಳಿಗೆ ಅವರ ನೋವಿನ ಜೀವನ ಕೊನೆಗಾಣಿಸುವ ನೆಲೆಯಲ್ಲಿ ಒದಗಿಸಲಾಗುತ್ತದೆ. ದಯಾಮರಣಕ್ಕೆ (Mercy Killing) ಸಂಬಂಧಿಸಿದಂತೆ ಬೇರೆ ಬೇರೆ ರಾಷ್ಟ್ರಗಳಲ್ಲಿ ಬೇರೆ ಬೇರೆ ಕಾನೂನು (Law) ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಭಾರತದಲ್ಲಿ (India) ನಮ್ಮ ಸುಪ್ರೀಂ ಕೋರ್ಟ್ (Supreme Court) ಅಥವಾ ಕಾನೂನು ದಯಾಮರಣಕ್ಕೆ ಮಾನ್ಯತೆ ನೀಡಿಲ್ಲ. ಆದರೆ ಸ್ವಿಡ್ಜರ್‌ಲ್ಯಾಂಡ್ (Switzerland) ಸೇರಿದಂತೆ ಹಲವು ದೇಶಗಳಲ್ಲಿ ಕಾನೂನಿನ ಪ್ರಕಾರ ದಯಾಮರಣಕ್ಕೆ ಅವಕಾಶ ಇದೆ. ಈ ನಿಟ್ಟಿನಲ್ಲಿ ಭಾರತದ ವ್ಯಕ್ತಿಯೊಬ್ಬ ಸ್ವಿಡ್ಜರ್‌ಲ್ಯಾಂಡ್‌ಗೆ ಹೋಗಿ, ದಯಾಮರಣಕ್ಕೆ ಒಳಗಾಗಲು ತಯಾರಿ ನಡೆಸಿದ್ದರು. ಆದರೆ ಅವರ ವಿದೇಶ ಪ್ರಯಾಣಕ್ಕೆ ಅವಕಾಶ ನೀಡಬಾರದು ಅಂತ ಮನವಿ ಮಾಡಿ, ಬೆಂಗಳೂರು (Bengaluru) ಮೂಲದ ಮಹಿಳೆಯೊಬ್ಬರು ದೆಹಲಿ ಕೋರ್ಟ್ (Delhi Court) ಮೊರೆ ಹೋಗಿದ್ದಾರೆ.


ದಯಾಮರಣ ಬಯಸಿದ್ದ ನೋಯ್ಡಾ ಮೂಲದ ವ್ಯಕ್ತಿ


ನೋಯ್ಡಾದ ಮೂಲದ 48 ವರ್ಷದ ವ್ಯಕ್ತಿಯೊಬ್ಬ ದಯಾಮರಣ ಬಯಸಿ, ಸ್ವಿಡ್ಜರ್‌ಲ್ಯಾಂಡ್‌ಗೆ ಹೋಗಲು ಅನುಮತಿ ಕೋರಿದ್ದರು.  ಎಪ್ಪತ್ತರ ಹರೆಯದ ತಂದೆ, ತಾಯಿಗೆ ಈತ ಒಬ್ಬನೇ ಮಗನಾಗಿದ್ದು, ಇವರಿಗೆ ಓರ್ವ ಸಹೋದರಿ ಇದ್ದಾರಂತೆ. ಆ ವ್ಯಕ್ತಿ 2014 ರಿಂದ ದೀರ್ಘಕಾಲದ ಆಯಾಸ ಸೇರಿದಂತೆ ಬೇರೆ ಬೇರೆ ಸಿಂಡ್ರೋಮ್‌ನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಸಾಯಲು ಬಯಸಿದ್ದು, ಕಾನೂನಿನ ಪ್ರಕಾರ ದಯಾಮರಣ ಪಡೆಯಲು ಸ್ವಿಡ್ಜರ್‌ಲ್ಯಾಂಡ್‌ಗೆ ಪ್ರಯಾಣಿಸಲು ಬಯಸಿದ್ದರು.


ಆ ವ್ಯಕ್ತಿಗೆ ಏನಾಗಿತ್ತು?


ನೋಯ್ಡಾ ನಿವಾಸಿಯಾದ ಈ ವ್ಯಕ್ತಿ ದೆಹಲಿಯ AIIMS ನಲ್ಲಿ ಫೆಕಲ್ ಮೈಕ್ರೋಬಯೋಟಾ ಟ್ರಾನ್ಸ್‌ಪ್ಲಾಂಟೇಶನ್ ಎಂಬ ಚಿಕಿತ್ಸಾ ವಿಧಾನಕ್ಕೆ ಒಳಗಾಗುತ್ತಿದ್ದರು. ಆದರೆ ದಾನಿಗಳು ಯಾರೂ ಸಿಗದೇ ಇರುವುದರಿಂದ ಚಿಕಿತ್ಸೆ ಮುಂದುವರೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು 2014ರಿಂದ ತೀವ್ರ ರೋಗದಿಂದ ಬಳಲುತ್ತಿದ್ದಾರೆ. ತಾನು ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದು, ಹೀಗಾಗಿ ತನಗೆ ದಯಾ ಮರಣ ಬೇಕು ಅಂತ ಮನವಿ ಮಾಡಿದ್ದಾರೆ.


ಇದನ್ನೂ ಓದಿ: Indian Railways: ₹ 20 ರ ಕೇಸ್, 22 ವರ್ಷಗಳ ನಂತರ ಭಾರತೀಯ ರೈಲ್ವೆ ವಿರುದ್ಧ ಗೆದ್ದ ವ್ಯಕ್ತಿ!


ದೆಹಲಿ ಕೋರ್ಟ್ ಮೊರೆ ಹೋದ ಬೆಂಗಳೂರು ಮೂಲದ ಮಹಿಳೆ


ಇನ್ನು ಈ ವ್ಯಕ್ತಿಯು ದಯಾಮರಣಕ್ಕಾಗಿ ಸ್ವಿಡ್ಜರ್‌ಲ್ಯಾಂಡ್‌ಗೆ ಹೋಗುವುದನ್ನು ತಡೆಯಲು ಬೆಂಗಳೂರು ಮೂಲದ 48 ವರ್ಷದ ಮಹಿಳೆಯೊಬ್ಬರು ದೆಹಲಿ ಕೋರ್ಟ್ ಮೊರೆ ಹೋಗಿದ್ದಾರೆ. ತನ್ನನ್ನು ಆ ವ್ಯಕ್ತಿಯ ಸ್ನೇಹಿತೆ ಅಂತ ಆ ಮಹಿಳೆ ಹೇಳಿಕೊಂಡಿದ್ದಾರೆ.


ದಯಾಮರಣಕ್ಕೆ ಅವಕಾಶ ನೀಡದಂತೆ ಕೋರ್ಟ್‌ಗೆ ಮನವಿ


ಇನ್ನು ಆ ವ್ಯಕ್ತಿ ಸ್ವಿಡ್ಜರ್‌ಲ್ಯಾಂಡ್‌ಗೆ ಹೋಗಿ, ದಯಾಮರಣಕ್ಕೆ ಒಳಗಾಗದಂತೆ ತಡೆಯಬೇಕು ಅಂತ ಆ ಮಹಿಳೆ ದೆಹಲಿ ಕೋರ್ಟ್‌ಗೆ ಮನವಿ ಮಾಡಿದ್ದಾಳೆ. ಆತನ ಪ್ರಯಾಣವನ್ನು ನಿಲ್ಲಿಸುವ ಮನವಿಯನ್ನು ಅನುಮತಿಸಬೇಕು. ಇಲ್ಲವಾದರೆ ಅವನ ಪೋಷಕರು,  ಕುಟುಂಬದ ಇತರೇ ಸದಸ್ಯರು ಮತ್ತು ಸ್ನೇಹಿತರು ತೀವ್ರ ನಷ್ಟ ಅನುಭವಿಸುತ್ತಾರೆ ಅಂತ ಕೋರ್ಟ್‌ಗೆ ಮನವಿ ಮಾಡಿದ್ದಾರೆ.


ಇದನ್ನೂ ಓದಿ: UK PM Race: ಸೋಲುವ ಮಾತುಗಳನ್ನಾಡಿದ ಇನ್ಫಿ ಮೂರ್ತಿ ಅಳಿಯ ರಿಷಿ ಸುನಕ್, ಕಾರಣವೇನು?


ಸುಳ್ಳು ಹೇಳಿದ್ದಾಗಿ ಅರ್ಜಿಯಲ್ಲಿ ಉಲ್ಲೇಖ


ಇನ್ನು ಈ ಮಹಿಳೆ ಆ ವ್ಯಕ್ತಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅರ್ಜಿಯ ಪ್ರಕಾರ, ರೋಗಿಯು ಮೊದಲು ಷೆಂಗೆನ್ ವೀಸಾವನ್ನು ಪಡೆದರು, ಈ ಮೂಲಕ ಅವರು ಬೆಲ್ಜಿಯಂನ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಆದರೆ  ವಾಸ್ತವದಲ್ಲಿ ಅವರು ದಯಾಮರಣಕ್ಕಾಗಿ ಮೊದಲ ಸುತ್ತಿನ ಮಾನಸಿಕ ಮೌಲ್ಯಮಾಪನಕ್ಕಾಗಿ ಬೆಲ್ಜಿಯಂ ಮೂಲಕ ಜೂನ್‌ನಲ್ಲಿ ಸ್ವಿಡ್ಜರ್‌ಲ್ಯಾಂಡ್‌ನ  ಜ್ಯೂರಿಚ್‌ಗೆ ಪ್ರಯಾಣಿಸಿದ್ದರು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಇದೀಗ ಕೋರ್ಟ್‌ನಲ್ಲಿ ವಿಚಾರಣೆ ಮುಂದುವರೆದಿದೆ.

top videos
    First published: