Shocking Video: ಮಹಿಳೆಗೆ ಬೆಂಕಿ ಹಚ್ಚಿದ ಪಾಪಿಗಳು, ಆಕೆ ನೋವಿನಿಂದ ನರಳುವುದನ್ನು ವಿಡಿಯೋ ಮಾಡಿಕೊಂಡರು!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಮಧ್ಯ ಪ್ರದೇಶ: ಹೊಲದಲ್ಲಿ (field) ಕೆಲಸ (Work) ಮಾಡುತ್ತಿದ್ದ ಬುಡಕಟ್ಟು ಜನಾಂಗದ ಮಹಿಳೆಗೆ (Tribal Community Women) ದುಷ್ಕರ್ಮಿಗಳ ತಂಡವೊಂದು ಬೆಂಕಿ (Fire) ಹಚ್ಚಿದೆ. ಸಾಲದ್ದಕ್ಕೆ ಆಕೆ ಬೆಂಕಿಯಲ್ಲಿ ಬಿದ್ದು ನರಳಾಡುವುದನ್ನು, ನೋವಿನಿಂದ ಕೂಗಿಕೊಳ್ಳುವುದನ್ನು ದುಷ್ಕರ್ಮಿಗಳು ತಮ್ಮ ಮೊಬೈಲ್‌ನಲ್ಲಿ (Mobile) ಚಿತ್ರೀಕರಿಸಿಕೊಂಡು (Record), ವಿಕೃತಿ ಮೆರೆದಿದ್ದಾರೆ. ಇದೀಗ ಮಹಿಳೆ ಶೇಕಡಾ 80ರಷ್ಟು ಸುಟ್ಟ ಗಾಯಗಳಿಂದ (burns) ನರಳುತ್ತಾ, ಆಸ್ಪತ್ರೆ (Hospital) ಸೇರಿದ್ದಾಳೆ. ಇಂಥದ್ದೊಂದು ಅಮಾನವೀಯ ಘಟನೆ ಮಧ್ಯಪ್ರದೇಶದ (Madhya Pradesh) ಗುನಾ (Guna) ಜಿಲ್ಲೆಯಿಂದ 200 ಕಿಮೀ ದೂರದಲ್ಲಿರುವ ಬಮೋರಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ (Village) ನಡೆದಿದೆ.  

 ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ

ಮಹಿಳೆಯನ್ನು 38 ವರ್ಷದ ರಾಂಪ್ಯಾರಿ ಬಾಯಿ ಎಂದು ಗುರುತಿಸಲಾಗಿದೆ. ದುಷ್ಕರ್ಮಿಗಳು ಇಟ್ಟಿದ್ದ ಬೆಂಕಿಯಲ್ಲಿ ರಾಂಪ್ಯಾರಿ ಬಾಯಿ ಸುಟ್ಟುಹೋಗಿದ್ದಾಳೆ. ಇದೀಗ ಶೇಕೡಾ 80ರಷ್ಟು ಗಾಯಗಳಿಂದ ಆಸ್ಪತ್ರೆ ಸೇರಿದ್ದು, ಅಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.



ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ದುಷ್ಕರ್ಮಿಗಳಿಂದ ದಾಳಿ

ರಾಂಪ್ಯಾರಿ ಬಾಯಿ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿದ್ದಾರೆ. ಆರೋಪಿಗಳು ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ವೈದ್ಯರಿಗೆ ಮಹಿಳೆ ತಿಳಿಸಿದ್ದಾರೆ.

ಇದನ್ನೂ ಓದಿ: Kullu Accident: ಶಿಮ್ಲಾ ಬಳಿ ಪ್ರಪಾತಕ್ಕೆ ಉರುಳಿದ ಶಾಲಾ ಮಕ್ಕಳಿದ್ದ ಬಸ್; 9ಕ್ಕೂ ಹೆಚ್ಚು ಸಾವು!

 ಸಹಾಯಕ್ಕೆ ಬಾರದೇ ವಿಡಿಯೋ ಮಾಡಿಕೊಂಡ ಗ್ರಾಮಸ್ಥರು

ಇನ್ನು ಮಹಿಳೆ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿ, ಬೆಂಕಿ ಹಚ್ಚಿದಾಗ ಗ್ರಾಮ್ಥಸ್ಥರೆಲ್ಲ ಧಾವಿಸಿ ಬಂದಿದ್ದಾರೆ. ಆಕೆ ಬೆಂಕಿಯಲ್ಲಿ ನರಳುತ್ತಾ, ಸುಟ್ಟ ಗಾಯಗಳನ್ನು ಸಹಿಸಿಕೊಳ್ಳಲಾಗದೇ ಕೂಗುತ್ತಿದ್ದರೆ ಯಾವೊಬ್ಬ ಗ್ರಾಮಸ್ಥರೂ ಸಹಾಯಕ್ಕೆ ಬರಲಿಲ್ಲ. ಬದಲಾಗಿ ಆಕೆ ಕೂಗುತ್ತಿರುವುದನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ.

ಮಹಿಳೆಗೆ ಬೆಂಕಿ ಹಚ್ಚಲು ಕಾರಣವೇನು?

ಅನೇಕ ವರ್ಷಗಳ ಹಿಂದೆ ಮಧ್ಯಪ್ರದೇಶ ಸರ್ಕಾರದ ಕಲ್ಯಾಣ ಯೋಜನೆಯಡಿ ಸಹಾರಿಯಾ ಅವರ ಕುಟುಂಬಕ್ಕೆ ಮಂಜೂರಾದ 6 ಬಿಘಾ ಭೂಮಿಯನ್ನು ಈಗ ಉಳುಮೆ ಮಾಡಿದ್ದಕ್ಕಾಗಿ ಬೇರೊಂದು ಸಮುದಾಯಕ್ಕೆ ಸೇರಿದ ಮೂವರು ಪುರುಷರು ತನಗೆ ಬೆಂಕಿ ಹಚ್ಚಿದ್ದಾರೆ ಎಂದು ರಾಂಪ್ಯಾರಿ ಬಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಮಂಜೂರಾದಾಗ ಭೂಮಿಯನ್ನು ಬೇರೆ ಸಮುದಾಯದ ವ್ಯಕ್ತಿಗಳು ಸ್ವಾಧೀನಪಡಿಸಿಕೊಂಡರು. ಇತ್ತೀಚಿಗೆ ಅದನ್ನು ಸ್ಥಳೀಯ ಕಂದಾಯ ಇಲಾಖೆಯು ಒತ್ತುವರಿದಾರರಿಂದ ಮುಕ್ತಗೊಳಿಸಿ, ರಾಂಪ್ಯಾರಿ ಬಾಯಿ ಕುಟುಂಬಕ್ಕೆ ನೀಡಿತ್ತು. ಇದೇ ಕಾರಣಕ್ಕೆ ಆಕೆ ಮೇಲೆ ಈ ರೀತಿ ದಾಳಿ ನಡೆದಿದೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಆರೋಪಿಗಳು ಮಹಿಳೆಯ ಕಡೆಗೆ "ನಾವು ವಿಡಿಯೋ ಮಾಡೋಣ, ಅವಳು ಬೆಂಕಿ ಹಚ್ಚಿಕೊಂಡಿದ್ದಾಳೆ" ಎಂದು ಕೂಗುತ್ತಾ ಓಡಿಹೋಗುತ್ತಿರುವುದನ್ನು ಕಾಣಬಹುದಾಗಿದೆ. ಈ ಮೂಲಕ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನುವಂತೆ ಬಿಂಬಿಸುವ ಯತ್ನ ನಡೆದಿದೆ. ಇನ್ನು ದುಷ್ಕರ್ಮಿಗಳ ಕೃತ್ಯಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಮೂವರು ಆರೋಪಿಗಳ ಬಂಧನ

ರಾಂಪ್ಯಾರಿ ಬಾಯಿಯ ಕುಟುಂಬ ಸದಸ್ಯರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ದೂರಿನಲ್ಲಿ ಕೆಲವು ಗ್ರಾಮಸ್ಥರನ್ನು ಹೆಸರಿಸಿದ್ದಾರೆ. ದೂರಿನ ಆಧಾರದ ಮೇಲೆ, ಪೊಲೀಸರು ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಮೂವರು ಆರೋಪಿಗಳಲ್ಲಿ ಇಬ್ಬರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Manipur Landslide: ನನ್ನ ಸ್ನೇಹಿತ ನನ್ನನ್ನು ಬದುಕಿಸಿ, ಕಣ್ಣೆದುರೇ ಪ್ರಾಣ ಬಿಟ್ಟ; ಭೂಕುಸಿತದ ಭಯಾನಕತೆ ಬಿಚ್ಚಿಟ್ಟ ಕಾರ್ಮಿಕ

ಅವಳೇ ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದ ಆರೋಪಿ

ಇನ್ನು ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಮೂವರು ಆರೋಪಿಗಳ ಪೈಕಿ ಇಬ್ಬರು ಆರೋಪಿಗಳಾದ ಪ್ರತಾಪ್, ಶ್ಯಾಮ್ ಮತ್ತು ಹನುಮತ್ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆದರೆ ಮಹಿಳೆ ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದು ಆರೋಪಿ ಹೇಳಿದ್ದಾನೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Published by:Annappa Achari
First published: