ಬದುಕು ಕಟ್ಟಿಕೊಳ್ಳಲು ಸಮಾಜದಲ್ಲಿ ಮಹಿಳೆಯರು ಪ್ರತಿ ಕ್ಷಣವೂ ಹೋರಾಡಬೇಕಿದೆ: ನಟಿ ಶಿಲ್ಪಾ ಶೆಟ್ಟಿ ವಿಡಿಯೋ ವೈರಲ್

ಇಂದಿಗೂ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕಾದ ಪರಿಸ್ಥಿತಿ ಇದೆ, ಗಂಡನ ನಂತರ, ತಮ್ಮ ಅಸ್ತಿತ್ವಕ್ಕಾಗಿ ಮತ್ತು ತಮ್ಮ ಮಕ್ಕಳಿಗಾಗಿ ಹೋರಾಡಬೇಕು. ಈ ಕಥೆ ನಮಗೆ ಅಂದರೆ ಒಂದು ರೀತಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಪಟ್ಟ ಮಹಿಳೆಯರಿಗೆ ಹೋರಾಡುವ ಶಕ್ತಿಯನ್ನು ನೀಡುತ್ತದೆ.

ತಾಯಿಯೊಂದಿಗೆ ನಟಿ ಶಿಲ್ಪಾ ಶೆಟ್ಟಿ

ತಾಯಿಯೊಂದಿಗೆ ನಟಿ ಶಿಲ್ಪಾ ಶೆಟ್ಟಿ

 • Share this:

  ರಾಜ್​ ಕುಂದ್ರಾ ಅಶ್ಲೀಲ ಚಿತ್ರಗಳ ಪ್ರಕರಣ ಹಾಗೂ ಪತಿಯ ಬಂಧನದಿಂದ ಸಾಕಷ್ಟು ಆಘಾತಕ್ಕೆ ಒಳಗಾಗಿದ್ದ  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಇತ್ತೀಚೆಗೆ ಡ್ಯಾನ್ಸ್ ರಿಯಾಲಿಟಿ ಶೋ - ಸೂಪರ್ ಡ್ಯಾನ್ಸರ್ 4 ರ ಶೂಟಿಂಗ್​ಅನ್ನು ಮತ್ತೆ ಪುನರಾರಂಭಿಸಿದರು, ಈ ರಿಯಾಲಿಟಿ ಶೋನಲ್ಲಿ ಇವರು ಪ್ರಮುಖ ತೀರ್ಪುಗಾರರಲ್ಲಿ ಒಬ್ಬರಾಗಿದ್ದಾರೆ, ಡ್ಯಾನ್ಸ್​ ಸ್ಪರ್ಧಿ ಪ್ರದರ್ಶಿಸಿದ ರಾಣಿ ಲಕ್ಷ್ಮಿ ಬಾಯಿ ಅವರ ಪ್ರಭಾವಶಾಲಿ ಜೀವನದ ಕುರಿತಾದ ಪ್ರದರ್ಶನವನ್ನು ವೀಕ್ಷಿಸಿದ ನಂತರ ಸಮಾಜದಲ್ಲಿ ಮಹಿಳೆಯರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಎಷ್ಟು ಪಡಿಪಾಟಲು ಹೊಂದಬೇಕು ಹಾಗೂ ಮಹಿಳೆಯರು ಬದುಕು ಕಟ್ಟಿಕೊಳ್ಳಲು ಮಾಡಬೇಕಾದ ಹೋರಾಟದ ಬಗ್ಗೆ ಅತ್ಯಂತ ಭಾವುಕವಾಗಿ ನುಡಿದಿದ್ದಾರೆ.


  ಚಾನಲ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್​ ಪುಟದಲ್ಲಿ ಹಂಚಿಕೊಂಡ ಪ್ರೋಮೋವೊಂದರಲ್ಲಿ, ನಟಿ ಹೇಳಿರುವ ಮಾತುಗಳನ್ನು ಕೇಳಬಹುದು, "ಮೈನೆ ಝಾನ್ಸಿ ಕಿ ರಾಣಿ ಕೇ ಬಾರೆ ಮೇ ಜಬ್ ಭೀ ಸುಂತಿ ಹು, ಮುಜೆ ಐಸೆ ಲಗ್ತಾ ಹೈ ಕೆ ಸಮಾಜ ಕಾ ಚೆಹ್ರ ದಿಕ್ತಾ ಹೈ. ಕ್ಯುನ್ ಕಿ ಆಜ್ ಭಿ, ಔರತ್ ಕೋ ಅಪ್ನೆ ಹಕ್ ಕೆ ಲಿಯೇ, ಅಪ್ನೆ ಪತಿ ಕೇ ಬಾದ್, ಲಡೈ ಲಡ್ನಿ ಪಡ್ತಿ ಹೈ, ಅಪ್ನೆ ಅಸಿಸ್ಟ್ವಾ ಕೆ ಲಿಯೇ, ಅಪ್ನೆ ಬಚ್ಚೋ ಕೆ ಲಿಯೇ.

  ನಾನು ಝಾನ್ಸಿ ರಾಣಿಯ ಬಗ್ಗೆ ಕೇಳಿದಾಗಲೆಲ್ಲಾ, ನಾನು ಸಮಾಜದ ಮುಖವನ್ನು ನೋಡಿದಂತೆ ನನಗೆ ಅನಿಸುತ್ತದೆ ಏಕೆಂದರೆ ಇಂದಿಗೂ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕಾದ ಪರಿಸ್ಥಿತಿ ಇದೆ, ಗಂಡನ ನಂತರ, ತಮ್ಮ ಅಸ್ತಿತ್ವಕ್ಕಾಗಿ ಮತ್ತು ತಮ್ಮ ಮಕ್ಕಳಿಗಾಗಿ ಹೋರಾಡಬೇಕು. ಈ ಕಥೆ ನಮಗೆ ಅಂದರೆ ಒಂದು ರೀತಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಪಟ್ಟ ಮಹಿಳೆಯರಿಗೆ ಹೋರಾಡುವ ಶಕ್ತಿಯನ್ನು ನೀಡುತ್ತದೆ ಮತ್ತು ಅವಳು ಅಂದರೆ ಮಹಿಳೆಯಾದ ಆಕೆ ತನ್ನ ಜೀವನ- ಜೀವದೊಂದಿಗೆ ಹೋರಾಡಿರುವುದು ನಮಗೆ ಈಗಲೂ ಸ್ಪೂರ್ತಿ. ಝಾನ್ಸಿ ರಾಣಿ ನಿಜವಾಗಿಯೂ ಸೂಪರ್ ವುಮನ್.

  ಇದನ್ನೂ ಓದಿ:  ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಎನ್ಕೌಂಟರ್ ಪ್ರಕರಣ: ಯುಪಿ ಪೊಲೀಸರಿಗೆ ಕ್ಲೀನ್​ಚಿಟ್​ ನೀಡಿದ ನ್ಯಾಯಾಂಗ ಆಯೋಗ

  ಶಿಲ್ಪಾ ಅವರ ಪತಿ ರಾಜ್ ಕುಂದ್ರಾ ಕಳೆದ ತಿಂಗಳು ಅಶ್ಲೀಲ ಚಿತ್ರಗಳ ಚಿತ್ರಿಕರಣ ಹಾಗೂ ನಿರ್ಮಾಣ ಮಾಡಿದ್ದಕ್ಕಾಗಿ ಮತ್ತು ಅದನ್ನು ಅಪ್ಲಿಕೇಶನ್‌ಗಳ ಮೂಲಕ ಹಂಚಿಕೊಂಡ ಆರೋಪದ ಮೇಲೆ ಬಂಧನಕ್ಕೊಳಗಾದ ನಂತರ, ನಟಿ ಸಾಮಾಜಿಕ ಜಾಲತಾಣಗಳಿಂದ ಬಹಳ ದೂರ ಉಳಿದಿದ್ದರು ಹಾಗೂ ಎಲ್ಲರಿಂದ ಅಂತರವನ್ನುಕಾಯ್ದುಕೊಂಡಿದ್ದರು  ಮತ್ತು ಅವರ ಪ್ರಸ್ತುತ ಯೋಜನೆಗಳ ಚಿತ್ರೀಕರಣದಿಂದ ದೂರವಿದ್ದರು. ಈ ಘಟನೆ ಸಂಭವಿಸಿದಾಗ ಶಿಲ್ಪಾ ಶೆಟ್ಟಿ ಸೂಪರ್ ಡ್ಯಾನ್ಸರ್ 4ರ ಪ್ರಮುಖ ತೀರ್ಪುಗಾರರಲ್ಲಿ ಒಬ್ಬರಾಗಿದ್ದರು. ಆಕೆಯ ಅನುಪಸ್ಥಿತಿಯಲ್ಲಿ, ಸಂಗೀತಾ ಬಿಜ್ಲಾನಿ, ಜಾಕಿ ಶ್ರಾಫ್, ಟೆರೆನ್ಸ್ ಡಿಸೋಜಾ, ಸೊನಾಲಿ ಬೇಂದ್ರೆ, ಮೌಶುಮಿ ಚಟರ್ಜಿ ಮತ್ತು ಕರಿಷ್ಮಾ ಕಪೂರ್ ಸೇರಿದಂತೆ ಹಲವಾರು ಪ್ರಸಿದ್ಧ ಅತಿಥಿಗಳು ಬಂದು ನ್ಯಾಯಾಧೀಶರ ಸ್ಥಾನವನ್ನು ತುಂಬಿದ್ದರು.
   ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: