Mysterious: ನಾಯಿ ಜೊತೆ ಹೋದ ಮಹಿಳೆ ಗಾಳಿಯಲ್ಲಿ ಅದೃಶ್ಯ! ನಿಗೂಢ ರಹಸ್ಯ ಬೇಧಿಸಲು ಮುಂದಾದ ಪೊಲೀಸರು

 ನಿಕೋಲಾ ಬುಲ್ಲೆ( Facebook photo)

ನಿಕೋಲಾ ಬುಲ್ಲೆ( Facebook photo)

ಬ್ರಿಟನ್‌ನ ನಿಕೋಲಾ ತಮ್ಮ ನಾಯಿಯನ್ನು ವಾಕಿಂಗ್‌ಗೆ ಕರೆದೊಯ್ಯುವ ಸಂದರ್ಭದಲ್ಲಿ ಕಾಣೆಯಾಗಿರುವುದಾಗಿ ಪೊಲೀಸರಿಗೆ ಮಾಹಿತಿ ದೊರಕಿದೆ. ನಿಕೋಲಾ ಗಾಳಿಯಲ್ಲಿ ಕಣ್ಮರೆಯಾಗಿದ್ದಾರೆ ಎಂಬ ಗಾಳಿ ಸುದ್ದಿ ಆ ಪ್ರದೇಶದಲ್ಲಿ ಹಬ್ಬಿಕೊಂಡಿದೆ. ಹೀಗೆ ಅಸಾಧಾರಣ ರೀತಿಯಲ್ಲಿ ಕಣ್ಮರೆಯಾಗಿರು ಮಹಿಳೆ ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ.

ಮುಂದೆ ಓದಿ ...
  • Trending Desk
  • 3-MIN READ
  • Last Updated :
  • New Delhi, India
  • Share this:

    ಈ ಲೋಕದಲ್ಲಿ ನಡೆಯುವ ರಹಸ್ಯ (Mystery) ಘಟನೆಗಳು ಹಾಗೂ ನಿಗೂಢ ಅಂಶಗಳಗೆ ಕೊನೆಯೇ ಇಲ್ಲ ಎಂದೇ ಹೇಳಬಹುದು. ಈ ನಿಗೂಢತೆಗಳು ಒಮ್ಮೊಮ್ಮೆ ವೈಜ್ಞಾನಿಕ (Scientific)  ಲೋಕಕ್ಕೂ ಸವಾಲು ಹಾಕುತ್ತದೆ ಹಾಗೂ ಈ ಇರುವಿಕೆಗಳು ಸತ್ಯ ಎಂಬುದನ್ನು ಸಾಬೀತುಪಡಿಸುತ್ತವೆ. ಇಂದಿನ ಲೇಖನದಲ್ಲಿ ಅದೃಶ್ಯ ರೀತಿಯಲ್ಲಿ ಕಣ್ಮರೆಯಾಗಿರುವ 45 ರ ಹರೆಯದ ನಿಕೋಲಾ ಬುಲ್ಲೆ (Nicola Bulley) ಕುರಿತ ನಿಗೂಢ ಸುದ್ದಿಯ ಬಗ್ಗೆ ತಿಳಿದುಕೊಳ್ಳೋಣ. ಬ್ರಿಟನ್‌ನ ನಿಕೋಲಾ ತಮ್ಮ ನಾಯಿಯನ್ನು ವಾಕಿಂಗ್‌ಗೆ ಕರೆದೊಯ್ಯುವ ಸಂದರ್ಭದಲ್ಲಿ ಕಾಣೆಯಾಗಿರುವುದಾಗಿ ಪೊಲೀಸರಿಗೆ ಮಾಹಿತಿ ದೊರಕಿದೆ. ನಿಕೋಲಾ ಅಸಾಧಾರಣ ರೀತಿಯಲ್ಲಿ ಕಣ್ಮರೆಯಾಗಿದ್ದು ಇದೀಗ ಪೊಲೀಸರು (Police) ಆಕೆಯನ್ನು ಶೋಧಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.


    ಗಾಳಿಯಲ್ಲಿ ಮರೆಯಾದರೇ?


    ತಮ್ಮಿಬ್ಬರ ಮಕ್ಕಳನ್ನು ಶಾಲೆಗೆ ಬಿಟ್ಟು ನಾಯಿಯೊಂದಿಗೆ ವಾಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ನಿಕೋಲಾ ಕಣ್ಮರೆಯಾಗಿದ್ದು ನಾಯಿ ನದಿ ತಟದಲ್ಲಿ ಪತ್ತೆಯಾಗಿದ್ದು ನಿಕೋಲಾ ಮಾತ್ರ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಗಾಳಿಯಲ್ಲಿ ಮರೆಯಾಗಿದ್ದಾರೆ ಎಂದು ಆಕೆಯ ಪಾರ್ಟ್ನರ್ ಹಾಗೂ ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ಈ ಊಹಾಪೋಹವಾಗಿದೆ.  ಪೊಲೀಸರು ಹಾಗೂ  ಕೆಲವು ಪತ್ತೆದಾರರು ಇದೆಲ್ಲಾ ಮೂಢನಂಬಿಕೆ ಹಾಗೂ ನಿಕೋಲಾರನ್ನು ಅಪಹರಿಸಿರಬಹುದು ಇಲ್ಲವೇ ಆಕೆ ನದಿಯಲ್ಲಿ ಬಿದ್ದಿರಬಹುದು ಎಂದು ತಿಳಿಸಿದ್ದಾರೆ.


    ನದಿಗೆ ಬಿದ್ದಿರುವುದಾಗಿ ತಿಳಿಸಿರುವ ಪೊಲೀಸರು


    ಪೊಲೀಸರು ನದಿ ತಟ ಹಾಗೂ ನದಿಯನ್ನು ಶೋಧಿಸುತ್ತಿದ್ದು, ನಿಕೋಲಾ ಕುಟುಂಬಸ್ಥರು ಹಾಗೂ ಗೆಳೆಯರು ಪೊಲೀಸರು ಆಕೆ ನದಿಗೆ ಬಿದ್ದಿದ್ದಾರೆ ಎಂದು ಶೋಧಿಸುತ್ತಿರುವುದನ್ನು ಪ್ರಶ್ನಿಸಿದ್ದಾರೆ. ನದಿ ತಟದಲ್ಲಿ ಯಾವುದೇ ಪಾದದ ಗುರುತುಗಳಿಲ್ಲ,  ಹೀಗಿರುವಾಗ ನಿಕೋಲ ನದಿಯಲ್ಲಿ ಬಿದ್ದಿದ್ದಾರೆ ಎನ್ನುವುದ ಕುಟುಂಬಸ್ಥರು ನಂಬುತ್ತಿಲ್ಲ. ಇನ್ನೂ ಆಕೆಯ ದೇಹ ದೊರಕದೇ ಇರುವುದರಿಂದ ಈ ನಿಗೂಢತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಬ್ಬಿದೆ.


    ಆಕೆ ಗಾಳಿಯಲ್ಲಿ ಮರೆಯಾದರು ಎಂಬ ಊಹಾಪೋಹವನ್ನು ಕೂಡ ತನಿಖಾ ಅಧಿಕಾರಿಗಳು ಹಾಗೂ ಪೊಲೀಸರು ನಂಬುತ್ತಿಲ್ಲ ಮತ್ತು ಇಂತಹ ಹೇಳಿಕೆಗಳಿಗೆ ಯಾವುದೇ ಪುರಾವೆಗಳಿಲ್ಲ ಎಂದು ತಿಳಿಸಿದ್ದಾರೆ.


    ಇದನ್ನೂ ಓದಿ: Indian Army: ಕಾಲು ಮುರಿದುಕೊಂಡು ನರಳುತ್ತಿರುವ ಆನೆ ನೆರವಿಗೆ ಬಂದ ಸೇನೆ, ಮೋತಿಯನ್ನು ನಿಲ್ಲಿಸಲು ಹರಸಾಹಸ


    ವಿಲಕ್ಷಣವಾಗಿ ಓಡಿಬಂದ ನಾಯಿ


    ಅಡಮಾನ ಸಲಹೆಗಾರರಾಗಿ (mortgage adviser) ಕಾರ್ಯನಿರ್ವಹಿಸುತ್ತಿದ್ದ ನಿಕೋಲಾ ಹತ್ತು ದಿನಗಳ ಹಿಂದೆ ನದಿ ತಟದಲ್ಲಿ ನಾಯಿಯೊಂದಿಗೆ ವಾಕಿಂಗ್ ಮಾಡುತ್ತಿದ್ದುದನ್ನು ನೋಡಿದವರಿದ್ದಾರೆ ಎಂಬುದು ಪೊಲೀಸ್ ಹೇಳಿಕೆಯಾಗಿದೆ.


    ವಾಯುವ್ಯ ಲಂಕಾಷೈರ್ ಹಳ್ಳಿಯಲ್ಲಿನ ಶಾಲೆಗೆ ಇಬ್ಬರು ಮಕ್ಕಳನ್ನು ಬಿಟ್ಟುಬಂದ ನಂತರ ನಾಯಿಯೊಂದಿಗೆ ನದಿ ತಟದಲ್ಲಿ ವಾಕಿಂಗ್ ಮಾಡುವುದು ನಿಕೋಲಾ ದೈನಂದಿನ ದಿನಚರಿಯಾಗಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ ನಿಕೋಲಾ ವಾಕಿಂಗ್​ಗೆ ಹೊರಟ ಸ್ವಲ್ಪ ಹೊತ್ತಿನ ನಂತರ ನಾಯಿ ವಿಲಕ್ಷಣವಾಗಿ ಬೆದರಿದಂತೆ ಒಂಟಿಯಾಗಿ ಓಡುತ್ತಿರುವುದನ್ನು ಅಲ್ಲಿನವರು ಗಮನಿಸಿದ್ದು ಏನೋ ಅನಾಹುತ ನಡೆದಿದೆ ಎಂಬ ಸೂಚನೆಯನ್ನು ಸಾರ್ವಜನಿಕರಿಗೆ ನೀಡಿದೆ.


    ಆಕೆ ನಿಗೂಢವಾಗಿ ನಾಪತ್ತೆಯಾಗಿರುವುದು ಪತ್ರಿಕೆಗಳಲ್ಲಿ ಸುದ್ದಿಯಾದ ನಂತರ, ನಿಕೋಲಾ ನದಿಗೆ ಕಾಲು ಜಾರಿ ಬಿದ್ದಿರುವ ಶಂಕೆ ಇದೆ ಎಂದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.




    ನಿಕೋಲಾರನ್ನು ನದಿಗೆ ಯಾರೂ ತಳ್ಳಿಲ್ಲ


    ನಿಕೋಲಾ ಯಾವುದೋ ದುಃಖದಿಂದ ನದಿಗೆ ಬಿದ್ದಿರುವುದು ನಮ್ಮ ಊಹೆಯಾಗಿದ್ದು, ಅವರನ್ನು ಮೂರನೇ ವ್ಯಕ್ತಿ ನದಿಗೆ ತಳ್ಳಿಲ್ಲಿ, ಇಲ್ಲಿ ಯಾವುದೇ ಅಪರಾಧ ಕೃತ್ಯ ಜರುಗಿಲ್ಲ ಎಂಬುದು ನಮ್ಮ ಆಲೋಚನೆಯಾಗಿದೆ,  ಆದರೂ ನಿಕೋಲಾ ಪ್ರಕರಣ ನಿಗೂಢವಾಗಿದ್ದು ಕಾಣೆಯಾಗಿರುವ ನಿಕೋಲಾರನ್ನು ಶೀಘ್ರವೇ ಪತ್ತೆಹಚ್ಚುತ್ತೇವೆ ಎಂದು ಪೊಲೀಸ್ ಅಧಿಕಾರಿಗಳ ಮಾತಾಗಿದೆ.


    ನಿಕೋಲಾ ನದಿಗೆ ಬಿದ್ದಿರಲು ಸಾಧ್ಯವಿಲ್ಲ


    ಪೊಲೀಸರು ನಿಕೋಲ ನದಿಗೆ ಬಿದ್ದಿರಬಹುದೆಂದು ಹೇಳುತ್ತಿದ್ದಾರೆ. ಆದರೆ ಇದನ್ನು ಕುಟುಂಬಸ್ಥರು ಒಪ್ಪುತ್ತಿಲ್ಲ.  ನದಿ ತಟದಲ್ಲಿ ಆಕೆಯ ಹೆಜ್ಜೆಗುರುತುಗಳಿಲ್ಲ ಮತ್ತು ಆಕೆ ನದಿಗೆ ಬಿದ್ದಿರುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ . ನಿಕೋಲಾ ಬುಲ್ಲೆಯನ್ನು ಯಾರೋ ಅಪಹರಿಸಿದ್ದಾರೆ ಎಂಬುದು ಆಕೆಯ ಪೋಷಕರ ಅತಂಕವಾಗಿದೆ.


    ಆಕೆಯ ತಂದೆ 73ರ ಹರೆಯದ ಅರ್ನೆಸ್ಟ್ ಹೇಳುವಂತೆ ತಮ್ಮ ಮಗಳು ನದಿಗೆ ಬಿದ್ದಿರುವುದಾಗಿ ಹೇಳಲು ಯಾವುದೇ ಆಧಾರಗಳಿಲ್ಲ, ಯಾರೋ ಮಗಳನ್ನು ಅಪಹರಿಸಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇಬ್ಬರು ಮಕ್ಕಳು ಅವರ  ತಾಯಿ ಮನೆಗೆ ಮರಳುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ  ಎಂದು ಅರ್ನೆಸ್ಟ್ ಹೇಳಿದ್ದಾರೆ.


    ಇದನ್ನೂ ಓದಿ: Dog: ನಾಯಿ ಕಚ್ಚಿದ್ದಕ್ಕೆ ಅದರ ಮಾಲೀಕನಿಗೆ ಶಿಕ್ಷೆ, ರಾಟ್‌ ವೀಲರ್‌ ಶ್ವಾನದಿಂದ ಬ್ಯುಸಿನೆಸ್​ ಮ್ಯಾನ್ ಜೈಲು ಪಾಲು!


    ವಿಶೇಷ ತಂಡದಿಂದ ಹುಡುಕಾಟ


    ಸೋಮವಾರ, ವಿಶೇಷ  ರಕ್ಷಣಾ ತಂಡ ನೀರೊಳಗೆ ನಿಕೋಲಾರನ್ನು ಹುಡುಕಾಡಿದೆ.  ಸ್ಪೆಷಲಿಸ್ಟ್ ಗ್ರೂಪ್ ಇಂಟರ್‌ನ್ಯಾಶನಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಫೋರೆನ್ಸಿಕ್ ತಜ್ಞ ಪೀಟರ್ ಫಾಲ್ಡಿಂಗ್, ತಮ್ಮ ಸಂಸ್ಥೆಯು ಬಳಸಿದ ಹೈಟೆಕ್ ಸೋನಾರ್ ಬಳಸುತ್ತಾರೆ. ಇದು ನದಿಯ ತಳದಲ್ಲಿ ಬಿದ್ದಿರುವ ಪ್ರತಿಯೊಂದು ಕೋಲು ಮತ್ತು ಕಲ್ಲನ್ನು ನೋಡುವ ಸಾಮರ್ಥ್ಯವನ್ನು ಹೊಂದಿದೆ . ಇದರಿಂದ ನಿಕೋಲಾ ನಿಜವಾಗಿಯೂ ನದಿಯಲ್ಲಿ ಬಿದ್ದಿದ್ದಾರೆಯೇ ಅಥವಾ ಬೇರೆ ಏನಾದರೂ ನಡೆದಿದಿಯೇ ಎನ್ನುವುದನ್ನು ಖಚಿಪಡಿಸಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Published by:Rajesha B
    First published: