ಈ ವಿಮಾನಗಳಲ್ಲಿ (Flight) ಹೆಚ್ಚಾಗಿ ಪ್ರಯಾಣಿಸುತ್ತಿದ್ದರೆ, ಅವರಿಗೆ ಈ ವಿಮಾನದ ಕಾಕ್‌ಪಿಟ್ ಎಂದರೆ ಏನು? ಯಾವ ಸ್ಥಳವನ್ನು ಹೀಗೆ ಕರೆಯುತ್ತಾರೆ ಮತ್ತು ಆ ಸ್ಥಳದ ಬಗ್ಗೆ ಇರುವ ನಿಯಮಗಳ ಬಗ್ಗೆ ಗೊತ್ತಿರುತ್ತದೆ. ಅಷ್ಟೊಂದು ವಿವರವಾಗಿ ಗೊತ್ತಿರದೇ ಇದ್ದರೂ ಸಹ ಅದೊಂದು ವಿಮಾನದ ಪೈಲೆಟ್ಗಳಿಬ್ಬರು (Pilot) ಕುಳಿತುಕೊಂಡು ಇಡೀ ವಿಮಾನವನ್ನು ಚಲಾಯಿಸುವ ಮತ್ತು ನಿಯಂತ್ರಿಸುವ ಒಂದು ಸ್ಥಳ ಅಂತ ಆದ್ರೂ ಸಾಮಾನ್ಯವಾಗಿ ತಿಳಿದಿರುತ್ತದೆ. ಈ ಕಾಕ್ಪಿಟ್ನಲ್ಲಿ (Cockpit) ವಿಮಾನದ ಪೈಲಟ್ ಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಯಾಣಿಕರಿಗೆ ಅಥವಾ ಜನರಿಗೆ ಅದರಲ್ಲಿ ಹೋಗಲು ಪ್ರವೇಶ ನಿಷೇಧಿಸಲಾಗಿರುತ್ತದೆ.
ಈ ಸ್ಥಳದಲ್ಲಿ ಪೈಲಟ್ಗಳಿಬ್ಬರನ್ನು ಹೊರತುಪಡಿಸಿ ಬೇರೊಬ್ಬರು ಅಲ್ಲಿ ಕುಳಿತ್ತಿದ್ದಾರೆ ಅಥವಾ ಅಲ್ಲಿ ಇದ್ದಾರೆ ಎಂದರೇ ಅದು ಖಂಡಿತವಾಗಿಯೂ ಸುರಕ್ಷತೆಯ ಲೋಪ ಅಂತಾನೆ ಹೇಳಲಾಗುತ್ತದೆ.
ಏರ್ ಇಂಡಿಯಾ ವಿಮಾನದಲ್ಲಿ ಈ ಘಟನೆ
ಕಾಕ್‌ಪಿಟ್ ಯಾರೂ ಪ್ರವೇಶಿಸುವಂತಿರುವುದಿಲ್ಲ. ಆದರೆ ಇದಕ್ಕೆ ವ್ಯತಿರಿಕ್ತವಾದ ಘಟನೆಯೊಂದು ಏರ್ ಇಂಡಿಯಾದ ವಿಮಾನದಲ್ಲಿ ನಡೆದಿದ್ದು ಇಬ್ಬರು ಪೈಲಟ್ ಗಳ ಹೊರತಾಗಿ ಇನ್ನೊಬ್ಬ ಮಹಿಳೆಯು ಸಹ ಇದ್ದ ಬಗ್ಗೆ ಸುದ್ದಿ ವರದಿಯಾಗಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾ ನಿಷೇಧಿಸಲು ನಿರ್ಧರಿಸಿದ ದೀದಿ ಸರ್ಕಾರ!
ಫೆಬ್ರವರಿ 27 ರಂದು ದುಬೈ-ದೆಹಲಿ ಏರ್ ಇಂಡಿಯಾ ವಿಮಾನದ ಕಾಕ್‌ಪಿಟ್ ಒಳಗೆ ಮಹಿಳಾ ಸ್ನೇಹಿತೆಗೆ ಪೈಲಟ್ ಅನುಮತಿ ನೀಡಿದ ಘಟನೆಯನ್ನು ವರದಿ ಮಾಡುವಲ್ಲಿ ಏರ್ ಇಂಡಿಯಾದ ಲೋಪವೆಸಗಿದೆ ಅಂತ ವಿಮಾನಯಾನ ನಿಯಂತ್ರಕ, ನಾಗರಿಕ ವಿಮಾನಯಾನ ನಿರ್ದೇಶನಾಲಯ ಎಂದರೆ ಡಿಜಿಸಿಎ ಈಗ ಏರ್ ಇಂಡಿಯಾ ಸಿಇಒ ಕ್ಯಾಂಪ್ಬೆಲ್ ವಿಲ್ಸನ್ ಮತ್ತು ಸುರಕ್ಷತೆ, ಭದ್ರತೆ ಮತ್ತು ಗುಣಮಟ್ಟ ಕಾರ್ಯಗಳ ಮುಖ್ಯಸ್ಥ ಹೆನ್ರಿ ಡೊನೊಹೋ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.
ಘಟನೆಯ ಬಗ್ಗೆ ವಿಮಾನದ ಕ್ಯಾಬಿನ್ ಸಿಬ್ಬಂದಿಯೇ ದೂರು ನೀಡಿದ್ದಾರಂತೆ
ಫೆಬ್ರವರಿ 27 ರಂದು ವಿಮಾನದ ಕ್ಯಾಬಿನ್ ಸಿಬ್ಬಂದಿಯೊಬ್ಬರು ಮಹಿಳಾ ಸ್ನೇಹಿತೆಗೆ ಕಾಕ್‌ಪಿಟ್ ಗೆ ಪ್ರವೇಶಿಸಲು ಪೈಲಟ್ ಅನುಮತಿ ನೀಡಿದ ಬಗ್ಗೆ ಡಿಜಿಸಿಎಗೆ ದೂರು ನೀಡಿದ್ದರು ಎಂದು ಡಿಜಿಸಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಡಿಜಿಸಿಎಗೆ ಸಕಾಲದಲ್ಲಿ ವರದಿ ಮಾಡದ ಏರ್ ಇಂಡಿಯಾ ಸಿಇಒ ಮತ್ತು ವಿಮಾನ ಸುರಕ್ಷತಾ ಮುಖ್ಯಸ್ಥರಿಗೆ ಏಪ್ರಿಲ್ 21 ರಂದು ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು. ಇದಲ್ಲದೆ, ಘಟನೆಯ ತನಿಖೆಯಲ್ಲಿ ವಿಳಂಬವಾಯಿತು. ಶೋಕಾಸ್ ನೋಟಿಸ್ ಗೆ ಉತ್ತರಿಸಲು ಇಬ್ಬರೂ ಕಾರ್ಯನಿರ್ವಾಹಕರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆದಾಗ್ಯೂ, ಈ ಪ್ರಕರಣದ ಬಗ್ಗೆ ಏರ್ ಇಂಡಿಯಾದಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಈ ತಿಂಗಳ ಆರಂಭದಲ್ಲಿ, ತನಿಖೆ ಪೂರ್ಣಗೊಳ್ಳುವವರೆಗೆ ದುಬೈ-ದೆಹಲಿ ವಿಮಾನದ ಸಂಪೂರ್ಣ ಸಿಬ್ಬಂದಿಯನ್ನು ಡಿ-ರೋಸ್ಟರ್ ಮಾಡುವಂತೆ ಡಿಜಿಸಿಎ ಏರ್ ಇಂಡಿಯಾಕ್ಕೆ ನಿರ್ದೇಶನ ನೀಡಿತ್ತು.
ಘಟನೆಯ ಬಗ್ಗೆ ಡಿಜಿಸಿಎ ಗೆ ತಿಳಿದ ನಂತರ ಏನೆಲ್ಲಾ ಆಯ್ತು ನೋಡಿ..
"ನಿಜವಾದ ಘಟನೆ ಫೆಬ್ರವರಿ 27 ರಂದು ನಡೆದಿದ್ದು, ಮಾರ್ಚ್ 3 ರಂದು ಕ್ಯಾಂಪ್ಬೆಲ್ ಮತ್ತು ಡೊನೊಹೋಗೆ ಗೌಪ್ಯ ಮೇಲ್ ಮೂಲಕ ವರದಿ ಮಾಡಲಾಗಿದೆ. ಮೊದಲ ವಿಚಾರಣೆಯನ್ನು ಏಪ್ರಿಲ್ 21 ರಂದು ಡಿಜಿಸಿಎ ನಡೆಸಿತು, ಆದರೆ ಏರ್ ಇಂಡಿಯಾ ಅದಕ್ಕೂ ಮೊದಲು ಯಾವುದೇ ವಿಚಾರಣೆ ನಡೆಸಿರಲಿಲ್ಲ" ಎಂದು ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆ.
ಏಪ್ರಿಲ್ 21 ರಂದು, ವರದಿಯಾದ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ. ಅನಧಿಕೃತ ಜನರಿಗೆ ಕಾಕ್‌ಪಿಟ್ ಗೆ ಪ್ರವೇಶಿಸಲು ಅವಕಾಶವಿಲ್ಲ ಮತ್ತು ಅಂತಹ ಯಾವುದೇ ಪ್ರವೇಶವು ನಿಯಮಗಳ ಉಲ್ಲಂಘನೆಯಾಗಬಹುದು ಎಂದು ವಿಮಾನಯಾನ ಸಂಸ್ಥೆಗಳು ಹೇಳಿಕೆಯಲ್ಲಿ ತಿಳಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ