Viral Video: ತೌಕ್ತೆ ಆರ್ಭಟದಲ್ಲೂ ಕೂದಲೆಳೆಯಲ್ಲಿ ಬಚಾವಾದ ಮಹಿಳೆ, ರೋಚಕ ದೃಶ್ಯ ಇಲ್ಲಿದೆ !

ಜೋರಾಗಿ ಬೀಸುತ್ತಿರುವ ಬಿರುಗಾಳಿ... ಜೊತೆಗೆ ಧಾರಾಕಾರವಾಗಿ ಮಳೆಯೂ ಬರುತ್ತಿದೆ. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಛತ್ರಿ ಹಿಡಿದುಕೊಂಡು ನಡೆಯುತ್ತಿದ್ದಾರೆ. ಆದರೆ ಆಕೆ ಒಂದೆರಡು ಹೆಜ್ಜೆ ಮುಂದೆ ಸಾಗುತ್ತಿದ್ದಂತೆ ದೈತ್ಯ ಮರ ನೆಲಕ್ಕುರುಳುವ ಸಂಭವವನ್ನು ಆಕೆ ಥಟ್ಟನೆ ಗುರುತಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮುಂಬೈ: ತೌಕ್ತೆ ಚಂಡ ಮಾರುತ ಕಂಡದ್ದನ್ನೆಲ್ಲಾ ಕಬಳಿಸುತ್ತಿದೆ. ತನ್ನ ಭೀಕರತೆಯಿಂದ ದೈತ್ಯ ಮರಗಳು ಸಹ ಧರಾಶಾಹಿಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಬೀಳುತ್ತಿರುವ ದೈತ್ಯ ಮರವೊಂದರಿಂದ ಪವಾಡ ಸದೃಶ್ಯ ಬಚಾವ್ ಆದ ಮಹಿಳೆಯ ವಿಡಿಯೋವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಮಹಾರಾಷ್ಟ್ರದಲ್ಲಿ ನಡೆದ ಈ ಘಟನೆಯೂ ಸದ್ಯ ನೋಡುಗರನ್ನು ಬೆಚ್ಚಿ ಬೀಳಿಸಿದೆ. ಅಲ್ಲದೇ ಪ್ರಕೃತಿಯ ಮುನಿಸು ಎಷ್ಟು ಭೀಕರವಾಗಿದೆ ಎನ್ನುವುದರ ಸ್ಪಷ್ಟ ನೋಟವನ್ನು ತೆರೆದಿಟ್ಟಿದೆ. ಈ ವಿಡಿಯೋವನ್ನು ಗಮನಿಸಿದಾಗ ಜೋರಾಗಿ ಬೀಸುತ್ತಿರುವ ಬಿರುಗಾಳಿ ಕಾಣುತ್ತಿದೆ. ಅಷ್ಟೇ ಅಲ್ಲದೇ ಧಾರಾಕಾರವಾಗಿ ಮಳೆಯೂ ಬರುತ್ತಿದೆ. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಛತ್ರಿ ಹಿಡಿದುಕೊಂಡು ನಡೆಯುತ್ತಿದ್ದಾರೆ. ಆದರೆ ಆಕೆ ಒಂದೆರಡು ಹೆಜ್ಜೆ ಮುಂದೆ ಸಾಗುತ್ತಿದ್ದಂತೆ ದೈತ್ಯ ಮರ ನೆಲಕ್ಕುರುಳುವ ಸಂಭವವನ್ನು ಆಕೆ ಗುರುತಿಸಿದ್ದಾರೆ ಎಂದೆನಿಸುತ್ತದೆ.

ತಕ್ಷಣವೇ ಆಕೆ ಮುಂದಕ್ಕೆ ಓಡಿ ಬಂದು ನಿಲ್ಲುತ್ತಾರೆ. ಕೆಲವೇ ಸೆಕೆಂಡ್ಸ್ಗಳಲ್ಲಿ ಆಕೆ ಪ್ರಾಣಾಪಾಯದಿಂದ ಪಾರಾಗುತ್ತಾರೆ. 8 ಸೆಕೆಂಟ್ಗಳ ವಿಡಿಯೋ ಕ್ಲಿಪ್ನಲ್ಲಿ ಆಕೆ ಬಚಾವ್ ಆದ ದೃಶ್ಯಗಳು ಕಂಡು ಬಂದಿದೆ. ಅಲ್ಲದೇ ಅತಿ ಕಡಿಮೆ ಅಂತರದಲ್ಲಿ ಆಕೆ ಅದೃಷ್ಟವಶಾತ್ ಬಚಾವ್ ಆಗಿದ್ದಾರೆ.

ಮೇ 17 ರಂದು ಚಿತ್ರೀಕರಿಸಿರುವ ವಿಡಿಯೋವನ್ನು ಎಎನ್ಐ ಪೋಸ್ಟ್ ಮಾಡಿದೆ. ಮುಂಬೈ ಮತ್ತು ಕೊಂಕಣ ಪ್ರದೇಶದಲ್ಲಿ ತೌಕ್ತೇ ಚಂಡ ಮಾರುತವೂ ಸೋಮವಾರ ಭಾರೀ ಮಳೆ ಮತ್ತು ಬಿರುಗಾಳಿಗೆ ಕಾರಣವಾಗಿದೆ. ಇನ್ನೂ ಈ ವಿಡಿಯೋ ಸಿಸಿಟಿವಿ ದೃಶ್ಯಾವಳಿಗಳಾಗಿದ್ದು, ಸೋಮವಾರ ನ್ಯೂಸ್ ಏಜೆನ್ಸಿ ವಿಡಿಯೋ ಪೋಸ್ಟ್ ಮಾಡಿದ ನಂತರ 30 ಸಾವಿರ ವೀಕ್ಷಣೆಗಳನ್ನು ಗಳಿಸಿದೆ.





ಅಲ್ಲದೇ 6 ಜನರು ಗಾಯಗೊಂಡಿದ್ದು, ಮಹಾರಾಷ್ಟ್ರದ ತೌಕ್ತೆ ಕಾರಣದಿಂದಾಗಿ ಭಾರಿ ಮಳೆ, ಗಂಟೆಗೆ 100 ಕಿ.ಮೀ.ಗಿಂತಲೂ ಹೆಚ್ಚು ವೇಗದಲ್ಲಿ ಗಾಳಿ ಬೀಸಿದ್ದು, ಹಲವಾರು ದೈತ್ಯ ಮರಗಳು ಧರಾಶಾಹಿಯಾಗಿದೆ. ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿರುವುದು ಸೇರಿದಂತೆ 2,500 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯುಂಟಾಗಿದೆ. ಅಷ್ಟೇ ಅಲ್ಲದೇ ಸುಮಾರು 11 ಗಂಟೆಗಳ ಕಾಲ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಗಿತವಾಗಿದೆ.

ತೌಕ್ತೆ ಚಂಡಮಾರುತದಿಂದಾಗಿ ಮುಂಬೈಗೆ 230 ಮಿ.ಮೀ ಮಳೆಯಾಗಿದೆ, ಹವಾಮಾನ ತಜ್ಞರು ಮೇ ತಿಂಗಳಲ್ಲಿ 24 ಗಂಟೆಗಳಲ್ಲಿ ದಾಖಲಾದ ಅತಿ ಹೆಚ್ಚಿನ ಮಳೆ ಇದು ಎಂದು ತಿಳಿಸಿದ್ದಾರೆ. ಇನ್ನೂ ತೌಕ್ತೆ ಚಂಡಮಾರುತದ ಅಬ್ಬರದಿಂದ ಕರಾವಳಿ ತೀರ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಸಾಕಷ್ಟು ನಷ್ಟವುಂಟಾಗಿದ್ದು, ಅಪಾರ ಸಾವು ನೋವುಗಳು ವರದಿಯಾಗಿದೆ.

ಈ ನಿಟ್ಟಿನಲ್ಲಿ ಮೊನ್ನೆ ಸೀರಿಯಲ್ ಚಿತ್ರೀಕರಣದಲ್ಲಿದ್ದ ಶೂಟಿಂಗ್ ತಂಡವು ಸಹ ಚಂಡ ಮಾರುತದ ಒಡೆತಕ್ಕೆ ಸಿಲುಕಿ ಸಾಕಷ್ಟು ನಷ್ಟ ಅನುಭವಿಸಿದೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗೋವಾ ಕಡೆಗಳಲ್ಲಿ ಗಾಳಿ ಸಹಿತ ಭಾರಿ ಮಳೆಯಾಗಿದೆ. ಅಲ್ಲದೇ ಕೆಲವೆಡೆ ಕಡಲ್ಕೊರೆತ ಉಂಟಾಗಿದೆ.

ಒಂದೆಡೆ ಕೊರೊನಾ ಅಬ್ಬರ, ಇನ್ನೊಂದೆಡೆ ತೌಕ್ತೆ ಚಂಡ ಮಾರುತದ ಪ್ರಭಾವ ಮತ್ತೊಂದೆಡೆ ಬ್ಲ್ಯಾಕ್ ಫಂಗಸ್ ಸಮಸ್ಯೆ, ಲಸಿಕೆ ಕೊರತೆಯಂತಹ ಆತಂಕಕಾರಿ ಘಟನೆಗಳು ಮನುಕುಲದ ಅಸ್ಥಿತ್ವದ ಅಳಿವು-ಉಳಿವನ್ನೇ ಪ್ರಶ್ನೆ ಮಾಡುತ್ತಿರುವಂತಹ ಪರಿಸ್ಥಿತಿ ಮನೆ ಮಾಡಿದೆ.
Published by:Soumya KN
First published: