• Home
  • »
  • News
  • »
  • national-international
  • »
  • Cancer: 36 ವರ್ಷದಲ್ಲಿ 12 ಬಾರಿ ಕ್ಯಾನ್ಸರ್‌ಗೆ ತುತ್ತಾದ ಮಹಿಳೆ; ಸಂಶೋಧನೆ ನಡೆಸಿದವರಿಗೆ ಕಾದಿತ್ತು ಅಚ್ಚರಿ!

Cancer: 36 ವರ್ಷದಲ್ಲಿ 12 ಬಾರಿ ಕ್ಯಾನ್ಸರ್‌ಗೆ ತುತ್ತಾದ ಮಹಿಳೆ; ಸಂಶೋಧನೆ ನಡೆಸಿದವರಿಗೆ ಕಾದಿತ್ತು ಅಚ್ಚರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

36 ವರ್ಷ ವಯಸ್ಸಿನ ಮಹಿಳೆಯು ಎರಡನೇ ವಯಸ್ಸಿನಲ್ಲಿ ಮೊದಲ ಬಾರಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದರು. 15 ನೇ ವಯಸ್ಸಿನಲ್ಲಿ, ಆಕೆಗೆ ಗರ್ಭಕಂಠದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. 20 ನೇ ವಯಸ್ಸಿನಲ್ಲಿ, ಲಾಲಾರಸ ಗ್ರಂಥಿಯ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆ ತೆಗೆದುಹಾಕಲಾಯಿತು. ಒಂದು ವರ್ಷದ ನಂತರ, ಅವರು ಕಡಿಮೆ ದರ್ಜೆಯ ಸಾರ್ಕೋಮಾವನ್ನು ತೆಗೆದುಹಾಕಲು ಹೆಚ್ಚಿನ ಶಸ್ತ್ರಚಿಕಿತ್ಸೆಗೆ

ಮುಂದೆ ಓದಿ ...
  • Share this:

    36 ವರ್ಷವಾಗುವಷ್ಟರಲ್ಲಿ ಮಹಿಳೆಯೊಬ್ಬರು 12 ವಿಭಿನ್ನ ರೀತಿಯ ಗೆಡ್ಡೆಗಳಿಂದ (Tumor)  ಕ್ಯಾನ್ಸರ್‌ಗೆ (Cancer) ತುತ್ತಾಗಿದ್ದರು. ಇದರಿಂದ ಕುತೂಹಲಭರಿತರಾದ ಸ್ಪ್ಯಾನಿಶ್ ವಿಜ್ಞಾನಿಗಳು ತುಸು ವಿವರವಾಗಿ ಅಧ್ಯಯನ (Study) ನಡೆಸಲು ತೀರ್ಮಾನಿಸಿದರು.  ಮಹಿಳೆ ಆಗಾಗ್ಗೆ ಪದೇ ಪದೇ ಕ್ಯಾನ್ಸರ್‌ಗೆ ಏಕೆ ಒಳಗಾಗುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಲು ನಿರ್ಧರಿಸಿದರು. ಹೌದು 36 ವರ್ಷ ವಯಸ್ಸಿನ ಮಹಿಳೆಯು ಎರಡನೇ ವಯಸ್ಸಿನಲ್ಲಿ ಮೊದಲ ಬಾರಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದರು. 15 ನೇ ವಯಸ್ಸಿನಲ್ಲಿ, ಆಕೆಗೆ ಗರ್ಭಕಂಠದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. 20 ನೇ ವಯಸ್ಸಿನಲ್ಲಿ, ಲಾಲಾರಸ ಗ್ರಂಥಿಯ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆ (Syrgery) ತೆಗೆದುಹಾಕಲಾಯಿತು. ಒಂದು ವರ್ಷದ ನಂತರ, ಅವರು ಕಡಿಮೆ ದರ್ಜೆಯ ಸಾರ್ಕೋಮಾವನ್ನು ತೆಗೆದುಹಾಕಲು ಹೆಚ್ಚಿನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.


    ಆಕೆ 20 ಹಾಗೂ 30 ರ ಹರೆಯಕ್ಕೆ ತಲುಪಿದ್ದಂತೆ ಆಕೆಯಲ್ಲಿ ಹಲವಾರು ಗಡ್ಡೆಗಳನ್ನು ಗುರುತಿಸಲಾಯಿತು. ಒಟ್ಟಾರೆ 12 ಗಡ್ಡೆಗಳಿಗೆ ಆಕೆ ಚಿಕಿತ್ಸೆ ಪಡೆದಿದ್ದು, ಅವುಗಳಲ್ಲಿ ಐದು ಮಾರಣಾಂತಿಕವಾಗಿತ್ತು.


    ಇದನ್ನೂ ಓದಿ: ಹೊಟ್ಟೆ ಸಮಸ್ಯೆ ತಪ್ಪಿಸಲು ಅಗಸೆ ಬೀಜಗಳನ್ನು ಆಹಾರದಲ್ಲಿ ಈ ರೀತಿ ಸೇರಿಸಿ ಸೇವಿಸಿ!


    ಅಧ್ಯಯನವನ್ನು ಹೇಗೆ ನಡೆಸಲಾಯಿತು?


    ಮಹಿಳೆ ಹಾಗೂ ಆಕೆಯ ಕುಟುಂಬದ ಪರವಾನಗಿಯೊಂದಿಗೆ ಸ್ಪ್ಯಾನಿಷ್ ರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಕೇಂದ್ರದ ನೇತೃತ್ವದ ಅಂತರಾಷ್ಟ್ರೀಯ ಸಂಶೋಧಕರ ತಂಡವು ರಕ್ತದ ಮಾದರಿಗಳನ್ನು ತೆಗೆದುಕೊಂಡಿತು ಮತ್ತು ಸಾವಿರಾರು ಪ್ರತ್ಯೇಕ ಕೋಶಗಳೊಳಗಿನ ಆನುವಂಶಿಕ ರೂಪಾಂತರಗಳನ್ನು ನೋಡಲು ಏಕ-ಕೋಶದ DNA ಅನುಕ್ರಮವನ್ನು ಬಳಸಿತು.


    ಈ ಸಂದರ್ಭದಲ್ಲಿ ಅತ್ಯಂತ ವಿಚಿತ್ರವಾದ ಅಂಶವೊಂದನ್ನು ಪತ್ತೆಹಚ್ಚಿದ ಸಂಶೋಧಕರ ತಂಡವು ಮಹಿಳೆಯು ಒಂದು ರೀತಿಯ ರೂಪಾಂತರಕ್ಕೆ ಒಳಗಾಗಿದ್ದು, ಇದೇ ಕಾರಣಕ್ಕೆಆಕೆ ಕ್ಯಾನ್ಸರ್‌ಗೆ ಹೆಚ್ಚು ಹೆಚ್ಚು ಒಳಗಾಗುತ್ತಿದ್ದರು ಎಂಬುದನ್ನು ಪತ್ತೆಹಚ್ಚಿದೆ.


    ಜೀನ್‌ನ ಎರಡೂ ಪ್ರತಿಗಳ ನಿರ್ದಿಷ್ಟ ಬದಲಾವಣೆ


    MAD1L1 ಜೀನ್, ಜೀವಕೋಶದ ವಿಭಜನೆಯ ಮೊದಲು ವರ್ಣತಂತುಗಳನ್ನು ಜೋಡಿಸಲು ಸಹಾಯ ಮಾಡುತ್ತದೆ. ಹಾಗೂ ಗಡ್ಡೆಗಳನ್ನು ನಿಗ್ರಹಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂಬುದಾಗಿ ತಜ್ಞರು ಊಹಿಸಿದ್ದಾರೆ. ಜೀನ್‌ನಲ್ಲಿರುವ ರೂಪಾಂತರಗಳ ಬಗ್ಗೆ ತಿಳಿದಿಲ್ಲ ಎಂದು ತಜ್ಞರು ಹೇಳಿದ್ದು ಮಹಿಳೆಯ ಕುಟುಂಬದ ಸದಸ್ಯರು ಒಂದನ್ನು ತಮ್ಮಲ್ಲಿ ಹೊಂದಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಜೀನ್‌ನ ಎರಡೂ ಪ್ರತಿಗಳು ನಿರ್ದಿಷ್ಟ ಬದಲಾವಣೆಯನ್ನು ಹೊಂದಿರುವುದನ್ನು ಕಂಡುಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.


    MAD1L1 ಜೀನ್ ರೂಪಾಂತರವು ಇಲಿ ಭ್ರೂಣಗಳಿಗೆ ಮಾರಕ


    ಡಬಲ್ (ಅಥವಾ ಹೋಮೋಜೈಗಸ್) MAD1L1 ಜೀನ್ ರೂಪಾಂತರವು ಇಲಿ ಭ್ರೂಣಗಳಿಗೆ ಮಾರಕವಾಗಿರುವುದರಿಂದ ಇದು ಮಾನವರಲ್ಲಿ ಬಹಳ ಆಶ್ಚರ್ಯಕರವಾದ ಸಂಶೋಧನೆಯಾಗಿದೆ ಎಂಬುದು ತಜ್ಞರ ಹೇಳಿಕೆಯಾಗಿದೆ. ಮಹಿಳೆಯ ವಿಷಯದಲ್ಲಿ ರೂಪಾಂತರವು ಜೀವಕೋಶದ ಪುನರಾವರ್ತಿತ ಕ್ರಿಯೆಯನ್ನು ಉಂಟುಮಾಡುತ್ತಿದ್ದು ವಿವಿಧ ಸಂಖ್ಯೆಯ ವರ್ಣತಂತುಗಳೊಂದಿಗೆ ಜೀವಕೋಶಗಳನ್ನು ಸೃಷ್ಟಿಸುತ್ತದೆ ಎಂಬುದಾಗಿ ತಜ್ಞರು ತಿಳಿಸಿದ್ದು ಮಹಿಳೆಯ ರಕ್ತ ಕಣಗಳಲ್ಲಿ ಸುಮಾರು 30 ರಿಂದ 40% ದಷ್ಟು ಅಸಹಜ ಸಂಖ್ಯೆಯ ವರ್ಣತಂತುಗಳು ಕಂಡುಬಂದಿವೆ ಎಂಬುದು ವರದಿಯಾಗಿದೆ.


    ಅಪರೂಪದ ಸ್ಥಿತಿಗೆ ಒಳಗಾಗಿದ್ದ ಮಹಿಳೆ


    'ಮೊಸಾಯಿಕ್ ವೆರಿಗೇಟೆಡ್ ಅನೆಪ್ಲೋಯ್ಡಿ' (MVA) ಎಂಬ ಅಪರೂಪದ ಸ್ಥಿತಿಯನ್ನು ಹೊಂದಿರುವ ಜನರು ವಿವಿಧ ಜೀವಕೋಶಗಳಲ್ಲಿ ವಿವಿಧ ಸಂಖ್ಯೆಯ ಕ್ರೋಮೋಸೋಮ್‌ಗಳನ್ನು ಹೊಂದಿರುತ್ತಾರೆ ಎಂಬುದು ಸಂಶೋಧನೆ ನಡೆಸಿರುವ ತಜ್ಞರ ಅಭಿಪ್ರಾಯವಾಗಿದೆ. ಈ ಸ್ಥಿತಿಗೆ ವಿಭಿನ್ನ ಆನುವಂಶಿಕ ರೂಪಾಂತರಗಳು ಕಾರಣವಾಗಿವೆ ಎಂದು ಹೇಳಿರುವ ಅಧ್ಯಯನಕಾರರು 12 ಕ್ಯಾನ್ಸರ್‌ಗಳಿಗೆ ತುತ್ತಾಗಿರುವ ಮಹಿಳೆಯಲ್ಲೂಇದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.


    ಇದನ್ನೂ ಓದಿ: ಕೈಗಳಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳು ಮಧುಮೇಹ ಕಾಯಿಲೆಯ ಸಂಕೇತಗಳಾಗಿರಬಹುದು ಎಚ್ಚರ!


    ಸಾಮಾನ್ಯ ಜೀವನ ನಡೆಸುತ್ತಿದ್ದ ಮಹಿಳೆ


    ಮಹಿಳೆಯಲ್ಲಿ ಯಾವುದೇ ಅಸಾಮರ್ಥ್ಯ ಕಂಡು ಬಂದಿಲ್ಲ ಎಂಬುದನ್ನು ಗುರುತಿಸಿರುವ ಅಧ್ಯಯನ ತಂಡವು ಆಕೆ ಸಾಮಾನ್ಯ ಜೀವನವನ್ನು ನಡೆಸುತ್ತಿದ್ದರು ಎಂಬುದನ್ನು ಗುರುತಿಸಿದೆ. ರೋಗಿಯು ಗೆಡ್ಡೆಯ ಭ್ರೂಣದ ಹಂತದಲ್ಲಿ ರೋಗವನ್ನು ಹೇಗೆ ಅಭಿವೃದ್ಧಿಗೊಳಿಸಿದ್ದಾರೆ ಎಂಬುದು ಆಶ್ಚರ್ಯಕರವಾಗಿದೆ ಎಂದು ತಿಳಿಸಿದ್ದು, ಇದನ್ನು ಪತ್ತೆ ಹಚ್ಚಲಾಗಿಲ್ಲ ಎಂಬುದಾಗಿ ಆಣ್ವಿಕ ಜೀವಶಾಸ್ತ್ರಜ್ಞ, ಸಹ-ಲೇಖಕ ಮಾರ್ಕೋಸ್ ಮಾಲುಂಬ್ರೆಸ್ ತಿಳಿಸಿದ್ದಾರೆ. ಸುಮಾರು 90% ದಷ್ಟು ಗೆಡ್ಡೆಗಳು ಹೆಚ್ಚುವರಿ ಅಥವಾ ಕಾಣೆಯಾದ ಕ್ರೋಮೋಸೋಮ್‌ಗಳೊಂದಿಗೆ ಕ್ಯಾನ್ಸರ್ ಕೋಶಗಳನ್ನು ಹೊಂದಿರುತ್ತವೆ ಎಂದು ನಮಗೆ ತಿಳಿದಿದೆ ಎಂದು ಮಾರ್ಕೋಸ್ ತಿಳಿಸಿದ್ದಾರೆ.


    ಈ ಅಧ್ಯಯನದಲ್ಲಿ ಮಹಿಳೆಯಂತೆ ಅಸಹಜ ಸಂಖ್ಯೆಯ ವರ್ಣತಂತುಗಳನ್ನು ಹೊಂದಿರುವ ಜನರೂ ವರ್ಧಿತ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಪಡೆದಿದ್ದಾರೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.

    Published by:Precilla Olivia Dias
    First published: