• Home
  • »
  • News
  • »
  • national-international
  • »
  • Kerala Women: ಸಾಯೋಕೆ ಅಂತ ಬಾವಿ ಬಳಿ ಹೋದವಳಿಗೆ ಬದುಕುವ ಕನಸು! ಸಂಕಷ್ಟ ಮೆಟ್ಟಿ ನಿಂತು ಪೊಲೀಸ್ ಅಧಿಕಾರಿಯಾದ ಈ ಸಾಧಕಿ

Kerala Women: ಸಾಯೋಕೆ ಅಂತ ಬಾವಿ ಬಳಿ ಹೋದವಳಿಗೆ ಬದುಕುವ ಕನಸು! ಸಂಕಷ್ಟ ಮೆಟ್ಟಿ ನಿಂತು ಪೊಲೀಸ್ ಅಧಿಕಾರಿಯಾದ ಈ ಸಾಧಕಿ

ಸಾಧನೆಯ ಹಾದಿಯಲ್ಲಿ ಕೇರಳದ ಮಹಿಳೆ ನೌಜಿಶಾ

ಸಾಧನೆಯ ಹಾದಿಯಲ್ಲಿ ಕೇರಳದ ಮಹಿಳೆ ನೌಜಿಶಾ

ವಿಸ್ಮಯ ಕೌಟುಂಬಿಕ ಹಿಂಸೆಗೆ ಬಲಿಯಾದಾಗ ಆಕೆ ಕುರಿತಂತೆ ಎಲ್ಲೆಡೆ ದೊಡ್ಡ ಮಟ್ಟದ ಚರ್ಚೆ ನಡೆಯಿತು. ಅತ್ತ ಕೋಝಿಕ್ಕೋಡ್ ನಿವಾಸಿ ಎ ನೌಜಿಶಾ ಅಂತಹುದೇ ಅಗ್ನಿಪರೀಕ್ಷೆಯನ್ನು ಎದುರಿಸುತ್ತಿದ್ದರು. ಆರು ವರ್ಷಗಳ ಹಿಂದೆ ಪತಿಯ ಚಿತ್ರಹಿಂಸೆ ತಾಳಲಾರದೆ ತಮ್ಮ ಮನೆಯ ಬಾವಿಗೆ ಹಾರಿ ಜೀವನ ಅಂತ್ಯಗೊಳಿಸಲು ನಿರ್ಧರಿಸಿದ್ದರು. ಮುಂದೇನಾಯ್ತು, ನೀವೇ ಓದಿ...

ಮುಂದೆ ಓದಿ ...
  • Share this:

ಕೇರಳ: ‘ದೇವರ ಸ್ವಂತ ನಾಡು’ (Gods Own Country)  ಕೇರಳದ ಕೊಲ್ಲಂನ ವಿಸ್ಮಯಾ ಪ್ರಕರಣ ಎಲ್ಲರಿಗೂ ಗೊತ್ತಿರುವುದೇ. ದೇಶಾದ್ಯಂತ  ಸಂಚಲನ ಮೂಡಿಸಿದ್ದ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯ ಆತ್ಮಹತ್ಯೆ (Vismaya case) ಪ್ರಕರಣದಲ್ಲಿ ಅವಳ ಪತಿ ಎಸ್ ಕಿರಣ್ ಕುಮಾರ್ (31) ಅಪರಾಧಿ ಎಂದು ಕೋರ್ಟ್ (Court) ತೀರ್ಪು ನೀಡಿದೆ. ಕೊಲ್ಲಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ (Court) ಮಂಗಳವಾರ ಹತ್ತು ವರ್ಷಗಳ ಜೈಲು ಶಿಕ್ಷೆ ಮತ್ತು 12.55 ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ವೇಳೆ ಕೇರಳದ ಮಹಿಳೆಯರ ಮೇಲಾಗುತ್ತಿರುವ ಕೌಟುಂಬಿಕ ದೌರ್ಜನ್ಯದ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಬರೀ ವಿಸ್ಮಯಾ ಅಷ್ಟೇ ಅಲ್ಲ, ಅದೆಷ್ಟೋ ಮಹಿಳೆಯರು ಕೌಟುಂಬಿಕ ದೌರ್ಜನ್ಯದಿಂದ ನರಳಿದ್ದಾರೆ. ಆದರೆ ಕೆಲವರಷ್ಟೇ ಅದನ್ನು ಎದುರಿಸಿ, ಆ ಅಗ್ನಿಪರೀಕ್ಷೆಯಲ್ಲಿ ಗೆದ್ದು, ಸಾಧನೆಯ ಹಾದಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ. ಇವರ ಪೈಕಿ ಎ. ನೌಜಿಶಾ ಕೂಡ ಒಬ್ಬರು.


ಕೌಟುಂಬಿಕ ದೌರ್ಜನ್ಯ ಎದುರಿಸಿದ ನೌಜಿಶಾ


ವಿಸ್ಮಯ ಕೌಟುಂಬಿಕ ಹಿಂಸೆಗೆ ಬಲಿಯಾದಾಗ ಆಕೆ ಕುರಿತಂತೆ ಎಲ್ಲೆಡೆ ದೊಡ್ಡ ಮಟ್ಟದ ಚರ್ಚೆ ನಡೆಯಿತು. ಅತ್ತ ಕೋಝಿಕ್ಕೋಡ್ ನಿವಾಸಿ ಎ ನೌಜಿಶಾ ಅಂತಹುದೇ ಅಗ್ನಿಪರೀಕ್ಷೆಯನ್ನು ಎದುರಿಸುತ್ತಿದ್ದರು. ಆರು ವರ್ಷಗಳ ಹಿಂದೆ ಪತಿಯ ಚಿತ್ರಹಿಂಸೆ ತಾಳಲಾರದೆ ತಮ್ಮ ಮನೆಯ ಬಾವಿಗೆ ಹಾರಿ ಜೀವನ ಅಂತ್ಯಗೊಳಿಸಲು ನಿರ್ಧರಿಸಿದ್ದರು. ಆದರೆ ಬಾವಿಯ ಬಳಿ ನಿಂತಿದ್ದ ಆಕೆಗೆ ‘ಧೈರ್ಯ’ ಬರಲಿಲ್ಲ. ಬದಲಾಗಿ ಆಕೆ ಕೌಟುಂಬಿಕ ದೌರ್ಜನ್ಯ, ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಡಲು ನಿರ್ಧಱಿಸಿದರು. ಈಗ 32 ವರ್ಷ, ಆ ಧೈರ್ಯಶಾಲಿ ನೌಜಿಶಾ ಎಲ್ಲಾ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸ್ಪೂರ್ತಿದಾಯಕವಾದದ್ದನ್ನು ಮಾಡಿದ್ದಾರೆ. ಯಾಕೆಂದ್ರೆ ನೌಜಿಶಾ ಈಗ ಪೊಲೀಸ್ ಅಧಿಕಾರಿಯಾಗಿದ್ದಾರೆ.


ಮಗನೊಂದಿಗೆ ಸಂತದಿಂದಿರುವ ನೌಜಿಶಾ ವಿಡಿಯೋ ವೈರಲ್


ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರುವ ನೌಜಿಶಾ ಅವರು 2021 ರಲ್ಲಿ ಪೋಲಿಸ್‌ಗೆ ಸೇರಿದರು. 2021ರ, ಮೇ 26ರ ಭಾನುವಾರ, ಮಹಿಳಾ ಸಿವಿಲ್ ಪೊಲೀಸ್ ಅಧಿಕಾರಿಯಾಗಿ ಅವರ ಪಾಸಿಂಗ್ ಔಟ್ ಪರೇಡ್ ಕೇರಳ ಪೊಲೀಸ್ ಅಕಾಡೆಮಿಯಲ್ಲಿ ನಡೆಯಿತು. ಮೆರವಣಿಗೆಯ ನಂತರ ನೌಜಿಶಾ ಮತ್ತು ಅವರ ಏಳು ವರ್ಷದ ಮಗ ಐಹಮ್ ನಝಲ್ ತಮ್ಮ ಸಂತೋಷವನ್ನು ಹಂಚಿಕೊಳ್ಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.


ಇದನ್ನೂ ಓದಿ: Vismaya case: ವಿಸ್ಮಯ ಆತ್ಮಹತ್ಯೆ ಪ್ರಕರಣ; ಪತಿ ಕಿರಣ್‌ಗೆ ಹತ್ತು ವರ್ಷ ಜೈಲು ಶಿಕ್ಷೆ


ಉದ್ಯೋಗವೇ ಮಹಿಳೆಯರ ನಿಜವಾದ ಶಕ್ತಿ ಎಂದ ಸಾಧಕಿ


“ಮದುವೆಯಲ್ಲ, ಬದಲಾಗಿ ಉದ್ಯೋಗವೇ ಮಹಿಳೆಯರಿಗೆ ನಿಜವಾದ ಶಕ್ತಿ” ಅಂತ ನೌಜಿಶಾ ಹೇಳುತ್ತಾರೆ. ಮಹಿಳೆಯರು ಮೌನವಾಗಿ ನರಳುವ ಬದಲು ಅಗ್ನಿಪರೀಕ್ಷೆಯಿಂದ ಹೊರಬಂದು ತಮ್ಮ ಕನಸುಗಳ ಬೆನ್ನತ್ತಬೇಕು. ಅದನ್ನು ನನ್ನ ಅನುಭವ ನನಗೆ ಕಲಿಸಿದೆ, ”ಎಂದು ಅವರು ಸೋಮವಾರ ವಿಸ್ಮಯ ತೀರ್ಪಿನ ಹಿನ್ನೆಲೆಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡುತ್ತಾ ಹೇಳಿದ್ದಾರೆ.


ನೌಜಿಶಾಗೆ ಆಸರೆಯಾಗಿ ನಿಂತ ಸಹೋದರಿ


ಪೆರಂಬ್ರಾ ಬಳಿಯ ಪಂತಿರಿಕ್ಕರಕ್ಕೆ ಸೇರಿದ ನೌಜಿಶಾ ತನ್ನ ಬೇಸರದ ವಿಚ್ಛೇದನ ಪ್ರಕ್ರಿಯೆಯಲ್ಲಿ ಮತ್ತು ಸರ್ಕಾರಿ ನೌಕರಿ ಪಡೆಯುವ ಪ್ರಯತ್ನದಲ್ಲಿ ತನ್ನ ಹಿಂದೆ ದೃಢವಾಗಿ ನಿಂತಿದ್ದ ತನ್ನ ಹಿರಿಯ ಸಹೋದರಿ ನೌಫಾ ಎ ಅವರನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ.


ತಂಗಿ ಕನಸಿಗೆ ನೀರು ಎರೆದ ಸಹೋದರಿ


ನೌಫಾ ಇಲ್ಲದಿದ್ದರೆ ನಾನು ಬದುಕುಳಿಯುತ್ತಿರಲಿಲ್ಲ ಎಂದಿದ್ದಾರೆ. ಸಹೋದರಿ ನೌಫಾ ನನಗೆ ಕೆಲಸ ಸಿಗುವವರೆಗೂ ನನ್ನ ಬೆಂಬಲಕ್ಕೆ ನಿಂತು ಮಗನನ್ನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ನೌಫಾ ಪೆರಂಬ್ರಾ ಬಳಿಯ ಸರ್ಕಾರಿ ಎಚ್‌ಎಸ್‌ಎಸ್‌ನಲ್ಲಿ ಲ್ಯಾಬ್ ಸಹಾಯಕರಾಗಿ, ತಂಗಿಗೆ ಆರ್ಥಿಕವಾಗಿಯೂ ಸಹಾಯ ಮಾಡಿದರು.


2021ರಲ್ಲಿ ಪೊಲೀಸ್ ಅಧಿಕಾರಿಯಾದ ನೌಜಿಶಾ


ಮದುವೆಗೆ ಮುಂಚೆಯೇ ನೌಜಿಶಾ ಕೆಲಸ ಮಾಡಲು ಬಯಸಿದ್ದರು. ಆದರೆ ಗಂಡ ತೊರೆದ ಬಳಿಕ ಅವರ ಕನಸು ನನಸಾಯಿತು. ನಾಲ್ಕು ಜಿಲ್ಲೆಗಳಲ್ಲಿ ಮಹಿಳಾ ಸಿವಿಲ್ ಪೊಲೀಸ್ ಅಧಿಕಾರಿ ಹುದ್ದೆ ಮತ್ತು ಎರ್ನಾಕುಲಂನಲ್ಲಿ ಕೆಳ ವಿಭಾಗದ ಕ್ಲರ್ಕ್ ಸೇರಿದಂತೆ ಹಲವು ಪಿಎಸ್‌ಸಿ ಶ್ರೇಯಾಂಕ ಪಟ್ಟಿಗೆ ಅವರು ಸ್ಥಾನ ಪಡೆದರು. ಅವರು ಏಪ್ರಿಲ್ 15, 2021 ರಂದು ಸಿವಿಲ್ ಪೊಲೀಸ್ ಅಧಿಕಾರಿಯಾಗಿ ನೇಮಕಗೊಂಡರು.


ಇದನ್ನೂ ಓದಿ: Husband Wife: ಗಂಡನಿಗಿಂತ ಹೆಂಡತಿಗೇ ಹೆಚ್ಚು ಆದಾಯ! ಕರ್ನಾಟಕದ ಮಹಿಳೆಯರು ಯಾವ ಸ್ಥಾನದಲ್ಲಿದ್ದಾರೆ ನೋಡಿ


ಮಹಿಳೆಯರೇ ಹೆದರಬೇಡಿ ಎಂದ ನೌಜಿಶಾ


ನೌಜಿಶಾ ಅವರ ಮಾಜಿ ಪತಿ ನೌಜಿಶಾಗೆ ದೈಹಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದರು, ಆದರೆ ಆಗ ಅವರು ಪೊಲೀಸರನ್ನು ಸಂಪರ್ಕಿಸಲು ಹೆದರುತ್ತಿದ್ದರು. “ಅಂತಹ ಭಯವನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ. ಯಾವುದೇ ಮಹಿಳೆ ಪೊಲೀಸ್ ಠಾಣೆಗೆ ಹೋಗಬಹುದು. ನಾವು ಕೆಲವೊಮ್ಮೆ ತುಂಬಾ ದುರ್ಬಲರಾಗಿದ್ದೇವೆ, ಆದರೆ ನಾವು ಅದನ್ನು ಜಯಿಸಬಲ್ಲೆವು ಎಂದು ನಾವು ನಂಬಬೇಕು. ಅಂತಹ ಬಿಕ್ಕಟ್ಟಿನ ಸಮಯದಲ್ಲಿ ಒಬ್ಬರ ಕುಟುಂಬದ ಬೆಂಬಲವು ಅತ್ಯುನ್ನತವಾಗಿದೆ, ”ಎಂದು ಅವರು ಹೇಳಿದ್ದಾರೆ.

Published by:Annappa Achari
First published: