ರೆಸ್ಟೋರೆಂಟ್​ನಿಂದ Food​ ಆರ್ಡರ್​ ಮಾಡಿದ ಮಹಿಳೆ, ಪ್ಯಾಕೆಟ್​ ತೆರೆದಾಕೆಗೆ ಸಿಕ್ಕಿದ್ದು 43,000 ರೂ. ಕ್ಯಾಶ್!

ಸಾಲದ ಸುಳಿಯಲ್ಲಿದ್ದ ಮಹಿಳೆಯೊಬ್ಬರಿಗೆ ಏಕಾಏಕಿ ಸ್ಯಾಂಡ್ ವಿಚ್​ನಡಿಯಿಂದ 43 ಸಾವಿರ ರೂ. ಸಿಕ್ಕಿದೆ. ಮಹಿಳೆಯೂ ಪ್ರಾಮಾಣಿಕತೆ ತೋರಿ ಈ ಹಣವನ್ನು ಹಿಂದಿರುಗಿಸಿದ್ದಾಳೆ. ಮಹಿಳೆ ಕೆಎಫ್‌ಸಿ ಟೇಕ್‌ಅವೇ ಬ್ಯಾಗ್‌ನಲ್ಲಿ ಚಿಕನ್ ಸ್ಯಾಂಡ್‌ವಿಚ್ ಅನ್ನು ತಂದಿದ್ದರು. ಆಕೆಗೆ ಅದೇ ಬ್ಯಾಗ್​ನಲ್ಲಿ ಈ ಹಣ ಸಿಕ್ಕಿತ್ತೆನ್ನಲಾಗಿದೆ. ಆದರೆ ಕೂಡಲೇ ಆಕೆ ಇದನ್ನು ಪೊಲೀಸರಿಗೆ ತಲುಪಿಸಿದ್ದಾಳೆ. ಮಹಿಳೆಯ ವರ್ತನೆಗೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನ್ಯೂಯಾರ್ಕ್(ಸೆ.21): ಸಾಲದಲ್ಲಿದ್ದ ಮಹಿಳೆಯೊಬ್ಬರಿಗೆ ಕೆಎಫ್‌ಸಿಯ (KFC) ಸ್ಯಾಂಡ್‌ವಿಚ್‌ (Sandwich) ಪ್ಯಾಕೆಟ್‌ನಿಂದ 43 ಸಾವಿರ ರೂಪಾಯಿ ಸಿಕ್ಕಿದೆ. ಮಹಿಳೆ ಟೇಕ್‌ಅವೇ ಬ್ಯಾಗ್‌ನಲ್ಲಿ ಚಿಕನ್ ಸ್ಯಾಂಡ್‌ವಿಚ್ ಅನ್ನು ಪ್ಯಾಕ್ ಮಾಡಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಳು. ಏಕಾಏಕಿ ಸಿಕ್ಕ ಹಣವನ್ನು ಕಂಡು ಅಚ್ಚರಿಗೀಡಾಗಿದ್ದಾರೆ. ಆದರೆ ಸ್ವಾರ್ಥ ತೋರದ ಅವರು ಅದನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸಿದ್ದಾರೆ. ಪೊಲೀಸರು ಕೂಡ ಮಹಿಳೆಯ ಪ್ರಾಮಾಣಿಕತೆಯನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: Food : ಉಡುಪಿ ತಿಂಡಿ ಅಂದ್ರೆ ಕೇವಲ ಇಡ್ಲಿ-ಸಾಂಬರ್ ಅಲ್ಲ..ಇಲ್ಲಿದೆ ನೋಡಿ ಉಡುಪಿಯ ಬೆಸ್ಟ್ ಫುಡ್ಸ್

ಜೊವಾನ್ನೆ ಆಲಿವರ್ ಜಾರ್ಜಿಯಾ (ಯುಎಸ್ಎ) ಮೂಲದವರು. ಮಧ್ಯಾಹ್ನದ ಊಟಕ್ಕೆ ಚಿಕನ್ ಸ್ಯಾಂಡ್ ವಿಚ್ ತಿನ್ನಲು ಆರಂಭಿಸಿದ ಮಹಿಳೆಗೆ ಫುಡ್​ ಪ್ಯಾಕ್​ ಮಾಡಿದ್ದ ಪ್ಯಾಕೆಟ್​ನಲ್ಲಿ ಸ್ಯಾಂಡ್ ವಿಚ್ ಅಡಿಯಲ್ಲಿದ್ದ ಲಕೋಟೆಯಲ್ಲಿ 43 ಸಾವಿರ ರೂ. ಸಿಕ್ಕಿದೆ. ಡೈಲಿಸ್ಟಾರ್ ವರದಿಯ ಪ್ರಕಾರ, ಜೊವಾನ್ನೆ ಪ್ರಸ್ತುತ ಸಾಲದಲ್ಲಿದ್ದಾರೆ. ಹೀಗಿದ್ದರೂ ಬಳಿಕವೂ ಈ ಹಣವನ್ನು ನೋಡಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ ತನಗೂ ಶಾಪಿಂಗ್ ಮಾಡುವ ಅವಕಾಶವಿದ್ದು, ಕಾರಿನ ಟ್ಯಾಂಕ್ ಕೂಡ ತುಂಬಿಸಿಕೊಳ್ಳಬಹುದಿತ್ತು ಎಂದು ತಮಾಷೆಯಾಗಿ ಹೇಳಿದ್ದಾರೆ.ಡಬ್ಲ್ಯುಎಸ್‌ಬಿ ಟಿವಿ ಜೊತೆಗಿನ ಸಂವಾದದಲ್ಲಿ ಅವರು, ನಾನು ನೋಟುಗಳನ್ನು ಎಣಿಸಲು ಪ್ರಾರಂಭಿಸಿದೆ, ಒಟ್ಟು 43 ಸಾವಿರ ರೂ ಅದರಲ್ಲಿತ್ತು. ನಾನು ತಕ್ಷಣ ಅದನ್ನು ಮತ್ತೆ ಲಕೋಟೆಯಲ್ಲಿ ಹಾಕಿದೆ. ನಂತರ ಲಕೋಟೆಯನ್ನು ಮುಚ್ಚಿಟ್ಟೆ. ಅಷ್ಟರಲ್ಲಾಗಲೇ ಅಧಿಕಾರಿಗಳು ಕೂಡ ಅಲ್ಲಿಗೆ ಬಂದಿದ್ದರು ಎಂದಿದ್ದಾರೆ.

ಇದನ್ನೂ ಓದಿ: Goa Food: ಮನೆಯಲ್ಲೇ ಮಾಡಿ ಗೋವಾದ 5 ಬಗೆಯ ಫುಡ್, ತುಂಬಾ ಸುಲಭ, ಸಖತ್ ರುಚಿ

ಅದೇ ಸಮಯದಲ್ಲಿ, ಜಾಕ್ಸನ್ ಪೋಲಿಸರ ತನಿಖೆಯಲ್ಲಿ ಕೆಎಫ್‌ಸಿಯ ಠೇವಣಿ ಮೊತ್ತವು ಆಕಸ್ಮಿಕವಾಗಿ ಜೊವಾನ್ನೆ ಅವರ ಬ್ಯಾಗ್‌ಗೆ ಹೋಗಿದೆ ಎಂದು ತಿಳಿದುಬಂದಿದೆ. ಪೊಲೀಸರು ಫೇಸ್‌ಬುಕ್‌ನಲ್ಲಿ ಜೋನ್‌ಗೆ ಧನ್ಯವಾದ ಹೇಳಿದ್ದಾರೆ. ಫೇಸ್‌ಬುಕ್ ಪೋಸ್ಟ್‌ನಲ್ಲಿ, ಪೊಲೀಸರು ಬರೆದಿದ್ದಾರೆ. ಜೊವಾನ್ನೆ ಸರಿಯಾದ ಕೆಲಸವನ್ನು ಮಾಡಿದ್ದು ಮಾತ್ರವಲ್ಲ, ಮ್ಯಾನೇಜರ್‌ನ ಕೆಲಸವನ್ನು ಸಹ ಉಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಬಳಕೆದಾರರು ಜೊವಾನ್ನೆ ಅವರ ಪ್ರಾಮಾಣಿಕತೆಯನ್ನು ಶ್ಲಾಘಿಸಿದ್ದಾರೆ.

8ರ ಬದಲು 4 ಪೀಸ್​ ಚಿಕನ್​ ಕೊಟ್ಟ ಕೆಎಫ್​ಸಿ ವಿರುದ್ಧ ಪೊಲೀಸರಿಗೆ ದೂರು

ಇತ್ತೀಚೆಗೆ ನಡೆದ ಘಟನೆಯೊಂದರ ಪ್ರಕಾರ, ಅಮೆರಿಕದ ಕ್ಲೀವ್‌ಲ್ಯಾಂಡ್‌ ನಗರದಲ್ಲಿ ವಾಸವಿದ್ದ ಒಬ್ಬ ಮಹಿಳೆ ಫಾಸ್ಟ್ ಫುಡ್ ಔಟ್ಲೆಟ್ ಆದ ಕೆ‍ಎಫ್‍ಸಿಯಿಂದ ತನಗೆ ಬೇಕಾಗಿದ್ದ ಚಿಕನ್ ಖಾದ್ಯವೊಂದನ್ನು ಆರ್ಡರ್ ಮಾಡಿದ್ದರು. ಆದರೆ, ಅವಳು ಪಡೆದ ಖಾದ್ಯದಲ್ಲಿ ಕೇವಲ ನಾಲ್ಕು ಚಿಕನ್ ಪೀಸ್ ಗಳಿದ್ದವಂತೆ, ಅಷ್ಟಕ್ಕೂ ಅವರು ತನಗೆ ಎಂಟು ಪೀಸ್ ಚಿಕನ್ ಬೇಕಾಗಿದ್ದು ಅದಕ್ಕಾಗಿ ಹಣ ಪಾವತಿಸಿದ್ದರಂತೆ. ಇದರಿಂದ ಬೇಸರಗೊಂಡ ಮಹಿಳೆ ನೇರವಾಗಿ 911ಗೆ ಡಯಲ್ ಮಾಡುವ ಮೂಲಕ ತನ್ನ ದೂರನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ತನ್ನ ಕರೆಯಲ್ಲಿ ಅವರು "ನನ್ನ ಎಲ್ಲ ಚಿಕನ್ ನನಗೆ ಬೇಕು" ಎಂದು ದೂರಿದ್ದಾರೆ.

ಮಹಿಳೆಯ ದೂರಿಗೆ ಅವಕ್ಕಾದ ಪೊಲೀಸರು

ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಳೀಯವಾಗಿ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯ ಮನೆಗೆ ಭೇಟಿ ನೀಡಿ ವಿಷಯ ಏನೆಂದು ವಿಚಾರಿಸಿದಾಗ ಆ ಮಹಿಳೆಯು ನಡೆದ ಸಂಗತಿ ಬಗ್ಗೆ ಹೇಳುತ್ತ ತನಗೆ ಆ ರೆಸ್ಟೋರೆಂಟ್ ಕೇವಲ ನಾಲ್ಕು ಪೀಸ್ ಚಿಕನ್ ಕಳುಹಿಸಿರುವುದಾಗಿ ದೂರಿದ್ದಾಳೆ. ಆ ಅಧಿಕಾರಿಗೆ ಈ ಬಗ್ಗೆ ಎಲ್ಲ ಮಾಹಿತಿ ಗೊತ್ತಾಗಿ ತದನಂತರ ಆತ ಆ ಮಹಿಳೆಯನ್ನು ಕುರಿತು, "ಈ ವಿಷಯದಲ್ಲಿ ಪೊಲೀಸರಿಂದ ಏನೂ ಮಾಡಲು ಸಾಧ್ಯವಿಲ್ಲ" ಎಂದು ಹೇಳಿ ಇದು ಯಾವುದೇ ರೀತಿಯ ಅಪರಾಧ ಚಟುವಟಿಕೆಗೊಳಪಡುವುದಿಲ್ಲ ಹಾಗೂ ಇದಕ್ಕೆ ಸಂಬಂಧಿಸಿದಂತೆ ಮಹಿಳೆಯು ಆ ಹೋಟೆಲ್ಲಿನ ಆಡಳಿತ ಮಂಡಳಿಯ ಗಮನಕ್ಕೆ ಈ ವಿಚಾರ ತರುವ ಮೂಲಕ ಪರಸ್ಪರರು ಬಗೆಹರಿಸಿಕೊಳ್ಳಬಹುದೆಂಬ ಬುದ್ಧಿ ಮಾತು ಹೇಳಿ ಅಲ್ಲಿಂದ ನಿರ್ಗಮಿಸಿದ್ದಾರೆ.
Published by:Precilla Olivia Dias
First published: