ಉತ್ತರ ಪ್ರದೇಶ(ಫೆ.09): ಪ್ರೀತಿಸಿದ ಪ್ರಿಯಕರನೊಂದಿಗೆ ಅನ್ಯೋನ್ಯವಾಗಿ ಬಾಳಲು ಎಂದು ಮನೆಬಿಟ್ಟು ತೆರಳಿದ್ದ ಯುವತಿ ಕ್ರೂರವಾಗಿ ಕೊಲೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಎರಡು ತಿಂಗಳಿನ ಹಿಂದೆ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದ ಯುವತಿ ಶವವಾಗಿ ಪತ್ತೆಯಾಗಿದ್ದಾರೆ. ಹೊಲವೊಂದರ ಬಾವಿಯಲ್ಲಿ ರುಂಡವಿಲ್ಲದ ಮಹಿಳೆ ದೇಹ ಪತ್ತೆಯಾಗಿದ್ದು, ಪೊಲೀಸರು ಮಹಿಳೆಯನ್ನು ಗುರುತಿಸಿದ್ದಾರೆ.
ಉತ್ತರ ಪ್ರದೇಶದ ಫತೇಪುರ ಜಿಲ್ಲೆಯಲ್ಲಿನ ಹೊಲದಲ್ಲಿರುವ ಬಾವಿಯೊಂದರಲ್ಲಿ ಮಹಿಳೆಯ ತಲೆ ಇಲ್ಲದ ದೇಹ ಪತ್ತೆಯಾಗಿದ್ದು, ಪೊಲೀಸರು ಮೃತ ದೇಹವನ್ನು ಪತ್ತೆ ಹಚ್ಚಿದ್ದಾರೆ. ಪೊಲೀಸರ ಪ್ರಕಾರ, ಪತ್ತೆಯಾಗಿರುವ ತಲೆ ಇಲ್ಲದ ಮೃತ ದೇಹವು ಸುಮಾರು 22 ವರ್ಷ ವಯಸ್ಸಿನ ಮಹಿಳೆ. ಈಕೆ ಬರೇಲಿ ಜಿಲ್ಲೆಗೆ ಸೇರಿದ್ದವಳಾಗಿದ್ದು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಮುಂಬೈನಲ್ಲಿ ಹನಿಟ್ರ್ಯಾಪ್ ಮಾಡಿ ಚಿನ್ನದ ವ್ಯಾಪಾರಿಯನ್ನು ವಂಚಿಸಿದ್ದ ಮಹಿಳೆಯರು ಅಂದರ್!
ಮಹಿಳೆಯನ್ನು ಕೊಲೆಗೈದು ರುಂಡವನ್ನು ಕತ್ತರಿಸಿ ಬಾವಿಗೆ ಎಸೆಯಲಾಗಿದೆ ಎಂದು ಪೊಲೀಸರು ಶಂಕಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಜನರನ್ನು ಸೋಮವಾರ ಬಂಧಿಸಿದ್ದಾರೆ. ಪ್ರಕರಣದ ಮುಖ್ಯ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರದಂದು ಫತೇಪುರದ ಬಳಿಯ ಸರ್ವಾಲ್ ಗ್ರಾಮದ ಜಮೀನುವೊಂದರಲ್ಲಿ ರುಂಡವಿಲ್ಲದ ಮೃತ ದೇಹ ಪತ್ತೆಯಾಗಿತ್ತು. ಶವ ಪತ್ತೆಯಾದ ನಂತರ ಇಬ್ಬರನ್ನು ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆ ವೇಳೆ ಆರೋಪಿಗಳು ತಲೆಯನ್ನು ಸೆವರಮೌ ಗ್ರಾಮದ ಬಳಿ ಎಸೆಯಲಾಗಿದೆ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ಫತೇಪುರದ ಪೊಲೀಸ್ ವರಿಷ್ಠಾಧಿಕಾರಿ ಸತ್ಪಾಲ್ ಅವರು ಮಾಹಿತಿ ನೀಡಿದ್ದು, ಮೃತಪಟ್ಟ ಮಹಿಳೆ 22 - 23 ವಯಸ್ಸಿನವರಾಗಿದ್ದು, ಬರೇಲಿ ಜಿಲ್ಲೆಯ ನಿವಾಸಿಯಾಗಿದ್ದಾರೆ. ಈಕೆ 2 ಎರಡು ತಿಂಗಳ ಹಿಂದೆ ತನ್ನ ಪ್ರಿಯಕರನೊಂದಿಗೆ ಓಡಿಹೋಗಿದ್ದಳು. ಕೊಲೆ ಪ್ರಕರಣದ ಮುಖ್ಯ ಆರೋಪಿ ಪರಾರಿಯಾಗಿದ್ದು, ಆತನನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ